
ಚಾಮರಾಜನಗರ (ಜೂ.21) ಬಂಡಿಪುರ ಸಂರಕ್ಷಿತರ ಅರಣ್ಯದಲ್ಲಿನ ಸಫಾರಿ ವೇಳೆ ಕಾಡುಪ್ರಾಣಿಗಳು, ಅಪರೂಪದ ಪಕ್ಷಿಗಳ ಕೆಲ ರೋಚಕ ಕ್ಷಣಗಳನ್ನು ಪ್ರವಾಸಿಗರು ಮೊಬೈಲ್ ಮೂಲಕ ಸೆರೆ ಹಿಡಿದು ಹಲವು ಬಾರಿ ವೈರಲ್ ಮಾಡಿದ್ದಾರೆ. ಇದೀಗ ಪ್ರವಾಸಿಗರ ಸಫಾರಿ ವೇಳೆ ರೋಚಕ ದೃಶ್ಯವೊಂದು ಸೆರೆ ಸಿಕ್ಕಿದೆ. ಮಳೆ ಅಭಾವದಿಂದ ಬಾಯಾರಿದ ಕಾಡೆಮ್ಮೆ ನೀರು ಕುಡಿಯಲು ಕೆರೆ ಬಳಿ ಬಂದಿದೆ. ಆದರೆ ಹೊಂಚು ಹಾಕಿದ್ದ ಹುಲಿ ದೈತ್ಯ ಗಾತ್ರದ ಕಾಡೆಮ್ಮೆಯನ್ನೇ ಬೇಟೆಯಾಡಿದೆ.
ಬಂಡಿಪುರರ ಅರಣ್ಯದ ಆಲಘಟ್ಟ ಬಳಿ ಹುಲಿ ದೈತ್ಯ ಕಾಡೆಮ್ಮೆಯನ್ನು ಬೇಟೆಯಾಡಿದೆ. ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರಕ್ಕೆ ಪ್ರವಾಸಕ್ಕೆ ತೆರಳಿದ ಪ್ರವಾಸಿಗರು ಸಪಾರಿ ವೇಳೆ ಅದ್ಭುತ ದೃಶ್ಯ ಸೆರೆ ಸಿಕ್ಕಿದೆ. ನೀರು ಕುಡಿಯಲು ಆಗಮಿಸುತ್ತಿದ್ದಂತೆ ಹೊಂಚು ಹಾಕಿ ಕುಳಿತಿದ್ದ ಹುಲಿ ದಿಢೀರ್ ಎರಗಿದೆ. ಕಾಡೆಮ್ಮೆ ಹುಲಿಯಿಂದ ತಪ್ಪಿಸಿಕೊಳ್ಳಲು ಹಲವು ಬಾರಿ ಪ್ರಯತ್ನಿಸಿದೆ. ಆದರೆ ಹುಲಿ ಹಿಡಿತದಿಂದ ಬಿಡಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಕೆರೆ ಪಕ್ಕದಲ್ಲೇ ಜಟಾಪಟಿ ನಡೆದಿದೆ.
ಕಾಡೆಮ್ಮೆ ಪ್ರಾಣ ಉಳಿಸಿಕೊಳ್ಳಲು ಎಲ್ಲಾ ಪ್ರಯತ್ನ ಮಾಡಿದೆ. ಆದರೆ ಹುಲಿಯ ಬಿಗಿ ಹಿಡಿತದಿಂದ ತಪ್ಪಿಸಿಕೊಳ್ಲಲು ಸಾಧ್ಯವಾಗಲಿಲ್ಲ. ಕೆರೆ ಬಳಿಯಲ್ಲೇ ಈ ದಾಳಿ ನಡೆದಿದೆ. ಕಾಡೆಮ್ಮೆಯನ್ನು ಪೊದೆಯ ಪಕ್ಕಕ್ಕೆ ಎಳೆದೊಯ್ದ ಹುಲಿ ದಾಳಿ ಬಿಗಿಗೊಳಿಸಿದೆ. ಇತ್ತ ಪ್ರವಾಸಿಗರು ಈ ಅಪರೂಪದ ದೃಶ್ಯವನ್ನು ಮೊಬೈಲ್ ಮೂಲಕ ಸೆರೆ ಹಿಡಿದಿದ್ದಾರೆ. ಕಾಡೆಮ್ಮೆ ಮೇಲಿನ ದಾಳಿ ನಡೆಯುತ್ತಿದ್ದಂತೆ ಸಿಬ್ಬಂದಿಗಳು ಪ್ರವಾಸಿ ವಾಹನ ನಿಲ್ಲಿಸಿ ದೂರದಿಂದ ಪ್ರವಾಸಿಗರಿಗೆ ಅಪರೂಪದ ದೃಶ್ಯ ಸಿಗುವಂತೆ ಮಾಡಿದ್ದಾರೆ.
ಬಂಡಿಪುರದಲ್ಲಿ ಹಲವು ಪ್ರವಾಸಿಗರು ಈ ರೀತಿ ಕೆಲ ರೋಚಕ ದೃಶ್ಯಗಳನ್ನು ಸೆರೆದಿದ್ದಾರೆ. ಬಹುತೇಕ ಪ್ರವಾಸಿಗರಿಗೆ ಹುಲಿ ಪ್ರತ್ಯಕ್ಷವಾಗೋದೆ ಇಲ್ಲ. ಆಧರೆ ಈ ಬಾರಿ ಪ್ರವಾಸಿಗರಿಗೆ ಹುಲಿ ದಾಳಿಯ ದೃಶ್ಯವೇ ಸೆರೆಯಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