Jaladhare Pooja: ಜೆಡಿ​ಎಸ್‌ನಿಂದ 'ಜಲ​ಧಾರೆ ಕಾರ್ಯ​ಕ್ರಮ', ಕುಮಾರಸ್ವಾಮಿ ಘೋಷಣೆ

By Kannadaprabha News  |  First Published Nov 27, 2021, 12:50 AM IST

* ಜೀವನದಿಗಳ ನೀರನ್ನು ಪೂಜಿ​ಸುವ ಜಲ​ಧಾರೆ ಕಾರ್ಯ​ಕ್ರಮ
* ಕೇತುಗಾನಹಳ್ಳಿಯಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಘೋಷಣೆ
* 38 ಜೀವ ನದಿ​ಗಳ ನೀರನ್ನು ಸಂಗ್ರ​ಹಿಸಿ ಒಂದು ವರ್ಷಗಳ ಕಾಲ ಪೂಜಿಸುವ ’ಜಲಧಾರೆ’


ರಾಮ​ನ​ಗರ, (ನ.27): ನಾಡಿನ ಸುಭೀ​ಕ್ಷೆ​ಗಾಗಿ ಪ್ರಾರ್ಥಿಸಿ ಜೆಡಿ​ಎಸ್‌ ಪಕ್ಷ​ದಿಂದ ರಾಜ್ಯದ 38 ಜೀವ ನದಿ​ಗಳ ನೀರನ್ನು (River Water) ಸಂಗ್ರ​ಹಿಸಿ ಒಂದು ವರ್ಷಗಳ ಕಾಲ ಪೂಜಿಸುವ ’ಜಲಧಾರೆ’ (jaladhare Pooja) ಎಂಬ ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳುವುದಾಗಿ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ (HD Kumaraswamy) ತಿಳಿಸಿದರು.

ಬಿಡದಿ ಪುರಸಭೆ 7ನೇ ವಾರ್ಡು ವ್ಯಾಪ್ತಿಯ ಕೇತಗಾನಹಳ್ಳಿ ಗ್ರಾಮದಲ್ಲಿ ಶುಕ್ರವಾರ ನಡೆದ ಗ್ರಾಮದೇವತೆ ನೂತನ ದೇವಾಲಯ ಉದ್ಘಾಟನೆ, ಮಾರಮ್ಮ ಮೂರ್ತಿ ಪ್ರತಿಷ್ಠಾಪನೆ, ದೇವಾಲಯ ಸಂಪೋಕ್ಷಣೆ ಹಾಗೂ ಕುಂಬಾಭೀಷೇಕ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 2022ರ ಜನ​ವ​ರಿ​ಯಲ್ಲಿ ಜೀವನದಿಗಳ ನೀರನ್ನು ಕುಂಭಗಳಲ್ಲಿ ಸಂಗ್ರಹಿಸಿ ಒಂದು ವರ್ಷಗಳ ಕಾಲ ಪೂಜಿಸುವ ಜಲ​ಧಾರೆ ಕಾರ್ಯ​ಕ್ರಮ ಆಯೋ​ಜಿ​ಸ​ಲಾ​ಗು​ವುದು ಎಂದ​ರು.

Tap to resize

Latest Videos

MLC Election: ವಿಧಾನಪರಿಷತ್ ಚುನಾವಣೆ ಸಂಬಂಧ ಬಿಎಸ್‌ವೈ ಫೋನ್, ಎಚ್‌ಡಿಕೆ ಹೊಸ ಬಾಂಬ್

ರಾಜ್ಯದ ಎಲ್ಲಾ ಭಾಗದ ಜೀವನದಿಗಳ ನೀರನ್ನು ಸಂಗ್ರಹಿಸಿ ತಂದು ಪೂಜಿಸುವ ಮೂಲಕ ನದಿಗಳು ಮತ್ತು ಕೆರೆ-ಕಟ್ಟೆಗಳ ಸಂರಕ್ಷಣೆ ಹಾಗೂ ಪಾವಿತ್ರತೆ ಕಾಪಾಡುವಂತೆ ಜಲ​ಧಾರೆ ಕಾರ್ಯ​ಕ್ರ​ಮದ ಮೂಲಕ ಜನರ ಗಮನ ಸೆಳೆಯಲಾಗುವುದು ಎಂದು ಹೇಳಿ​ದ​ರು.

