2025ರಲ್ಲಿ ಇಸ್ರೋ ನಡೆಸಲಿರುವ ಗಗನಯಾನದಲ್ಲಿ ಧಾರವಾಡದ ನೊಣಗಳು ತೆರಳಲಿವೆ! ಇಸ್ರೋದ ಮಹತ್ವಾ ಕಾಂಕ್ಷಿ ಯೋಜನೆಯಲ್ಲಿ ಹಲವು ಅಧ್ಯಯನಗಳು ನಡೆಯಲಿದ್ದು ಈ ಅಧ್ಯಯನಕ್ಕೆ ಧಾರವಾಡ ಕೃಷಿ ವಿಶ್ವವಿದ್ಯಾಲಯ ಸಿದ್ಧಪಡಿಸಿರುವ 20 ಹಣ್ಣಿನ ನೊಣಗಳಿರುವ ಕಿಟ್ ಆಯ್ಕೆಯಾಗಿ ಮೆಚ್ಚುಗೆಗೆ ಪಾತ್ರವಾಗಿದೆ. ದೇಶದ ಎಲ್ಲ 75 ಕೃಷಿ ವಿವಿಗಳು ನೀಡಿದ ವಿವಿಧ ಮಾದರಿಗಳ ಪೈಕಿ ಧಾರವಾಡದ ಕೃಷಿ ವಿವಿಯ ಜೈವಿಕಶಾಸ್ತ್ರ ವಿಭಾಗದ ಈ ಕಿಟ್ ಆಯ್ಕೆಯಾಗಿದೆ.ದೇಶದಲ್ಲಿಯೇ ಈ ಸಂಶೋಧನೆ ಮಾಡಿದ ಮೊದಲ ವಿಶ್ವವಿದ್ಯಾ ಲಯ ಎಂಬ ಖ್ಯಾತಿಗೂ ಧಾರವಾಡ ಕೃಷಿ ವಿವಿ ಪಾತ್ರವಾಗಿದೆ.
ವರದಿ : ಪರಮೇಶ್ ಅಂಗಡಿ ಏಷ್ಯಾನೆಟ್ ಸುವರ್ಣ ನ್ಯೂಸ್ ಧಾರವಾಡ
ಧಾರವಾಡ (ಆ.26) : 2025ರಲ್ಲಿ ಇಸ್ರೋ ನಡೆಸಲಿರುವ ಗಗನಯಾನದಲ್ಲಿ ಧಾರವಾಡದ ನೊಣಗಳು ತೆರಳಲಿವೆ! ಇಸ್ರೋದ ಮಹತ್ವಾ ಕಾಂಕ್ಷಿ ಯೋಜನೆಯಲ್ಲಿ ಹಲವು ಅಧ್ಯಯನಗಳು ನಡೆಯಲಿದ್ದು ಈ ಅಧ್ಯಯನಕ್ಕೆ ಧಾರವಾಡ ಕೃಷಿ ವಿಶ್ವವಿದ್ಯಾಲಯ ಸಿದ್ಧಪಡಿಸಿರುವ 20 ಹಣ್ಣಿನ ನೊಣಗಳಿರುವ ಕಿಟ್ ಆಯ್ಕೆಯಾಗಿ ಮೆಚ್ಚುಗೆಗೆ ಪಾತ್ರವಾಗಿದೆ. ದೇಶದ ಎಲ್ಲ 75 ಕೃಷಿ ವಿವಿಗಳು ನೀಡಿದ ವಿವಿಧ ಮಾದರಿಗಳ ಪೈಕಿ ಧಾರವಾಡದ ಕೃಷಿ ವಿವಿಯ ಜೈವಿಕಶಾಸ್ತ್ರ ವಿಭಾಗದ ಈ ಕಿಟ್ ಆಯ್ಕೆಯಾಗಿದೆ.ದೇಶದಲ್ಲಿಯೇ ಈ ಸಂಶೋಧನೆ ಮಾಡಿದ ಮೊದಲ ವಿಶ್ವವಿದ್ಯಾ ಲಯ ಎಂಬ ಖ್ಯಾತಿಗೂ ಧಾರವಾಡ ಕೃಷಿ ವಿವಿ ಪಾತ್ರವಾಗಿದೆ.
