ಸಿದ್ದು ಸರ್ಕಾರದ ಯೋಜನೆಯಿಂದ ಈ ವರ್ಷ 50 ಲಕ್ಷ ಮಂದಿ ಭಕ್ತರಿಂದ ಮಹದೇಶ್ವರನ ದರ್ಶನ!

By Kannadaprabha News  |  First Published Dec 21, 2023, 12:41 PM IST

ತಾಲೂಕಿನ ಪ್ರಸಿದ್ಧ ಪುಣ್ಯ ಯಾತ್ರಾ ಸ್ಥಳಗಳಲ್ಲಿ ಒಂದಾದ ಮಲೆ ಮಹದೇಶ್ವರ ಬೆಟ್ಟಕ್ಕೆ 2023 ರಲ್ಲಿ 50 ಲಕ್ಷಕ್ಕೂ ಅಧಿಕ ಮಂದಿ ಭಕ್ತರು ಭೇಟಿ ಕೊಟ್ಟಿದ್ದು ಕೋಟ್ಯಂತರ ರು. ಆದಾಯ ಹರಿದು ಬಂದಿದೆ. 


ಜಿ ದೇವರಾಜುನಾಯ್ಡು

ಹನೂರು (ಡಿ.21): ತಾಲೂಕಿನ ಪ್ರಸಿದ್ಧ ಪುಣ್ಯ ಯಾತ್ರಾ ಸ್ಥಳಗಳಲ್ಲಿ ಒಂದಾದ ಮಲೆ ಮಹದೇಶ್ವರ ಬೆಟ್ಟಕ್ಕೆ 2023 ರಲ್ಲಿ 50 ಲಕ್ಷಕ್ಕೂ ಅಧಿಕ ಮಂದಿ ಭಕ್ತರು ಭೇಟಿ ಕೊಟ್ಟಿದ್ದು ಕೋಟ್ಯಂತರ ರು. ಆದಾಯ ಹರಿದು ಬಂದಿದೆ. 2023ರ ಜನವರಿಯಿಂದ ಡಿಸೆಂಬರ್ ತನಕ ನಡೆದ ಒಟ್ಟು ಹುಂಡಿ ಎಣಿಕೆಯಲ್ಲಿ 26,18, 28,295 ರು. ಸಂಗ್ರಹವಾಗಿದ್ದು 798 ಗ್ರಾಂ ಚಿನ್ನ, 27 ಕೆಜಿ ಬೆಳ್ಳಿ ಕಾಣಿಕೆ ರೂಪದಲ್ಲಿ ಭಕ್ತರು ಈ ವರ್ಷ ಮಾದಪ್ಪನಿಗೆ ಸಲ್ಲಿಸಿದ್ದಾರೆ.

Tap to resize

Latest Videos

undefined

ಚಿನ್ನದ ರಥೋತ್ಸವ ಮೂಲಕ ಹೆಚ್ಚು: ಮಲೆ ಮಹದೇಶ್ವರ ಬೆಟ್ಟ ಕ್ಷೇತ್ರದಲ್ಲಿ ಜನಪ್ರಿಯ ಉತ್ಸವಗಳಲ್ಲಿ ಒಂದಾದ ಚಿನ್ನದ ರಥೋತ್ಸವ ಮೂಲಕ 16,27,74,240 ರು. ಬಂದಿದ್ದು ಬೆಳ್ಳಿ ರಥೋತ್ಸವದ ಮೂಲಕ 6 ತಿಂಗಳಲ್ಲಿ 14 ಲಕ್ಷ ಬಂದಿದೆ, ಲಾಡು ಮಾರಾಟದಿಂದಲೇ 15 ಕೋಟಿ ಆದಾಯ ಕ್ಷೇತ್ರಕ್ಕೆ ಹರಿದು ಬಂದಿರುವುದು ಬೆಟ್ಟಕ್ಕೆ 2023 ರಲ್ಲಿ ಬಂದಿರುವ ಭಕ್ತ ಸಾಗರಕ್ಕೆ ಸಾಕ್ಷಿಯಾಗಿದೆ.

