ಎಸಿಬಿಗೆ ಕಳಂಕಿತರನ್ನ ನಿಯೋಜನೆ ಮಾಡಬೇಡಿ: ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ

Published : Jul 11, 2022, 07:17 PM ISTUpdated : Jul 11, 2022, 07:21 PM IST
ಎಸಿಬಿಗೆ ಕಳಂಕಿತರನ್ನ ನಿಯೋಜನೆ ಮಾಡಬೇಡಿ: ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ

ಸಾರಾಂಶ

ಭ್ರಷ್ಟಾಚಾರ ಪ್ರಕರಣದ ವೇಳೆ ಕರ್ನಾಟಕ ಹೈಕೋರ್ಟ್‌ ರಾಜ್ಯ ಸರ್ಕಾರಕ್ಕೆ ಖಡಕ್‌ ಸೂಚನೆ ನೀಡಿದ್ದು, ಎಸಿಬಿ ಎನ್ನುವುದು ರಾಜ್ಯದಲ್ಲಿ ಭ್ರಷ್ಟಾಚಾರವನ್ನು ನಿಯಂತ್ರಣ ಮಾಡುವ ಸಂಸ್ಥೆ, ಈ ಸಂಸ್ಥೆಗೆ ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವ ಅಥವಾ ಕಳಂಕಿತ ಅಧಿಕಾರಿಗಳನ್ನು ನೇಮಕ ಅಥವಾ ವರ್ಗಾವಣೆ ಮಾಡಬೇಡಿ ಎಂದು ಹೇಳಿದೆ.

ವರದಿ: ರಮೇಶ್‌.ಕೆಎಚ್‌,  ಏಷ್ಯಾನೆಟ್‌ ಸುವರ್ಣನ್ಯೂಸ್‌ 
ಬೆಂಗಳೂರು (ಜುಲೈ 11): ಎಸಿಬಿಗೆ ಕಳಂಕಿತ ಅಧಿಕಾರಿಗಳನ್ನ ನಿಯೋಜನೆ ಮಾಡಬೇಡಿ ಎಂದು ಡಿಸಿ ಕಚೇರಿಯಲ್ಲಿ ಭ್ರಷ್ಟಾಚಾರ ಪ್ರಕರಣದ ವಿಚಾರಣೆ ವೇಳೆ ಹೈಕೋರ್ಟ್ ಸರ್ಕಾರಕ್ಕೆ ಖಡಕ್ ನಿರ್ದೇಶನ ಮಾಡಿದೆ. ಎಸಿಬಿ ಭ್ರಷ್ಟಾಚಾರ ನಿಯಂತ್ರಣ ಮಾಡುವ ಸಂಸ್ಥೆಯಾಗಿದ್ದು, ಕಳಂಕ ಇರುವ ಅಧಿಕಾರಿಗಳನ್ನ ಅಲ್ಲಿಗೆ ವರ್ಗಾವಣೆ ಮಾಡಬೇಡಿ ಎಂದು ಮುಖ್ಯ ಕಾರ್ಯದರ್ಶಿ, ಡಿಪಿಎಆರ್ ಎಸಿಎಸ್‌ಗೆ ಹೈಕೋರ್ಟ್ ನಿರ್ದೇಶಿಸಿದೆ. ಎಸಿಬಿ ಎಡಿಜಿಪಿ ಸೀಮಂತ್ ಕುಮಾರ್ ಅವರು ತಮ್ಮ ವಿರುದ್ಧ ಯಾವುದೇ ಟೀಕೆ ಮಾಡದಂತೆ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಅರ್ಜಿ ಮಾಹಿತಿಯನ್ನ ಎಸಿಬಿ ಪರ ವಕೀಲರು ಮಾಹಿತಿ ನೀಡಿದರು.. ಅಧಿಕಾರಿಯ ವಿರುದ್ಧ ಯಾವುದೇ ವೈಯಕ್ತಿಯ ದ್ವೇಷ ಇಲ್ಲ ಎಂದು ಸ್ಪಷ್ಟಪಡಿಸಿದ ನ್ಯಾಯಮೂರ್ತಿಗಳು, ತಮಗೆ ಬಂದ ಬೆದರಿಕೆಯ ಬಗ್ಗೆಯೂ ಪ್ರಸ್ತಾಪಿಸಿದರು. ಮುಖ್ಯ ನ್ಯಾಯಾಮೂರ್ತಿ ಆಗಿದ್ದ ರಿತುರಾಜ್ ಆವಸ್ಥಿ ಅವರ ಬೀಳ್ಕೋಡುಗೆ ಸಮಾರಂಭದಲ್ಲಿ ನಾಯಾಮೂರ್ತಿಯೊಬ್ಬರು ಹೇಳಿದ ವಿಷಯ ಪ್ರಸ್ತಾಪಿಸಿದರು. ಜುಲೈ 1 ರಂದು ರಾತ್ರಿ ಭೋಜನದ  ವೇಳೆ ಹಾಲಿ ನ್ಯಾಯಮೂರ್ತಿಯೊಬ್ಬರು ಬಂದು ನನ್ನ ಪಕ್ಕದಲ್ಲಿ ಕುಳಿತರು. ದೆಹಲಿಯಿಂದ ನನಗೆ ಒಂದು ಕರೆ ಬಂದಿದೆ, ಆ ವೇಳೆ ನಿಮ್ಮ ವಿಚಾರಿಸಿದ್ದರು ಎಂದು ಹೇಳಿದರು. ನಾನು ಯಾವ ಪಕ್ಷಕ್ಕೂ ಸೇರಿದವನನ್ನ ಎಂದು ಹೇಳಿದೆ. 