ಹಣ್ಣಿನ ನೊಣಗಳು ಮಾನವನ ದೇಹ ರಚನೆಯನ್ನು ಹೋಲುತ್ತವೆ ಶೂನ್ಯ ಗುರುತ್ವದಲ್ಲಿ ಬಾಹ್ಯಾಕಾಶದಲ್ಲಿ ನೌಕೆ ಸುತ್ತುವಾಗ ನೊಣಗಳ ದೈಹಿಕ ರಚನೆಯಲ್ಲಾಗುವ ಬದಲಾವಣೆಗಳು ಇಸ್ರೋಗೆ ಮಹತ್ವದ ಮಾಹಿತಿ ನೀಡಲಿವೆ ಇದರಿಂದ ಭವಿಷ್ಯದ ಮಾನವಸಹಿತ ಗಗನಯಾನಕ್ಕೆ ನೆರವಾಗಲಿದೆ 2025ರಲ್ಲಿ ಭಾರತ ನಭಕ್ಕೆ ಕಳುಹಿಸುವ ಗಗನಯಾನ ನೌಕೆಯಲ್ಲಿ ಈ ಹಣ್ಣಿನ ನೊಣ 2ರಿಂದ 7 ದಿನಗಳ ಕಾಲ ಇಸ್ರೋ ಹಾರಿ ಬಿಡುವ ಗಗನನೌಕೆ ಶೂನ್ಯ ಗುರುತ್ತದ ಬಾಹ್ಯಾಕಾಶದಲ್ಲಿ ಭೂಮಿಯನ್ನು ಸುತ್ತಿ ಮರಳಿ ಗುಜರಾತ್ ಸಮೀಪದ ಸಮುದ್ರದಲ್ಲಿ ಬಂದಿಳಿಯಲಿದೆ ಈ ವೇಳೆ ಶೋಧಿತ ಮಾದರಿ ಕಿಟ್‌ನಲ್ಲಿ ಆಗುವ ಬದಲಾವಣೆಗಳು ಮತ್ತು ಅಧ್ಯಯನ ಯೋಗ್ಯ ವಿಚಾರಗಳ ಮೇಲೆ ವಿಜ್ಞಾನಿಗಳ ತಂಡ ನಿಗಾ ಇರಿಸಲಿದೆ.
ದೇಶದ ಮೊದಲ ಮರು ಬಳಕೆ ಹೈಬ್ರಿಡ್ ರಾಕೆಟ್; ವಿಶೇಷ ಏನು ಗೊತ್ತಾ?
ಹಣ್ಣಿನ ನೊಣವೇ ಯಾಕೆಂದರೆ ಮನುಷ್ಯನ ದೈಹಿಕ ರಚನೆಯ ಶೇ.70ರಷ್ಟು ಅಂಶಗಳನ್ನು ಈ ಹಣ್ಣಿನ ನೊಣಗಳು ಹೋಲುತ್ತವೆ ಹೀಗಾಗಿ ಶೂನ್ಯ ಗುರುತ್ತದಲ್ಲಿ ಇವುಗಳ ದೈಹಿಕ ಬದಲಾವಣೆಗಳ ಫಲಿತಗಳು ಬಾಹ್ಯಾಕಾಶ ಸಂಶೋಧನೆಗೆ ಅತ್ಯಂತ ಅಗತ್ಯವಾಗಿದೆ. ಕೇಂದ್ರ ಸರ್ಕಾರವು ಈ ಯೋಜನೆಗೆ 78 ಲಕ್ಷ ರೂ.ಗಳನ್ನು ನೀಡಿದ್ದು ಸತತ ಎರಡು ವರ್ಷಗಳ ಕಾಲ ಹಣ್ಣಿನ ನೊಣಗಳನ್ನು ಅಧ್ಯಯನಕ್ಕೆ ಒಳಪಡಿಸಿ ಈ ಮಾದರಿ ಕಿಟ್ ಸಜ್ಜುಗೊಳಿಸಲಾಗಿದೆ. ಕೃಷಿ ಸಂಶೋಧನೆ ಮತ್ತು ಫಲಿತಗಳಲ್ಲಿ ಅತ್ಯಂತ ಉತ್ತಮ ಸಾಧನೆ ಮಾಡುವ ಮೂಲಕ ದೇಶದ ಟಾಪ್ ಟೆನ್ ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿರುವ ಧಾರವಾಡ ಕೃಷಿ ವಿವಿಯ ಜೈವಿಕಶಾಸ್ತ್ರ ವಿಭಾಗದ ಯುವ ವಿಜ್ಞಾನಿ ಡಾ|ರವಿಕುಮಾರ ಹೊಸಮನಿ ಮತ್ತು ತಂಡ ಶೋಧಿಸಿದ ಈ ಮಾದರಿಗೆ ವ್ಯಕ್ತವಾಗಿದೆ.
