ರಾಮಜ್ಯೋತಿ ಬೆಳಗಿಸಲು ವಿರೋಧ ಮಾಡುವ ಪ್ರಶ್ನೆ ಇಲ್ಲ, ಯಾರಿಗೆ ಇಷ್ಟವಿದೆ ಅವರು ಹಚ್ಚುತ್ತಾರೆ, ಯಾರಿಗೆ ಇಷ್ಟವಿಲ್ಲ ಅವರು ಬಿಡುತ್ತಾರೆ. ಕರೆ ನೀಡೋದು ಸ್ವಾಭಾವಿಕ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ಗದಗ (ಜ.01): ರಾಮಜ್ಯೋತಿ ಬೆಳಗಿಸಲು ವಿರೋಧ ಮಾಡುವ ಪ್ರಶ್ನೆ ಇಲ್ಲ, ಯಾರಿಗೆ ಇಷ್ಟವಿದೆ ಅವರು ಹಚ್ಚುತ್ತಾರೆ, ಯಾರಿಗೆ ಇಷ್ಟವಿಲ್ಲ ಅವರು ಬಿಡುತ್ತಾರೆ. ಕರೆ ನೀಡೋದು ಸ್ವಾಭಾವಿಕ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು. ಅವರು ರಾತ್ರಿ ಗದಗ ನಗರದಲ್ಲಿ ಜನವರಿ 22ರಂದು ದೇಶಾದ್ಯಂತ ದೀಪಾವಳಿ ಹಬ್ಬದಂತೆ ಮನೆ ಮನೆಗಳಲ್ಲಿ ರಾಮಜ್ಯೋತಿ ಬೆಳಗಿಸುವಂತೆ ಪ್ರಧಾನಿ ಮೋದಿ ಕರೆ ಕುರಿತ ಪ್ರಶ್ನೆಗೆ ಉತ್ತರಿಸಿದರು.
ಶ್ರೀ ರಾಮ ಮಂದಿರ ಲೋಕಾರ್ಪಣೆಗೆ ಸಿಎಂ ಅವರಿಗೆ ಆಹ್ವಾನ ಬಂದಿಲ್ಲ ಎಂದು ಹೇಳಿರುವ ಕುರಿತು ಪ್ರಶ್ನೆಗೆ ಉತ್ತರಿಸಿ, ಇನ್ನೂ ಟೈಮ್ ಇದೆಯಲ್ಲ, ಯಾಕೆ ಅಷ್ಟೊಂದು ಅರ್ಜೆಂಟ್ ಎಂದರು. ಉದ್ಧವ್ ಠಾಕ್ರೆ ಸೇರಿದಂತೆ ಹಲವರಿಗೆ ಆಹ್ವಾನ ಬಂದಿಲ್ಲ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, ಅವರವರ ಊರಲ್ಲಿ ರಾಮ ಮಂದಿರ ಇವೆಯಲ್ಲ, ಅಲ್ಲಿಯೇ ಪೂಜೆ ಮಾಡುತ್ತಾರೆ. ಅಯೋಧ್ಯೆಗೆ ಹೋಗಬೇಕೆಂದಿಲ್ಲ, ಎಲ್ಲ ಊರಲ್ಲಿ ರಾಮ ಮಂದಿರ ಇವೆ, ಅವರು ಅಯೋಧ್ಯೆಯಲ್ಲಿ ಮಾಡಿದರೆ ನಾವು ಇಲ್ಲಿಯೇ ಮಾಡುತ್ತೇವೆ ಎಂದು ಮಾರ್ಮಿಕವಾಗಿ ಮಾತನಾಡಿದರು.
undefined
ಪಕ್ಷದ ಆಗುಹೋಗು ಬಗ್ಗೆ ಸಾರ್ವಜನಿಕ ಚರ್ಚೆ ಬೇಡ: ಪ್ರಲ್ಹಾದ್ ಜೋಶಿ
ಶ್ರೀ ರಾಮ ಮಂದಿರ ರಾಜಕೀಯವಾಗಿ ಬಳಕೆ ವಿಚಾರ ಕುರಿತು ಮಾತನಾಡಿ ಅವರು, ರಾಜಕೀಯ ಬಳಕೆ ವಿಷಯ ಚುನಾವಣೆಯಾದ ಮೇಲೆ ಗೊತ್ತಾಗುತ್ತದೆ. ಪರ ಮಾಡುತ್ತಾರೆ. ವಿರೋಧ ಮಾಡುತ್ತಾರೆ ಎನ್ನುವದು ಚುನಾವಣೆ ಮುಗಿದ ಮೇಲೆ ಗೊತ್ತಾಗುತ್ತೆ. ರಾಜಕೀಯ ರಹಿತ ಇರಬೇಕು ಎನ್ನುವದು ನಮ್ಮ ಆಶಯ. ಶ್ರೀ ರಾಮ ಮಂದಿರ ದೇಶದ ಸಂಕೇತವಾಗಿ ಇರಬೇಕು ಎನ್ನುವುದು ನಮ್ಮ ಆಸೆಯಾಗಿದೆ. ಯಾವುದೇ ಒಂದು ಪೊಲಿಟಿಕಲ್ ಪಾರ್ಟಿ ಹೈಜಾಕ್ ಮಾಡಬಾರದು. ಏನಾಗುತ್ತೇ ಎನ್ನುವುದನ್ನು ಕಾದು ನೋಡಬೇಕು ಎಂದರು.
ಲೊಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರಿಂದ ರಸ್ತೆ ಕಾಮಗಾರಿ ವೀಕ್ಷಣೆ: ಲೊಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳಿ ಶನಿವಾರ ಸಂಜೆ ಶಿರಹಟ್ಟಿ ವಿಧಾನ ಸಭಾ ಮತಕ್ಷೇತ್ರದ ಬಂಕಾಪುರ-ಲಕ್ಷ್ಮೇಶ್ವರ ರಸ್ತೆ ಕಾಮಗಾರಿಗಳನ್ನು ವೀಕ್ಷಿಸಿದರು. ನಂತರ ಮಾತನಾಡಿದ ಶಿರಹಟ್ಟಿ, ಲಕ್ಷ್ಮೇಶ್ವರ ತಾಲೂಕುಗಳಲ್ಲಿ ಹದಗೆಟ್ಟಿರುವ ರಸ್ತೆಗಳ ಕುರಿತು ಶಾಸಕ ಡಾ.ಚಂದ್ರು ಲಮಾಣಿ ಗಮನ ಸೆಳೆದಿದ್ದು, ಹಂತ ಹಂತವಾಗಿ ರಸ್ತೆ ಅಭಿವೃದ್ದಿ ಪಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ರಸ್ತೆ ಮೇಲ್ದರ್ಜೆಗೇರಿಸಲು ಕೇಂದ್ರ ಸರಕಾರಕ್ಕೆ ವಿನಂತಿ ಮಾಡಲಾಗುವದು ಎಂದರು.
ಕೈಗಾ ಇಳಕಲ್ ರಾಜ್ಯ ಹೆದ್ದಾರಿ ವೀಕ್ಷಿಸುತ್ತಿದ್ದ ಸಚಿವ ಸತೀಶ ಜಾರಕಿಹೊಳಿ ಮೊದಲು ಮಳೆಗಾಲದ ಸಂದರ್ಭದಲ್ಲಿ ಅನೇಕ ಅಪಘಾತಗಳ ತಾಣವಾಗಿ ಮಾರ್ಪಟ್ಟಿರುವ ಯಲವಿಗಿ ರೈಲ್ವೆ ಕೆಳ ಸೇತುವೆ ನೋಡಿ ಕೂಡಲೇ ರಾಜ್ಯ ಸರಕಾರದಿಂದ ಕೇಂದ್ರಕ್ಕೆ ಪತ್ರ ಬರೆದು ಮೇಲ್ಸೆತುವೇ ನಿರ್ಮಿಸಲು ಮನವಿ ಮಾಡಲಾಗುವದು. ರಸ್ತೆ ಪರಿಸ್ಥಿತಿಯನ್ನು ವೀಕ್ಷಿಸಿದ ಸಚಿವರು ಅದರ ಸುಧಾರಣೆಗೆ ಸರಕಾರದಿಂದ ವಿಶೇಷ ಅನುಧಾನ ಬಿಡುಗಡೆಗೊಳಿಸುವ ಭರವಸೆ ನೀಡಿದರು.
ಸಾಮಾಜಿಕ ಶಕ್ತಿ ತುಂಬುವ ಕೆಲಸವನ್ನು ಸರ್ಕಾರ ಮಾಡುತ್ತಿದೆ: ಸಿದ್ದರಾಮಯ್ಯ
ನಂತರ ಗದಗ ಪರಿವೀಕ್ಷಣಾ ಮಂದಿರದಲ್ಲಿ ಪತ್ರಕರ್ತರೊಡನೆ ಮಾತನಾಡುತ್ತಾ ಇಲಾಖೆ ವತಿಯಿಂದ ಕಾಮಗಾರಿಗಳನ್ನು ನಿರ್ವಹಿಸಲು 4 ಸಾವಿರ ಕೋಟಿ ಅನುದಾನ ಸರಕಾರದ ಹಂತದಲ್ಲಿ ಇದ್ದು, ಮಂಜೂರಾತಿ ನೀಡಿದ ತಕ್ಷಣ ಗದಗ ಜಿಲ್ಲೆಯ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಆದ್ಯತೆ ಮೇರೆಗೆ ಅನುದಾನ ಒದಗಿಸಲಾಗುವದು ಎಂದರು. ಈ ಸಂದರ್ಭದಲ್ಲಿ ಶಾಸಕರಾದ ಜಿ.ಎಸ್.ಪಾಟೀಲ, ಬಿ.ಬಿ.ಅಸೂಟಿ ಉಪಸ್ಥಿತರಿದ್ದರು.