ಅಲ್ಲದೆ ಆ ಎಡಿಜಿಪಿ ಉತ್ತರ ಭಾರತದವರು ತುಂಬಾ ಪ್ರಭಾವಿ ಎಂದು ಹೇಳಿದ ಅವರು, ನ್ಯಾಯಮೂರ್ತಿಯೊಬ್ಬರ ವರ್ಗಾವಣೆ ವಿಚಾರವನ್ನೂ ಹೇಳಿದ್ರು ಎಂದು ನ್ಯಾ.ಹೆಚ್.ಪಿ ಸಂದೇಶ್ ಉಲ್ಲೇಖಿಸಿದರು. ಎಸಿಬಿ  ಎಡಿಜಿಪಿ (ACB ADGP) ಸೀಮಂತ್ ಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ್ದ ಹೈಕೋರ್ಟ್ (Karnataka High Court), ಅವರ ವಿರುದ್ಧದ ಸಿಬಿಐ ಪ್ರಕರಣದ (cbi investigation) ತನಿಖಾ ವರದಿಯನ್ನ ತರಿಸಿಕೊಂಡಿದೆ. ಇಂದು ಸಿಬಿಐ ಪರ ವಕೀಲ ಪ್ರಸನ್ನ ಕುಮಾರ್ ವರದಿ ಸಲ್ಲಿಸಿ ತನಿಖೆಯ ಪ್ರಗತಿ ಬಗ್ಗೆ ನ್ಯಾಯಪೀಠಕ್ಕೆ ವಿವರಣೆ ನೀಡಿದರು.

ಇದನ್ನೂ ಓದಿ: Exclusive: ಏನಾಗ್ತಿದೆ ಎಸಿಬಿ ದಾಳಿಗಳು, ಎತ್ತ ಸಾಗುತ್ತಿದೆ ತನಿಖೆಗಳು..? ಅಸಲಿ ಕಹಾನಿ ಇದು

ಸೀಮಂತ್ ಕುಮಾರ್ ಪರವಾಗಿ ಯಾವುದೇ ಅರ್ಜಿ ಸಲ್ಲಿಸದೇ ವಾದಕ್ಕೆ ಮುಂದಾದ ಮಾಜಿ ಅಡ್ವೋಕೇಟ್ ಜನರಲ್ ಅಶೋಕ್ ಹಾರನಹಳ್ಳಿ ಅವರ ವಾದಕ್ಕೆ ನ್ಯಾಯಪೀಠ ಅವಕಾಶ ತಳ್ಳಿ ಹಾಕಿತು. ಅಧಿಕೃತವಾಗಿ ಅರ್ಜಿ ಸಲ್ಲಿಸುವುದು ಸರಿಯಲ್ಲ. ಅಲ್ಲದೆ ಎಸಿಬಿ ರದ್ದು ಮಾಡಿ ಲೋಕಾಯುಕ್ತಕ್ಕೆ ಅಧಿಕಾರ ನೀಡುವಂತೆ ವಾದ ಮಂಡಿಸುತ್ತಿರುವ ಅಶೋಕ್ ಹಾರನಹಳ್ಳಿ ಇಲ್ಲಿ ಎಸಿಬಿ ಎಡಿಜಿಪಿ ಪರ ವಾದ ಮಂಡನೆ ಮುಂದಾಗಿರುವುದು ವಿರೋಧಾಭಾಸ ಎಂದು ನ್ಯಾಯಮೂರ್ತಿ ಹೆ.ಪಿ.ಸಂದೇಶ್ ಕಾಲೆಳೆದರು.

ಇದನ್ನೂ ಓದಿ: Bengaluru: ಭೂ ವಿವಾದ ಮುಕ್ತಾಯಗೊಳಿಸಲು ಲಂಚ: ಬಿಎಂಟಿಎಫ್‌ ಎಸ್‌ಐ ಬಲೆಗೆ

ಸದ್ಯ ಎಸಿಬಿ ಆರಂಭವಾದಗಿನಿಂದಲೂ ದಾಖಲಾಗಿರುವ ಎಲ್ಲಾ ಪ್ರಕರಣಗಳ ಮಾಹಿತಿಯನ್ನ ಹೈಕೋರ್ಟ್ ಕೇಳಿದ್ದು ಮುಚ್ಚಿದ ಲಕೋಟೆಯಲ್ಲಿ ಮಾಹಿತಿ ಸಲ್ಲಿಸಲಾಯ್ತು. ಪ್ರಗತಿ ವರದಿಯನ್ನ ಪಡೆದು ಮುಂದಿನ ವಿಚಾರಣೆ ವೇಳೆ  ಸಲ್ಲಿಸುವಂತೆ ಸೂಚಿಸಿ ವಿಚಾರಣೆಯನ್ನ ಜು.13ಕ್ಕೆ ಮುಂದೂಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
ಬೆಳಗಾವಿ ಸುವರ್ಣ ಸೌಧ ಮುತ್ತಿಗೆಗೆ ಬಿಜೆಪಿ ಯತ್ನ; ವಿಜಯೇಂದ್ರ, ಅಶೋಕ ಸೇರಿ 50ಕ್ಕೂ ಅಧಿಕ ನಾಯಕರು ವಶಕ್ಕೆ