Bengaluru: 'ಕುಂಕುಮ, ಬಿಂದಿಗೆ ಎಷ್ಟು ಹಕ್ಕಿದೆಯೋ ಅಷ್ಟೇ ಹಕ್ಕು ಇತರ ಧರ್ಮಕ್ಕೂ ಇದೆ' ಸೌಮ್ಯ ರೆಡ್ಡಿ ಟ್ವೀಟ್‌

By Santosh Naik  |  First Published Jul 22, 2023, 5:18 PM IST

ಬಿಎಂಟಿಸಿ ಬಸ್‌ನಲ್ಲಿ ಮಹಿಳಾ ಪ್ರಯಾಣಿಕರೊಬ್ಬರು ಮುಸ್ಲಿಂ ಕಂಡಕ್ಟರ್‌ವೊಬ್ಬರ ಟೋಪಿ ತೆಗೆಸಿದ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿತ್ತು. ಈ ಘಟನೆ ನಡೆದ ಹಲವು ದಿನಗಳ ಬಳಿಕ ಇತ್ತೀಚೆಗೆ ಮಾಜಿ ಶಾಸಕಿ ಸೌಮ್ಯ ರೆಡ್ಡಿ ಕಂಡಕ್ಟರ್‌ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.


ಬೆಂಗಳೂರು (ಜು.22): ಬಿಎಂಟಿಸಿ ಬಸ್‌ನಲ್ಲಿ ಮಹಿಳಾ ಪ್ರಯಾಣಿಕರೊಬ್ಬರು ಕರ್ತವ್ಯದಲ್ಲಿದ್ದ ಮುಸ್ಲಿಂ ಕಂಡಕ್ಟರ್‌ ಧರಿಸಿದ್ದ ಟೋಪಿಯನ್ನು ಕಂಡು ಅದನ್ನು ತೆಗೆಯುವಂತೆ ಒತ್ತಾಯಮಾಡಿದ್ದ ವಿಡಿಯೋ ವೈರಲ್‌ ಆಗಿತ್ತು. ಸರ್ಕಾರಿ ಸಮವಸ್ತ್ರದಲ್ಲಿ ಇರುವಾಗ ಟೋಪಿ ಧರಿಸುವ ಅವಕಾಶ ಇದೆಯೇ, ಬಿಎಂಟಿಸಿಯಲ್ಲಿ ಈ ನಿಯಮವಿದೆಯೇ ಎಂದು ಆಕೆಯ ಪ್ರಶ್ನೆಗೆ ಕಂಡಕ್ಟರ್‌ ಉತ್ತರವಿಲ್ಲದೆ ನಿಂತಿದ್ದರು. ವಿಡಿಯೋದ ಕೊನೆಯಲ್ಲಿ ಆಕೆಯ ಒತ್ತಾಯಕ್ಕೆ ಒಪ್ಪಿ ಕಂಡಕ್ಟರ್‌ ತಾವು ಧರಿಸಿದ್ದ ಟೋಪಿಯನ್ನು ತೆಗೆದಿದ್ದರು. ಇದರ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿತ್ತು. ಅದರೊಂದಿಗೆ ಪರ ವಿರೋಧದ ಚರ್ಚೆಯೂ ಆಗಿತ್ತು. ಪೊಲೀಸ್‌ ಸ್ಟೇಷನ್‌ನಲ್ಲಿ ಕೇಸರಿ ಶಾಲು ಧರಿಸಿ ಬಂದರೆ ಕಣ್ಣು ಕೆಂಪಗೆ ಮಾಡಿಕೊಳ್ಳುವ ಸರ್ಕಾರ, ಇದೇ ನಿಯಮವನ್ನು ಇತರ ಸರ್ಕಾರಿ ನೌಕರರಿಗೂ ಅನ್ವಯಿಸಬೇಕು ಎಂದು ವಾದ ಮಾಡಲಾಗಿತ್ತು. ಆದರೆ, ಕೊನೆಗೆ ಸ್ಪಷ್ಟನೆ ನೀಡಿದ್ದ ಬಿಎಂಟಿಸಿ, ಬಸ್‌ನಲ್ಲಿ ಕಾರ್ಯನಿರ್ವಹಿಸುವಾಗ ಟೋಪಿಯನ್ನಾಗಲಿ, ಕುಂಕುಮ, ಸಿಂಧೂರವನ್ನಾಗಲಿ ಧರಿಸಬಾರದು ಎನ್ನುವ ನಿಯಮವಿಲ್ಲ ಎಂದು ಹೇಳಿತ್ತು.

