ಉಡುಪಿ ಕಾಲೇಜು ಶೌಚಗೃಹದಲ್ಲಿ ಹಿಂದೂ ಯುವತಿಯರ ವೀಡಿಯೋ ಸೆರೆ: ಪ್ರಶ್ನಿಸಿದವರ ಮೇಲೆ ಪೊಲೀಸ್‌ ವಿಚಾರಣೆ

By Sathish Kumar KH  |  First Published Jul 25, 2023, 2:57 PM IST

ಉಡುಪಿ ಕಾಲೇಜಿನ ಶೌಚಗೃಹದಲ್ಲಿ ಕ್ಯಾಮರಾ ಇಟ್ಟು ಹಿಂದೂ ಯುವತಿಯರ ವೀಡಿಯೋ ಮಾಡಿ ಶೇರ್‌ ಮಾಡಿಕೊಳ್ಳುತ್ತಿದ್ದ ಅನ್ಯ ಧರ್ಮೀಯರ ಬಗ್ಗೆ ಪ್ರಶ್ನೆ ಮಾಡಿದವರನ್ನೇ ಪೊಲೀಸರು ವಿಚಾರಣೆ ಮಾಡುತ್ತಿದ್ದಾರೆ. 


ಉಡುಪಿ (ಜು.25): ಕರ್ನಾಟಕ ಕರಾವಳಿ ತೀರ ಉಡುಪಿಯ ಪ್ರತಿಷ್ಠಿತ ಕಾಲೇಜಿನ ಶೌಚಗೃಹದಲ್ಲಿ ಕ್ಯಾಮರಾ ಇಟ್ಟು ಹಿಂದೂ ಯುವತಿಯರ ವೀಡಿಯೋ ಸೆರೆಹಿಡಿದು ಅದನ್ನು ಅನ್ಯ ಧರ್ಮದ ಯುವಕರ ವಾಟ್ಸಾಪ್‌ ಗುಂಪುಗಳಿಗೆ ಹರಿಬಿಡಲಾಗುತ್ತಿತ್ತು. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನೆ ಮಾಡಿದ ಸಾಮಾಜಿಕ ಹೋರಾಟಗಾರ್ತಿಯ ಮನೆ ಸಿಬ್ಬಂದಿ ಮೇಲೆ ಪೊಲೀಸರು ವಿಚಾರಣೆ ನೆಪದಲ್ಲಿ ಬೆದರಿಕೆ ಹಾಕಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಸರ್ಕಾರ ಹಿಂದೂ ಯುವತಿಯರ ಮೇಲೆ ಆಗಿರುವ ಪ್ರಕರಣವನ್ನು ಸರ್ಕಾರ ಮುಚ್ಚಿ ಹಾಕುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಬಿಜೆಪಿ ನಾಯಕರು ಆರೋಪ ಮಾಡಿದ್ದಾರೆ.

ಈಗಾಗಲೇ ದೇಶದಲ್ಲಿ ಕೇರಳ ಫೈಲ್ಸ್‌ ಮಾದರಿಯಲ್ಲಿ ಹಿಂದು ಯುವತಿಯರ ಅತ್ಯಾಚಾರ, ಕೊಲೆ ಪ್ರಕರಣಗಳು ನಡೆಯುತ್ತಿವೆ ಎಂಬ ಆರೋಪದ ಬೆನ್ನಲ್ಲೇ ಉಡುಪಿ ಜಿಲ್ಲೆಯಲ್ಲಿ ಇಂತಹದ್ದೇ ಒಂದು ಘಟನೆ ನಡೆದಿದೆ. ಇದಕ್ಕೆ ಉಡುಪಿ ಫೈಲ್ಸ್‌ ಎಂದು ಕರೆದರೂ ತಪ್ಪೇನಿಲ್ಲ. ಇನ್ನು ಘಟನೆಗೆ ಬರುವುದಾರೆ, ಉಡುಪಿಯ ಪ್ರತಿಷ್ಠಿತ ಖಾಸಗಿ ಕಾಲೇಜೊಂದರಲ್ಲಿ ಮೂವರು ಮುಸ್ಲಿಂ ಸಮುದಾಯದ ವಿದ್ಯಾರ್ಥಿನಿಯರು ಶೌಚಾಲಯದಲ್ಲಿ ಕ್ಯಾಮರಾ ಇಟ್ಟು ಹಿಂದೂ ವಿದ್ಯಾರ್ಥಿನಿಯರ ಅರೆ ನಗ್ನ ಚಿತ್ರಗಳನ್ನು ರೆಕಾರ್ಡ್‌ ಮಾಡಿದ್ದಾರೆ. ನಂತರ, ಅವುಗಳನ್ನು ಅವರದ್ದೇ ಸಮುದಾಯದ ಯವಕರಿಗೆ ಕಳುಹಿಸಲಾಗುತ್ತದೆ. ನಂತರ, ಆ ವೀಡಿಯೋಗಳನ್ನು ಕೆಲವೊಂದು ವಾಟ್ಸಾಪ್‌ ಗುಂಪುಗಳಿಗೆ ಹಂಚಿಕೊಳ್ಳಲಾಗತ್ತಿತ್ತು.