ನದಿಗಳು, ಕೆರೆ-ಕಟ್ಟೆಗಳು ನಿರ್ಲಕ್ಷಕ್ಕೆ ಒಳಗಾಗಿ ನೀರು ಕಲುಷಿತವಾಗುತ್ತಿದ್ದು ಕುಡಿಯಲು ಯೋಗ್ಯವಲ್ಲದ ಸ್ಥಿತಿ ನಿರ್ಮಾಣವಾಗಿದೆ. ಇಂತಹ ಸನ್ನಿವೇಶದಲ್ಲಿ ಕೊಳಚೆ ನೀರನ್ನು ಶುದ್ಧೀಕರಿಸಿ ಕೆರೆಗಳಿಗೆ ತುಂಬಿಸುತ್ತಿರುವ ಕ್ರಮ ಅವೈಜ್ಞಾನಿಕವಾಗಿ​ದ್ದು, ಇದರಿಂದ ಯಾವ ಪ್ರಯೋಜನವೂ ಇಲ್ಲ. ಕೊಳಚೆ ನೀರನ್ನು ಕೆರೆಗಳಿಗೆ ಹರಿಸುವ ಬದಲಾಗಿ ಕೆರೆ-ಕಟ್ಟೆಗಳು ಹಾಗೂ ರಾಜಕಾಲುವೆಗಳ ಸಂರಕ್ಷಣೆ ಮಾಡುವುದು ತೀರಾ ಅಗತ್ಯವಾಗಿದೆ ಎಂದು ​ತಿ​ಳಿ​ಸಿ​ದರು.

ಬಿಡದಿಯಲ್ಲಿ ನಡೆದ ಜನತಾ ಪರ್ವ 1.0 ಸಂಘಟನಾ ಕಾರ್ಯಾಗಾರದಲ್ಲಿ ತೆಗೆದುಕೊಂಡ ನಿರ್ಣಯದಂತೆ ’’ಪಂಚರತ್ನ’’ ಮಹತ್ವಾಕಾಂಕ್ಷೆ ಯೋಜನೆಯ ಕುರಿತು ಜನರಿಗೆ ತಿಳಿಸಿಕೊಡಲಾಗುವುದು.

ಪಕ್ಷ ಅಧಿ​ಕಾ​ರಕ್ಕೆ ಬಂದಲ್ಲಿ ಪ್ರತಿ ಕುಟುಂಬಕ್ಕೂ ಉತ್ತಮ ಆರೋಗ್ಯ ಕಲ್ಪಿಸುವ ನಿಟ್ಟಿನಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರಗಳು, ಎಲ್ಲಾ ವರ್ಗದ ಮಕ್ಕಳಿಗೆ 12ನೇ ತರಗತಿವರೆಗೆ ಉಚಿತ ಶಿಕ್ಷಣದ ಪ್ರಯೋಜನ ದೊರಕಿಸಿಕೊಡುವ ಕಾರ್ಯಕ್ರಮಗಳ ಆಯೋಜನೆ ಮಾಡಲಾಗುವುದು ಎಂದು ಕುಮಾರಸ್ವಾಮಿ ಹೇಳಿದರು.

ಚುಂಚ​ನ​ಗಿರಿ ಮಠಾ​ಧೀಶ ಶ್ರೀ ನಿರ್ಮ​ಲಾ​ನಂದನಾಥ ಸ್ವಾಮೀಜಿ ಮಾತ​ನಾಡಿ, ಕುಮಾರಸ್ವಾಮಿ​ರ​ವರು ನಾಡನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ದಿದ್ದಾರೆ.

ನಾಡಿನ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಅ​ವ​ರಿಗೆ ತಾಯಿಯ ಆಶೀರ್ವಾದ ಇರಲೆಂದು ಪ್ರಾರ್ಥಿ​ಸು​ವು​ದಾಗಿ ತಿಳಿ​ಸಿ​ದರು.

