ಬರಪರಿಹಾರ: ಗೃಹ ಸಚಿವ ಅಮಿತ್ ಶಾಗೆ ಕೃಷ್ಣಬೈರೇಗೌಡ ಸವಾಲು!

By Ravi Janekal  |  First Published Apr 2, 2024, 10:41 PM IST

ಸುಳ್ಳುಗಳ ಸರದಾರ ಅಮಿತ್ ಶಾ ಸೂರ್ಯನಿಗೆ ಟಾರ್ಚ್ ಹಿಡಿಯುವ ಕೆಲಸ ಮಾಡಿದ್ದಾರೆ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಗೃಹ ಸಚಿವ ಅಮಿತ್ ಶಾ ವಿರುದ್ಧ ವಾಗ್ದಾಳಿ ನಡೆಸಿದರು.


ಬೆಂಗಳೂರು (ಏ.2): ಸುಳ್ಳುಗಳ ಸರದಾರ ಅಮಿತ್ ಶಾ ಸೂರ್ಯನಿಗೆ ಟಾರ್ಚ್ ಹಿಡಿಯುವ ಕೆಲಸ ಮಾಡಿದ್ದಾರೆ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಗೃಹ ಸಚಿವ ಅಮಿತ್ ಶಾ ವಿರುದ್ಧ ವಾಗ್ದಾಳಿ ನಡೆಸಿದರು.

ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ಎಲೆಕ್ಟ್ರೋ ಬಾಂಡ್ ಸರದಾರ ರಾಜ್ಯಕ್ಕೆ ಬಂದು ಸುಳ್ಳು ಹರಿಬಿಟ್ಟಿದ್ದಾರೆ 'ಬರ'ದ ವರದಿ ಮೂರು ತಿಂಗಳು ವಿಳಂಬ ಅಂತ ಹೇಳಿದ್ದಾರೆ. ಬರಗಾಲದ ಪರಿಹಾರ ಕೋರಿ ನಾವು ಸೆಪ್ಟಂಬರ್ 22 ರಂದು ಮನವಿ ಸಲ್ಲಿಸಿದ್ದೇವೆ. ಬರಗಾಲದ ಕೈಪಿಡಿ ಪ್ರಕಾರ ಅಕ್ಟೋಬರ್ 21 ರವರೆಗೆ  ಮುಂಗಾರು ಹಂಗಾಮಿಗೆ ಕಾಯಬೇಕು. ಆದರೆ ನಾವು ಮೊದಲೇ ಅರ್ಜಿ‌ಸಲ್ಲಿಸಿದ್ದೆವು. ಅಕ್ಟೋಬರ್ ಗೆ ಮೊದಲೇ ಬರ ಘೋಷಿಸಿದ್ದೆವು. ಅಂದರೆ ಒಂದೂವರೆ ತಿಂಗಳ ಮೊದಲೇ ಘೋಷಿಸಿದ್ದೆವು. ಸೆಪ್ಟಂಬರ್ 22 ರಂದು ಕೇಂದ್ರಕ್ಕೆ ಅರ್ಜಿ ಸಲ್ಲಿಕೆ ಮಾಡಿದ್ದೆವು. ಸೆಪ್ಟಂಬರ್ 27 ರಂದು ಪತ್ರಕ್ಕೆ ಉತ್ತರ ಬಂದಿದೆ. 41 ಲಕ್ಷ 56 ಸಾವಿರ ಹೆಕ್ಟೇರ್ ಬೆಳೆ ನಾಶವಾಗಿದೆ. ಈ ಬಗ್ಗೆ ನಮಗೆ ಪರಿಹಾರದ ಮನವಿ ಬಂದಿದೆ. ನಾವು ಕೇಂದ್ರ ತಂಡವನ್ನ ಕಳಿಸ್ತಿದ್ದೇವೆ. ಹೀಗೆಂದು ಕೇಂದ್ರ ಕೃಷಿ ಇಲಾಖೆ ಸ್ಪಷ್ಟಪಡಿಸಿದೆ. 
ನವೆಂಬರ್ 8 ರಂದು ಕೃಷಿ ಇಲಾಖೆ ಆದೇಶ ಹೊರಡಿಸಿದೆ. ಬಳಿಕ ನ.12 ರಂದು ಸಭೆ ನಡೆಸುವುದಾಗಿ ತಿಳಿಸಿತ್ತು. ಸಭೆಯ ಸೂಚನಾ ಪತ್ರವು ನಮಗೆ ಸಿಕ್ಕಿದೆ. ನವೆಂಬರ್ 26 ರಂದು ಮತ್ತೊಂದು ಪತ್ರ ಬಂದಿದೆ. ಕೇಂದ್ರ ಗೃಹ ಇಲಾಖೆಗೆ ಬರೆದ ಪತ್ರ ಅದು ಎನ್ ಡಿಆರ್ ಎಫ್ ನೆರವು ಕೋರಿ ಪತ್ರ ಬರೆದಿದೆ. ಇದರ ಬಗ್ಗೆ ಕೇಂದ್ರ ಕೃಷಿ ಇಲಾಖೆಯೇ ಸ್ಪಷ್ಟಪಡಿಸಿದೆ. ಅದರ ದಾಖಲೆಗಳು ನಮ್ಮಲ್ಲಿವೆ ಎಂದು ಅಂಕಿ ಸಂಖ್ಯೆ ಸಮೇತ ಮಾಹಿತಿ ನೀಡಿದರು.