ಈ ನಡುವೆ ಜಯನಗರ ಮಾಜಿ ಶಾಸಕಿ ಹಾಗೂ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರ ಪುತ್ರಿ ಸೌಮ್ಯ ರೆಡ್ಡಿ ಇತ್ತೀಚೆಗೆ, ಬಸ್‌ ಕಂಡಕ್ಟರ್‌ ಆಸಿಫ್‌ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಲ್ಲದೆ, ಅವರಿಗೆ ಉಡುಗೊರೆಯನ್ನು ನೀಡಿದ್ದಾರೆ. ಇದನ್ನು ಸೋಶಿಯಲ್‌ ಮೀಡಿಯಾದಲ್ಲಿ ಬರೆದುಕೊಂಡಿರುವ ಅವರು 'ಕುಂಕುಮ, ಬಿಂದಿಗೆ ಎಷ್ಟು ಹಕ್ಕಿದೆಯೋ ಅಷ್ಟೇ ಹಕ್ಕು ಇತರ ಧರ್ಮಕ್ಕೂ ಇದೆ' ಎಂದು ತಿಳಿಸಿದ್ದಾರೆ.

'ಬಿಎಂಟಿಸಿ ಬಸ್ಸಿನಲ್ಲಿ ಕರ್ತವ್ಯದ ವೇಳೆ ಆಸಿಫ್ ಎಂಬ ನಿರ್ವಾಹಕರೊಬ್ಬರು ಧರಿಸಿದ್ದ ಟೋಪಿಯನ್ನು ಮಹಿಳಾ ಪ್ರಯಾಣಿಕರೊಬ್ಬರು ತೆಗೆಸಿ ಸರಿಯಾದ ಮಾಹಿತಿಯಿಲ್ಲದೆ ನೈತಿಕ ಪೊಲೀಸ್‌ಗಿರಿ ಪ್ರದರ್ಶಿಸಿದ್ದ ವಿಡಿಯೋ ಕೆಲ ದಿನಗಳ ಹಿಂದೆ ವೈರಲ್ ಆಗಿತ್ತು.  ಘಟನೆಯ ಬಗ್ಗೆ ನಮಗೆ ಬೇಸರವಾಗಿದ್ದನ್ನು ಆಸೀಫ್ ಅವರಿಗೆ ತಿಳಿಸಿದೆವು.  ಸಾರಿಗೆ ಸಚಿವರಾದ ರಾಮಲಿಂಗಾ ರೆಡ್ಡಿ ಅವರು ಸಹ ಆಸಿಫ್ ಅವರೊಂದಿಗೆ ಫೋನ್'ನಲ್ಲಿ ಮಾತನಾಡಿದರು.  ವಿಚಾರದಲ್ಲಿ ಮೊದಲಿನಿಂದಲೂ ಒಗ್ಗಟ್ಟು ಪ್ರದರ್ಶಿಸಿದ ಇತರ ಬಸ್ ನಿರ್ವಾಹಕರು, ಚಾಲಕರು ಮತ್ತು ಡಿಪೋ ಮ್ಯಾನೇಜರ್ ಕಾಂತರಾಜ್ ಅವರೊಂದಿಗೆ ಸಹ ಮಾತುಕತೆ ನಡೆಸಲಾಯಿತು. 

ಕುಂಕುಮ, ಸಿಂಧೂರ ಮತ್ತು ಬಿಂದಿ ನಮ್ಮ ಸಾಂಸ್ಕೃತಿಕ ಆಸ್ಮಿತೆಯಾಗಿದ್ದು ಇದನ್ನು ಇಟ್ಟುಕೊಳ್ಳಲು ನಮಗೆ ಎಷ್ಟು ಹಕ್ಕಿದೆಯೋ, ಅದರಂತೆಯೇ ಸಿಖ್ ಪೇಟವನ್ನು, ಕ್ರಿಶ್ಚಿಯನ್ ಶಿಲುಬೆಯನ್ನು ಸೇರಿದಂತೆ ಪ್ರತಿಯೊಬ್ಬರೂ ತಮ್ಮ ಧರ್ಮವನ್ನು ಇತರರಿಗೆ ತೊಂದರೆಯಾಗದ ರೀತಿಯಲ್ಲಿ ಪಾಲಿಸಲು ನಮ್ಮ ದೇಶದಲ್ಲಿ ಸಮಾನ ಅವಕಾಶವಿದೆ.    ‘ನಾವು ಬೇರೆ ಅವರು ಬೇರೆ’ ಎಂಬ ಮನೋಭಾವನೆಯಿಂದ ಮುಕ್ತರಾಗಿ ಹೃದಯವೈಶಾಲ್ಯ ಬೆಳೆಸಿಕೊಂಡು ಬದುಕಿದರೆ ಮಾತ್ರ 'ವಸುದೈವ ಕುಟುಂಬಕಂ' ಎಂಬ ನಮ್ಮ ಹಿರಿಯರ ಸಂದೇಶಕ್ಕೆ ಒಂದು ಸರಿಯಾದ ಅರ್ಥ ಸಿಗುತ್ತದೆ ಎಂಬುದು ನನ್ನ ಅಭಿಪ್ರಾಯ. 

ಇವನಾರವ ಇವನಾರವ ಇವನಾರವ ಎಂದೆನಿಸದಿರಯ್ಯಾ, ಇವ ನಮ್ಮವ,ಇವ ನಮ್ಮವ, ಇವ ನಮ್ಮವನೆಂದೆನಿಸಯ್ಯಾ. ಕೂಡಲಸಂಗಮದೇವಾ ನಿಮ್ಮ ಮನೆಯ ಮಗನೆಂದೆನಿಸಯ್ಯಾ ಎಂದು ಬಸವಣ್ಣನವರು ಬರೆದ ಸಾಲುಗಳನ್ನು ತಮ್ಮ ಟ್ವೀಟ್‌ನಲ್ಲಿ ಬರೆದಿದ್ದಾರೆ.

