• ಹೃದ್ರೋಗ ಸಮಸ್ಯೆಯಿಂದ ಬಳಲುತ್ತಿದ್ದ ಬೆಳಗಾವಿ ಮೂಲದ 22 ವರ್ಷದ ಮುಸ್ಲಿಂ ಯುವಕ
• ಅಪಘಾತದಲ್ಲಿ ಧಾರವಾಡ ಮೂಲದ 15 ವರ್ಷದ ಹಿಂದೂ ಬಾಲಕಿಯ ಮಿದುಳು ನಿಷ್ಕ್ರಿಯ
• ಧಾರವಾಡದ ಎಸ್‌ಡಿಎಂ ಆಸ್ಪತ್ರೆಯಿಂದ ಬೆಳಗಾವಿಯ ಕೆಎಲ್‌ಇ ಆಸ್ಪತ್ರೆಗೆ ಝೀರೋ ಟ್ರಾಫಿಕ್‌ನಲ್ಲಿ ಬಂತು ಹೃದಯ
ಬೆಳಗಾವಿ/ ಧಾರವಾಡ (ಜುಲೈ 11): ಹೃದ್ರೋಗದಿಂದ ಬಳಲುತ್ತಿದ್ದ 22 ವರ್ಷದ ಮುಸ್ಲಿಂ ಯುವಕನಿಗೆ ಅಪಘಾತದಲ್ಲಿ ಗಾಯಗೊಂಡು ಮಿದುಳು ನಿಷ್ಕ್ರಿಯಗೊಂಡಿದ್ದ 15 ವರ್ಷದ ಧಾರವಾಡ ಮೂಲದ ಹಿಂದೂ ಬಾಲಕಿಯ ಹೃದಯ ಕಸಿ ಮಾಡಲು ಇಲ್ಲಿಯ ಕೆಎಲ್‌ಇ ಸಂಸ್ಥೆಯ ಡಾ.ಪ್ರಭಾಕರ್ ಕೋರೆ ಆಸ್ಪತ್ರೆಗೆ ತರಲಾಗಿದೆ. ಇತ್ತೀಚಿನ ದಿನಗಳಲ್ಲಿ ನಡೆಯುತ್ತಿದ್ದ ಧರ್ಮ ದಂಗಲ್ ಮಧ್ಯೆ ಹಿಂದೂ - ಮುಸ್ಲಿಂ ಎಂಬ ಬೇದಭಾವವಿಲ್ಲದೇ ತಮ್ಮ ಮಗಳ ಹೃದಯ ದಾನ ಮಾಡುವ ಮೂಲಕ ನಮ್ಮ ದೇಶದಲ್ಲಿರುವ ಕೋಮು ಸೌಹಾರ್ದತೆ ಭಾವನೆಗೆ ಈ ಘಟನೆ ಸಾಕ್ಷಿಯಾಗಿದೆ.
ಧಾರವಾಡದ ಎಸ್‌ಡಿಎಂ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೆಂದ್ರದಲ್ಲಿ ಮಿದಳು ನಿಷ್ಕ್ರಿಯಗೊಂಡು ಜೀವನ್ಮರಣದ ನಡುವೆ ಹೋರಾಡುತ್ತಿದ್ದ 15 ವರ್ಷದ ಬಾಲಕಿ ತನ್ನ ಅಂಗಾಂಗಳನ್ನು ದಾನ ಮಾಡಿ 4 ಜನರ ಜೀವ ಉಳಿಸುವ ಮೂಲಕ ಇಡೀ ಸಮಾಜಕ್ಕೆ ಮಾದರಿಯಾಗಿದ್ದಾಳೆ. ಬಾಲಕಿಯ ಹೃದಯವನ್ನು ಕೆಎಲ್‌ಇ ಸಂಸ್ಥೆಯ ಡಾ.ಪ್ರಭಾಕರ ಕೋರೆ ಆಸ್ಪತ್ರೆಯಲ್ಲಿ ದಾಖಲಾಗಿರುವ ರೋಗಿಗೆ ಕಸಿ ಮಾಡಲು ಗ್ರೀನ್ ಕಾರಿಡಾರ್ (ಝೀರೋ ಟ್ರಾಫಿಕ್) ಮೂಲಕ ಧಾರವಾಡದಿಂದ ರಾಷ್ಟ್ರೀಯ ಹೆದ್ದಾರಿ 4ರ ಮೂಲಕ ತಗೆದುಕೊಂಡು ಬರಲಾಯಿತು.
