ಅಧಿಕಾರಕ್ಕಾಗಿ ಬಿಜೆಪಿಗೆ ಬಂದವರಿಂದ ಅಪಪ್ರಚಾರ; 'ಗೋಬ್ಯಾಕ್ ಶೋಭಾ' ಅಭಿಯಾನಕ್ಕೆ‌ ಕೇಂದ್ರ ಸಚಿವೆ ಕರಂದ್ಲಾಜೆ ತಿರುಗೇಟು

Published : Feb 24, 2024, 01:28 PM IST
ಅಧಿಕಾರಕ್ಕಾಗಿ  ಬಿಜೆಪಿಗೆ ಬಂದವರಿಂದ ಅಪಪ್ರಚಾರ; 'ಗೋಬ್ಯಾಕ್ ಶೋಭಾ' ಅಭಿಯಾನಕ್ಕೆ‌ ಕೇಂದ್ರ ಸಚಿವೆ ಕರಂದ್ಲಾಜೆ ತಿರುಗೇಟು

ಸಾರಾಂಶ

ಲೋಕಸಭಾ ಚುನಾವಣೆ ಟಕೆಟ್ ಅರ್ಹತೆ ಇರೋರು ಯಾರು ಬೇಕಾದ್ರೂ ಕೇಳಬಹುದು. ಆದರೆ ಮತ್ತೊಬ್ಬರ ತೇಜೋವಧೆ, ಅಪಮಾನ ಮಾಡಿ ಕೇಳಬಾರದು ಎಂದು 'ಗೋಬ್ಯಾಕ್ ಶೋಭಾ' ಅಭಿಯಾನಕ್ಕೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತಿರುಗೇಟು ನೀಡಿದರು.

ಚಿಕ್ಕಮಗಳೂರು (ಫೆ.24): ಲೋಕಸಭಾ ಚುನಾವಣೆ ಟಕೆಟ್ ಅರ್ಹತೆ ಇರೋರು ಯಾರು ಬೇಕಾದ್ರೂ ಕೇಳಬಹುದು. ಆದರೆ ಮತ್ತೊಬ್ಬರ ತೇಜೋವಧೆ, ಅಪಮಾನ ಮಾಡಿ ಕೇಳಬಾರದು ಎಂದು 'ಗೋಬ್ಯಾಕ್ ಶೋಭಾ' ಅಭಿಯಾನಕ್ಕೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತಿರುಗೇಟು ನೀಡಿದರು.

ಇಂದು ಚಿಕ್ಕಮಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನನ್ನ ವಿರುದ್ಧ ಕೆಲವರು ಅಪಪ್ರಚಾರ ನಡೆಸುತ್ತಿದ್ದಾರೆ. ಈ ಅಪಪ್ರಚಾರವನ್ನ ಜನ, ಹೈಕಮಾಂಡ್ ಗಮನಿಸುತ್ತಿದೆ. ನಿಜವಾದ ಬಿಜೆಪಿ ಕಾರ್ಯಕರ್ತರು ಇಂಥ ಕೆಲಸವನ್ನು ಮಾಡೊಲ್ಲ. ಅಧಿಕಾರಕ್ಕಾಗಿ ಬಂದು ಹೋಗುವವರು ಮಾಡುತ್ತಾರೆ, ಅವರ ಪಾರ್ಟಿಯಲ್ಲೂ ಅದನ್ನೇ ಮಾಡಿರುತ್ತಾರೆ ಎಂದು ಕಿಡಿಕಾರಿದು.

ಚಿಕ್ಕಮಗಳೂರು: ಸಾಮಾಜಿಕ ಜಾಲತಾಣದಲ್ಲಿ ಗೋಬ್ಯಾಕ್ ಶೋಭಾ ಕರಂದ್ಲಾಜೆ ಅಭಿಯಾನ..!

