
ಬೆಂಗಳೂರು (ಜ.01): ಚಲನಚಿತ್ರಗಳಲ್ಲಿ ಅನಾವಶ್ಯಕವಾಗಿ ಕೇಸರಿ ಬಣ್ಣ ಬಳಸುತ್ತಾರೆ. ಅತ್ಯಾಚಾರ ಮಾಡುವ ಇನ್ಸ್‌ಪೆಕ್ಟರ್ ಕೇಸರಿ ಶಾಲು ಹಾಕುತ್ತಾರೆ. ಈ ಬಗ್ಗೆ ನಿರ್ದೇಶಕರನ್ನು ಕೇಳಿದರೆ ‘ಟೇಕ್ ಇಟ್ ಈಸಿ’ ಎನ್ನುತ್ತಾರೆ. ಕೇಸರಿ ಬಗ್ಗೆಯೇ ‘ಟೇಕ್ ಇಟ್ ಈಸಿ’ ಏಕೆ? ಬೇರೆ ಬಣ್ಣ ಇಲ್ಲವೇ ಎಂದು ಪರೋಕ್ಷವಾಗಿ ಕೇಸರಿ ಬಿಕಿನಿ ವಿವಾದಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅಸಮಾಧಾನ ವ್ಯಕ್ತಪಡಿಸಿದರು. ಜೆ.ಪಿ. ನಗರದ ಆರ್.ವಿ.ದಂತ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ‘ಸ್ಪಿರಿಟ್ ಆಫ್ ಇಂಡಿಯಾ-ಹೆಮ್ಮೆಗೆ ಎಷ್ಟೊಂದು ಕಾರಣಗಳು: ಒಂದು ಸಂವಾದ ಸರಣಿ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಸಿನಿಮಾಗಳಲ್ಲಿ ಅನಾವಶ್ಯಕವಾಗಿ ಕೇಸರಿ ಬಣ್ಣ ಬಳಸಲಾಗುತ್ತಿದೆ. ಅತ್ಯಾಚಾರ ದೃಶ್ಯವೊಂದರಲ್ಲಿ ಇನ್ಸ್‌ಪೆಕ್ಟರ್‌ವೊಬ್ಬರು ಕೇಸರಿ ಶಾಲು ಹಾಕಿದ್ದಾರೆ. ಸಿನಿಮಾಗೆ ಪ್ರಮಾಣ ಪತ್ರ ನೀಡುವ ನಮ್ಮವರೊಬ್ಬರು ಈ ಬಗ್ಗೆ ಸಿನಿಮಾದ ನಿರ್ದೇಶಕರನ್ನು ಕೇಳಿದರೆ ಟೇಕ್ ಇಟ್ ಈಸಿ ಎಂದಿದ್ದಾರೆ. ಪೊಲೀಸರನ್ನು ಕೆಟ್ಟವರೆಂದು ತೋರಿಸಬೇಕಿದ್ದರೆ ಅಷ್ಟುಮಾತ್ರ ತೋರಿಸಿ. ಕೇಸರಿ ಶಾಲು ಏಕೆ ತೋರಿಸುವುದು?’ ಎಂದು ಪ್ರಶ್ನಿಸಿದರು.
ಐಪಿಎಸ್ ಅಧಿಕಾರಿಗಳಿಗೂ ಹೊಸ ವರ್ಷ ಉಡುಗೊರೆ: 50 ಜನಕ್ಕೆ ಬಡ್ತಿ
‘ಸಿನಿಮಾ ಮೂಲಕ ವಿವರಣಾತ್ಮಕ ನಿಯಂತ್ರಣ ಮಾಡಲು ಕೆಲವರು ಪ್ರಯತ್ನಪಟ್ಟರು. ದೇಶದಲ್ಲಿ ಪ್ರಶಸ್ತಿಗಳನ್ನೂ ನಿಯಂತ್ರಿಸಲು ಕೆಲವರು ಮುಂದಾದರು. ಇದು ಜವಾಹರಲಾಲ್ ನೆಹರು ಸೃಷ್ಟಿಮಾಡಿದ ಸಂದರ್ಭ. ದೇಶಕ್ಕೆ ಮಾನವೀಯತೆಯೇ ಇಲ್ಲ ಎಂದು ಅವರು ಹೇಳಿದ್ದರು. ಕೆಲವರು ಬ್ರಿಟಿಷರನ್ನೇ ತಮ್ಮ ಪೂರ್ವಜರು ಅಂದುಕೊಂಡಿದ್ದಾರೆ’ ಎಂದು ಟೀಕಿಸಿದರು.
