ರಾಜ್ಯದಲ್ಲಿ ಮತ್ತೊಂದು ಕೊಳವೆ ಬಾವಿ ದುರಂತ ನಡೆದಿದೆ. ವಿಜಯಪುರದ ಇಂಡಿಯಲ್ಲಿ 2 ವರ್ಷದ ಮಗು ತೆರೆದ ಕೊಳವೆ ಬಾವಿಗೆ ಬಿದ್ದಿದ್ದು, ರಕ್ಷಣಾ ಕಾರ್ಯಾಚರಣೆ ಆರಂಭವಾಗಿದೆ.
ವಿಜಯಪುರ (ಏ.3): ರಾಜ್ಯದಲ್ಲಿ ಮತ್ತೊಮ್ಮೆ ಕೊಳವೆ ಬಾವಿ ದುರಂತ ಸಂಭವಿಸಿದೆ. ವಿಜಯಪುರದ ಇಂಡಿಯಲ್ಲಿ ಎರಡು ವರ್ಷದ ಗಂಡು ಮಗು ಸಾತ್ವಿಕ್ ತೆರೆದ ಕೊಳವೆ ಬಾವಿಗೆ ಬಿದ್ದಿದ್ದಾನೆ. ತಕ್ಷಣವೇ ಜೆಸಿಬಿ ಮೂಲಕ ರಕ್ಷಣಾ ಕಾರ್ಯಾಚರಣೆ ಆರಂಭವಾಗಿದೆ. ಕೊಳವೆ ಬಾವಿಯ 16 ಅಡಿ ಅಳದಲ್ಲಿ ಮಗು ಸಿಲುಕಿಕೊಂಡಿದೆ ಎಂದು ಹೇಳಲಾಗಿದ್ದು, ಮಗುವಿನ ಆರೋಗ್ಯಸ್ಥಿತಿ ಸ್ಥಿರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇಂಡಿ ತಾಲೂಕಿನ ಲಚ್ಯಾಣ (Lachyana) ಗ್ರಾಮದಲ್ಲಿ ಘಟನೆ ನಡೆದಿದೆ. ಆಟವಾಡಲು ಹೋಗಿದ್ದ ವೇಳೆ ಸಾತ್ವಿಕ್ ಮುಜಗೊಂಡ ಹೆಸರಿನ 2 ವರ್ಷದ ಬಾಲಕ ತೆರೆದ ಕೊಳವೆ ಬಾವಿಗೆ ಬಿದ್ದಿದ್ದಾನೆ. ಸತೀಶ್ ಹಾಗೂ ಪೂಜಾ ದಂಪತಿಯ ಪುತ್ರನಾಗಿರುವ ಸಾತ್ವಿಕ್, ಬುಧವಾರ ಸಂಜೆಯ ವೇಳೆಗೆ ಬೋರ್‌ವೆಲ್‌ಗೆ ಬಿದ್ದಿದ್ದಾನೆ ಎನ್ನಲಾಗಿದೆ. ಪ್ರಸ್ತುತ ಮಗು ಜೀವಂತವಾಗಿದ್ದು, ರಕ್ಷಣಾ ಕಾರ್ಯಾಚರಣೆಯಲ್ಲಿಈವರೆಗೂ 10 ಅಡಿ ಆಳಕ್ಕೆ ಕೊರೆಯಲಾಗಿದೆ. ಗ್ರಾಮ ಪಂಚಾಯತಿ ಸದಸ್ಯ ಯಶವಂತ್ ಮಾಹಿತಿ ನೀಡಿದ್ದು, 'ಮಗು ಜೀವಂತವಾಗಿದೆ. ಮಗುವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಎಲ್ಲಾ ರೀತಿಯಲ್ಲಿ ಶ್ರಮ ವಹಿಸಲಾಗುವುದು' ಎಂದು ತಿಳಿಸಿದ್ದಾರೆ.
ಳವೆ ಬಾವಿಗೆ ಬಿದ್ದ 3ರ ಬಾಲಕನ ರಕ್ಷಣೆ
ಮಗು ಕೊಳವೆ ಬಾವಿಗೆ ಬಿದ್ದ ಸುದ್ದಿ ತಿಳಿದ ತಕ್ಷಣವೇ ಇಂಡಿ ಠಾಣೆಯ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ರಕ್ಷಣಾ ಕಾರ್ಯಾಚರಣೆಗೆ ಅಗ್ನಿಶಾಮಕ ದಳದ ಸಹಾಯವನ್ನೂ ಪಡೆದುಕೊಳ್ಳಲಾಗಿದೆ. ಜೆಸಿಬಿ ಮೂಲಕ ಬೋರ್‌ವೆಲ್ ಪಕ್ಕ ಗುಂಡಿ ತೋಡಲಾಗುತ್ತದೆ. ಅಂದಾಜು 400 ಅಡಿ ಆಳದ ಬೋರ್‌ವೆಲ್ ಇದಾಗಿದ್ದು, 16 ಅಡಿಯ ಆಳದಲ್ಲಿ ಮಗು ಸಿಲುಕಿಕೊಂಡಿದೆ. ಮಗುವಿನ ತಂದೆ ಸತೀಶ್ ನಾಲ್ಕು ಎಕರೆ ಹೊಲ ಹೊಂದಿದ್ದು ಅಲ್ಲಿ ನಿಂಬೆ ಬೆಳೆಯುತ್ತಿದ್ದಾರೆ. ವ್ಯವಸಾಯಕ್ಕಾಗಿ ತಮ್ಮದೇ ಹೊದಲ್ಲಿ ಬೋರ್‌ವೆಲ್ ಕೊರೆಸಿದ್ದರು ಎಂದು ಮಾಹಿತಿ ಸಿಕ್ಕಿದೆ.
ಕೊಳವೆ ಬಾವಿಗೆ ಬಿದ್ದ ಪುಟ್ಟ ಕಂದನ ರಕ್ಷಿಸಿದ SDRF, ಮಗುವಿಗೆ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ!
ಮಂಗಳವಾರ ಸಾತ್ವಿಕ್ ಮುಜಗೊಂಡ ಅವರ ಅಜ್ಜ ಶಂಕರಪ್ಪ ಹೊಲದಲ್ಲಿ ಬೋರ್‌ವೆಲ್ ಕೊರೆಸಿದ್ದರು. ಸುಮಾರಿ 400 ರಿಂದ 500 ಅಡಿ ಆಳ ಕೊರೆಸಿದ್ದರೂ, ನೀರು ಬಂದಿರಲಿಲ್ಲ. ಆ ಕಾರಣದಿಂದ ಹಾಗೆಯೇ ಬಿಡಲಾಗಿತ್ತು. ಇದೀಗ ಅವರ ಮೊಮ್ಮಗನೇ ಈ ಬಾವಿಗೆ ಬಿದ್ದಿದ್ದಾರೆ. ಮಗುವಿಗೆ ಆಕ್ಸಜನ್ ವ್ಯವಸ್ಥೆ ಕೂಡ ಮಾಡಲಾಗಿದೆ ಎಂದು ರಕ್ಷಣಾ ಕಾರ್ಯಾಚರಣೆಯಲ್ಲಿರುವ ಅಧಿಕಾರಿಗಳು ತಿಳಿಸಿದ್ದಾರೆ.