ಒಬ್ಬೊಬ್ಬರ ಕೈಯನಲ್ಲಿ ಹದಿನೈದಿಪ್ಪತ್ತು ಕಾರ್ಡ್ ಗಳಿವೆ. ಯಾರೋ ಸ್ಪಾನ್ಸರ್ ಮಾಡಿ ಇದನ್ನ ಮಾಡಿಸುತ್ತಿದ್ದಾರೆ ಅನ್ನೋದು ಸ್ಪಷ್ಟ. ಸ್ವಪಕ್ಷ-ವಿಪಕ್ಷ ಯಾರೇ ಆಗಲಿ, ಅಭಿವೃದ್ಧಿ ಆಧಾರದಲ್ಲಿ ಚರ್ಚೆಯಾಗಲಿ. ಮುಂದಿನ ದಿನಗಳಲ್ಲಿ ಅದಕ್ಕೆ ಉತ್ತರ ಯಾರು ಕೊಡಬೇಕೋ ಅವರೇ ಕೊಡುತ್ತಾರೆ. ಆದರೆ, ಉಡುಪಿ-ಚಿಕ್ಕಮಗಳೂರು ಕ್ಷೇತ್ರ ಅಭಿವೃದ್ಧಿ ಆಧಾರದಲ್ಲೇ ಚರ್ಚೆ ಆಗಲಿ. ನಾವು ಮಾಡಿರುವ ಅಭಿವೃದ್ಧಿ ಆಧಾರದ ಮೇಲೆ ಚರ್ಚೆ ಆಗಬೇಕು. ನನಗೆ ರಾಜಕೀಯದಲ್ಲಿ ವಿರೋಧಗಳು ಹೊಸದಲ್ಲ. ನಾನು ಮಂತ್ರಿ ಇದ್ದಾಗಲೇ ನನ್ನ ರಾಜೀನಾಮೆ ತೆಗೆದುಕೊಂಡಿದ್ದೆ. ಟಿಕೆಟ್ ಕೇಳೋರು ಸಮಾಜಿಕ ಜಾಲತಾಣದಲ್ಲಿ ಬರೆಯುತ್ತಾರೆ, ನಿಮಗೂ ಕೊಡುತ್ತಾರೆ. ನಾವು ಅಭಿವೃದ್ಧಿ ಆಧಾರದಲ್ಲಿ ಚುನಾವಣೆ ಮಾಡ್ತೀವಿ, ಎದುರಾಳಿಯ ನಿಂದನೆಯಿಂದಲ್ಲ. ಕ್ಷೇತ್ರ 10 ವರ್ಷದ ಹಿಂದೆ ಹೇಗಿತ್ತು. ಈಗ ಹೇಗಿದೆ ಎಂಬುದರ ಮೇಲೆ ಚರ್ಚೆ ಮಾಡಬೇಕು. ಅದುಬಿಟ್ಟು ಅಪಪ್ರಚಾರ ಮಾಡ್ಕೊಂಡು ಟಿಕೆಟ್ ಪಡೆದು ಏನು ಮಾಡುತ್ತೀರಿ? ಇದೇ ಅಪಪ್ರಚಾರ ಮಾಡೋದೇ ಆಗುತ್ತೆ. ವಿರೋಧಿಗಳಿಗೆ ಜನರೇ ಮುಂದಿನ ಚುನಾವಣೆಯಲ್ಲಿ ಉತ್ತರ ಕೊಡುತ್ತಾರೆ ಎಂದರು.

ಚಿಕ್ಕಮಗಳೂರು: ಸಚಿವೆ ಕರಂದ್ಲಾಜೆಗೆ ಸ್ವಕ್ಷೇತ್ರದಲ್ಲೇ ವಿರೋಧ, ಬಿಜೆಪಿ ಕಾರ್ಯಕರ್ತರಿಂದ ಶೋಭಾ ವಿರುದ್ಧ ಪತ್ರ ಅಭಿಯಾನ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಿದ್ದು ಸಮರವ್ಯೂಹ.. ಡಿಕೆ ಚತುರದಾಳ.. ಡಿನ್ನರ್ ದಂಗಲ್: ಒಂದು ಸಭೆ.. ಮೂರು ಸಂದೇಶ.. ಚಾಣಾಕ್ಷ ಬಂಡೆ!
ದ್ವೇಷ ಭಾಷಣ ತಡೆಗೆ ಕಾನೂನು ಯತ್ನ: ಕಾಂಗ್ರೆಸ್ ವಿರುದ್ಧ ನಿಖಿಲ್ ಕುಮಾರಸ್ವಾಮಿ ಆಕ್ರೋಶ