Tap to resize

Latest Videos

ರಾಜ್ಯದಲ್ಲಿ ಬರಗಾಲ ಘೋಷಣೆ ಬಗ್ಗೆ ಜುಲೈ ತಿಂಗಳಲ್ಲಿ ನಿರ್ಧಾರ: ಸಚಿವ ಕೃಷ್ಣಬೈರೇಗೌಡ

ಉನ್ನತಮಟ್ಟದ ಸಭೆ ನಡೆಸಿ ಕೇಂದ್ರ ಅಧ್ಯಯನ ತಂಡದ ಶಿಫಾರಸು ಪರಿಶೀಲನೆ ಬಳಿಕ  ಅನುದಾನ ಕೊಡುವ ಬಗ್ಗೆ ತಿಳಿಸಿದೆ. ಆದರೆ ಸತ್ಯ ಘಟನೆಗಳೇನೆಂಬುದು ಮುಚ್ಚಿಟ್ಟು ಇಲ್ಲಿ ಅಮಿತ್ ಶಾ ಸುಳ್ಳು ಹೇಳಿದ್ದಾರೆ. ಬರಪರಿಹಾರದ ಲೆಟರ್ ನವೆಂಬರ್ 26 ರಂದೇ ಗೃಹ ಸಚಿವರ ಟೇಬಲ್ ಗೆ ಹೋಗಿದೆ. ನಾಲ್ಕು ತಿಂಗಳು ಟೇಬಲ್ ಮೇಲೆ ಧೂಳು ತಿಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅಮಿತ್ ಶಾಗೆ ಕೃಷ್ಣಬೈರೇಗೌಡ ಸವಾಲ್!

ನಾವು ನಿಮ್ಮನ್ನ ಭೇಟಿ ಮಾಡಿ ಮನವಿ ಸಲ್ಲಿಸಿದ್ದೆವು. ಡಿಸೆಂಬರ್ 23 ರಂದು ಉನ್ನತ ಮಟ್ಟದ ಸಭೆ ಮಾಡ್ತೇವೆ ಅಂದಿದ್ರಿ. ನೀವು ಮಾತುಕೊಟ್ಟಿದ್ರೋ ಇಲ್ವೋ ಹೇಳಿ? ವಿಧಾನಸೌಧದ ಗಾಂಧಿಪ್ರತಿಮೆ ಮುಂದೆ ಪ್ರತಿಜ್ಙೆ ಮಾಡಿ ಎಂದು ಅಮಿತ್ ಶಾಗೆ ಸಚಿವ ಕೃಷ್ಣಬೈರೇಗೌಡ ಸವಾಲ್ ಹಾಕಿದರು.