ಭಾರತ ಚೈತನ್ಯದ ಬುಗ್ಗೆ: ‘ಬಿಳಿಯ ಬಣ್ಣ ಮಾತ್ರ ಶ್ರೇಷ್ಠವಾದುದು. ಕಪ್ಪು ಸುಂದರವಲ್ಲ ಎಂದು ಕೆಲವರು ಹೇಳಿದರು. ಕೇಸರಿಯನ್ನು ಅವಹೇಳನ ಮಾಡಿದಾಗ, ಯಾರಾದರೂ ಟೀಕಿಸಿದರೆ ಲಘುವಾಗಿ ತೆಗೆದುಕೊಳ್ಳುವಂತೆ ಸಲಹೆ ನೀಡಿದರು. ಇಂಗ್ಲಿಷ್‌ನಲ್ಲಿ ಲಾಜಿಕ್ ಇಲ್ಲ. ಅದನ್ನು ತಲೆಯ ಮೇಲೆ ಹೊತ್ತುಕೊಳ್ಳುವ ಅವಶ್ಯಕತೆಯಿಲ್ಲ. ಬೇಕಾದಷ್ಟುಮಾತ್ರ ಬಳಸಬೇಕು. ಭಾರತ ಚೈತನ್ಯದ ಬುಗ್ಗೆಯಾಗಿದೆ. ಮೃದು ಮತ್ತು ಕಠಿಣ ರಾಷ್ಟ್ರೀಯತೆ ಎಂಬುದಿಲ್ಲ. ಒಂದೇ ರಾಷ್ಟ್ರೀಯತೆ ಇರುವುದು’ ಎಂದು ಸ್ಪಷ್ಟಪಡಿಸಿದರು.
ಬಸವಪ್ರಭು ಶ್ರೀಗಳೇ ಸಿದ್ದರಾಮಯ್ಯರನ್ನು ಸಿಎಂ ಮಾಡಲಿ: ಕೆ.ಎಸ್.ಈಶ್ವರಪ್ಪ
ನ್ಯಾಷನಲ್ ಎಜುಕೇಷನಲ್ ಟೆಕ್ನಾಲಜಿ ಫೋರಂ ಅಧ್ಯಕ್ಷ ಅನಿಲ್ ಸಹಸ್ರಬುದ್ಧೆ ಮಾತನಾಡಿ, ‘ಮೆಕಾಲೆಯಿಂದ ಪ್ರಾರಂಭವಾದ ಶಿಕ್ಷಣ ಪದ್ಧತಿ ಪ್ರಧಾನಿ ನರೇಂದ್ರ ಮೋದಿ ಅವರ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಿಂದ ಮುಕ್ತಾಯವಾಗಿದೆ. ಎಲ್ಲ ರಾಜ್ಯಗಳಲ್ಲಿ ಮಾತೃಭಾಷೆಯಲ್ಲೇ ಶಿಕ್ಷಣ ನೀಡಬೇಕು ಎಂಬುದು ನೀತಿಯಲ್ಲಿದ್ದು ಭಾರತೀಯ ಭಾಷೆಗಳಲ್ಲಿ ಎಂಜಿನಿಯರಿಂಗ್ ಶಿಕ್ಷಣ ನೀಡಲಾಗುತ್ತಿದೆ’ ಎಂದು ವಿವರಿಸಿದರು. ಸಂಸದ ತೇಜಸ್ವಿ ಸೂರ್ಯ, ಸಾಂಸ್ಕೃತಿಕ ಚಿಂತಕ ಸುಚೇಂದ್ರ ಪ್ರಸಾದ್, ಜಿ.ಎಂ. ಸಮೂಹದ ಅಧ್ಯಕ್ಷ ಜಿ.ಎಂ.ಲಿಂಗರಾಜು, ವಿಶ್ವ ವಿಪ್ರತ್ರಯಿ ಪರಿಷತ್ತು ಅಧ್ಯಕ್ಷ ಎಸ್.ರಘುನಾಥ್, ಇತಿಹಾಸಕಾರ ವಿಕ್ರಂ ಸಂಪತ್, ಚಿಂತಕ ಪ್ರಕಾಶ್ ಬೆಳವಾಡಿ, ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಎನ್.ಆರ್.ರಮೇಶ್ ಮತ್ತಿತರರು ಉಪಸ್ಥಿತರಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