ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಮುಂದೆ ಬಂದ ಮೈಸೂರಿನ ವ್ಯಕ್ತಿ ಕೂಡಲೇ ಹರಿತವಾದ ಚಾಕುವಿನಿಂದ ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ದುರ್ಘಟನೆ ನಡೆದಿದೆ.
ಬೆಂಗಳೂರು (ಏ.03): ಕರ್ನಾಟಕ ಉಚ್ಛ ನ್ಯಾಯಾಲಯದ (Karnataka high court) ಮುಖ್ಯ ನ್ಯಾಯಮೂರ್ತಿಗಳ ಎದರಿಗೆ ಆಗಮಿಸಿದ ವ್ಯಕ್ತಿಯೊಬ್ಬ ಫೈಲ್ ಅನ್ನು ನ್ಯಾಯಾಧೀಶರ ಕೈಗಿಟ್ಟು ಹರಿತವಾದ ಸಣ್ಣ ಚಾಕುವಿನಿಂದ ಕತ್ತನ್ನು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರಿನಲ್ಲಿರುವ ಕರ್ನಾಟಕ ಹೈಕೋರ್ಟ್‌ನಲ್ಲಿ ಬುಧವಾರ ಮಧ್ಯಾಹ್ನದ ವೇಳೆ ಘಟನೆ ನಡೆದಿದೆ. ಪ್ರಕರಣವೊಂದರ ವಿಚಾರಣೆಯ ಅಂತ್ಯದ ವೇಳೆಗೆ ಮುಖ್ಯ ನ್ಯಾಯಮೂರ್ತಿಗಳ ಮುಂದೆ ಬಂದ ವ್ಯಕ್ತಿಯೊಬ್ಬ ತಮ್ಮ ಕೈಲಿದ್ದ ಕಡತವನ್ನು ಅಲ್ಲಿದ್ದ ನ್ಯಾಯಮೂರ್ಥಿಗಳಿಗೆ ಕೊಡಲು ಮುಂದಾಗಿದ್ದಾರೆ. ಮುಖ್ಯ ನ್ಯಾಯಮೂರ್ತಿಗಳು ವ್ಯಕ್ತಿಯ ಕೈಲಿದ್ದ ಫೈಲ್ ಪಡೆಯುಲು ಹಿಂದೇಟು ಹಾಕಿದ್ದಾರೆ. ಆಗ, ಪಕ್ಕದಲ್ಲಿದ್ದ ಇತರೆ ಕೋರ್ಟ್ ಸಿಬ್ಬಂದಿ ಪಡೆದುಕೊಳ್ಳಲು ಮುಂದಾಗಿದ್ದಾರೆ.
ಮಂಡ್ಯದ ಎಂಪಿ ಟಿಕೆಟ್ ಬಿಟ್ಟುಕೊಟ್ಟು ಬಿಜೆಪಿ ಸೇರುತ್ತೇನೆ: ಸ್ಪರ್ಧೆ ಮಾಡೊಲ್ಲವೆಂದು ಘೋಷಿಸಿದ ಸಂಸದೆ ಸುಮಲತಾ
ಕೂಡಲೇ ತನ್ನ ಜೇಬಿನಲ್ಲಿ ಇಟ್ಟುಕೊಂಡು ಬಂದಿದ್ದ ಹರಿತವಾದ ಸಣ್ಣ ಚಾಕುವಿನಂತಹ ವಸ್ತುವಿನಿಂದ ತನ್ನ ಗಂಟಲಿನ ಬಳಿ ಹಿಡಿದುಕೊಂಡು ನನಗೆ ನ್ಯಾಯ ಕೊಡಿಸಿ ಎಂದು ಕುತ್ತಿಗೆಯನ್ನು ಕೊಯ್ದುಕೊಂಡಿದ್ದಾರೆ. ಇದರಿಂದ ವಿಚಲಿತರಾದ ನ್ಯಾಯಮೂರ್ತಿಗಳು ಕೂಡಲೇ ಪೊಲೀಸರು ಹಾಗೂ ಭಧ್ರತಾ ಸಿಬ್ಬಂದಿಯನ್ನು ಕರೆದು ಇವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡುವಂತೆ ಸೂಚಿಸಿದ್ದಾರೆ. ಪೊಲೀಸರು ಸ್ಥಳಕ್ಕಾಗಿಮಿ ಆಂಬ್ಯೂಲೆನ್ಸ್ ಕರೆಸಿ ಬೌರಿಂಗ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ರವಾನಿಸಿದ್ದಾರೆ.
ಹೈಕೋರ್ಟ್‌ನ ಮುಖ್ಯ ನ್ಯಾಯಾಧೀಶರ ಮುಂದೆ ಕತ್ತು ಕೊಯ್ದುಕೊಂಡ ವ್ಯಕ್ತಿಯನ್ನು ಶ್ರೀನಿವಾಸ್ ಚಿನ್ನಂ ಎಂದು ಹೇಳಲಾಗಿದೆ. ಇವರು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗೆ ದೂರು ನೀಡಲು ಬಂದಿದ್ದರು. ಶ್ರೀನಿವಾಸ್ ಚಿನ್ನಂ ಮೈಸೂರಿನ ವಿಜಯನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಶ್ರೀನಿವಾಸ್ ಚಿನ್ನಂ ನೀಡಿದ್ದ ಪ್ರಕರಣ ಏಕಸದಸ್ಯ ಪೀಠದಲ್ಲಿ ರದ್ದಾಗಿತ್ತು. ಈ ಸಂಬಂಧ ಸಿಜೆ ಗೆ ದೂರು ನೀಡಲು ಬಂದಿದ್ದರು. ಹೈಕೋರ್ಟ್ ಹಾಲ್ ನಲ್ಲಿ ಸಿಬ್ಬಂದಿಗೆ ದೂರಿನ ಪ್ರತಿ ನೀಡಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಇನ್ನು ಪೊಲೀಸರು ಶ್ರೀನಿವಾಸ್ ಚಿನ್ನಂ ನೀಡಿದ್ದ ದೂರಿನ ಮಾಹಿತಿ ಸಂಗ್ರಹಿಸುತ್ತಿದ್ದಾರೆ.