ತಂದೆ ಕರ್ತವ್ಯ ನಿರ್ವಹಿಸುತ್ತಿದ್ದ ಠಾಣೆಗೆ ಪಿಎಸ್‌ಐ ಆಗಿ ಬಂದ ಮಗಳು: ಪುತ್ರಿಗೆ ಅಧಿಕಾರ ಹಸ್ತಾಂತರಿಸಿದ ತಂದೆ

By Govindaraj S  |  First Published Jun 21, 2023, 9:56 AM IST

ತಂದೆ ಕರ್ತವ್ಯ ನಿರ್ವಹಿಸುತ್ತಿದ್ದ ಠಾಣೆಗೆ ಪಿಎಸ್‌ಐ ಆಗಿ ಬಂದ ಮಗಳು, ತಂದೆಯ ಕೈಯಿಂದಲೇ ಅಧಿಕಾರ ಸ್ವೀಕರಿಸಿದ ಪುತ್ರಿ, ಬ್ಯಾಟನ್ ನೀಡಿ ಅಧಿಕಾರ ಹಸ್ತಾಂತರಿಸಿದ ತಂದೆ ಇಂತಹದೊಂದು ಅಪರೂಪದ ಘಟನೆಗೆ ಮಂಡ್ಯ ಸೆಂಟ್ರಲ್ ಪೊಲೀಸ್‌ ಠಾಣೆ ಸಾಕ್ಷಿಯಾಗಿದೆ. 


ಮಂಡ್ಯ (ಜೂ.21): ತಂದೆ ಕರ್ತವ್ಯ ನಿರ್ವಹಿಸುತ್ತಿದ್ದ ಠಾಣೆಗೆ ಪಿಎಸ್‌ಐ ಆಗಿ ಬಂದ ಮಗಳು, ತಂದೆಯ ಕೈಯಿಂದಲೇ ಅಧಿಕಾರ ಸ್ವೀಕರಿಸಿದ ಪುತ್ರಿ, ಬ್ಯಾಟನ್ ನೀಡಿ ಅಧಿಕಾರ ಹಸ್ತಾಂತರಿಸಿದ ತಂದೆ ಇಂತಹದೊಂದು ಅಪರೂಪದ ಘಟನೆಗೆ ಮಂಡ್ಯ ಸೆಂಟ್ರಲ್ ಪೊಲೀಸ್‌ ಠಾಣೆ ಸಾಕ್ಷಿಯಾಗಿದೆ. ಹೌದು! ಸೆಂಟ್ರಲ್ ಠಾಣೆಯಲ್ಲಿ ವೆಂಕಟೇಶ್ ಪಿಎಸ್‌ಐ ಆಗಿದ್ದರು. ಇದೀಗ ಅವರದೇ ಜಾಗಕ್ಕೆ ಪುತ್ರಿ ವರ್ಷ ಪಿಎಸ್ಐ ಆಗಿ ಬಂದಿದ್ದು, ಅಧಿಕಾರ ಸ್ವೀಕರಿಸಿದ ಪುತ್ರಿ ವರ್ಷಾಗೆ ತಂದೆ ವೆಂಕಟೇಶ್ ಹೂಗುಚ್ಛ ನೀಡಿ ಅಭಿನಂದಿಸಿದ್ದಾರೆ. ಕಳೆದ 16 ವರ್ಷಗಳ ಕಾಲ ವೆಂಕಟೇಶ್ ಸೇನೆಗೆ ಸೇವೆ ಸಲ್ಲಿಸಿದ್ದರು. 

ಸೇನೆಯಿಂದ ನಿವೃತ್ತಿ ಪಡೆದ ಬಳಿಕ 2010 ರಲ್ಲಿ ಪಿಎಸ್ಐ ಪರೀಕ್ಷೆ ಬರೆದು ಪೊಲೀಸ್ ಇಲಾಖೆಗೆ ಸೇನಾ ಕೋಟದಡಿ ವೆಂಕಟೇಶ್. ನೇಮಕಗೊಂಡಿದ್ದರು. ಕಳೆದೊಂದು ವರ್ಷದಿಂದ ಸೆಂಟ್ರಲ್ ಪೊಲೀಸ್ ಠಾಣೆಯಲ್ಲಿ ಪಿಎಸ್ಐ ಆಗಿ ಕರ್ತವ್ಯ ವೆಂಕಟೇಶ್. ನಿರ್ವಹಿಸುತ್ತಿದ್ದರು. ವೆಂಕಟೇಶ್ ಪುತ್ರಿ ಬಿ.ವಿ ವರ್ಷ 2022 ರ ಬ್ಯಾಚ್‌ನ ಪಿಎಸ್ಐ ಪರೀಕ್ಷೆಯಲ್ಲಿ ಉತ್ತಿರ್ಣರಾಗಿದ್ರು. ಕಳೆದ ಒಂದು ವರ್ಷದಿಂದ ಪ್ರೊಬೆಷನರಿ ಪಿಎಸ್ಐ ಆಗಿ ವರ್ಷಾ ಕರ್ತವ್ಯ ನಿರ್ವಹಿಸುತ್ತಿದ್ದರು. ಈಗ ತಂದೆ ಕರ್ತವ್ಯ ನಿರ್ವಹಿಸುತ್ತಿದ್ದ ಸೆಂಟ್ರಲ್ ಪೊಲೀಸ್ ಠಾಣೆಯಲ್ಲಿ ಅಧಿಕಾರ ಸ್ವೀಕಾರಿಸಿದ್ದಾರೆ.