ಗಗನಯಾನಿಗಳ ಆರೋಗ್ಯದಲ್ಲಿ ಉಂಟಾಗುವ ಎಲುಬು ಸವೆತ ಕಿಡ್ನಿಸೋನ್ ಸೇರಿದಂತೆ ಇತರೆ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕೂಡ ಕಂಡುಕೊಳ್ಳುವ ನಿಟ್ಟಿನಲ್ಲಿ ಹಣ್ಣಿನ ನೊಣಗಳನ್ನು ಅಲ್ಲಿಗೆ ಕಳುಹಿಸಲಾಗುತ್ತಿದೆ ಕೇರಳದ ತಿರುವನಂತ ಪುರಂದಲ್ಲಿರುವ ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಸ್ಪೇಸ್ ಸೈನ್ಸ್ ಆ್ಯಂಡ್ ಟೆಕ್ನಾಲಜಿ ಇದರ ಹಾರ್ಡ್ ವೇರ್ ಕಿಟ್ ತಯಾರಿಸಿದೆ. ಕೇಂದ್ರ ಸರ್ಕಾರವು ಈ ಯೋಜನೆಗೆ 78 ಲಕ್ಷ ರೂ.ಗಳನ್ನು ನೀಡಿದ್ದು, ಸತತ ಎರಡು ವರ್ಷಗಳ ಕಾಲ ಹಣ್ಣಿನ ನೊಣಗಳನ್ನು ಅಧ್ಯಯನಕ್ಕೆ ಒಳಪಡಿಸಿ ಈ ಮಾದು ಕಿಟ್ ಸಜ್ಜುಗೊಳಿಸಲಾಗಿದೆ.
ಶೂನ್ಯ ಗುರುತ್ವದಲ್ಲಿ ಆಗುವ ಜೈವಿಕ ಬದಲಾವಣೆಗಳು ಗಗನಯಾನ ಕ್ಷೇತ್ರದ ಮುಂದಿನ ಯೋಜನೆಗಳಿಗೆ ಸಹಾಯಕವಾಗಲಿವೆ ಇದು ಯಶಸ್ವಿಯಾದರೆ ಅನ್ಯಗ್ರಹ ವಾಸದ ಕನಸು ಕಾಣುತ್ತಿರುವ ಬಾಹ್ಯಾಕಾಶ ವಿಜ್ಞಾನಿಗಳಿಗೆ ಆಹಾರ ಪೂರೈಕೆ ಮತ್ತು ಆಹಾರ ಸಂರಕ್ಷಣೆಗೆ ಮಹತ್ವದ ಕೊಡುಗೆ ನೀಡಿದಂತಾಗುತ್ತದೆ.
ಏನಿದು ತಂತ್ರಜ್ಞಾನ ಅನ್ನೋದಾದ್ರೆ ಬಾಹ್ಯಾಕಾಶ ಮತ್ತು ವಾಸಕ್ಕೆ ಅಗತ್ಯ ಸಂಶೋಧನೆಗಳು ನಡೆಯುತ್ತಿವೆ ಈ ನಿಟ್ಟಿನಲ್ಲಿ ಶೂನ್ಯ ಗುರುತ್ವದಲ್ಲಿ ಆಹಾರಗಳನ್ನು ಸಂರಕ್ಷಿಸಿಡುವ ಮತ್ತು ಗಗನಯಾನಿಗಳ ಆರೋಗ್ಯ ರಕ್ಷಣೆಗೂಅಗತ್ಯವಾದ ಸಂಶೋಧನೆಗೆ ಇಲ್ಲಿನ ಫಲಿತಾಂಶ ನೆರವಾಗಲಿದೆ. ಶೂನ್ಯ ಗುರುತ್ವದಲ್ಲಿ ಆಗುವ ಜೈವಿಕ ಬದಲಾವಣೆಗಳು ಗಗನಯಾನ ಕ್ಷೇತ್ರದ ಮುಂದಿನ ಯೋಜನೆಗಳಿಗೆ ಸಹಾಯಕವಾಗಲಿವೆ. ಇದು ಯಶಸ್ವಿಯಾದರೆ ಅನ್ಯಗ್ರಹ ವಾಸದ ಕನಸು ಕಾಣುತ್ತಿರುವ ಬಾಹ್ಯಾಕಾಶ ವಿಜ್ಞಾನಿಗಳಿಗೆ ಆಹಾರ ಪೂರೈಕೆ ಮತ್ತು ಆಹಾರ ಸಂರಕ್ಷಣೆಗೆ ಮಹತ್ವದ ಕೊಡುಗೆ ನೀಡಿದಂತಾಗುತ್ತದೆ.