Tap to resize

Latest Videos

undefined

Anita Bhat: ಉಡುಪಿ ಕಾಲೇಜ್​ ಟಾಯ್ಲೆಟಲ್ಲಿ ಹಿಂದೂ ವಿದ್ಯಾರ್ಥಿನಿಯರ ವಿಡಿಯೋ: ಅನುಭವ ಹೇಳಿದ 'ಟಗರು' ನಟಿ!

ಈ ಬಗ್ಗೆ ಹಿಂದೂ ವಿದ್ಯಾರ್ಥಿನಿಯರಿಗೆ ಮಾಹಿತಿ ತಿಳಿದು ಕಾಲೇಜು ಆಡಳಿತ ಮಂಡಳಿ ಗಮನಕ್ಕೆ ತಂದಿದ್ದರು. ಇದನ್ನು ಪರಿಶೀಲನೆ ಮಾಡಿದ ಕಾಲೇಜು ಆಡಳಿತ ಮಂಡಳಿಯವರು, ಕ್ಯಾಮರಾ ಇಟ್ಟಿದ್ದ ವಿದ್ಯಾರ್ಥಿನಿಯರ ಮೊಬೈಲ್‌ನಲ್ಲಿದ್ದ ವೀಡಿಯೋಗಳನ್ನು ಡಿಲೀಟ್‌ ಮಾಡಿಸಿದ್ದಾರೆ. ನಂತರ ಈ ಕೃತ್ಯವನ್ನು ಎಸಗಿದ ಮೂವರು ವಿದ್ಯಾರ್ಥಿನಿಯರನ್ನು ಕಾಲೇಜಿನಿಂದ ಅಮಾನತು ಮಾಡಲಾಗಿದೆ. ಈ ಪ್ರಕರಣವನ್ನು ಕಾಲೇಜು ಆಡಳಿತ ಮಂಡಳಿ ಮುಚ್ಚಿಹಾಕಿತ್ತು. ಇದಾದ ನಂತರ ಕೆಲವು ವಿದ್ಯಾರ್ಥಿ ಸಂಘಟನೆಗಳು ಪ್ರತಿಭಟನೆ ಮಾಡಿದ್ದರಿಂದ ಸುದ್ದಿ ಮುನ್ನೆಲೆಗೆ ಬಂದಿದೆ. 