ಕಿಡ್ನಿ ಹಾಗೂ ಲಿವರ್ ಕೂಡ ದಾನ: ಮಿದುಳು ನಿಷ್ಕ್ರಿಯಗೊಂಡ ಬಾಲಕಿಯ ಒಂದು ಕಿಡ್ನಿಯನ್ನು (Kidney) ಎಸ್‌ಡಿಎಂ ಆಸ್ಪತ್ರೆ (SDM Hospital) ಹಾಗೂ ಹುಬ್ಬಳ್ಳಿಯ ತತ್ವಾದರ್ಶ ಆಸ್ಪತ್ರೆಯಲ್ಲಿ (Hubballi Tatvadarsha Hospital) ಚಿಕಿತ್ಸೆ ಪಡೆಯುತ್ತಿದ್ದ ರೋಗಿಗೆ ಕಸಿ ಮಾಡಿದರೆ, ಲಿವರ್‌ಅನ್ನು ಬೆಂಗಳೂರಿನ ಶೇಷಾದ್ರಿಪುರಂನ ಅಪೋಲೊ ಆಸ್ಪತ್ರೆಗೆ (seshadripuram apollo Hospital) ಏರ್‌ಲಿಫ್ಟ್ ಮಾಡುವ ಮೂಲಕ ಕಳುಹಿಸಿ ಕೊಡಲಾಗಿದೆ. ಪೊಲೀಸರು ಸಂಪೂರ್ಣವಾಗಿ ಝೀರೋ ಟ್ರಾಫಿಕ್ ವ್ಯವಸ್ಥೆ ಕಲ್ಪಿಸುವ ಮೂಲಕ ಮಿದುಳು ನಿಷ್ಕ್ರಿಯಗೊಂಡ ಬಾಲಕಿಯ ಅಂಗಾಂಗಗಳನ್ನು ಸ್ಥಳಾಂತರಿಸಲು ಅವಕಾಶ ಕಲ್ಪಿಸಿಕೊಟ್ಟರು.
ಸ್ವಇಚ್ಛೆಯಿಂದ ದಾನ: ಮಿದಳು ನಿಷ್ಕ್ರಿಯಗೊಂಡಿದ್ದರೂ ಕೂಡ ಅಂಗಾಂಗಳು ಸಕ್ರಿಯವಾಗಿದ್ದವು. ಮಿದುಳು ನಿಷ್ಕ್ರಿಯಗೊಂಡ ಬಾಲಕಿಯ ತಂದೆ ತಾಯಿ, ಕುಟುಂಬ ಸದಸ್ಯರಿಗೆ ಆಪ್ತ ಸಮಾಲೋಚನೆ ಮಾಡಿ, ನಿಮ್ಮ ಬಾಲಕಿ ನೀಡುವ ಅಂಗಾಂಗ ಇನ್ನೊಬ್ಬರ ಜೀವ ಉಳಿಸುತ್ತದೆ ಎಂದು ಹೇಳಿದಾಗ, ಸ್ವಇಚ್ಚೆಯಿಂದ ಅಂಗಾಂಗಗಳನ್ನು ದಾನ ಮಾಡಲು ಒಪ್ಪಿದರು ಎಂಬುದು ತಿಳಿದು ಬಂದಿದೆ.
ಮಿದುಳು ನಿಷ್ಕ್ರಿಯಗೊಂಡ ಬಾಲಕಿಯ ಹೃದಯವನ್ನು ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಬೆಳಗಾವಿ ಮೂಲದ 22 ವರ್ಷದ ಯುವಕನಿಗೆ ಕಸಿ ಮಾಡುವಲ್ಲಿ ಡಾ.ರಿಚರ್ಡ್ ಸಾಲ್ಡಾನಾ, ಡಾ. ಮೋಹನ್ ಗಾನ, ಡಾ.ಆನಂದ ವಾಘರಾಳಿ ತಂಡವು ನಿರತವಾಗಿದೆ. 4 ರೋಗಿಗಳ ಜೀವ ಉಳಿಸುವ ಮೂಲಕ ಧಾರವಾಡ ಮೂಲದ ಬಾಲಕಿ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ಅತಿಯಾದ ಜನಸಂದಣಿ ಹಾಗೂ ಸಂಚಾರ ದಟ್ಟಣೆ ಇರುವ ರಸ್ತೆಯಲ್ಲಿ ಗ್ರೀನ್ ಕಾರಿಡಾರ್ ನಿರ್ಮಿಸಿ ಅಂಗಾಂಗಳನ್ನು ಶೀಘ್ರ ಸ್ಥಳಾಂತರಿಸಲು ಮಳೆಯಲ್ಲಿಯೇ ನೆನೆಯುತ್ತ ಅವಕಾಶ ಕಲ್ಪಿಸಿಕೊಟ್ಟ ಬೆಳಗಾವಿ ಹಾಗೂ ಹುಬ್ಬಳ್ಳಿ ಪೊಲೀಸರ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಬೆಳಗಾವಿಗೆ ತೆರಳಿತು ಜೀವಂತ ಹೃದಯ: ಮೆದುಳು ನಿಷ್ಕ್ರಿಯಗೊಂಡ ಹಿನ್ನೆಲೆಯಲ್ಲಿ ಯುವತಿಯೊಬ್ಬಳ ಅಂಗಾಂಗವನ್ನು ಆಕೆಯ ಪೋಷಕರು ದಾನ ಮಾಡುವ ಮೂಲಕ ಸಾರ್ಥಕತೆಯನ್ನ ಮೆರೆದಿದ್ದಾರೆ. ಅಷ್ಟೇ ಅಲ್ಲ ಆ ಯುವತಿ ಕೂಡ ಸಾರ್ಥಕತೆ ಮೆರೆದಿದ್ದಾಳೆ. ಉತ್ತರ ಕನ್ನಡ ಜಿಲ್ಲೆಯ ಯುವತಿಯೊಬ್ಬಳ ಮೆದುಳು ನಿಷ್ಕ್ರಿಯಗೊಂಡು ಸಾವು ಕಂಡಿದ್ದರು. ಹೀಗಾಗಿ ಅಗತ್ಯ ಇರುವವರಿಗೆ ಆಕೆಯ ಅಂಗಾಂಗ ದಾನ ಮಾಡಲು ಪೋಷಕರು ಮುಂದಾದರು. ಹೃದಯ, ಲಿವರ್ ಹಾಗೂ ಕಿಡ್ನಿಯನ್ನು ದಾನ ಮಾಡಿ ಸಾರ್ಥ ಕತೆಯನ್ನ ಮೆರೆದಿದ್ದಾರೆ..ಇನ್ನು ಅವಳಿ ನಗರದ ವಾಹನ ಸವಾರರು ರಸ್ತೆ ಬಿಟ್ಟು ಸಹಕರಿಸಿದ್ದಾರೆ.