ಕುಮಾರಸ್ವಾಮಿ ಪ್ರಗತಿ ಕಂಡು ಅವರ ತಾಯಿ ಚೆನ್ನಮ್ಮ ಸಂತಸಗೊಂಡಿದ್ದಾರೆ . ಚನ್ನಮ್ಮನವರ ಪೂಜೆಯ ಫಲದಿಂದ ಅವರು ಪ್ರಗತಿ ಕಂಡಿದ್ದಾರೆ. ತಾಯಂದಿರ ಪಾರ್ಥನೆ ಎಂದು ಹುಸಿಯಾಗಲ್ಲ . ಯಾವ ಮನೆಯಲ್ಲಿ ತಾಯಂದಿರು ಪ್ರಾರ್ಥನೆ ಸಲ್ಲಿಸುತ್ತಾರೋ ಅವರ ಮಕ್ಕಳು ಪ್ರಗತಿ ಕಾಣುತ್ತಾರೆ ಈ ದೃಷ್ಟಿಯಿಂದ ಇಂದು ಗ್ರಾಮದೇವತೆಯ ಪ್ರತಿಷ್ಠಾಪನೆ ಆಗಿದೆ. ತಾಯಿ ಈ ಭಾಗದ ಜನರನ್ನು ಹರಸಲಿ ಎಂದು ಹೇಳಿ​ದ​ರು.

ಶ್ರೀ ಗುರು​ಗುಂಡಾ ಬ್ರಹ್ಮೇ​ಶ್ವರ ಮಠದ ಪೀಠಾ​ಧಿ​ಪತಿ ಶ್ರೀ ನಂಜಾ​ವ​ಧೂತ ಸ್ವಾಮೀಜಿ ಮಾತ​ನಾಡಿ, ಮಾಜಿ ದೇವೇಗೌಡ ಮತ್ತು ಮಾಜಿ ಸಿಎಂ ಕುಮಾರಸ್ವಾಮಿ ತಮಗೆ ದೊರೆತ ಅಲ್ಪ ಅವಕಾಶದಲ್ಲಿ ನಾಡಿನ ಅಭಿವೃದ್ಧಿ ಮಾಡಿದ್ದಾರೆ. ಇತಿಹಾಸ ನೆನಪಿಡುವ ಕೆಲಸ ಕಾರ್ಯಗಳನ್ನು ಮಾಡಿ​ರುವ ಕುಮಾ​ರ​ಸ್ವಾಮಿ ಹೃದ​ಯ​ವಂತ ಮುಖ್ಯ​ಮಂತ್ರಿ​ಯಾ​ಗಿ​ದ್ದ​ವ​ರು ಎಂದು ಬಣ್ಣಿ​ಸಿ​ದರು.

ಈ ರಾಜ್ಯದಲ್ಲಿ ಮತ್ತೊಮ್ಮೆ ಕುಮಾ​ರ​ಸ್ವಾಮಿ ಮುಖ್ಯಮಂತ್ರಿ ಆಗಬೇಕು . ದೇವೇಗೌಡ ಮತ್ತು ಚನ್ನಮ್ಮನವರ ಪುಣ್ಯ ಅವರನ್ನು ಕಾಪಾಡಿದೆ. ಹೃದಯಾಘಾತದಿಂದ ಅನಾರೋಗ್ಯಕ್ಕೆ ಒಳಗಾಗಿದ್ದವರು ಚೇತರಿಕೆ ಕಂಡಿದ್ದಾರೆ. ಕುಮಾರಸ್ವಾಮಿ ಮಾಡಿರುವ ಒಳ್ಳೆ ಕೆಲಸ ಅವರನ್ನು ಉಳಿಸಿದೆ. ಇಂತಹ ಸಹೃದಯಿ ಮತ್ತೆ ಸಿಎಂ ಆಗಬೇಕು ಎಂದು ಹೇಳಿ​ದ​ರು.

