ಹಾವೇರಿ ಜಿಲ್ಲೆಯ ಶಿಂಗ್ಗಾವಿ ಪಟ್ಟಣದ ಮಹಿಳೆಯೊಬ್ಬರು ಪ್ರತಿತಿಂಗಳು ಬರುತ್ತಿದ್ದ ಗೃಹಲಕ್ಷ್ಮೀ ಯೋಜನೆಯ ಹಣವನ್ನು ಖರ್ಚು ಮಾಡದೇ ಕೂಡಿಟ್ಟು ಯುಗಾದಿ ಹಬ್ಬದ ದಿನವೇ ಫ್ರಿಡ್ಜ್ ಖರೀದಿಸಿ ಎಲ್ಲರನ್ನೂ ಹುಬ್ಬೇರಿಸುವಂತೆ ಮಾಡಿದ್ದಾರೆ.
ಹಾವೇರಿ (ಏ.9): ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಐದು ಗ್ಯಾರಂಟಿ ಯೋಜನೆಗಳಲ್ಲಿ ಅತ್ಯಂತ ಮುಖ್ಯವಾಗಿರುವ, ಮನೆಯ ಯಜಮಾನತಿ ಪ್ರತಿ ತಿಂಗಳು 2000 ರೂಪಾಯಿ ನೀಡುವ 'ಗೃಹ ಲಕ್ಷ್ಮೀ' ಯೋಜನೆ ಅತ್ಯಂತ ಮಹತ್ವದ್ದಾಗಿದೆ. ಈ ಯೋಜನೆಯಿಂದ ಬಹಳಷ್ಟು ಬಡ ಕುಟುಂಬಗಳ ಜೀವನಮಟ್ಟ ಸುಧಾರಿಸಿದೆ. ಅದೆಷ್ಟೋ ಬಡ ಮಹಿಳೆಯರಿಗೆ ಆರ್ಥಿಕವಾಗಿ ಬಹಳಷ್ಟು ಸಹಾಯಕ್ಕೆ ಬಂದಿದೆ. ಗೃಹಲಕ್ಷ್ಮೀ ಯೋಜನೆಯಿಂದ ಬಡವರ ಚಿಕ್ಕಪುಟ್ಟ ಕನಸುಗಳು ನನಸಾಗಿವೆ ಎಂಬುದಕ್ಕೆ ಇಲ್ಲೊಂದು ಘಟನೆ ಸಾಕ್ಷಿಯಾಗಿದೆ.
ಹಾವೇರಿ ಜಿಲ್ಲೆಯ ಶಿಂಗ್ಗಾವಿ ಪಟ್ಟಣದ ಮಹಿಳೆಯೊಬ್ಬರು ಪ್ರತಿತಿಂಗಳು ಬರುತ್ತಿದ್ದ ಗೃಹಲಕ್ಷ್ಮೀ ಯೋಜನೆಯ ಹಣವನ್ನು ಖರ್ಚು ಮಾಡದೇ ಕೂಡಿಟ್ಟು ಯುಗಾದಿ ಹಬ್ಬದ ದಿನವೇ ಫ್ರಿಡ್ಜ್ ಖರೀದಿಸಿ ಎಲ್ಲರನ್ನೂ ಹುಬ್ಬೇರಿಸುವಂತೆ ಮಾಡಿದ್ದಾರೆ.
undefined
ಮಗನ ಅಂತ್ಯಕ್ರಿಯೆ ವೇಳೆ ಗೃಹಲಕ್ಷ್ಮಿ ಬಗ್ಗೆ ತಾಯಿ ಭಾವುಕ ಮಾತು ವೈರಲ್!
ಗೃಹಲಕ್ಷ್ಮೀ ಫಲಾನುಭವಿಯಾಗಿರುವ ಲತಾ ಎಂಬ ಮಹಿಳೆ ಫ್ರಿಡ್ಜ್ ಖರೀದಿಸಿದ್ದಾರೆ. ರಾಜ್ಯ ಸರ್ಕಾರ ಗೃಹಲಕ್ಷ್ಮೀ ಜಾರಿ ಮಾಡಿದಾಗ, ಅಗತ್ಯ ದಾಖಲೆಗಳನ್ನು ನೀಡಿ ಯೋಜನೆಯ ಫಲಾನುಭವಿಯಾಗಿದ್ದ ಮಹಿಳೆ. ಯೋಜನೆ ಜಾರಿಯಾದಾಗಿನಿಂದಲೂ ಪ್ರತಿ ತಿಂಗಳು ಬರುತ್ತಿದ್ದ 2000 ರೂ. ಹಣ ಕೂಡಿಡುತ್ತ ಬಂದಿದ್ದ ಮಹಿಳೆ. ಇದೀಗ ಯುಗಾದಿ ಹಬ್ಬಕ್ಕೆ ಒಟ್ಟು ಸೇರಿಸಿ 17,500 ರೂಪಾಯಿ ಬೆಲೆಯ ಫ್ರಿಡ್ಜ್ ಖರೀದಿಸಿ ಜನರ ಗಮನ ಸೆಳೆದಿದ್ದಾರೆ.
ಫ್ರಿಡ್ಜ್ ಖರೀದಿಸಿದ ಬಳಿಕ 'ಗೃಹಲಕ್ಷ್ಮೀ ಫಲಾನುಭವಿ' ಎಂದು ಫ್ರಿಡ್ಜ್‌ಗೆ ಲಿಖಿತ ಫಲಕ ಹಾಕಿರುವ ಮಹಿಳೆ. ಮನೆಗೆ ತಂದು ಪೂಜೆ ಸಲ್ಲಿಸಿ ಬಳಕೆ ಮಾಡಿದ್ದಾರೆ. ಗೃಹಲಕ್ಷ್ಮೀ ಹಣ ಯಾವುದಕ್ಕೆ ಸಾಲೋದಿಲ್ಲ ಎಂಬುವವರಿಗೆ ಈ ಮಹಿಳೆ ಗೃಹಲಕ್ಷ್ಮೀ ಹಣ ಕೂಡಿಟ್ಟು ಏನೆಲ್ಲ ಖರೀದಿಸಬಹುದು ಎಂಬುದು ತೋರಿಸಿಕೊಟ್ಟಿದ್ದಾರೆ.