Pig Heart Transplant: ಅಮೆರಿಕದಲ್ಲಿ ಹಂದಿ ಹೃದಯ ಕಸಿಗೊಳಗಾಗಿದ್ದ ವ್ಯಕ್ತಿ ಸಾವು!
ಯುವತಿಯ ಹೃದಯವನ್ನು ಧಾರವಾಡದ ಎಸ್‌ಡಿಎಂ ಆಸ್ಪತ್ರೆಯಿಂದ ಬೆಳಗಾವಿಯ ಕೆಎಲ್‌ಇ ಆಸ್ಪತ್ರೆಗೆ ಝೀರೋ ಟ್ರಾಫಿಕ್ ಮೂಲಕ ಕೊಂಡೊಯ್ಯಲಾಗಿದೆ. ಇದಕ್ಕೆ ಪೊಲೀಸ್ ಬೆಂಗಾವಲು ವಾಹನವನ್ನೂ ನೀಡಲಾಗಿತ್ತು. ಎಸ್ ಡಿ ಎಂ ನಿಂದ ಬಿಟ್ಟ ಅಂಬುಲೈನ್ಸ್, ವಿದ್ಯಾಗಿರಿ, ಜ್ಯೂಬಲಿ ಸರ್ಕಲ್, ಹೇಳೆ ಡಿ ಎಸ್ ಪಿ ಸರ್ಕಲ್, ಹೊಸ ಬಸ್ ನಿಲ್ದಾಣ ಮಾರ್ಗವಾಗಿ ರಾಷ್ಟೀಯ ಹೆದ್ದಾರಿ ನಾಲ್ಕರ ಮುಖಾಂತರ ಕಿತ್ತೂರು, ಮಾರ್ಗವಾಗಿ ಬೆಳಗಾವಿಗೆ ರವಾಣೆಯಾಗಿದೆ..
Genetically Modified Pigs: ಮಾನವ ಹೃದಯ ಕಸಿಗಾಗಿ ಕುಲಾಂತರಿ ಹಂದಿ ಅಭಿವೃದ್ಧಿ: ಜರ್ಮನ್ ಸಂಶೋಧಕರ ಹೊಸ ಪ್ರಯೋಗ!
ಇನ್ನು ಲಿವರ್‌ಅನ್ನು ಬೆಂಗಳೂರಿಗೆ ತೆಗೆದುಕೊಂಡು ಹೋದರೆ, ಒಂದು ಕಿಡ್ನಿಯನ್ನು ಎಸ್‌ಡಿಎಂ ಆಸ್ಪತ್ರೆಯಲ್ಲೇ ಒಬ್ಬರಿಗೆ ಕಸಿ ಮಾಡಲಾಗಿದೆ. ಇನ್ನೊಂದು ಕಿಡ್ನಿಯನ್ನು ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಒಟ್ಟಾರೆಯಾಗಿ ಧಾರವಾಡದ ಎಸ್‌ಡಿಎಂ ಆಸ್ಪತ್ರೆಯಿಂದ ಜೀವಂತ ಹೃದಯವನ್ನು ಬಿಆರ್‌ಟಿಎಸ್ ರಸ್ತೆಯಲ್ಲಿ ಝೀರೋ ಟ್ರಾಫಿಕ್ ಮೂಲಕಕೊಂಡೊಯ್ಯಲಾಗಿದ್ದು, ಧಾರವಾಡದ ಸಾರ್ವಜನಿಕರು ಅಂಬ್ಯುಲೆನ್ಸ್‌ಗೆ ದಾರಿ ಬಿಟ್ಟು ಸಹಕಾರ ಕೊಟ್ಟಿದ್ದಾರೆ.