Tap to resize

Latest Videos

ಯೋಗ ನಮ್ಮ ದೇಶದ ಸಂಸ್ಕೃತಿ ಮತ್ತು ಪೂರ್ವಜರ ಕೊಡುಗೆ: ಸಚಿವ ದಿನೇಶ್ ಗುಂಡೂರಾವ್

ಗೃಹ ರಕ್ಷಕರಿಗೆ ಸಮವಸ್ತ್ರ ವಿತರಣೆ: ತುಮಕೂರು ಜಿಲ್ಲೆಯಲ್ಲಿ ಪೊಲೀಸ್‌ ಸಿಬ್ಬಂದಿಯಂತೆ ಕಾರ್ಯನಿರ್ವಹಿಸುತ್ತಿರುವ ಗೃಹ ರಕ್ಷಕ ದಳದ ಸಿಬ್ಬಂದಿಗೆ ಸಮವಸ್ತ್ರ, ಶೂಗಳನ್ನು ವಿತರಿಸಲಾಯಿತು. ನಗರದ ಗೃಹರಕ್ಷಕ ದಳದ ಕಚೇರಿಯಲ್ಲಿ ಸಿಬ್ಬಂದಿಗೆ ಕೇಂದ್ರ ಕಚೇರಿ ಒದಗಿಸಿರುವ ಸಮವಸ್ತ್ರಗಳನ್ನು ವಿತರಿಸಿ ಮಾತನಾಡಿದ ಹೋಂಗಾರ್ಡ್ಸ್ ಕಮಾಂಡೆಂಚ್‌ ಆರ್‌. ಪಾತಣ್ಣ, ಕೇಂದ್ರ ಗೃಹರಕ್ಷಕ ಕಚೇರಿಯಿಂದ ಜಿಲ್ಲೆಗೆ 790 ಜತೆ ಸಮವಸ್ತ್ರಗಳನ್ನು ನೀಡಲಾಗಿದೆ. 

ಜಿಲ್ಲೆಯಾದ್ಯಂತ 18 ಗೃಹರಕ್ಷಕ ಘಟಕಗಳಿದ್ದು, ಈಗಾಗಲೇ ತಿಪಟೂರು, ನೊಣವಿನಕೆರೆ, ಹೊಳವನಹಳ್ಳಿ, ಚಿಕ್ಕನಾಯಕನಹಳ್ಳಿ, ಗುಬ್ಬಿ ಸೇರಿದಂತೆ ಎಲ್ಲ ಘಟಕಗಳ ಸಿಬ್ಬಂದಿಗೂ ಸಮವಸ್ತ್ರ ವಿತರಣೆ ಮಾಡಲಾಗಿದೆ. ಜಿಲ್ಲಾ ಕೇಂದ್ರದಲ್ಲಿರುವ ಗೃಹ ರಕ್ಷಕ ಸಿಬ್ಬಂದಿಗೆ ಇಂದು ಸಮವಸ್ತ್ರಗಳನ್ನು ವಿತರಿಸಲಾಗಿದೆ. ಕೇಂದ್ರ ಕಚೇರಿಯಿಂದ ಒದಗಿಸಿರುವ ಸಮವಸ್ತ್ರಗಳು ಉತ್ತಮ ಗುಣಮಟ್ಟದಿಂದ ಕೂಡಿದ್ದು, ಪ್ಯಾಂಟ್‌, ಶರ್ಟ್‌, ವಿಷಲ್ ಗಾರ್ಡ್‌, ಶೂ, ಪಾಲಿಷ್‌, ವಿಷಲ್ ಚೈನ್‌ ಗಾರ್ಡ್‌,ಲಾಟಿಯನ್ನೊಳಗೊಂಡಿವೆ ಎಂದರು.

ಅಧಿಕಾರ ಬಂತು ಎಂದರೆ 2-3 ಸಿಎಂ ಬದಲಿಸುವ ಚಾಳಿ ಬಿಜೆಪಿಯದ್ದು: ಸಚಿವ ಮಹದೇವಪ್ಪ

2023ನೇ ವಿಧಾನಸಭಾ ಚುನಾವಣೆಯ ಕಾರ್ಯನಿರ್ವಹಣೆಗೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳು ಕೇಳಿದ್ದಷ್ಟು ಗೃಹ ರಕ್ಷಕರನ್ನು ಒದಗಿಸಿದ್ದರಿಂದ ಕೇಂದ್ರ ಕಚೇರಿಯಿಂದ ನಮಗೆ ಪ್ರಶಂಸನಾ ಪತ್ರ ಲಭಿಸಿದೆ. ಜಿಲ್ಲಾ ಕೇಂದ್ರ ಕಚೇರಿಯಲ್ಲಿರುವ ಎಲ್ಲ ಸಿಬ್ಬಂದಿ ಈ ಕಾರ್ಯಕ್ಕೆ ಕೈಜೋಡಿಸುವ ಮೂಲಕ ಸಹಕಾರ ನೀಡಿದ್ದಾರೆ. ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಗೃಹ ರಕ್ಷಕ ದಳದ ಜಿಲ್ಲಾ ಬೋಧಕ ಶಿವಪ್ರಸಾದ್‌, ಪ್ರಥಮ ದರ್ಜೆ ಸಹಾಯಕ ಕೆ. ಪ್ರಕಾಶ್‌, ಸಹಾಯಕ ಬೋಧಕರಾದ ಹನುಮಂತರಾಯಪ್ಪ, ಪ್ರಭಾರ ಘಟಕಾಧಿಕಾರಿ ಪ್ರಕಾಶ್‌ ಮೂರ್ತಿ ಮತ್ತಿತರರು ಭಾಗವಹಿಸಿದ್ದರು.

click me!