ಜಾಲತಾಣದಲ್ಲಿ ಹಂಚಿಕೊಂಡ ಯುವತಿ ಪೋಷಕರ ವಿಚಾರಣೆ: ಉಡುಪಿಯ ಕಾಲೇಜಿನಲ್ಲಿ ನಡೆದ ಘಟನೆಯ ಬಗ್ಗೆ ಪತ್ರಿಕೆಗಳಲ್ಲಿಯೂ ಸುದ್ದಿ ಪ್ರಸಾರವಾಗಿದೆ. ಇನ್ನು ಪತ್ರಿಕೆಗಳನ್ನು ಪ್ರಸಾರವಾದ ನಂತರ ವಿದ್ಯಾರ್ಥಿಗಳ ಪರ ಸಾಮಾಜಿಕ ಹೋರಾಟಗಾರ್ತಿ ರಶ್ಮಿ ಸಮಂತ ಭಟ್‌ ಎನ್ನುವವರು ಸಾಮಾಜಿಕ ಜಾಲತಾಣದಲ್ಲಿ ಈ ವಿಚಾರವನ್ನು ಹಂಚಿಕೊಂಡು ಪೊಲೀಸರು ಯಾಕೆ ಪ್ರಶ್ನೆ ಮಾಡಿಲ್ಲ ಎಂಬ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಹರಿದಾಡುತ್ತಿದ್ದಂತೆ ಉಡುಪಿ ಜಿಲ್ಲಾ ಪೊಲೀಸರು ಸುದ್ದಿ ಹಂಚಿಕೊಂಡ ರಶ್ಮಿ ಸಮಂತ್‌ ಅವರ ಪೋಷಕರ ಮನೆಗೆ ತೆರಳಿ ಬೆದರಿಕೆ ಹಾಕಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಯುವತಿಯರಿಗೆ ಬ್ಲ್ಯಾಕ್‌ಮೇಲ್‌ ಮಾಡಿ ದುರ್ಬಳಕೆ ಸಾಧ್ಯತೆ:
ಯುವತಿಯರ ವೀಡಿಯೋ ರೆಕಾರ್ಡ್‌ ಮಾಡಿದ್ದನ್ನು ಫೋನಿನಿಂದ ಡಿಲೀಟ್‌ ಆಗಿದೆ ಎಂದು ಹೇಳುತ್ತಿದ್ದಾರೆ. ಆದರೆ, ಈ ಬಗ್ಗೆ ಪೂರ್ಣ ಪ್ರಮಾಣದಲ್ಲಿ ಡಿಲೀಟ್‌ ಮಾಡಿದ ಫೊರೆನ್ಸಿಕ್‌ ತನಿಖೆಯಾಗಿಲ್ಲ. ಕೂಡಲೇ ಫೊರೆನ್ಸಿಕ್‌ ತನಿಖೆ ಮಾಡಿ ಪೊಲೀಸರು ಸ್ಪಷ್ಟಪಡಿಸಿಕೊಳ್ಳಬೇಕು. ಇಲ್ಲವಾದಲ್ಲಿ ಯಾವ ಸಂದರ್ಭದಲ್ಲಿ ಯುವತಿಯರನ್ನು ಬ್ಲ್ಯಾಕ್‌ ಮೇಲ್‌ ಮಾಡಿ ದುರ್ಬಳಕೆ ಮಾಡಿಕೊಳ್ಳಲಾಗುತ್ತದೆ ಎಂದು ಊಹಿಸಲೂ ಸಾಧ್ಯವಿಲ್ಲ. 
- ರಶ್ಮಿ ಸಮಂತ್‌ ಭಟ್‌, ಸಾಮಾಜಿಕ ಹೋರಾಟಗಾರ್ತಿ

ರಶ್ಮಿ ಸಮಂತ್‌ ಭಟ್‌ ಹಂಚಿಕೊಂಡ ಸಂದೇಶವೇನು? "ನಾನು ಉಡುಪಿಯವಳು. ನೂರಾರು ಅನುಮಾನಾಸ್ಪದ ಹಿಂದೂ ಹುಡುಗಿಯರನ್ನು ರೆಕಾರ್ಡ್ ಮಾಡಲು ತಮ್ಮ ಕಾಲೇಜಿನ ಮಹಿಳಾ ಶೌಚಾಲಯಗಳಲ್ಲಿ ಕ್ಯಾಮೆರಾಗಳನ್ನು ಹಾಕಿದ ಅಲಿಮತುಲ್ ಶೈಫಾ, ಶಬಾನಾಜ್ ಮತ್ತು ಆಲಿಯಾ ಬಗ್ಗೆ ಯಾರೂ ಮಾತನಾಡುವುದಿಲ್ಲ. ವೀಡಿಯೋ ಮಾಡಿದ ದುಷ್ಕರ್ಮಿಗಳು ತಮ್ಮ ಸಮುದಾಯ ವಾಟ್ಸಾಪ್ ಗುಂಪುಗಳಲ್ಲಿ ಹಿಂದು ಹುಡುಗಿಯರ ವೀಡಿಯೊಗಳು ಮತ್ತು ಫೋಟೋಗಳು ಹಂಚಿಕೊಂಡಿದ್ದಾರೆ. ನಾನು ನಿಮಗೆ ಹೇಳುತ್ತೇನೆ, ವೀಡಿಯೊಗಳಲ್ಲಿ ಕಾಣಿಸಿಕೊಂಡ ಅನೇಕ ಹುಡುಗಿಯರು ಖಿನ್ನತೆಗೆ ಒಳಗಾಗಿದ್ದಾರೆ ಮತ್ತು ಅವರು ಸ್ವಯಂ-ಹಾನಿ/ಆತ್ಮಹತ್ಯೆಯ ಬಗ್ಗೆ ಆಲೋಚಿಸುತ್ತಿದ್ದಾರೆ. ಆದರೂ, ಈ ಸಮಸ್ಯೆಯನ್ನು ತೀವ್ರವಾಗಿ ಖಂಡಿಸಲಾಗುತ್ತಿಲ್ಲ. 1992 ರಲ್ಲಿ ಅಜ್ಮೀರ್‌ನಲ್ಲಿ ನಡೆದ ಘಟನೆಯನ್ನು ನಾನು ನಿಮಗೆ ನೆನಪಿಸುತ್ತೇನೆ. ಅಲ್ಲಿ ನೂರಾರು ಹುಡುಗಿಯರ ಮೇಲೆ ಅಕ್ರಮವಾಗಿ ನಗ್ನ ಫೋಟೋಗಳನ್ನು ಬಿಡುಗಡೆ ಮಾಡುವ ಬ್ಲ್ಯಾಕ್‌ಮೇಲ್ ಮಾಡಿ ಅತ್ಯಾಚಾರ ಮಾಡಲಾಯಿತು. ಉಡುಪಿಯು ಮತ್ತೊಂದು ಅಜ್ಮೀರ್‌ಗೆ ತಿರುಗಬಹುದೆಂದು ಯೋಚಿಸಲು ನನಗೆ ಸಹಿಸಲಾಗುತ್ತಿಲ್ಲ. ನಿಮ್ಮಲ್ಲಿ ಆತ್ಮಸಾಕ್ಷಿ ಉಳಿದಿದ್ದರೆ, ಉಡುಪಿಯಲ್ಲಿ ಹಿಂದೂ ಹುಡುಗಿಯರಿಗೆ ಏನಾಯಿತು ಎಂದು ಮಾತನಾಡಿ, ಅವರು ನಮ್ಮ ಹುಡುಗಿಯರೊಂದಿಗೆ ಮತ್ತೆ ಚೆಲ್ಲಾಟವಾಡಲು ಅವಕಾಶ ಮಾಡಿಕೊಡಬೇಡಿ" ಎಂದು ಟ್ವೀಟ್‌ ಮಾಡಿದ್ದಾರೆ.