ಬಿಎಂಟಿಸಿ ಬಸ್ಸಿನಲ್ಲಿ ಕರ್ತವ್ಯದ ವೇಳೆ ಶ್ರೀ ಆಸಿಫ್ ಎಂಬ ನಿರ್ವಾಹಕರೊಬ್ಬರು ಧರಿಸಿದ್ದ ಟೋಪಿಯನ್ನು ಮಹಿಳಾ ಪ್ರಯಾಣಿಕರೊಬ್ಬರು ತೆಗೆಸಿ ಸರಿಯಾದ ಮಾಹಿತಿಯಿಲ್ಲದೆ ನೈತಿಕ ಪೊಲೀಸ್‌ಗಿರಿ ಪ್ರದರ್ಶಿಸಿದ್ದ ವಿಡಿಯೋ ಕೆಲ ದಿನಗಳ ಹಿಂದೆ ವೈರಲ್ ಆಗಿತ್ತು.

ಘಟನೆಯ ಬಗ್ಗೆ ನಮಗೆ ಬೇಸರವಾಗಿದ್ದನ್ನು ಆಸೀಫ್ ಅವರಿಗೆ ತಿಳಿಸಿದೆವು.
ಸಾರಿಗೆ ಸಚಿವರಾದ… pic.twitter.com/reM2Mp6NcI

— Sowmya | ಸೌಮ್ಯ (@Sowmyareddyr)

ಟೋಪಿ ಧರಿಸಿದ್ದ ಬಿಎಂಟಿಸಿ ಕಂಡಕ್ಟರ್‌ಗೆ ಪ್ರಶ್ನಿಸಿದ ಮಹಿಳೆ, ವಿಡಿಯೋ ವೈರಲ್‌!

ಇನ್ನು ವಿಡಿಯೋ ವೈರಲ್‌ ಆದ ಬಳಿಕ ಮಾತಾನಾಡಿದ ಬಿಎಂಟಿಸಿ ವಕ್ತಾರೆ ಟಿ. ಲತಾ, 'ಈ ಘಟನೆ ನಮ್ಮ ಗಮನಕ್ಕೆ ಬಂದಿದೆ. ಇದು 10 ದಿನಗಳ ಹಿಂದೆ ಆಗಿದದ ಘಟನೆ. ಶಿವಾಜಿನಗರದಿಂದ ಉತ್ತರಹಳ್ಳಿಗೆ ಹೋಗುವ ಬಸ್‌ನಲ್ಲಿ ಈ ಘಟನೆ ಆಗಿದೆ. “ನಾವು ಘಟನೆಯ ಬಗ್ಗೆ ಯಾವುದೇ ತನಿಖೆಯನ್ನು ಪ್ರಾರಂಭಿಸಿಲ್ಲ. ದೂರು ಕೂಡ ದಾಖಲಾಗಿಲ್ಲ. ನಾವು ಮಹಿಳೆಯ ಗುರುತಿನ ವಿವರಗಳನ್ನು ಸಂಗ್ರಹಿಸುತ್ತಿಲ್ಲ' ಎಂದು ತಿಳಿಸಿದ್ದರು. ಧಾರ್ಮಿಕ ನಂಬಿಕೆಗಳ ಆಚರಣೆಯ ಕುರಿತು ತಿಳಿಸಿದ ಅವರು “ಬಸ್ ಕಂಡಕ್ಟರ್‌ಗಳು ಮತ್ತು ಡ್ರೈವರ್‌ಗಳ ಸಮವಸ್ತ್ರದ ಕಾನೂನುಗಳು ಮತ್ತು ನಿಯಮಗಳು ಕಳೆದ ನಾಲ್ಕು ದಶಕಗಳಿಂದ ಜಾರಿಯಲ್ಲಿವೆ. ಸಮವಸ್ತ್ರದೊಂದಿಗೆ ಧಾರ್ಮಿಕ ವಸ್ತುಗಳನ್ನು ಧರಿಸದಂತೆ ನೌಕರರನ್ನು ನಿರ್ಬಂಧಿಸುವ ಬಗ್ಗೆ ಯಾವುದೇ ನಿರ್ದಿಷ್ಟ ಉಲ್ಲೇಖವಿಲ್ಲ' ಎಂದಿದ್ದಾರೆ.

Tap to resize

Latest Videos

ಬಸ್‌ ನಿಲ್ದಾಣ ಕಟ್ಟಡದಲ್ಲಿ ಬಾರ್ & ರೆಸ್ಟೋರೆಂಟ್‌ ಪ್ರಕರಣ: ಕ್ರಮಕ್ಕೆ ಬಿಎಂಟಿಸಿ ಎಂಡಿಗೆ ಸಾರಿಗೆ ಸಚಿವರ ಸೂಚನೆ

click me!