'ರಾಜನೇ ಮತ್ತೆ ರಾಜನಾಗುವ ಯೋಗ..' ಗುಳೇದಗುಡ್ಡದ ಯುಗಾದಿ ಭವಿಷ್ಯವಾಣಿ! ಮತ್ತೊಮ್ಮೆ ಪ್ರಧಾನಿಯಾಗ್ತಾರಾ ಮೋದಿ?

Published : Apr 09, 2024, 08:17 PM IST
'ರಾಜನೇ ಮತ್ತೆ ರಾಜನಾಗುವ ಯೋಗ..' ಗುಳೇದಗುಡ್ಡದ ಯುಗಾದಿ ಭವಿಷ್ಯವಾಣಿ! ಮತ್ತೊಮ್ಮೆ ಪ್ರಧಾನಿಯಾಗ್ತಾರಾ ಮೋದಿ?

ಸಾರಾಂಶ

'ರಾಜನೇ ಮರಳಿ ರಾಜನಾಗುವ ಯೋಗ ಇದೆ. ರಾಜ ಬಲಿಷ್ಠನಾಗಿದ್ದಾನೆ, ಪ್ರಜೆಗಳು ಬಲಿಷ್ಠರಾಗಿದ್ದಾರೆ. ಸೈನ್ಯವೂ ಬಲಿಷ್ಠವಾಗಿದೆ..' ಗುಳೇದಗುಡ್ಡದಲ್ಲಿ ಯುಗಾದಿ ಪಾಡ್ಯದಂದು ನುಡಿದ ಭವಿಷ್ಯವಾಣಿಯಾಗಿದೆ. ಅಂದರೆ ಈ ಬಾರಿಯೂ ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿ ಆಗುತ್ತಾರೆ ಎಂದು ಹೇಳಲಾಗಿದೆ.

ಬಾಗಲಕೋಟೆ (ಏ.9): 'ರಾಜನೇ ಮರಳಿ ರಾಜನಾಗುವ ಯೋಗ ಇದೆ. ರಾಜ ಬಲಿಷ್ಠನಾಗಿದ್ದಾನೆ, ಪ್ರಜೆಗಳು ಬಲಿಷ್ಠರಾಗಿದ್ದಾರೆ. ಸೈನ್ಯವೂ ಬಲಿಷ್ಠವಾಗಿದೆ..' ಗುಳೇದಗುಡ್ಡದಲ್ಲಿ ಯುಗಾದಿ ಪಾಡ್ಯದಂದು ನುಡಿದ ಭವಿಷ್ಯವಾಣಿಯಾಗಿದೆ. ಅಂದರೆ ಈ ಬಾರಿಯೂ ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿ ಆಗುತ್ತಾರೆ ಎಂದು ಹೇಳಲಾಗಿದೆ.

ಬಾಗಲಕೋಟೆ ಜಿಲ್ಲೆಯಲ್ಲಿ ನೇಕಾರರ ನಗರ ಎಂದೇ ಪ್ರಸಿದ್ಧಿ ಪಡೆದಿರುವ ಗುಳೇದಗುಡ್ಡದ ಮಾರವಾಡಿ ಬಗೀಚನಲ್ಲಿ ಪ್ರತಿ ವರ್ಷವೂ ಯುಗಾದಿಯ ಫಲ ಭವಿಷ್ಯವಾಣಿ  ನುಡಿಯಲಾಗುತ್ತದೆ. ರಾಜ್ಯ, ರಾಷ್ಟ್ರದಲ್ಲಿ ಮಳೆ ಬೆಳೆ ರಾಜಕೀಯ ಹೀಗೆ ಎಲ್ಲದರ ಬಗ್ಗೆಯೂ ಭವಿಷ್ಯ ಹೇಳಲಾಗುತ್ತದೆ. ವಿಜಯಪುರದ ಮೈಲಾರಲಿಂಗೇಶ್ವರ, ಕೊಡೆಕಲ್ ಬಸವಣ್ಣನವರ ಭವಿಷ್ಯವಾಣಿಯಂತೆಯೇ ಗುಳೇದಗುಡ್ಡದ ಇಲಾಳ ಮ್ಯಾಳದ ಮಲ್ಲೇಶ ಗೊಬ್ಬಿ ಭವಿಷ್ಯ ವಾಣಿ ಮಹತ್ವ ಪಡೆದಿದೆ. ಪ್ರತಿ ವರ್ಷವೂ ನಡೆಯುವ ಭವಿಷ್ಯವಾಣಿ ಬಗ್ಗೆ ಇಲ್ಲಿನ ಜನರಿಗೆ ಎಲ್ಲಿಲ್ಲದ ನಂಬಿಕೆಯಿದೆ.

