ರಾಜ್ಯದಲ್ಲಿ ಎಲೆಕ್ಟ್ರಿಕ್‌ ವಾಹನಗಳ ನೋಂದಣಿಯಲ್ಲಿ ಭಾರೀ ಏರಿಕೆ!

By Kannadaprabha NewsFirst Published Dec 21, 2023, 12:11 PM IST
Highlights

ಪರಿಸರ ಸ್ನೇಹಿ ಸಾರಿಗೆಯತ್ತ ರಾಜ್ಯದ ಜನರು ಹೆಚ್ಚಿನ ಒಲವು ತೋರುತ್ತಿದ್ದು, ವರ್ಷದಿಂದ ವರ್ಷಕ್ಕೆ ಎಲೆಕ್ಟ್ರಿಕ್‌ ವಾಹನಗಳ ನೋಂದಣಿ ಹೆಚ್ಚುತ್ತಿದೆ. ಕಳೆದ 6 ವರ್ಷಗಳಲ್ಲಿ ವಿವಿಧ ಮಾದರಿಯ 2.83 ಲಕ್ಷ ಎಲೆಕ್ಟ್ರಿಕ್‌ ವಾಹನಗಳು ರಾಜ್ಯದಲ್ಲಿ ನೋಂದಣಿಯಾಗಿದೆ.
 

ಬೆಂಗಳೂರು (ಡಿ.21): ಪರಿಸರ ಸ್ನೇಹಿ ಸಾರಿಗೆಯತ್ತ ರಾಜ್ಯದ ಜನರು ಹೆಚ್ಚಿನ ಒಲವು ತೋರುತ್ತಿದ್ದು, ವರ್ಷದಿಂದ ವರ್ಷಕ್ಕೆ ಎಲೆಕ್ಟ್ರಿಕ್‌ ವಾಹನಗಳ ನೋಂದಣಿ ಹೆಚ್ಚುತ್ತಿದೆ. ಕಳೆದ 6 ವರ್ಷಗಳಲ್ಲಿ ವಿವಿಧ ಮಾದರಿಯ 2.83 ಲಕ್ಷ ಎಲೆಕ್ಟ್ರಿಕ್‌ ವಾಹನಗಳು ರಾಜ್ಯದಲ್ಲಿ ನೋಂದಣಿಯಾಗಿದೆ. ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಹೆಚ್ಚಳ ಸೇರಿದಂತೆ ಮತ್ತಿತರ ಕಾರಣಗಳಿಂದಾಗಿ ಜನರು ಎಲೆಕ್ಟ್ರಿಕ್‌ ವಾಹನಗಳತ್ತ ಹೆಚ್ಚಿನ ಮುಖ ಮಾಡುತ್ತಿದ್ದಾರೆ. 

2017-18ರಲ್ಲಿ ಎಲೆಕ್ಟ್ರಿಕ್‌ ವಾಹನ ನೋಂದಣಿಯ ಸಂಖ್ಯೆ ಹಾಗೂ 2023-24ರಲ್ಲಿನ ವಾಹನಗಳ ನೋಂದಣಿಯನ್ನು ಗಮನಿಸಿದರೆ ಎಲೆಕ್ಟ್ರಿಕ್‌ ವಾಹನಗಳ ನೋಂದಣಿ ಪ್ರಮಾಣ ಶೇ. 1000ರಷ್ಟು ಹೆಚ್ಚಾಗಿದೆ. ಅದರಲ್ಲೂ 2022-23ರಿಂದ ಈಚೆಗೆ ವಾರ್ಷಿಕ 1 ಲಕ್ಷಕ್ಕೂ ಹೆಚ್ಚಿನ ಎಲೆಕ್ಟ್ರಿಕ್‌ ವಾಹನಗಳು ನೋಂದಣಿಯಾಗುತ್ತಿವೆ. ಈ ಪೈಕಿ ದ್ವಿಚಕ್ರ ವಾಹನಗಳ ನೋಂದಣಿಯಲ್ಲಿ ಭಾರೀ ಏರಿಕೆಯಾಗಿದೆ.

