
ಬೆಂಗಳೂರು(ಮೇ.03): ರಾಜ್ಯದ ಗಡಿ ಬಗ್ಗೆ ಸರ್ಕಾರದ ನಿಲುವು ಬಹಳ ಸ್ಪಷ್ಟವಾಗಿದ್ದು, ರಾಜ್ಯದ ಗಡಿ ಪ್ರದೇಶದ ಒಂದಿಂಚೂ ಜಾಗವನ್ನು ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಸ್ಪಷ್ಟಪಡಿಸಿದ್ದಾರೆ.
ಸೋಮವಾರ ವಿಧಾನಸೌಧದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಮಹಾರಾಷ್ಟ್ರದಲ್ಲಿನ(Maharashtra) ರಾಜಕಾರಣಿಗಳು ಇಕ್ಕಟ್ಟಿನಲ್ಲಿ ಸಿಲುಕಿದ್ದಾರೆ. ಅದಕ್ಕಾಗಿ ರಾಜ್ಯದ ಗಡಿ-ಭಾಷೆಗಳ ಬಗ್ಗೆ ಕೆದಕುತ್ತಿದ್ದಾರೆ. ಮಹಾರಾಷ್ಟ್ರದಲ್ಲಿ ಹಲವಾರು ಕನ್ನಡ ಭಾಷೆ ಮಾತನಾಡುವ ಪ್ರದೇಶಗಳಿವೆ. ಅವುಗಳನ್ನು ಹೇಗೆ ತೆಗೆದುಕೊಳ್ಳಬೇಕು ಎಂಬುದರ ಚಿಂತನೆ ಸರ್ಕಾರ ಮಾಡುತ್ತಿದೆ. ಅವರ ರಾಜಕೀಯ(Politics) ಉಳಿವಿಗಾಗಿ ರಾಜ್ಯದ ಗಡಿ-ಭಾಷೆ ವಿಚಾರಗಳನ್ನು ಎತ್ತುವುದು ಸಣ್ಣತನ. ಅದನ್ನು ಕೈಬಿಡಬೇಕು ಎಂದು ಹೇಳಿದರು.
ಅಜಿತ್ ಪವಾರ್‌ದು ಚೀನಾದ ಆಕ್ರಮಣಶೀಲ ಮನಸ್ಥಿತಿ: ಹೆಚ್.ಡಿ.ಕುಮಾರಸ್ವಾಮಿ ತಿರುಗೇಟು
ಮರಾಠಿ ಮಾತನಾಡುವ ಜನರು ಇರುವ ಕರ್ನಾಟಕದ(Karnataka) ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರಿಸುವವರೆಗೂ ಅಲ್ಲಿನ ಜನರ ಹೋರಾಟಕ್ಕೆ ಬೆಂಬಲ ನೀಡುವುದಾಗಿ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಹೇಳಿದ್ದರು. ಅದಕ್ಕೆ ಬೊಮ್ಮಾಯಿ ಈ ರೀತಿ ತಿರುಗೇಟು ನೀಡಿದ್ದಾರೆ.
ಮಹಾಗೆ ಬೆಳಗಾವಿ ಸೇರಿಸಿ ನಕ್ಷೆ: ಮತ್ತೆ ಎಂಇಎಸ್ ಕಿರಿಕ್
ಬೆಳಗಾವಿ: ಮರಾಠಿ(Marathi) ಭಾಷಿಕ ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರಿಸುವ ಮಹಾ ಡಿಸಿಎಂ ಅಜಿತ್ ಪವಾರ್ ಹೇಳಿಕೆ ಬೆನ್ನಲ್ಲೇ ಎಂಇಎಸ್(MES) ಉದ್ಧಟತನ ಮೆರೆದಿದೆ. ಬೆಳಗಾವಿ, ನಿಪ್ಪಾಣಿ, ಕಾರವಾರ, ಬೀದರ್, ಭಾಲ್ಕಿಯನ್ನು ಸೇರ್ಪಡೆ ಮಾಡಿ ಸಂಯುಕ್ತ ಮಹಾರಾಷ್ಟ್ರ ನಕ್ಷೆಯನ್ನು ಸಾಮಾಜಿಕ ಜಾಲತಾಣದಲ್ಲಿ ಎಂಇಎಸ್ ನಾಯಕ ಶುಭಂ ಶೆಳಕೆ ಪೋಸ್ಟ್ ಮಾಡಿದ್ದು, ವಿವಾದಕ್ಕೆ ಕಾರಣವಾಗಿದೆ.
