ತಾಲೂಕಿನ ಕೋತನಹಿಪ್ಪರಗಾ ನಿವಾಸಿಯಾಗಿದ್ದ ಗಡಿ ಭದ್ರತಾ ಪಡೆಯ ಯೋಧರೊಬ್ಬರು ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ. ಯೋಧ ಸಂದೀಪ್ ಸುರೇಶ ಬಿರಾದಾರ (32) ಆತ್ಮಹÜತ್ಯೆಗೆ ಶರಣಾಗಿದ್ದಾರೆ. ಮೃತರಿಗೆ ಪತ್ನಿ, ತಾಯಿ, ಸೋಹದರರು ಸೇರಿ ಕುಟಂಬಸ್ಥರು ಒಳಗೊಂಡು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಆಳಂದ (ಜು.22) : ತಾಲೂಕಿನ ಕೋತನಹಿಪ್ಪರಗಾ ನಿವಾಸಿಯಾಗಿದ್ದ ಗಡಿ ಭದ್ರತಾ ಪಡೆಯ ಯೋಧರೊಬ್ಬರು ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ. ಯೋಧ ಸಂದೀಪ್ ಸುರೇಶ ಬಿರಾದಾರ (32) ಆತ್ಮಹÜತ್ಯೆಗೆ ಶರಣಾಗಿದ್ದಾರೆ. ಮೃತರಿಗೆ ಪತ್ನಿ, ತಾಯಿ, ಸೋಹದರರು ಸೇರಿ ಕುಟಂಬಸ್ಥರು ಒಳಗೊಂಡು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಘಟನೆ ವಿವರ: ರಾಜ್ಯಸ್ಥಾನ ರಾಜ್ಯದ ಜಸಲ್‌ಮಿರ್ ಜಿಲ್ಲೆಯ ಭಾರತ-ಪಾಕಿಸ್ತಾನ ಅಂತಾರಾಷ್ಟ್ರೀಯ ಗಡಿಯಲ್ಲಿನ ಧನನಾನಾ ಫಾರ್ವರ್ಡ್ ಸ್ಥಳದಲ್ಲಿ ಕರ್ತವ್ಯಕ್ಕೆ ನಿಯೋಜಿತರಾಗಿದ್ದ ಬಿಎಸ್‌ಎಫ್ 154 ಬಟಾಲಿಯನ್‌ನಲ್ಲಿ ಸೈನಿಕ ಸಂದೀಪ್ ಸುರೇಶ ಬಿರಾದಾರ ಅವರು ಜು.18ರಂದು ಬೆ.10 ಗಂಟೆಯ ಸುಮಾರಿಗೆ ತನ್ನ ಇನ್ಸಾಸ್ ರೈಫೈಲ್‌ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
undefined
Kalaburagi rains: ಶವ ಸಂಸ್ಕಾರಕ್ಕೂ ಬಿಡದ ಮಳೆರಾಯ; ಸೇತುವೆ ಮುಳುಗಿ ಸಂಚಾರ ಅಸ್ತವ್ಯಸ್ತ
ಈ ಕುರಿತು ಜೆಸಲ್‌ಮಿರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಮೃತರ ಪಾರ್ಥೀವ ಶರೀರವನ್ನು ಜು.21ರಂದು ಸ್ವಗ್ರಾಮ ಕೋತನಹಿಪ್ಪರಗಾ ಗ್ರಾಮಕ್ಕೆ ಬೆಳಗಿನ ಜಾವ ಬಿಎಸ್‌ಪಿ ಅಧಿಕಾರಿಗಳು ಆಳಂದ ಪಟ್ಟಣದ ಮಾರ್ಗವಾಗಿ ತಂದರು. ಈ ಸಂದರ್ಭಧಲ್ಲಿ ಗ್ರಾಮದ ಯುವಕರು ರಾಷ್ಟ್ರಧ್ವಜದೊಂದಿಗೆ ಭಾರತ ಮಾತೆಯ ಜಯಘೋಷ ಕೂಗಿ ಗ್ರಾಮದವರೆಗೆ ಬೈಕ್ ರಾರಯಲಿ ನಡೆಸಿದರು.
