ಪೊಲೀಸ್ ಇಲಾಖೆಗೆ ಸರ್ಜರಿ: ಸಂದೀಪ್‌ ಪಾಟೀಲ್‌ ಸೇರಿ 13 ಐಪಿಎಸ್‌ ಅಧಿಕಾರಿಗಳ ವರ್ಗಾವಣೆ

By Kannadaprabha News  |  First Published Jun 21, 2023, 10:16 AM IST

ಬೆಂಗಳೂರಿನ ಹೆಚ್ಚುವರಿ ಆಯುಕ್ತರುಗಳು ಹಾಗೂ ಬೆಳಗಾವಿ ಮತ್ತು ಹುಬ್ಬಳ್ಳಿ-ಧಾರವಾಡ ಆಯುಕ್ತರುಗಳು ಸೇರಿದಂತೆ 13 ಮಂದಿ ಹಿರಿಯ ಐಪಿಎಸ್‌ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಮಂಗಳವಾರ ರಾಜ್ಯ ಸರ್ಕಾರ ಆದೇಶಿಸಿದೆ.


ಬೆಂಗಳೂರು (ಜೂ.21): ಬೆಂಗಳೂರಿನ ಹೆಚ್ಚುವರಿ ಆಯುಕ್ತರುಗಳು ಹಾಗೂ ಬೆಳಗಾವಿ ಮತ್ತು ಹುಬ್ಬಳ್ಳಿ-ಧಾರವಾಡ ಆಯುಕ್ತರುಗಳು ಸೇರಿದಂತೆ 13 ಮಂದಿ ಹಿರಿಯ ಐಪಿಎಸ್‌ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಮಂಗಳವಾರ ರಾಜ್ಯ ಸರ್ಕಾರ ಆದೇಶಿಸಿದೆ.

ಬೆಂಗಳೂರಿನ ಪೂರ್ವ ವಿಭಾಗದ ಹೆಚ್ಚುವರಿ ಆಯುಕ್ತರಾಗಿದ್ದ ಎಂ.ಚಂದ್ರಶೇಖರ ಅವರಿಗೆ ಎಡಿಜಿಪಿ ಹುದ್ದೆಗೆ ಮುಂಬಡ್ತಿ ನೀಡಿ ಆಂತರಿಕ ಭದ್ರತಾ ವಿಭಾಗಕ್ಕೆ ವರ್ಗ ಮಾಡಿರುವ ಸರ್ಕಾರವು, ಬಿಜೆಪಿ ಸರ್ಕಾರದ ಅವಧಿಯಲ್ಲಿ ಅತ್ಯಂತ ಪ್ರಭಾವಿ ಅಧಿಕಾರಿ ಎಂದೇ ಬಿಂಬಿತವಾಗಿದ್ದ ಸಂದೀಪ್‌ ಪಾಟೀಲ್‌ ಅವರನ್ನು ಬೆಂಗಳೂರು ನಗರದ ಹೆಚ್ಚುವರಿ ಆಯುಕ್ತ (ಪಶ್ಚಿಮ) ಹುದ್ದೆಯಿಂದ ವರ್ಗಾಯಿಸಿ ಅಷ್ಟೇನು ಪ್ರಾಮುಖ್ಯತೆ ಹೊಂದಿಲ್ಲದ ಕೆಎಸ್‌ಐಆರ್‌ಪಿ ಐಜಿಪಿ ಹುದ್ದೆ ನೀಡಿದೆ. ನಾಲ್ಕು ವರ್ಷಗಳ ಸುದೀರ್ಘಾವಧಿಗೆ ಬೆಂಗಳೂರಿನಲ್ಲಿ ಸಂದೀಪ್‌ ಪಾಟೀಲ್‌ ಸೇವೆ ಸಲ್ಲಿಸಿದ್ದರು.

Tap to resize

Latest Videos

ತಂದೆ ಕರ್ತವ್ಯ ನಿರ್ವಹಿಸುತ್ತಿದ್ದ ಠಾಣೆಗೆ ಪಿಎಸ್‌ಐ ಆಗಿ ಬಂದ ಮಗಳು: ಪುತ್ರಿಗೆ ಅಧಿಕಾರ ಹಸ್ತಾಂತರಿಸಿದ ತಂದೆ