ಅಜಯ್ ದೇವಗನ್ ವಿವಾದ: ‘ಹಿಂದಿ ರಾಷ್ಟ್ರ ಭಾಷೆ’ ಅಲ್ಲ, ಕನ್ನಡಿಗರ ಗರ್ಜನೆ
ಮಹಾ ಡಿಸಿಎಂ ಪವಾರ್ ಗಡಿ ಕ್ಯಾತೆ ಕನ್ನಡಿಗರ ಆಕ್ರೋಶ
ಪುಣೆ: ಪ್ರತಿವರ್ಷದಂತೆ ಮಹಾರಾಷ್ಟ್ರದ ಮುಖ್ಯಮಂತ್ರಿ ಅಜಿತ್ ಪವಾರ್ ಮತ್ತೊಮ್ಮೆ ಕರ್ನಾಟಕದೊಂದಿಗೆ ಗಡಿ-ಕ್ಯಾತೆ ತೆಗೆದಿದ್ದಾರೆ. ಮಹಾರಾಷ್ಟ್ರ ಸಂಸ್ಥಾಪನಾ ದಿನದ ಅಂಗವಾಗಿ ಪುಣೆಯಲ್ಲಿ ಭಾನುವಾರ ಮಾತನಾಡಿದ ಅವರು ಮರಾಠಿ ಮಾತನಾಡುವ ಜನರು ನೆಲೆಸಿರುವ ಕರ್ನಾಟಕದ ಗಡಿಭಾಗವನ್ನು ಮಹಾರಾಷ್ಟ್ರಕ್ಕೆ ಸೇರಿಸುವವರೆಗೂ ಅವರ ಹೋರಾಟಕ್ಕೆ ಬೆಂಬಲ ನೀಡುವುದಾಗಿ ಹೇಳಿದ್ದರು.
‘ಮಹಾರಾಷ್ಟ್ರ ಸಂಸ್ಥಾಪನೆಯ 62 ನೇ ವರ್ಷ ಆಚರಿಸುತ್ತಿದ್ದರೂ ಮರಾಠಿ ಭಾಷಿಕರು ವಾಸವಾಗಿರುವ ಕರ್ನಾಟಕದ ಬೀದರ್, ಭಾಲ್ಕಿ, ಬೆಳಗಾವಿ, ಕಾರವಾರ, ನಿಪ್ಪಾಣಿ ಹಾಗೂ ಇನ್ನಿತರ ಪ್ರದೇಶಗಳು ಮಹಾರಾಷ್ಟ್ರದಲ್ಲಿ ಇನ್ನೂ ಸೇರ್ಪಡೆಯಾಗಿಲ್ಲ ಎಂಬುದು ವಿಷಾದನೀಯ. ಮಹಾರಾಷ್ಟ್ರದ ಸರ್ಕಾರ ಹಾಗೂ ಜನತೆ ಕರ್ನಾಟಕದ ಗಡಿಭಾಗದಲ್ಲಿರುವ ಮರಾಠಿ ಭಾಷಿಕರ ಹೋರಾಟಕ್ಕೆ ಬೆಂಬಲ ಸೂಚಿಸುತ್ತೇವೆ. ಕರ್ನಾಟಕದ ಮರಾಠಿ ಭಾಷಿಕ ಗ್ರಾಮಗಳು ಕರ್ನಾಟಕದ ಭಾಗವಾಗುವವರೆಗೂ ಬೆಂಬಲ ಮುಂದುವರೆಯಲಿದೆ’ ಎಂದು ಹೇಳಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