ಶಾಸಕ ಎ.ಮಂಜುನಾಥ್‌, ವಿಶ್ವ ಒಕ್ಕಲಿಗರ ಸಂಸ್ಥಾನ ಮಠದ ಕುಮಾರ ಚಂದ್ರಶೇಖರನಾಥ ಸ್ವಾಮೀಜಿ ಮತ್ತಿ​ತ​ರರು ಉಪ​ಸ್ಥಿ​ತ​ರಿ​ದ್ದ​ರು.

ಜೀವಿತಾವ​ಧಿಯನ್ನು ಬಿಡದಿಯಲ್ಲೇ ಕಳೆಯುವೆ
ರಾಮ​ನ​ಗರದ ಬಿಡದಿಯ ಕೇತಗಾನಹಳ್ಳಿ ಗ್ರಾಮದಲ್ಲಿ ಜಮೀನು ಮತ್ತು ತೋಟದ ಮನೆ ಹೊಂದಿರುವುದರಿಂದ ನಮ್ಮ ಕುಟುಂಬವರು ಕೂಡ ಈ ಗ್ರಾಮದವರೇ ಆಗಿದ್ದೇವೆ. ಸುಮಾರು ಐವತ್ತು ವರ್ಷಗಳ ರಾಜಕೀಯ ಅನುಭವ ಇದ್ದರೂ ನಮ್ಮ ತಂದೆ ದೇವೇಗೌಡರು ಮುಖ್ಯಮಂತ್ರಿ ಆಗಲು ಸಾಧ್ಯವಿರಲಿಲ್ಲ. ಬಿಡದಿಯಲ್ಲಿ ನಾವು ಜಮೀನು ಖರೀದಿಸಿದ ಬಳಿಕ ಅವರು ರಾಮನಗರ ಕ್ಷೇತ್ರದಿಂದ ಚುನಾವಣೆಯಲ್ಲಿ ಗೆದ್ದು ಮುಖ್ಯಮಂತ್ರಿ ಆದರು. ನಂತರ ಪ್ರಧಾನ ಮಂತ್ರಿ ಆಗುವ ಅವಕಾಶ ದೊರೆಯಲು ಈ ಮಣ್ಣು ಕಾರಣ, ಹೀಗಾಗಿ ಕೇತಗಾನಹಳ್ಳಿ ನಮ್ಮ ಕುಟುಂಬಕ್ಕೆ ಪುಣ್ಯಭೂಮಿ ಎಂದು ಮಾಜಿ ಸಿಎಂ ಕುಮಾರಸ್ವಾಮಿ ತಿಳಿಸಿದರು.

ಬಿಡದಿಯಲ್ಲಿ ಜಮೀನು ಖರೀದಿಸಿದ್ದರಿಂದಲೇ ತಾವೂ ಕೂಡ ರಾಮನಗರ ಕ್ಷೇತ್ರದಿಂದ ರಾಜಕೀಯ ಜೀವನ ಆರಂಭಿಸಲು ಸಾಧ್ಯವಾಯಿತು. ಬಿಡದಿಯ ಮಣ್ಣು ತಮ್ಮ ಭವಿಷ್ಯ ಬರೆದಿರುವುದರಿಂದ ಮುಂದಿನ ತಮ್ಮ ಎಲ್ಲಾ ರಾಜಕೀಯ ಚಟುವಟಿಕೆಗಳು ಬಿಡದಿಯ ತೋಟದ ಮನೆಯಿಂದಲೇ ನಡೆಯಲಿವೆ. ಭವಿಷ್ಯದಲ್ಲಿ ತಮಗೆ ಯಾವ ಸ್ಥಾನ ಮಾನ ದೊರೆತರೂ ಕೂಡ ಬಿಡದಿಯ ತೋಟದ ಮನೆಯಲ್ಲಿಯೇ ವಾಸ್ತವ್ಯ ಇರುವುದಾಗಿ ಮುಂದಿನ ಜೀವಿತಾವಧಿ ಕಳೆಯುವುದಾಗಿ ಕುಮಾರಸ್ವಾಮಿ ಘೋಷಿಸಿದರು.

click me!