ಕಲಬುರಗಿ ರೈತರ ಜಮೀನಿನಲ್ಲಿ ಲ್ಯಾಂಡ್‌ ಆದ ತರಬೇತಿ ವಿಮಾನ: ಪೈಲಟ್ಸ್‌ ಸೇಫ್‌

By Sathish Kumar KH  |  First Published Jun 25, 2023, 3:14 PM IST

ತರಬೇತಿ ನೀಡುವ ವಿಮಾನವೊಂದು ಟೇಕಾಫ್‌ ಆದ ಕೆಲವೇ ನಿಮಿಷಗಳಲ್ಲಿ ರೈತರ ಜಮೀನಿನಲ್ಲಿ ಲ್ಯಾಂಡ್‌ ಆಗಿರುವ ಘಟನೆ ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನಲ್ಲಿ ಭಾನುವಾರ ನಡೆದಿದೆ.


ಕಲಬುರಗಿ (ಜೂ.25): ತರಬೇತಿ ನೀಡುವ ವಿಮಾನವೊಂದು ಟೇಕಾಫ್‌ ಆದ ಕೆಲವೇ ನಿಮಿಷಗಳಲ್ಲಿ ರೈತರ ಜಮೀನಿನಲ್ಲಿ ಲ್ಯಾಂಡ್‌ ಆಗಿರುವ ಘಟನೆ ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನಲ್ಲಿ ಭಾನುವಾರ ನಡೆದಿದೆ.

ಇತ್ತೀಚೆಗೆ ಬೆಂಗಳೂರಿನ ಹಿಂದೂಸ್ತಾನ ಏರೀನಾಟಿಕ್ಸ್‌ ಲಿಮಿಟೆಡ್‌ (ಹೆಚ್‌.ಎ.ಎಲ್)ನಿಂದ ತರಬೇತಿ ನೀಡಲು ಹಾರಾಟ ಮಾಡಿದ್ದ ವಿಮಾನವೊಂದು ಚಾಮರಾಜನಗರ ಜಿಲ್ಲೆಯ ಬಯಲು ಪ್ರದೇಶದಲ್ಲಿ ಪತನವಾಗಿತ್ತು. ಆದರೆ, ಅದೃಷ್ಟವಶಾತ್‌ ಪೈಲಟ್‌ ಮತ್ತು ತರಬೇತಿ ಪಡೆಯುತ್ತಿದ್ದ ಯುವತಿ ಇಬ್ಬರೂ ಪ್ಯಾರಾಚೂಟ್‌ ಬಳಸಿ ಬೆಂಕಿ ಹೊತ್ತಿಕೊಂಡಿದ್ದ ವಿಮಾನದಿಂದ ಜಿಗಿದ ಕಾರಣ ಪ್ರಾಣಾಪಾಯದಿಂದ ಪಾರಾಗಿದ್ದರು. ಆದರೆ, ಈ ಘಟನೆ ನಡೆದು ಒಂದು ತಿಂಗಳು ಕಳೆಯುವಷ್ಟರಲ್ಲಿಯೇ ಕಲಬುರಗಿ ಜಿಲ್ಲೆಯಲ್ಲಿ ತರಬೇತಿ ವಿಮಾನವೊಂದು ತರಬೇತಿಗಾಗಿ ಆಕಾಶಕ್ಕೆ (Training aircraft) ಹಾರಿದ ಕೆಲವೇ ನಿಮಿಷಗಳಲ್ಲಿ ರೈತರ ಜಮೀನಿನಲ್ಲಿ ಲ್ಯಾಂಡ್‌ ಆಗಿದೆ.

Tap to resize

Latest Videos

undefined

ಮಳೆಗಾಗಿ ಸ್ಮಶಾನದಲ್ಲಿ ಹೂತಿದ್ದ ಶವದ ಬಾಯಿಗೆ ನೀರು ಬಿಟ್ಟ ಗ್ರಾಮಸ್ಥರು

ವಿಮಾನದಲ್ಲಿ ಟೆಕ್ನಿಕಲ್‌ ಸಮಸ್ಯೆ:  ಕಲಬುರಗಿಯ ವಿಮಾನ ನಿಲ್ದಾಣದಲ್ಲಿ ತರಬೇತಿ ನೀಡುತ್ತಿದ್ದ ವಿಮಾನವು ಹಾರಾಟಾದ ವೇಳೆ ಟೆಕ್ನಿಕಲ್ ಸಮಸ್ಯೆ ಕಂಡುಬಂದಿದ್ದು, ಈ ಹಿನ್ನೆಲೆಯಲ್ಲಿ ರೈತರ ಜಮೀನಿನಲ್ಲಿ‌ ವಿಮಾನ ಲ್ಯಾಂಡ್ ಮಾಡಲಾಗಿದೆ. ಕಲಬುರಗಿ ಜಿಲ್ಲೆ ಚಿತ್ತಾಪುರ ತಾಲೂಕಿನ ಪೇಟ್ ಸೀರೂರ್ ಗ್ರಾಮದ ಹೊರವಲಯದಲ್ಲಿ ಘಟನೆ ನಡೆದಿದೆ. ತರಬೇತಿ ವಿಮಾನವನ್ನು ಹಾರಿಸಿದ ನಂತರ ಇಂಜಿನ್‌ನಲ್ಲಿ ಟೆಕ್ನಿಕಲ್ ಸಮಸ್ಯೆ ಕಾಣಿಸಿಕೊಂಡಿದೆ. ವಿಮಾನ್ ನಿಲ್ದಾಣದಿಂದ ಟೇಕಾಫ್ ಆಗಿ 15 ಕಿ.ಮೀ. ಹಾರಾಟದ ಬಳಿಕ ವಿಮಾನದಲ್ಲಿ ಸಮಸ್ಯೆ ಗೊತ್ತಾಗಿದೆ. ಇನ್ನು ವಿಮಾನವನ್ನು ನಿಲ್ದಾಣಕ್ಕೆ ವಾಪಸ್‌ ತೆಗೆದುಕೊಂಡು ಹೋಗುವುದು ಕಷ್ಟಸಾಧ್ಯವೆಂದು ತಿಳಿದ ಕೂಡಲೇ ನಿಲ್ದಾಣದ ಪಕ್ಕದಲ್ಲಿಯೇ ಇದ್ದ ಖಾಲಿ ಬಯಲು ಜಮೀನೊಂದರಲ್ಲಿ (Kalaburgi farmers field) ವಿಮಾನವನ್ನು ಲ್ಯಾಂಡ್‌ ಮಾಡಲಾಗಿದೆ. 

