ರಾಣೆಬೆನ್ನೂರಿನಲ್ಲಿ ಪ್ರತ್ಯಕ್ಷರಾದ ಯಮಧರ್ಮ ಮತ್ತು ಚಿತ್ರಗುಪ್ತ, ವಾಹನ ಸವಾರರಿಗೆ ಸಂಚಾರಿ ನಿಯಮಗಳನ್ನು ಪಾಲಿಸುವಂತೆ ಎಚ್ಚರಿಕೆ ನೀಡಿ ಕಳುಹಿಸುತ್ತಿದ್ದ ದೃಶ್ಯ ಕಂಡುಬಂತು.
ಹಾವೇರಿ (ಡಿ.4): ರಾಣೆಬೆನ್ನೂರಿನಲ್ಲಿ ಪ್ರತ್ಯಕ್ಷರಾದ ಯಮಧರ್ಮ ಮತ್ತು ಚಿತ್ರಗುಪ್ತ, ವಾಹನ ಸವಾರರಿಗೆ ಸಂಚಾರಿ ನಿಯಮಗಳನ್ನು ಪಾಲಿಸುವಂತೆ ಎಚ್ಚರಿಕೆ ನೀಡಿ ಕಳುಹಿಸುತ್ತಿದ್ದ ದೃಶ್ಯ ಕಂಡುಬಂತು.
ವಾಹನ ಸವಾರರಿಗೆ ಸಂಚಾರಿ ನಿಯಮ ಮತ್ತು ಹೆಲ್ಮೆಟ್ ಜಾಗೃತಿ ಮೂಡಿಸಲು ಯಮಧರ್ಮ, ಚಿತ್ರಗುಪ್ತರನ್ನೇ ಕರೆತಂದು ರಾಣೆಬೆನ್ನೂರು ಪೊಲಿಸರು ವಿನೂತನ ಪ್ರಯೋಗದ ಮೂಲಕ ರಸ್ತೆಗಿಳಿಸಿದ್ದಾರೆ. ಯಮಧರ್ಮನ ವೇಷಭೂಷಣ ತೊಟ್ಟು ಬೈಕ್ ಸವಾರರಿಗೆ ಹೆಲ್ಮೆಟ್ ಹಾಕುವಂತೆ ಜಾಗೃತಿ ಮೂಡಿಸಲಾಯಿತು.
ಬಿಜೆಪಿ ಬರ ಅಧ್ಯಯನ ತಂಡದ ಮುಂದೆ ಬೆಳೆ ನಾಶಪಡಿಸಿದ ರೈತ!
ಕೈಯಲ್ಲಿ ಯಮಪಾಶ ಹಿಡಿದು ಬಂದ ಯಮ, ಕೈಯಲ್ಲಿ ವಾಹನ ಸವಾರರ ಲೆಕ್ಕಪತ್ರ ಹಿಡಿದು ಬಂದ ಚಿತ್ರಗುಪ್ತ ರಾಣೇಬೆನ್ನೂರು ಕೋರ್ಟ್ ವೃತ್ತದ ಬಳಿ ಸಂಚರಿಸಿ ಸಂಚಾರಿ ನಿಯಮ ಉಲ್ಲಂಘಿಸಿದ ಜನರಿಗೆ ಜಾಗೃತಿ ಜೊತೆಗೆ 500 ರುಪಾಯಿ ದಂಡದ ಎಚ್ಚರಿಕೆ ನೀಡಿದರು. ಹೆಲ್ಮೆಟ್ ಹಾಕಿಕೊಂಡ ಬಂದ ಬೈಕ್ ಸವಾರರಿಗೆ ಗುಲಾಬಿ ಹೂವು ನೀಡಿದ ಪೊಲೀಸ್ ಸಿಬ್ಬಂದಿ. ಇತ್ತ ಹೆಲ್ಮೆಟ್ ಹಾಕದವರಿಗೆ ಯಮಧರ್ಮನ ರೂಪದಲ್ಲಿ ಜಾಗೃತಿ ಮೂಡಿಸಲಾಯಿತು.
ಹಾವೇರಿ ಆಯ್ತು, ಗದಗ ಜಿಲ್ಲೆಯಲ್ಲೂ ಮೋಡ ಬಿತ್ತನೆ: ಸಚಿವ ಎಚ್.ಕೆ. ಪಾಟೀಲ ಮಾಹಿತಿ
ಹಾವೇರಿ ಜಿಲ್ಲೆಯಲ್ಲಿ ಕಳೆದ 3 ವರ್ಷಗಳಲ್ಲಿ 742 ಕ್ಕೂ ಅಧಿಕ ಬೈಕ್ ಸವಾರರ ಸಾವು ಹಿನ್ನೆಲೆ ನೂತನ ಎಸ್ಪಿ ಅಂಶುಕುಮಾರ ಕಡ್ಡಾಯ ಹೆಲ್ಮೆಟ್ ಪಾಲನೆ ಮಾಡುವಂತೆ ಸೂಚನೆ ನೀಡಿದ್ದಾರೆ ಈ ಹಿನ್ನೆಲೆ ಹೆಲ್ಮೆಟ್ ಹಾಕಿ ಬೈಕ್ ರೈಡ್ ಮಾಡಿ ಎಂದು ಜಿಲ್ಲಾಪೊಲೀಸರಿಂದ ವಾಹನ ಸವಾರರಿಗೆ ಮನವಿ ಮಾಡುವುದರ ಜೊತೆಗೆ ಜಾಗೃತಿ ಮೂಡಿಲಾಯಿತು