ರಾಜ್ಯಕ್ಕೆ ಉಜ್ವಲ ಭವಿಷ್ಯ ಕೊಟ್ಟ ಮೈಲಾರ ಲಿಂಗೇಶ್ವರ ಕಾರ್ಣಿಕ; 'ಸಂಪಾಯಿತಲೇ ಪರಾಕ್'..

ಭವಿಷ್ಯವಾಣಿ ಹೀಗಿದೆ:

ರಾಜಕೀಯ ವಿಚಾರಕ್ಕೆ ಸಂಬಂಧಿಸಿದಂತೆ ಈ ಬಾರಿಯೂ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆದ್ದು ಮೋದಿಯೇ ಮತ್ತೊಮ್ಮೆ ಪ್ರಧಾನಿಯಾಗುತ್ತಾರೆ ಎಂಬರ್ಥದಲ್ಲಿ ಭವಿಷ್ಯ ನುಡಿದಿದ್ದಾರೆ. 'ರಾಜನೇ ಮರಳಿ ರಾಜನಾಗುವ ಯೋಗ ಇದೆ' ರಾಜ ಬಲಿಷ್ಠನಾಗಿದ್ದಾನೆ ಹಾಗಾಗಿ ಮತ್ತೊಮ್ಮೆ ರಾಜನಾಗುತ್ತಾನೆ. ಹಾಗೆಯೇ ದೇಶದಲ್ಲಿ ರಾಜನಂತೆ ಪ್ರಜೆಗಳು, ಮಂತ್ರಿಗಳ ಸೈನ್ಯ ಸಹ ಬಲಿಷ್ಠವಾಗಿದೆ ಎಂದು ನುಡಿದಿದ್ದಾನೆ.

ಭಾರತದ ಬಗ್ಗೆ ಈ ಯುಗದ ನಾಸ್ಟ್ರಮಸ್ ಭವಿಷ್ಯ ಹೇಳಿದ್ದೇನು? ಹುಲಿಯಂತೆ ಚಿತ್ರಿಸಿದ ಅರ್ಥವೇನು?

ಈ ವರ್ಷ ಹೆಸರು, ಬಿಳಿಜೋಳ, ಕಡಲೆ, ಗೋದಿ ಬಂಪರ್ ಬೆಳೆ ಇದೆ. ತೊಗರಿ, ಸಜ್ಜೆಗೆ ಕೀಟ ಬಾಧೆ ಹೆಚ್ಚಿದೆ. ಕಪಡಾ ಅಂಗಡಿಯ ವ್ಯಾಪಾರ ಅತ್ಯಂತ ಉತ್ತಮ. ಶೆಟ್ಟಿ ಮಾತ್ರ ಅತ್ಯಂತ ದರ್ಬಾರಿನಿಂದ ಮೆರೆಯುತ್ತಾನೆ ಎಂದು ತಮ್ಮ ಭವಿಷ್ಯದಲ್ಲಿ ತಿಳಿಸಿದ್ದಾರೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ವಿದೇಶದಲ್ಲಿ ಇರುವವರಿಗೂ ಗ್ಯಾರಂಟಿ ಲಾಭ ಬಗ್ಗೆ ಸಿಎಲ್ಪೀಲಿ ಪ್ರಸ್ತಾಪ: ಸಚಿವ ಮಧು ಬಂಗಾರಪ್ಪ
ಸಾರಿಗೆ ಇಲಾಖೆಗೆ ನಕಲಿ ವ್ಯಾಸಂಗ ಪತ್ರ ದಾಖಲೆ ನೀಡಿದರೆ ತನಿಖೆ: ಸಚಿವ ರಾಮಲಿಂಗಾರೆಡ್ಡಿ