ಬಳಿಕ ಸರ್ಕಾರಿ ಸಲಾಮಿ ಶಸ್ತ್ರ ಮೂಲಕ ಗೌರವ ನಮನ ಸಲ್ಲಿಸಿ ಅಂತಿಮ ಸಂಸ್ಕಾರ ಕ್ರಿಯೆ ನೆರವೇರಿಸಲಾಯಿತು. ಕುಟುಂಬಸ್ಥರು, ಗ್ರಾಮಸ್ಥರು ವಿದ್ಯಾರ್ಥಿಗಳು, ಶಿಕ್ಷಕರು ಸೇರಿದಂತೆ ಅಧಿಕಾರಿಗಳು ಅಂತಿಮ ಸಂಸ್ಕಾರದಲ್ಲಿ ಭಾಗವಹಿಸಿದ್ದರು.
ಸರ್ ಕ್ರೀಕ್ ಪ್ರದೇಶದಲ್ಲಿ ಮತ್ತೆ ಪಾಕ್ ಕಿರಿಕ್, ಬಿಎಸ್‌ಎಫ್‌ನಿಂದ ಸೂಕ್ತ ಉತ್ತರ!
ಈ ಮೊದಲು ಕೆಎಂಎಫ್ ಅಧ್ಯಕ್ಷ ಆರ್.ಕೆ. ಪಾಟೀಲ, ನಿವೃತ್ತ ಸೈನಿಕ ಸಂಘದ ತಾಲೂಕು ಮುಖಂಡ ಸಿದ್ಧಲಿಂಗ ಮಲಶೆಟ್ಟಿ, ಪಿಎಸ್‌ಐ ತಿರುಮಲ್ಲೇಶ ಕುಂಬಾರ, ದಿಗಂಬರ ಇಸರಾಜಿ ಮತ್ತಿತರ ಪ್ರಮುಖರು ಪುಷ್ಪ ನಮನ ಸಲ್ಲಿಸಿ ಅಂತಿಮ ನಮನ ಸಲ್ಲಿಸಿದರು. ಮಾಜಿ ಸೈನಿಕರಾದ ಶ್ರೀಶೈಲ ನಂದ್ಯಾಣಿ, ಸಂತೋಷ ಗುತ್ತೇದಾರ, ಚನ್ನಯ್ಯಾ ಸ್ವಾಮಿ, ಈರಣ್ಣಾ ಹೂಗಾರ, ಗಜಾನಂದ ಕಾಪ್ಟೆ, ಮಹಾದೇವ ಬೆಳಂಬೆ, ಶ್ರೀಮಂತ ಇಸರಾಜಿ, ಗ್ರಾಪಂ ಸದಸ್ಯ ಭರತ ಇಸರಾಜಿ, 153 ಬಟಾಲಿಯನ್ ಇನ್ಸ್‌ಪೆಕ್ಟರ್ ಡಿ.ಎಂ.ಡಿ ಜಿಲಾನಿ, ಸಬ್ ಇನ್ಸ್‌ಪೆಕ್ಟರ್ ನರೇಂದ್ರಸಿಂಗ್, ಎಸ್‌ಡಿಎಂಸಿ ಅಧ್ಯಕ್ಷ ಪರಮೇಶ್ವರ ಕುಂಬಾರ, ಬಾಲಾಜಿ ಬಿರಾದಾರ, ತಾಪಂ ಮಾಜಿ ಸದಸ್ಯ ಅಶೋಕ ಜಮಾದಾರ, ಗ್ರಾಮ ಅಭಿವೃದ್ಧಿ ಅಧಿಕಾರಿ ದತ್ತಾತ್ರೆಯ ರಾಠೋಡ ಸೇರಿ ಅನೇಕರು ಭಾಗವಹಿಸಿದ್ದರು.