ಹೊಸ ವರ್ಷದಂದು ರಾಜ್ಯದಲ್ಲಿ ನಡೆದ ಎರಡು ಪ್ರತ್ಯೇಕ ಸಮಭವಿಸಿದ ಅಪಘಾತದಲ್ಲಿ ಇಬ್ಬರು ಯುವಕರ ದುರ್ಮರಣ
ಬೆಂಗಳೂರು/ಹಾಸನ(ಜ.01): ಹೊಸ ವರ್ಷದಂದು ರಾಜ್ಯದಲ್ಲಿ ನಡೆದ ಎರಡು ಪ್ರತ್ಯೇಕ ಸಮಭವಿಸಿದ ಅಪಘಾತದಲ್ಲಿ ಇಬ್ಬರು ಯುವಕರು ಸಾವನ್ನಪ್ಪಿದ್ದಾರೆ. ಬೆಂಗಳೂರಿನಲ್ಲಿ ಹಿಟ್ ಅಂಡ್ ರನ್‌ನಲ್ಲಿ ಬೈಕ್ ಸವಾರ ಮೃತಪಟ್ಟಿದ್ದರೆ, ಹಾಸನದಲ್ಲಿ ಕಾರು ಕೆಎಸ್ಆರ್‌ಟಿಸಿ ಬಸ್‌ಗೆ ಡಿಕ್ಕಿ ಹೊಡೆದ ಪರಿಣಾಮ ಮತ್ತೋರ್ವ ಯುವಕ ಸಾವನ್ನಪ್ಪಿದ್ದಾರೆ.
ಬೆಂಗಳೂರಿಲ್ಲಿ ಟಿಪ್ಪರ್‌ವೊಂದು ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಸವಾರ ಸಾವನ್ನಪ್ಪಿದ್ದಾನೆ. ಮೃತನನ್ನ ಹೊಸಕೆರೆಹಳ್ಳಿ ನಿವಾಸಿ ದೇವರಾಜ್ ಅಂತ ಗುರುತಿಸಲಾಗಿದೆ. ದೇವರಾಜ್ ಹಾಗೂ ಆತನ ಸ್ನೇಹಿತ ಬೈಕ್‌ನಲ್ಲಿ ಸಂಚರಿಸುತ್ತಿದ್ದರು. ಸ್ನೇಹಿತನ ಹೆಸರು ಕೂಡ ದೇವರಾಜ್ ಅಂತ ತಿಳಿದು ಬಂದಿದೆ.
ಭಾರತದಲ್ಲಿ ಸೀಟ್ ಬೆಲ್ಟ್ ಧರಿಸದೇ 16,397, ಹೆಲ್ಮೆಟ್ ಧರಿಸದೇ 47,000 ಸಾವು
ಆತನ ಸ್ಥಿತಿಯೂ ಗಂಭೀರವಾಗಿದ್ದು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಕೆ.ಆರ್. ಮಾರ್ಕೆಟ್‌ಗೆ ಹೋಗುವಾಗ ಬೈಕ್‌ಗೆ ಟಿಪ್ಪರ್ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ. ಇಂದು(ಭಾನುವಾರ) ಬೆಳಿಗ್ಗೆ 6 ಗಂಟೆ ಸುಮಾರಿಗೆ ಮೈಸೂರು ರಸ್ತೆ ಡಿಮಾರ್ಟ್ ಬಳಿ ಅಪಘಾತ ಸಂಭವಿಸಿದೆ. ಚಿಕ್ಕಪೇಟೆ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಸ್ಥಳಕ್ಕೆ ಚಿಕ್ಕಪೇಟೆ ಸಂಚಾರ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ನ್ಯೂ ಇಯರ್ ಪಾರ್ಟಿ ತಂದ ಆಪತ್ತು
ನ್ಯೂ ಇಯರ್ ಪಾರ್ಟಿ ಯುವಕನೊಬ್ಬನಿಗೆ ಆಪತ್ತು ತಂದಿದೆ. ಹೌದು, ಕಾರು ಕೆಎಸ್ಆರ್‌ಟಿಸಿ ಡಿಕ್ಕಿ ಹೊಡೆದ ಪರಿಣಾಮ ಯುವಕ ಮೃತಪಟ್ಟಿದ್ದಾನೆ. ಚಾಲಕನ ನಿಯಂತ್ರಣ ತಪ್ಪಿ ಎದುರಿಗೆ ಬರುತ್ತಿದ್ದ ಬಸ್‌ಗೆ ಡಿಕ್ಕಿ ಹೊಡೆದ ಪರಿಣಾಮ ಕಾರು ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಮಸ್ಕಿ: ಗುಡದೂರು ಬಳಿ ರಸ್ತೆ ಅಪಘಾತ, ಮೂವರ ದುರ್ಮರಣ
ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಹಾರ್ಲೆ ಕೂಡಿಗೆ ಗ್ರಾಮದ ಬಳಿ ಘಟನೆ ನಡೆದಿದೆ. ಬಾಗೆ ಸಮೀಪದ ಕಾಕನಮನೆ ಗ್ರಾಮದ ಯುವಕ ಅಭಿ ಎಂಬಾತ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಮೃತ ಅಭಿ ಹೊಸ ವರ್ಷ ಪಾರ್ಟಿ ಮುಗಿಸಿ ವಾಪಸ್ ಬರುತ್ತಿದ್ದನಂತೆ.
ಕೆಎಸ್ಆರ್‌ಟಿಸಿ ಬಸ್ ಸಕಲೇಶಪುರದಿಂದ ಹಾನುಬಾಳು ಕಡೆಗೆ ಹೋಗುತ್ತಿತ್ತು. ಮೃತ ಅಭಿ ಹಾನುಬಾಳು ಕಡೆಯಿಂದ ಊರಿಗೆ ವಾಪಸ್ ಹೋಗುತ್ತಿದ್ದ ಅಂತ ತಿಳಿದು ಬಂದಿದೆ. ಸಕಲೇಶಪುರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.