I'm from Udupi and nobody is talking about Alimatul Shaifa, Shabanaz and Aliya who placed cameras in female toilets of their college to record hundreds of unsuspecting Hindu girls. Videos and phots that were then circulated in community WhatsApp groups by the perpetrators.

— Rashmi Samant (@RashmiDVS)

ಗ್ಯಾರಂಟಿ ಯೋಜನೆಗಾಗಿ ಶಾಸಕರ ಅನುದಾನ ಸ್ಥಗಿತ: ಡಿಸಿಎಂ ಡಿ.ಕೆ. ಶಿವಕುಮ ...

"ಉಡುಪಿಯ ಕಾಲೇಜಿನಲ್ಲಿ ನಡೆದ ಅಮಾನುಷ ಘಟನೆ ಬಗ್ಗೆ ಸುಮ್ಮನಿರುವ ಸರ್ಕಾರವನ್ನು ಪ್ರಶ್ನಿಸಿದ, ಹಿಂದೂ ವಿದ್ಯಾರ್ಥಿಗಳ ಪರ ಧ್ವನಿಯಾದ ರಶ್ಮಿ ಸಮಂತ್‌ ಭಟ್‌ ಅವರ ಮನೆಗೆ ರಾಜ್ಯದ ತುಘಲಕ್ ಸರ್ಕಾರವು ಪೋಲಿಸರನ್ನು ಕಳುಹಿಸಿ ಬೆದರಿಸುವ ತಂತ್ರ ಮಾಡಿದೆ!  ಆದರೆ ಫೇಕ್ ನ್ಯೂಸ್ ಎಂದು ಸುಳ್ಳು ಹಬ್ಬಿಸುವರಿಗೆ ರಾಜ ಮರ್ಯಾದೆ ಕೊಡುತ್ತಿದೆ ರಾಜ್ಯ ಸರ್ಕಾರ. ಕಾಂಗ್ರೆಸ್ ಸರ್ಕಾರವು ಹಿಂದೂ ಪರ ಹೋರಾಟಗಾರರ ದನಿ ಅಡಗಿಸಲು ಪ್ರಯತ್ನಿಸುತ್ತಿದೆ. ಸರ್ಕಾರ ತನ್ನ ಬೆದರಿಕೆ ನೀತಿಯನ್ನು ಹೀಗೆ ಮುಂದುವರಿಸಿದರೆ ರಾಜ್ಯವ್ಯಾಪಿ ಪ್ರತಿಭಟನೆಯನ್ನು ಎದುರಿಸಬೇಕಾಗುತ್ತದೆ. ಓಲೈಕೆ, ಬೆದರಿಕೆಗಳು ಮಿತಿ ಮೀರಿದ್ದು, ಜನರು ಸಹನೆ ಕಳೆದುಕೊಳ್ಳುವ ಮುನ್ನ ಸರ್ಕಾರ ಎಚ್ಚೆತ್ತುಕೊಳ್ಳಲಿ" ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಟ್ವೀಟ್‌ ಮಾಡಿದ್ದಾರೆ.

click me!