Afforestation Drive: ಪ್ರತಿ ಜಿಲ್ಲೆಯಲ್ಲಿ ಕನಿಷ್ಟ 30% ಅರಣ್ಯ ನಿರ್ಮಾಣಕ್ಕೆ ಸಚಿವ ಉಮೇಶ್ ಕತ್ತಿ ಆದೇಶ

Published : Nov 27, 2021, 10:59 PM ISTUpdated : Nov 27, 2021, 11:23 PM IST
Afforestation Drive: ಪ್ರತಿ ಜಿಲ್ಲೆಯಲ್ಲಿ ಕನಿಷ್ಟ 30% ಅರಣ್ಯ  ನಿರ್ಮಾಣಕ್ಕೆ ಸಚಿವ ಉಮೇಶ್ ಕತ್ತಿ ಆದೇಶ

ಸಾರಾಂಶ

* ಪ್ರತಿ ಜಿಲ್ಲೆಯಲ್ಲಿ ಅರಣ್ಯ  ನಿರ್ಮಾಣಕ್ಕೆ ಸಚಿವ ಉಮೇಶ್ ಕತ್ತಿ ಆದೇಶ * ಕನಿಷ್ಟ 30% ಅರಣ್ಯ  ನಿರ್ಮಾಣ ಮಾಡುವಂತೆ ಸೂಚನೆ * ಅರಣ್ಯ ಅಧಿಕಾರಿಗಳಿಗೆ   ಉಮೇಶ್ ಕತ್ತಿ ಆದೇಶ

ಬೆಂಗಳೂರು, (ನ.27): ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಕನಿಷ್ಟ 3೦% ಅರಣ್ಯ ನಿರ್ಮಾಣ ಮಾಡುವಂತೆ ಅರಣ್ಯ ಸಚಿವ ಉಮೇಶ್ ಕತ್ತಿಯವರು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಆದೇಶ ಹೊರಡಿಸಿದ್ದಾರೆ.

ಯಾವ ಜಿಲ್ಲೆಯಲ್ಲಿ ಅರಣ್ಯ ನಿರ್ಮಾಣ ಮಾಡಲು ಭೂಮಿ ಇಲ್ಲವೋ, ಆ ಜಿಲ್ಲೆಯಲ್ಲಿನ ಕಂದಾಯ ಇಲಾಖೆ, ಜಲ ಸಂಪನ್ಮೂಲ ಇಲಾಖೆಗೆ ಸೇರಿದಂತೆ ಬೇರೆ ಇಲಾಖೆಗೆ ಒಳಪಡುವ ಭೂಮಿಯನ್ನು, ಅರಣ್ಯ ಇಲಾಖೆಗೆ ವಿಲಿನಕರಣ ಮಾಡದೆ, ಆ ಭೂಮಿಯಲ್ಲಿ ಅರಣ್ಯ ಇಲಾಖೆಯ ಸಹಯೋಗದಿಂದ  ಸುಂದರವಾದ ಗಿಡ ಮರಗಳನ್ನು ಬೆಳೆಸಿ, ಎಂದು ಉಮೇಶ್ ಕತ್ತಿಯವರು ರಾಜ್ಯದ ಎಲ್ಲ ಅರಣ್ಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

Job Creation : ಉದ್ಯೋಗ ಸೃಷ್ಟಿಸಬಲ್ಲ ಯೋಜನೆಯ ಪೂರ್ವಭಾವಿ ಸಭೆ ನಡೆಸಿದ ಅಶ್ವತ್ಥನಾರಾಯಣ

ರಾಜ್ಯದ ಅರಣ್ಯ ಭೂಮಿಯನ್ನು ರಕ್ಷಿಸುವುದರ ಜೊತೆಗೆ, ವರ್ಷದಿಂದ ವರ್ಷಕ್ಕೆ ಉತ್ತಮ ಪರಿಸರ ನಿರ್ಮಾಣ ಮಾಡುವುದು ಅರಣ್ಯ ಇಲಾಖೆಯ ಕರ್ತವ್ಯ ಆಗಿದೆ.  

ದಕ್ಷಿಣ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಶೇಕಡಾ 70% ಅರಣ್ಯ ಇದೆ‌. ಆದರೆ ವಿಜಯಪುರ, ಬೀದರ್,  ಗುಲ್ಬರ್ಗಾ ಸೇರಿದಂತೆ ಅನೇಕ ಜಿಲ್ಲೆಯಲ್ಲಿ 10% ಕ್ಕಿಂತಲೂ ಕಡಿಮೆ ಅರಣ್ಯ ಭೂಮಿ ಇದೆ ಎಂದು ಕಳವಳ ವ್ಯಕ್ತಪಡಿಸಿದರು . 

ಕಡಿಮೆ ಅರಣ್ಯ ಇರುವ ಜಿಲ್ಲೆಗಳಲ್ಲಿ  ತಾಪಮಾನದ ಸಮಸ್ಯೆಯ ವೈಪರೀತ್ಯಗಳು  ಎಲ್ಲರಿಗೂ ಗೊತ್ತಿರುವ ವಿಷಯ ಆಗಿದೆ, ಹಾಗಾಗಿ ಅರಣ್ಯ ಇಲಾಖೆಯವರು  ಹೆಚ್ಚಿನ ಮುತುವರ್ಜಿ ವಹಿಸುವುದು ಅವಶ್ಯಕ ಆಗಿದೆ ಎಂದು ಸಚಿವರು ತಿಳಿಸಿದರು.

ಒಂದು ಕಡೆ ನಮಗೆ ಗೊತ್ತಿಲ್ಲದೆ ಮರ ಗಿಡಗಳ ಸಂಖ್ಯೆ ದಿನದಿಂದ ದಿನಕ್ಕೆ ಕಡಿಮೆ ಆಗುತ್ತಲೆ ಇದೆ. ಇದರಿಂದ ಆಮ್ಲಜನಕ ಪ್ರಮಾಣ ಕಡಿಮೆ ಆಗುತ್ತಿದೆ, ಈಗ ನಮ್ಮ ಯುವಕರು ನೋಡುತ್ತಿರುವ ಸುಂದರವಾದ ಅರಣ್ಯ ಗಿಡ ಮರಗಳನ್ನು, ನಮ್ಮ ಮುಂದಿನ ಪಿಳಿಗೆ ನೊಡುವಂತಾಗಬೇಕು, ಕೇವಲ ಇರುವ ಅರಣ್ಯ ಭೂಮಿ ರಕ್ಷಣೆ ಮಾಡಿದರೆ ಸಾಲದು ಅರಣ್ಯ ಭೂಮಿ ವೃದ್ಧಿಸುವ ಕಡೆಗೂ ಗಮನ ಹರಿಸಬೆಕಾಗಿದೆ ಎಂದು ಉಮೇಶ್ ಕತ್ತಿಯವರು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಶಾಲೆಯಿಂದ ಮರಳುತ್ತಿದ್ದ ವೇಳೆ ಬೀದಿ ನಾಯಿ ದಾಳಿ, 5 ವರ್ಷದ LKG ಬಾಲಕಿಗೆ ಗಂಭೀರ ಗಾಯ
ಕರ್ನಾಟಕದಲ್ಲಿ ನಿಮ್ಹಾನ್ಸ್ ಮಾದರಿಯ ಮತ್ತಷ್ಟು ಸಂಸ್ಥೆಗಳು ಅಗತ್ಯ: ಸಚಿವ ಶರಣ ಪ್ರಕಾಶ್ ಪಾಟೀಲ್