ಟ್ರ್ಯಾಪ್ ಮಾಡಲು ಪ್ರತಾಪ್ ಸಿಂಹ ಹುಡುಗನಲ್ಲ: ಡಿ.ಕೆ.ಶಿವಕುಮಾರ್‌

ಶಕ್ತಿ ಯೋಜನೆ ಪ್ರಭಾವ: ಮಲೆ ಮಹದೇಶ್ವರ ಬೆಟ್ಟಕ್ಕೆ 2023 ರಲ್ಲಿ 50 ಲಕ್ಷಕ್ಕೂ ಅಧಿಕ ಮಂದಿ ಭಕ್ತರು ಭೇಟಿ ಕೊಟ್ಟಿದ್ದಾರೆ ಎಂದು ಪ್ರಾಧಿಕಾರ ಅಂದಾಜಿಸಿದೆ. ಅಕ್ಟೋಬರ್, ನವೆಂಬರ್ ಹಾಗೂ ಡಿಸೆಂಬರ್ ತಿಂಗಳಲ್ಲಿ 8-9 ಲಕ್ಷದಷ್ಟು ಮಂದಿ ಭಕ್ತರು ಭೇಟಿ ಕೊಟ್ಟಿದ್ದು ಇದಕ್ಕೆ ಶಕ್ತಿ ಯೋಜನೆಯೂ ಒಂದು ಕಾರಣವಾಗಿದೆ.

ಸಕಲ ಸಿದ್ಧತೆ: ಮಲೆ ಮಹದೇಶ್ವರ ಬೆಟ್ಟದಲ್ಲಿ ವರ್ಷದ ಕೊನೆಯ ಹೊಸ ವರ್ಷದ 2024ರ ಪ್ರಾರಂಭದಲ್ಲಿ ಮಲೆ ಮಹದೇಶ್ವರ ಬೆಟ್ಟಕ್ಕೆ ರಾಜ್ಯದ ಹಾಗೂ ವಿವಿಧ ಜಿಲ್ಲೆಗಳ ಮತ್ತು ತಮಿಳುನಾಡಿನಿಂದಲೂ ಸಹ ಲಕ್ಷಾಂತರ ಭಕ್ತರು ಬಂದು ಹೋಗುವ ನಿರೀಕ್ಷೆ ಇರುವುದರಿಂದ ಮಲೆ ಮಾದೇಶ್ವರ ಬೆಟ್ಟ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಭಕ್ತರಿಗೆ ಸಕಲ ವ್ಯವಸ್ಥೆ ಕಲ್ಪಿಸಿದೆ.

ಕೋಟ್ಯಧಿಪತಿ ಮಾದಪ್ಪ: ಹುಂಡಿ ಎಣಿಕೆ, ಉತ್ಸವ, ಲಾಡು ಇನ್ನಿತರ ಮಾರಾಟದಿಂದ ಪ್ರಾಧಿಕಾರಕ್ಕೆ 2023 ರಲ್ಲಿ 63,38,02,804 ರು . ಆದಾಯ ಬಂದಿದ್ದು ಮಲೆ ಮಾದಪ್ಪ ವರ್ಷದಿಂದ ವರ್ಷಕ್ಕೆ ಶ್ರೀಮಂತನಾಗುತ್ತಿದ್ದಾನೆ.

ನಾನು ಸೈಲೆಂಟ್ ಆಗಿಲ್ಲ, ಶತ್ರುಗಳಿದ್ದರೆ ನಮಗೂ ಒಳ್ಳೆಯದೇ: ಬಿ.ಕೆ.ಹರಿಪ್ರಸಾದ್‌

ಪ್ರಸಿದ್ಧ ಪುಣ್ಯ ಸ್ಥಳವಾದ ಮಲೆ ಮಹದೇಶ್ವರ ಬೆಟ್ಟದಲ್ಲಿ ಬರುವ ಮಾದಪ್ಪನ ಭಕ್ತರಿಗೆ ಯಾವುದೇ ಲೋಪ ದೋಷಗಳು ಇಲ್ಲದಂತೆ ಸಕಲ ಸಿದ್ಧತೆ ಮಾಡಲಾಗಿದೆ. 2024ರ ನೂತನ ವರ್ಷಕ್ಕೆ ಲಕ್ಷಾಂತರ ಭಕ್ತರು ಬರುವ ನಿರೀಕ್ಷೆ ಇದೆ. ಧಾರ್ಮಿಕ ಕ್ಷೇತ್ರದಲ್ಲಿ ಬರುವ ಭಕ್ತರು ಸ್ವಚ್ಛತೆಗೆ ಆದ್ಯತೆ ನೀಡಬೇಕು.
-ಸರಸ್ವತಿ, ಕಾರ್ಯದರ್ಶಿ, ಮಲೆ ಮಹದೇಶ್ವರ ಬೆಟ್ಟ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ.

click me!