ಪೈಲಟ್‌ಗಳು ಪ್ರಾಣಾಪಾಯದಿಂದ ಪಾರು:  ಇನ್ನು ವಿಮಾನ ಇಂಜಿನ್‌ನಲ್ಲಿ ಸಮಸ್ಯೆ ಕಾಣಿಸಿಕೊಂಡ ಬೆನ್ನಲ್ಲೇ ಲ್ಯಾಂಡ್‌ ಮಾಡಲು ಪೈಲಟ್‌ ನಿರ್ಧಾರ ಮಾಡಿದ್ದಾರೆ. ಇನ್ನು ವಿಮಾನವು ಕೂಡ ಹೆಚ್ಚು ಎತ್ತರದಲ್ಲಿ ಇರದ ಹಿನ್ನೆಲೆಯಲ್ಲಿ ಭೂಮಿಗೆ ಅಪ್ಪಳಿಸುವುದು ಗ್ಯಾರಂಟಿ ಆಗಿತ್ತು. ಆದ್ದರಿಂದ ಪೈಲಟ್‌ ಮತ್ತು ತರಬೇತಿ ಬಡೆಯುತ್ತಿದ್ದ ಟ್ರೈನಿಗಳು ಪ್ಯಾರಾಚೂಟ್‌ ಬಳಸಿ ಹಾರುವಷ್ಟೂ ಕೂಡ ವಿಮಾನ ಎತ್ತರದಲ್ಲಿ ಇರಲಿಲ್ಲ. ಆದ್ದರಿಂದ ಆದಷ್ಟು ಬಯಲು ಪ್ರದೇಶದಲ್ಲಿ ವಿಮಾನವನ್ನು ಲ್ಯಾಂಡ್‌ ಮಾಡಲು ನಿರ್ಧರಿಸಿದ್ದಾರೆ. ನಂತರ ಹೊಲದಲ್ಲಿ ವಿಮಾನ ಇಳಿಸಿದ್ದಾರೆ. 

ಶರಣರ ನಾಡಲ್ಲಿ ಮರ್ಯಾದಾ ಹತ್ಯೆ: ಹುಡುಗಿ ತಂದೆಯಿಂದಲೇ ಕೆಳಜಾತಿ ಯುವಕನ ಹತ್ಯೆ

ಮಾಡಬೂಳ ಪೊಲೀಸರಿಂದ ಸ್ಥಳ ಪರಿಶೀಲನೆ:  ಈ ಹಿನ್ನೆಲೆಯಲ್ಲಿ ರೈತರ ಖಾಲಿ ಜಮೀನಿನಲ್ಲಿ ವಿಮಾನ ಲ್ಯಾಂಡ್‌ ಮಾಡಿದ್ದು, ಅದೃಷ್ಟವಶಾತ್‌ ಯಾವುದೇ ಅವಘಡ ಸಂಭವಿಸದೇ ವಿಮಾನ ಲ್ಯಾಂಡ್‌ ಆಗಿದೆ. ಜೊತೆಗೆ, ಪೈಲಟ್‌ ಮತ್ತು ತರಬೇತು ಪಡೆಯುತ್ತಿದ್ದ ಟ್ರೈನಿ ಇಬ್ಬರೂ ಪ್ರಾಣಾಪಾಯದಿಂದ ಪಾರಾಗುದ್ದಾರೆ. ಕಲಬುರಗಿ ಜಿಲ್ಲೆಯ ಮಾಡಬೂಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ ನಡೆದಿದ್ದು, ಪೊಲೀಸರು ಸ್ಥಳ ಭೇಟಿ ಮಾಡಿದ್ದಾರೆ. ಜೊತೆಗೆ, ವಿಮಾನ ನಿಲ್ದಾಣದ ಸಿಬ್ಬಂದಿ ಸ್ಥಳಕ್ಕೆ ಬಂದು ಪರಿಶೀಲನೆ ಮಾಡಲಿದ್ದಾರೆ ಎಂದು ಪೊಲೀಸ್‌ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇನ್ನು ಸುತ್ತಲಿನ ಗ್ರಾಮಸ್ಥರು ಹೊಲದಲ್ಲಿ ಲ್ಯಾಂಡ್‌ ಆದ ವಿಮಾನ ನೋಡಲು ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸುತ್ತಿದ್ದಾರೆ. 

click me!