ಬಸ್‌ ಪ್ರಯಾಣ ದರ ಏರಿಕೆ ಆಗುತ್ತಾ? ಡೀಸೆಲ್‌ ದರದ ₹40 ವ್ಯತ್ಯಾಸ ನೋಡಿ ಗಾಬರಿ ಆಯಿತು ಎಂದ ಸಿಎಂ

Kannadaprabha News   | Kannada Prabha
Published : Jun 21, 2026, 07:57 AM IST
CM DK Shivakumar

ಸಾರಾಂಶ

‘ಡೀಸೆಲ್ ದರದ 40 ರೂಪಾಯಿ ವ್ಯಾತ್ಯಾಸ ನೋಡಿ ನನಗೇ ಗಾಬರಿ ಆಯ್ತು’ ಸಿಎಂ ಡಿಕೆ ಶಿವವಕುಮಾರ್ ಹೇಳಿಕೆ ನೀಡಿದ ಹಿನ್ನೆಲೆ ಸಾರಿಗೆ ಬಸ್ಸುಗಳ ಟಿಕೆಟ್ ದರ ಹೆಚ್ಚಳವಾಗುವ ಸಾಧ್ಯತೆಯೂ ಇದೆ. ನಿಗಮಗಳ ಉಳಿವು ಹೂ ಜನರ ಹಿತ ಎರಡನ್ನೂ ಗಮನದಲ್ಲಿಟ್ಕೊಂಡು ತೀರ್ಮನಾ ಮಾಡಲಾಗುತ್ತೆ ಎಂದು ಸಿಎಂ ಹೇಳಿದ್ದಾರೆ.

ಬೆಂಗಳೂರು (ಜೂ.21): ಡೀಸೆಲ್‌ ದರ ಏರಿಕೆ ಹಿನ್ನೆಲೆಯಲ್ಲಿ ರಾಜ್ಯ ಸಾರಿಗೆ ಸಂಸ್ಥೆಗಳ ಬಸ್ಸುಗಳಲ್ಲಿ ಟಿಕೆಟ್‌ ದರ ಹೇರಿಕೆ ವಿಚಾರದಲ್ಲಿ ಜನರ ಹಿತ ಗಮನದಲ್ಲಿಟ್ಟುಕೊಂಡು ತೀರ್ಮಾನ ಮಾಡಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.

ಡೀಸೆಲ್ ದರ ಹೆಚ್ಚಾದ್ರೆ ಟಿಕೆಟ್ ಬೆಲೆಯೂ ಹೆಚ್ಚಳಕ್ಕೆ ತೀರ್ಮಾನ

ಸಂಪುಟ ಸಭೆ ಬಳಿಕ ವಿಧಾನಸೌಧದಲ್ಲಿ ನಡೆದ ಸುದ್ದಿಗೋಷ್ಠಿ ವೇಳೆ, ಸಾರಿಗೆ ನಿಗಮಗಳು ಟಿಕೆಟ್‌ ದರ ಹೆಚ್ಚಿಸಲು ಇಟ್ಟಿರುವ ಪ್ರಸ್ತಾವನೆ ಕುರಿತ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಖಾಸಗಿ ಹಾಗೂ ನಿಗಮದ ಡಿಪೋಗಳಲ್ಲಿನ ಡೀಸೆಲ್ ಬೆಲೆ ವ್ಯತ್ಯಾಸ ದರ ಸುಮಾರು 40 ರು.ಗಳಷ್ಟಿದೆ. ಇದನ್ನು ನೋಡಿದಾಗ ಗಾಬರಿ ಆಯಿತು. ಈ ಹಿಂದೆ ಡೀಸೆಲ್ ಬೆಲೆ ಹೆಚ್ಚಾದರೆ ಟಿಕೆಟ್ ಬೆಲೆ ಹೆಚ್ಚಳ ಆಗಬೇಕು ಎಂದು ತೀರ್ಮಾನ ಮಾಡಲಾಗಿತ್ತು. ಇದರ ಬಗ್ಗೆ ಮತ್ತೊಮ್ಮೆ ಪರಿಶೀಲನೆ ಮಾಡಬೇಕು. ಹಾಗಾಗಿ ಅಧಿಕಾರಿಗಳಿಗೆ ವರದಿ ನೀಡಲು ಹೇಳಿದ್ದೇನೆ. ವರದಿ ಬಂದ ಬಳಿಕ ಕೆಎಸ್ಆರ್‌ಟಿಸಿಯೂ ಉಳಿಬೇಕು. ಜನರಿಗೂ ಅನಾನುಕೂಲ ಆಗಬಾರದು ಆ ರೀತಿ ತೀರ್ಮಾನ ಮಾಡಲಾಗುವುದು ಎಂದರು.

ಜನಹಿತ ದೃಷ್ಟಿಯಲ್ಲಿಟ್ಕೊಂಡು ತೀರ್ಮಾನ

ಪ್ರಧಾನ ಮಂತ್ರಿಗಳೇ ಸಾರ್ವಜನಿಕ ಸಾರಿಗೆಗಳನ್ನು ಬಳಸಿ ಇಂಧನ ಉಳಿಸಿ ಎಂದು ಮಾರ್ಗದರ್ಶನ ನೀಡಿದ್ದಾರೆ. ಇದರ ಬಗ್ಗೆ ಜನರ ಹಿತ ದೃಷ್ಟಿಯಲ್ಲಿಟ್ಟುಕೊಂಡು ತೀರ್ಮಾನ ಮಾಡಲಾಗುವುದು. ಖಾಸಗಿಯವರು ಡಿಪೋಗಳ ಬದಲಾಗಿ ಸಾರ್ವಜನಿಕರಿಗೆ ಇರುವ ಬಂಕುಗಳಲ್ಲಿ ಡಿಸೇಲ್ ಖರೀದಿ ಮಾಡುತ್ತಿದ್ದಾರೆ. ಇದರ ಬಗ್ಗೆ ವರದಿ ಕೇಳಿದ್ದೇನೆ ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮೋದಿಗೆ ಸಿಗುತ್ತಿರುವ ಮನ್ನಣೆ ಹೇಳುವ ಭರದಲ್ಲಿ ರಾಜ್ಯ ಬಿಜೆಪಿ ಸೋಶಿಯಲ್ ಮೀಡಿಯಾದಿಂದ ಎಡವಟ್ಟು
ಬಸ್‌ ಪ್ರಯಾಣ ದರ ಏರಿಕೆ ಆಗುತ್ತಾ? ಡೀಸೆಲ್‌ ದರದ ₹40 ವ್ಯತ್ಯಾಸ ನೋಡಿ ಗಾಬರಿ ಆಯಿತು ಎಂದ ಸಿಎಂ