ಕರ್ನಾಟಕ ಜನರಿಗೆ ಮೋಸ ಮಾಡಿದ್ರಿ. ಹಸಿ ಸುಳ್ಳು ಹೇಳಿ ಮುಚ್ಚೋಕೆ ನೋಡ್ತಿದ್ದೀರಾ? ಕರ್ನಾಟಕ ರೈತರನ್ನು ಕಂಡರೆ ಯಾಕೆ ನಿಮಗೆ ದ್ವೇಷ? ಅತಿ ಹೆಚ್ಚು ತೆರಿಗೆ ಕಟ್ಟುವುದು ನಾವು. ಮಹಾರಾಷ್ಟ್ರ ನಮಗಿಂತ ಹೆಚ್ಚು ಕಟ್ಟುತ್ತದೆ. ಆದರೆ ಅಲ್ಲಿ ಜನ ಹೆಚ್ಚಿದ್ದಾರೆ. ಆದರೆ ನಮ್ಮಲ್ಲಿ ಕಡಿಮೆ ಇದ್ರೂ ಹೆಚ್ಚು ಕಟ್ತೇವೆ. ನಾವೇ ನಂಬರ್ 1 ತೆರಿಗೆ ಕಟ್ಟುವವರು. ಹೆಚ್ಚು ತೆರಿಗೆ ಕಟ್ಟಿದ್ರೂ ನಮ್ಮ ರಾಜ್ಯಕ್ಕೆ ಯಾಕೆ ಮೋಸ ಮಾಡ್ತಿದ್ದೀರ? ನಮ್ಮ ದುಡಿಮೆ, ನಮ್ಮ‌ವೋಟು ಪಡೆದು ಕಪಾಳಕ್ಕೆ ಹೊಡೆಯುತ್ತಿದ್ದೀರಾ? ನೀವು ಮೋಸ ಮಾಡುವುದಷ್ಟೇ ಅಲ್ಲ, ನಮ್ಮ ರಾಜ್ಯದ ಜನರಿಗೆ ಅನ್ಯಾಯ ಮಾಡ್ತಿದ್ದೀರ, ನಮ್ಮನ್ನೇ ಅವಮಾನ ಮಾಡ್ತಿದ್ದೀರ. ಕರ್ನಾಟಕ ನಿಮಗೆ ಏನು ಅನ್ಯಾಯ ಮಾಡಿದೆ? ನಮ್ಮ ರೈತರು ನಿಮಗೆ ಏನು ಅನ್ಯಾಯ ಮಾಡಿದ್ದಾರೆ ಎಂದು ಕಿಡಿಕಾರಿದರು.

ಪಕ್ಷ ಬಿಟ್ಟು ಹೋಗಿದ್ದ ಜಗದೀಶ್ ಶೆಟ್ಟರ್‌ಗೆ ಟಿಕೆಟ್ ಕೊಟ್ರು, ನಾನೇನು ತಪ್ಪು ಮಾಡಿದೆ?: ಈಶ್ವರಪ್ಪ

ಪ್ರತಿದಿನ ಜನರನ್ನು ಮರುಳು ಮಾಡೋಕೆ ಆಗೊಲ್ಲ. ನಮ್ಮ ಜನ ಸ್ವಾಭಿಮಾನಿಗಳು. ನಾವು ಭಿಕ್ಷೆ ಪಾತ್ರೆ ಹಿಡಿದು ನಿಮ್ಮಲ್ಲಿಗೆ ಬಂದಿಲ್ಲ. ನಮ್ಮ‌ಹಣವನ್ನ ದೋಚಿ‌ ಹೋದವರು ನೀವು. ಚುನಾವಣೆಯಲ್ಲಿ ಜನ ನಿಮಗೆ ಪಾಠ ಕಲಿಸ್ತಾರೆ. ಎಲೆಕ್ಷನ್ ಕಮೀಷನ್‌ಗೆ ಬರೆದಿದ್ದೀವಿ ಅಂತಾರೆ, ಎಲ್ಲಿ ಸಾಕ್ಷಿ ಕೊಡಿ ಬರೆದಿರೋದಕ್ಕೆ ಕೇಂದ್ರ ಸರ್ಕಾರಕ್ಕೆ ಸವಾಲ್ ಹಾಕಿದರು.

click me!