ಹಾಗೆಯೇ ಬೆಳಗಾವಿ ಆಯುಕ್ತ ಡಾ.ಬೋರಲಿಂಗಯ್ಯ ಅವರಿಗೆ ದಕ್ಷಿಣ ವಲಯ ಡಿಐಜಿ ಹಾಗೂ ಹುಬ್ಬಳ್ಳಿ-ಧಾರವಾಡ ಆಯುಕ್ತ ರಮಣ ಗುಪ್ತ ಅವರನ್ನು ಉತ್ತರ ವಲಯ ಐಜಿಪಿಯಾಗಿ ಸರ್ಕಾರ ನಿಯೋಜಿಸಿದೆ. ಆದರೆ ತೆರವಾದ ಈ ಎರಡು ನಗರಗಳ ಆಯುಕ್ತರ ಹುದ್ದೆಗಳಿಗೆ ಯಾರನ್ನೂ ನೇಮಿಸದೆ ಖಾಲಿ ಉಳಿಸಿದೆ. ಅದೇ ರೀತಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಾರಿಗೆ ಇಲಾಖೆ ಆಯುಕ್ತರಾಗಿದ್ದ ಐಜಿಪಿ ಎಸ್‌.ಎನ್‌.ಸಿದ್ದರಾಮಪ್ಪ ಅವರಿಗೂ ಸಹ ಮಹತ್ವವಲ್ಲದ ಹುದ್ದೆಯನ್ನು ಸರ್ಕಾರ ನೀಡಿದೆ.

ವರ್ಗಾವಣೆ ಪಟ್ಟಿ ಹೀಗಿದೆ: ಡಾ.ಕೆ.ರಾಮಚಂದ್ರ ರಾವ್‌- ವ್ಯವಸ್ಥಾಪಕ ನಿರ್ದೇಶಕ ಪೊಲೀಸ್‌ ಗೃಹ ಮಂಡಳಿ, ಮಾಲಿನಿ ಕೃಷ್ಣಮೂರ್ತಿ- ಎಡಿಜಿಪಿ ಕಾರಾಗೃಹ ಹಾಗೂ ಸುಧಾರಣಾ ಇಲಾಖೆ, ಮನೀಶ್‌ ಕರ್ಬೀಕರ್‌- ಎಡಿಜಿಪಿ ಸಿಐಡಿ, ಎಂ.ಚಂದ್ರಶೇಖರ್‌-ಎಡಿಜಿಪಿ ಐಎಸ್‌ಡಿ, ವಿಫುಲ್‌ ಕುಮಾರ್‌-ಹೆಚ್ಚುವರಿ ಆಯುಕ್ತ (ಪೂರ್ವ) ಬೆಂಗಳೂರು, ಪ್ರವೀಣ್‌ ಮಧುಕರ್‌ ಪವಾರ್‌- ಐಜಿಪಿ ಸಿಐಡಿ, ಎನ್‌.ಸತೀಶ್‌ ಕುಮಾರ್‌- ಹೆಚ್ಚುವರಿ ಆಯುಕ್ತ (ಪಶ್ಚಿಮ) ಬೆಂಗಳೂರು, ಸಂದೀಪ್‌ ಪಾಟೀಲ್‌-ಐಜಿಪಿ ಕೆಎಸ್‌ಆರ್‌ಪಿ, ವಿಕಾಸ್‌ ಕುಮಾರ್‌ ವಿಕಾಸ್‌-ಐಜಿಪಿ ಐಎಸ್‌ಡಿ, ರಮಣ ಗುಪ್ತ- ಐಜಿಪಿ ಉತ್ತರ ವಲಯ, ಡಾ.ಎಂ.ಬಿ.ಬೋರಲಿಂಗಯ್ಯ- ಡಿಐಜಿ ದಕ್ಷಿಣ ವಲಯ, ಸಿ.ವಂಶಿಕೃಷ್ಣ-ಡಿಐಜಿ ಸಿಐಡಿ, ಸಿ.ಬಿ.ರಿಷ್ಯಂತ್‌ -ಎಸ್ಪಿ ದಕ್ಷಿಣ ಕನ್ನಡ ಜಿಲ್ಲೆ.

ಯೋಗ ನಮ್ಮ ದೇಶದ ಸಂಸ್ಕೃತಿ ಮತ್ತು ಪೂರ್ವಜರ ಕೊಡುಗೆ: ಸಚಿವ ದಿನೇಶ್ ಗುಂಡೂರಾವ್

ಮುನಿರತ್ನ ಅಳಿಯನಿಗೆ ಕೋಮು ಸಂಘರ್ಷ ನಿಗ್ರಹ ಹೊಣೆ: ದಕ್ಷಿಣ ಕನ್ನಡ ಜಿಲ್ಲೆ ಪೊಲೀಸ್‌ ವರಿಷ್ಠಾಧಿಕಾರಿಯಾಗಿ ಮಾಜಿ ಸಚಿವ ಹಾಗೂ ಬಿಜೆಪಿ ಶಾಸಕ ಮುನಿರತ್ನ ಅವರ ಅಳಿಯ ಸಿ.ಬಿ.ರಿಷ್ಯಂತ್‌ ಅವರನ್ನು ಸರ್ಕಾರ ನೇಮಿಸಿದೆ.

click me!