ಪ್ರಸ್ತುತ ರಾಜಕೀಯ ಮತ್ತು ಕೋಮು ಸಂಘರ್ಷದ ಪರಿಸ್ಥಿತಿಯಲ್ಲಿ ಕೊಡಗಿನ ಮಸೀದಿಯೊಂದು ಕೋಮು ಸೌಹಾರ್ದತೆಗೆ ಸಾಕ್ಷಿಯಾಗಿದೆ. ತಿತಿಮತಿಯಲ್ಲಿರುವ ಜಾಮಾ ಮಸೀದಿಯು ಸಂಕಷ್ಟಕ್ಕೆ ಸಿಲುಕಿದ ಶಬರಿಮಲೆಯ ಭಕ್ತರಿಗೆ ಆಶ್ರಯ ಮತ್ತು ಸೌಲಭ್ಯ ಕಲ್ಪಿಸುವ ಮೂಲಕ ಸಹೋದರತ್ವ ಮತ್ತು ಸಾಮರಸ್ಯದ ಸಂದೇಶ ನೀಡಿದೆ ಈ ಘಟನೆ
ಮಡಿಕೇರಿ (ಜ.6): ಪ್ರಪ್ರಸ್ತುತ ರಾಜಕೀಯ ಮತ್ತು ಕೋಮು ಸಂಘರ್ಷದ ಪರಿಸ್ಥಿತಿಯಲ್ಲಿ ಕೊಡಗಿನ ಮಸೀದಿಯೊಂದು ಕೋಮು ಸೌಹಾರ್ದತೆಗೆ ಸಾಕ್ಷಿಯಾಗಿದೆ. ತಿತಿಮತಿಯಲ್ಲಿರುವ ಜಾಮಾ ಮಸೀದಿಯು ಸಂಕಷ್ಟಕ್ಕೆ ಸಿಲುಕಿದ ಶಬರಿಮಲೆಯ ಭಕ್ತರಿಗೆ ಆಶ್ರಯ ಮತ್ತು ಸೌಲಭ್ಯ ಕಲ್ಪಿಸುವ ಮೂಲಕ ಸಹೋದರತ್ವ ಮತ್ತು ಸಾಮರಸ್ಯದ ಸಂದೇಶ ನೀಡಿದೆ ಈ ಘಟನೆ
ಬೆಳಗಾವಿಯಿಂದ ಕೊಡಗು ಮಾರ್ಗವಾಗಿ ಬೈಕ್‌ನಲ್ಲಿ ಕೇರಳದ ಶಬರಿಮಲೆ ದೇವಸ್ಥಾನಕ್ಕೆ ತೆರಳುತ್ತಿದ್ದ ಐವರು ಭಕ್ತರು ಗುರುವಾರ ರಾತ್ರಿ ಹವಾಮಾನ ವೈಪರೀತ್ಯ ಹಾಗೂ ಬೆಳಕು ಕಡಿಮೆಯಾದ ಕಾರಣ ಪ್ರಯಾಣ ಮುಂದುವರಿಸಲು ಸಾಧ್ಯವಾಗದೆ ತಿತಿಮತಿಯಲ್ಲಿ ಸ್ಥಗಿತಗೊಳಿಸಿದ್ದಾರೆ. ಕಮಲೇಶ್ ಗೌರಿ, ಭೀಮಪ್ಪ ಸನದಿ, ಶಿವಾನಂದ್ ಎನ್, ಗಂಗಾಧರ್ ಬಿ ಮತ್ತು ಎಸ್ ಸಿದ್ದರೋಡ್ ಜಮ್ಮಾ ಮಸೀದಿ ಬಳಿ ಹೋಗಿ ನೆರವು ಕೇಳಿದ್ದರೂ ಮುಂದೆ ಹೇಗೆ ಹೋಗಬೇಕು ಎಂಬುದು ಗೊತ್ತಾಗಿಲ್ಲ.
ಧರ್ಮ ಸಾಮರಸ್ಯ ಮೆರೆದ ಸ್ವೀಕರ್ ಖಾದರ್; ನಾಗಾರಾಧನೆಗೆ ಬಂಗಾರದಂತ ಜಮೀನು ದಾನ..!
ನಂತರ ಮಸೀದಿ ಆಡಳಿತ ಮಂಡಳಿಯವರು ಶಬರಿಮಲೆ ಭಕ್ತರ ನೆರವಿಗೆ ಬಂದಿದ್ದು, ರಾತ್ರಿ ಮಸೀದಿಯಲ್ಲಿ ತಂಗಲು ಅನುಮತಿ ನೀಡಿದ್ದಾರೆ. ಅಲ್ಲದೇ ಭಕ್ತರಿಗೆ ಅಗತ್ಯವಿರುವ ಎಲ್ಲ ಸೌಲಭ್ಯಗಳನ್ನು ಮಸೀದಿ ಅಧ್ಯಕ್ಷ ಉಸ್ಮಾನ್ ಹಾಗೂ ಕೆ. ಕತೀಬ್ ಒದಗಿಸಿದ್ದಾರೆ. ಶುಕ್ರವಾರ ಬೆಳಗ್ಗೆ 6 ಗಂಟೆಗೆ ಐವರು ಭಕ್ತರು ಆಡಳಿತ ಮಂಡಳಿಗೆ ಕೃತಜ್ಞತೆ ಸಲ್ಲಿಸಿ ಶಬರಿಮಲೆಗೆ ತೆರಳುವಾಗಲೂ ಅವರು ಪೂಜೆ ನೆರವೇರಿಸಲು ಮಸೀದಿ ಆಡಳಿತ ಮಂಡಳಿ ಅನುಮತಿ ನೀಡಿದೆ.
ದರ್ಗಾದೊಳಗೊಂದು ದೇವಾಲಯ; ಇದು ದಕ್ಷಿಣ ಭಾರತದ ಸೌಹಾರ್ದ ಧಾರ್ಮಿಕ ಕೇಂದ್ರ
ಈ ಮಸೀದಿ ಸೌಹಾರ್ದತೆಯ ಸಂಕೇತವಾಗಿದೆ. ಜಾತಿ, ಧರ್ಮದ ಭೇದವಿಲ್ಲದೆ ಭಕ್ತರಿಗೆ ಅಗತ್ಯವಿರುವ ಎಲ್ಲ ಸೌಲಭ್ಯಗಳನ್ನು ಒದಗಿಸಲು ನಾವು ಸದಾ ಸಿದ್ಧರಿದ್ದೇವೆ ಎಂದು ಉಸ್ಮಾನ್ ಹೇಳಿದರು.