ಪುಕ್ಕಟ್ಟೆ ಕೊಟ್ಟರೆ ಜನರು ಮಾರುತ್ತಾರೆ: ಕೇಂದ್ರ ಸಚಿವ ಪಿಯೂಷ್‌ ಗೋಯಲ್‌

By Kannadaprabha NewsFirst Published Feb 5, 2023, 11:52 AM IST
Highlights

ಪುಕ್ಕಟ್ಟೆಯಾಗಿ ನೀಡಿದರೆ ಅದನ್ನು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಾರೆಂಬ ಕಾರಣದಿಂದ ಬಿಜೆಪಿ ಸರ್ಕಾರವು ಜನರನ್ನು ಸುಸ್ಥಿರಗೊಳಿಸುವ ಯೋಜನೆಗಳ ಕಡೆ ಗಮನ ಹರಿಸುತ್ತಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆ ಸಚಿವ ಪಿಯೂಷ್‌ ಗೋಯಲ್‌ ಹೇಳಿದರು.

ಬೆಂಗಳೂರು (ಫೆ.05): ಪುಕ್ಕಟ್ಟೆಯಾಗಿ ನೀಡಿದರೆ ಅದನ್ನು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಾರೆಂಬ ಕಾರಣದಿಂದ ಬಿಜೆಪಿ ಸರ್ಕಾರವು ಜನರನ್ನು ಸುಸ್ಥಿರಗೊಳಿಸುವ ಯೋಜನೆಗಳ ಕಡೆ ಗಮನ ಹರಿಸುತ್ತಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆ ಸಚಿವ ಪಿಯೂಷ್‌ ಗೋಯಲ್‌ ಹೇಳಿದರು.

ಬೆಂಗಳೂರಿನಲ್ಲಿ ಶನಿವಾರ ಆಯೋಜಿಸಿದ್ದ ಕೇಂದ್ರದ 2023-24ರ ‘ಅಮೃತ ಕಾಲ ಬಜೆಟ್‌’ ಕುರಿತ ಸಂವಾದದಲ್ಲಿ ಮಾತನಾಡಿದ ಅವರು, ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಕಳೆದ 9 ವರ್ಷದಿಂದ ಮಂಡಿಸುತ್ತಿರುವ ಆಯ್ಯವ್ಯಯದಲ್ಲಿ ಜನರಿಗೆ ಉಚಿತ ಯೋಜನೆಗಳನ್ನು ನೀಡುವ ಬದಲು ನಾಗರಿಕರನ್ನು ಸಶಕ್ತಗೊಳಿಸುವ, ಉದ್ಯೋಗ ಸೃಷ್ಟಿಸುವ, ಜೀವನ ಗುಣಮಟ್ಟಹೆಚ್ಚಿಸುವ ಯೋಜನೆಗಳನ್ನು ನೀಡುತ್ತಾ ಬಂದಿದೆ. ಉಚಿತ ಯೋಜನೆಗಳು ವ್ಯವಸ್ಥೆಯನ್ನು ಅಸ್ಥಿರಗೊಳಿಸಲಿದೆ. ಹಾಗಾಗಿ, ಸ್ಯಾನಿಟರಿ ಪ್ಯಾಡ್‌ಗಳನ್ನು ಉಚಿತವಾಗಿ ನೀಡದೇ ಕೇವಲ ಒಂದು ರು.ಗೆ ನೀಡಲಾಯಿತು ಎಂದು ಹೇಳಿದರು.

ಮೀಸಲಾತಿ ವಿಷಯದಲ್ಲಿ ಕಾಂಗ್ರೆಸ್‌ನಿಂದ ದಲಿತರಿಗೆ ಮೋಸ: ಸಿ.ಟಿ.ರವಿ

ಭಾರತದ ಅಮೃತ ಕಾಲದಲ್ಲಿ ಮಂಡಿಸಿದ 2023-24ನೇ ಸಾಲಿನ ಕೇಂದ್ರ ಆಯವ್ಯಯವು ಮುಂದಿನ 25 ವರ್ಷದ ಅಭಿವೃದ್ಧಿ ಯೋಜನೆಗಳಿಗೆ ಹಾಕಿದ ಬುನಾದಿ ಆಗಿದೆ. ಭಾರತವು ವಿಶ್ವದ ಆರ್ಥಿಕತೆಯನ್ನು ನಡೆಸುವ ಚಾಲಕನಾಗಲಿದೆ. ರಾಷ್ಟ್ರದ ಅಭಿವೃದ್ಧಿ ಹಾಗೂ ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಫಲಪ್ರದವಾಗುವಂತೆ ವಿಭಿನ್ನ ದೃಷ್ಟಿಕೋನದಲ್ಲಿ ಆಲೋಚಿಸಿ ಯೋಜನೆಗಳನ್ನು ರೂಪಿಸಲಾಗುತ್ತಿದೆ. ಚುನಾವಣೆ ದೃಷ್ಟಿಯಿಂದ ಯಾವುದೇ ಯೋಜನೆಗಳನ್ನು ಘೋಷಿಸುವುದಿಲ್ಲ ಎಂದರು.

ಸಂಸದ ಪಿ.ಸಿ.ಮೋಹನ್‌ ಮಾತನಾಡಿ, ಕೇಂದ್ರ ಸರ್ಕಾರವು ಮುಂದಿನ 25 ವರ್ಷದ ಅಭಿವೃದ್ಧಿಯ ದೃಷ್ಟಿಯಲ್ಲಿಟ್ಟುಕೊಂಡು 45 ಲಕ್ಷ ಕೋಟಿ ರು. ಮೊತ್ತದ ಬಜೆಟ್‌ ಮಂಡಿಸಿದೆ. ರೈಲ್ವೆ ಯೋಜನೆಗೆಳಿಗೆ 7500 ಕೋಟಿ ರು. ನೀಡಿದೆ. ಇನ್ನು ಬೆಂಗಳೂರಿನ ಉಪ ನಗರ ರೈಲ್ವೆ ಯೋಜನೆಗೆ ಬಜೆಟ್‌ನಲ್ಲಿ 450 ಕೋಟಿ ರು. ನೀಡಲಾಗಿದೆ ಎಂದು ಹೇಳಿದರು. ಸಂವಾದದಲ್ಲಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವತ್ಥನಾರಾಯಣ್‌ ಇದ್ದರು.

ಅದಾನಿ ಪ್ರಕರಣದಲ್ಲಿ ಕೇಂದ್ರದ ಪಾತ್ರ ತನಿಖೆಯಾಗಲಿ: ಪ್ರಿಯಾಂಕ್‌ ಖರ್ಗೆ

ವರ್ಷಾಂತ್ಯಕ್ಕೆ ದೇಶದ 125 ನಗರದಲ್ಲಿ 5ಜಿ: ದೇಶದಲ್ಲಿ ಡಿಜಿಟಲ್‌ ಕ್ರಾಂತಿಯು ಅಭಿವೃದ್ಧಿಗೆ ಸಹಕಾರಿ ಆಗಿದೆ. 4 ಜಿ ಬಳಿಕ 5 ಜಿ ಆರಂಭಿಸಿದ್ದೇವೆ. ಈವರ್ಷದ ಅಂತ್ಯಕ್ಕೆ ದೇಶದ 125 ನಗರದಲ್ಲಿ ಗುಣಮಟ್ಟದ 5 ಜಿ ಸೇವೆ ಲಭ್ಯವಾಗಲಿದೆ ಎಂದು ಕೇಂದ್ರ ಸಚಿವ ಪಿಯೂಷ್‌ ಗೋಯಲ್‌ ತಿಳಿಸಿದರು.

click me!