ಅಧ್ಯಯನ ಕಿಟ್ ನಲ್ಲಿ ಎನಿದೆ ಅನ್ನೋದನ್ಮ ನೋಡೋದಾದ್ರೆ.. ಕಿಟ್ ನಲ್ಲಿ 20 ಹಣ್ಣಿನ ನೊಣಗಳು ಇರಲಿವೆ. ಅದರಲ್ಲಿ 10 ಗಂಡು, 10 ಹೆಣ್ಣು ನೊಣಗಳು ಇರಲಿದ್ದು, ಅವುಗಳ ಸಂತಾನೋತ್ಪತ್ತಿಯಾಗಿ ಸಂಖ್ಯೆ ಹೆಚ್ಚಾಗುತ್ತದೆ. ಆ ಕಿಟ್ ಒಳಗಡೆ ಆಮ್ಲಜನಕ ಇರಲಿದೆ. ಜೊತೆಗೆ ರವೆ, ಬೆಲ್ಲ ಸೇರಿಸಿದ ಪಾಯಸದ ರೂಪದಲ್ಲಿ ಅವುಗಳ ಆಹಾರ ಸಿದ್ಧಮಾಡಿ ಅದು ಗಟ್ಟಿಯಾಗುವ ಮುಂಚೆಯೆ ಕಿಟನಲ್ಲಿ ಹಾಕಲಾಗುತ್ತದೆ. ಅದಕ್ಕೆ ಸೋಡಿಯಂ ಅಕ್ಸಲೈಟ್ ಸೇರಿಸಲಾಗುತ್ತದೆ.
ಇದು ಸ್ವತಃ ನಾಸಾ ಹೇಳಿದ ಅಚ್ಚರಿ..ಭೂಮಿ ಮೇಲಿನ ಪ್ರತಿ ವ್ಯಕ್ತಿ ಕೂಡ ಕೋಟ್ಯಧಿಪತಿ ಆಗಬಹುದು!
ನಾಸಾ ಜೊತೆಗೂ ಒಪ್ಪಂದ : ಇಸ್ರೋ ಮತ್ತು ನಾನಾ ಜಂಟಿಯಾಗಿ ಅಧ್ಯಯನ ನಡೆಸುತ್ತಿರುವ ಗುರುತ್ವ-ಜೈವಿಕ ಸಂಶೋಧನೆಗಳ ಕುರಿತು ಕೂಡ 4 ಹೊಸ ಅಧ್ಯಯನಗಳಿಗೂ ಕೃಷಿ ವಿವಿ ಕೈ ಜೋಡಿಸಿದೆ. ಭಾರತ ಗಗನಯಾನಕ್ಕೆ ಪೂರ್ವಭಾವಿಯಾಗಿ ಸದ್ದಕ್ಕೆ ತರಬೇತಿಗಾಗಿ ನಾಸಾ ಮೂಲಕ ಬಾಹ್ಯಾಕಾಶ ಕೇಂದ್ರಕ್ಕೆ ಹೋಗಿರುವ ಭಾರತೀಯ ಗಗನಯಾನಿಯೊಬ್ಬರ ಬಳಿ ಇಂತಹದ್ದೆ ಮಾದರಿಯೊಂದನ್ನು ಧಾರವಾಡ ಕೃಷಿ ವಿವಿ ಕೊಟ್ಟು ಕಳುಹಿಸಿದೆ