Latest Videos

ನಾನು ಸೈಲೆಂಟ್ ಆಗಿಲ್ಲ, ಶತ್ರುಗಳಿದ್ದರೆ ನಮಗೂ ಒಳ್ಳೆಯದೇ: ಬಿ.ಕೆ.ಹರಿಪ್ರಸಾದ್‌

ರಾಜ್ಯದಲ್ಲಿವೆ 2.83 ಲಕ್ಷ ಎಲೆಕ್ಟ್ರಿಕ್‌ ವಾಹನ: ಸಾರಿಗೆ ಇಲಾಖೆ ಮಾಹಿತಿಯಂತೆ ರಾಜ್ಯದಲ್ಲಿ 2017-18ರಿಂದ 2023-24ರ ನವೆಂಬರ್‌ ತಿಂಗಳವರೆಗೆ 2,83,549 ಎಲೆಕ್ಟ್ರಿಕ್‌ ವಾಹನಗಳಿವೆ. ಅದರಲ್ಲಿ ದ್ವಿಚಕ್ರ ವಾಹನಗಳ ಸಂಖ್ಯೆ ಅತ್ಯಧಿಕ 2.48 ಲಕ್ಷವಿದೆ. ಉಳಿದಂತೆ ಮೂರು ಚಕ್ರದ ವಾಹನಗಳ ಸಂಖ್ಯೆ 16,275 ಹಾಗೂ 18,614 ಕಾರು ಸೇರಿ ಇತರ ನಾಲ್ಕು ಚಕ್ರದ ಎಲೆಕ್ಟ್ರಿಕ್‌ ವಾಹನಗಳು ರಾಜ್ಯದಲ್ಲಿ ನೋಂದಣಿಯಾಗಿವೆ.

ಎಲೆಕ್ಟ್ರಿಕ್‌ ವಾಹನ ನೋಂದಣಿ ವಿವರ
ವರ್ಷ ದ್ವಿಚಕ್ರ ಮೂರುಚಕ್ರ ನಾಲ್ಕು ಚಕ್ರ

2017-18 97 1,58 236
2018-19 2,271 2,753 518
2019-20 6,276 49 449
2020-21 10,388 403 802
2021-22 39,382 2,887 1,948
2022-23 99,465 5,131 5,896
2023-24 90,781 3,463 8,765
ಒಟ್ಟು 2,48,660 16,275 18,614

ಟ್ರ್ಯಾಪ್ ಮಾಡಲು ಪ್ರತಾಪ್ ಸಿಂಹ ಹುಡುಗನಲ್ಲ: ಡಿ.ಕೆ.ಶಿವಕುಮಾರ್‌

ಎಲೆಕ್ಟ್ರಿಕ್‌ ವಾಹನಕ್ಕೆ ತೆರಿಗೆ ಇಲ್ಲ: ಎಲೆಕ್ಟ್ರಿಕ್, ವಾಣಿಜ್ಯ ಮತ್ತು ಹಳದಿ ಫಲಕದ ವಾಹನಗಳನ್ನು ಹೊರತುಪಡಿಸಿ ನೂತನ ವಾಹನಗಳಿಗೆ ಜೀವಮಾನ ತೆರಿಗೆ ವಿಧಿಸುವ ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ ತಿದ್ದುಪಡಿ ವಿಧೇಯಕವೂ ಬುಧವಾರ ಸದನದಲ್ಲಿ ಅಂಗೀಕಾರಗೊಂಡಿತು. ಸಚಿವ ರಾಮಲಿಂಗಾರೆಡ್ಡಿ ಈ ವಿಧೇಯಕವನ್ನು ಮಂಡಿಸಿದರು. ಎಲೆಕ್ಟ್ರಿಕ್‌ ವಾಹನಗಳಿಗೆ ತೆರಿಗೆ ವಿಧಿಸಬಾರದು. ಅವುಗಳಿಗೆ ಸಬ್ಸಿಡಿ ನೀಡಬೇಕು ಎಂದು ಪ್ರತಿಪಕ್ಷದ ಸದಸ್ಯರು ಆಗ್ರಹಿಸಿದರು. ಈ ವೇಳೆ ಆಡಳಿತ ಪಕ್ಷದ ಸದಸ್ಯ ಆರ್‌.ವಿ.ದೇಶಪಾಂಡೆ ಕೂಡ ಇದಕ್ಕೆ ಬೆಂಬಲಿಸಿ ಎಲೆಕ್ಟ್ರಿಕ್‌ ವಾಹನಗಳಿಗೆ ತೆರಿಗೆ ಹಾಕಬಾರದು ಎಂದು ಸಲಹೆ ಮಾಡಿದರು. ಹೀಗಾಗಿ ಸಚಿವ ರಾಮಲಿಂಗಾರೆಡ್ಡಿ ಅದನ್ನು ತಿದ್ದುಪಡಿ ಮಾಡಲಾಗುವುದು ಎಂದು ಭರವಸೆ ನೀಡಿದರು. ಬಳಿಕವಷ್ಟೇ ಅದಕ್ಕೆ ಅಂಗೀಕಾರವಾಯಿತು.

click me!