ದೊಡ್ಡಮೇಟಿ ಸಮಾಧಿ ಅಭಿವೃದ್ಧಿಪಡಿಸಿ ಅವಿಸ್ಮರಣೀಯ ಸ್ಮಾರಕ ನಿರ್ಮಾಣ: ಸಚಿವ ಎಚ್.ಕೆ.ಪಾಟೀಲ್‌

By Kannadaprabha News  |  First Published Dec 31, 2023, 8:23 PM IST

ಕರ್ನಾಟಕದ ಏಕೀಕರಣದ ರೂವಾರಿ, ಸ್ವಾತಂತ್ರ್ಯ ಹೋರಾಟಗಾರ ದಿ. ಅಂದಾನೆಪ್ಪ ದೊಡ್ಡಮೇಟಿ ಅವರ ಸಮಾಧಿ ಸ್ಥಳವನ್ನು ಅಭಿವೃದ್ಧಿ ಪಡಿಸಿ ಅವಿಸ್ಮರಣೀಯ ಸ್ಮಾರಕ ನಿರ್ಮಿಸಲಾಗುವುದು ಎಂದು ರಾಜ್ಯ ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರ, ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಇಲಾಖೆ ಸಚಿವ ಡಾ. ಎಚ್.ಕೆ.ಪಾಟೀಲ್‌ ಹೇಳಿದರು.


ಗದಗ (ಡಿ.31): ಕರ್ನಾಟಕದ ಏಕೀಕರಣದ ರೂವಾರಿ, ಸ್ವಾತಂತ್ರ್ಯ ಹೋರಾಟಗಾರ ದಿ. ಅಂದಾನೆಪ್ಪ ದೊಡ್ಡಮೇಟಿ ಅವರ ಸಮಾಧಿ ಸ್ಥಳವನ್ನು ಅಭಿವೃದ್ಧಿ ಪಡಿಸಿ ಅವಿಸ್ಮರಣೀಯ ಸ್ಮಾರಕ ನಿರ್ಮಿಸಲಾಗುವುದು ಎಂದು ರಾಜ್ಯ ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರ, ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಇಲಾಖೆ ಸಚಿವ ಡಾ. ಎಚ್.ಕೆ.ಪಾಟೀಲ್‌ ಹೇಳಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರ ಜರುಗಿದ ದಿ. ಅಂದಾನೆಪ್ಪ ದೊಡ್ಡಮೇಟಿ ಅವರ ಸಮಾಧಿ ಅಭಿವೃದ್ಧಿ ಪಡಿಸುವ ಸಭೆಯ ಅಧ್ಯಕ್ಷತೆಯ ವಹಿಸಿ ಅವರು ಮಾತನಾಡಿ, ದಿ. ಅಂದಾನೆಪ್ಪ ದೊಡ್ಡಮೇಟಿ ಅವರು ಕರ್ನಾಟಕ ಏಕೀಕರಣಕ್ಕೆ ಹಾಗೂ ಸ್ವಾತಂತ್ರ್ಯ ಹೋರಾಟ ಸಂಗ್ರಾಮದಲ್ಲಿ ತಮ್ಮದೇ ಆದಂತಹ ಕೊಡುಗೆ ನೀಡಿದ್ದಾರೆ. ಅವರ ಜೀವನದುದ್ದಕ್ಕೂ ಪ್ರಾಮಾಣಿಕತೆ, ನಿಸ್ವಾರ್ಥ ಸೇವೆ ಮೂಲಕ ಹೆಸರುವಾಸಿ ಆಗಿದ್ದಾರೆ. ಅವರ ಸಮಾಧಿ ಸ್ಥಳ ಅಭಿವೃದ್ಧಿಗೆ ಸರ್ಕಾರ ಮುಂದಾಗಿದ್ದು ಇದೊಂದು ಪ್ರವಾಸಿ ತಾಣವಾಗಿ ಹೊರಹೊಮ್ಮಲಿ ಎಂಬ ಸದಾಶಯ ಹೊಂದಿದ್ದೇವೆ ಎಂದರು.

Latest Videos

undefined

ಹೊಸ ವರ್ಷಾಚರಣೆಗೆ ಕಾಫಿನಾಡಿನತ್ತ ಪ್ರವಾಸಿಗರ ದಂಡು: ಹೋಂ ಸ್ಟೇ, ರೆಸಾರ್ಟ್ ಹೌಸ್‌ಫುಲ್!

ಪ್ರಥಮ ಹಂತದಲ್ಲಿ ಅಂದಾನೆಪ್ಪ ದೊಡ್ಡಮೇಟಿ ಅವರ ಪುತ್ಥಳಿ, ಉತ್ತಮ ಗ್ರಂಥಾಲಯ, ಉದ್ಯಾನವನ, ಸಾಂಸ್ಕೃತಿಕ ಭವನ ಹಾಗೂ ಅಪರೂಪದ ಛಾಯಾಚಿತ್ರಗಳ ಪ್ರದರ್ಶನ ಸಂಗ್ರಹ ಮಾಡಿ ಅವುಗಳನ್ನು ಜನಸಾಮಾನ್ಯರಿಗೆ ಪ್ರದರ್ಶಿಸಲು ಕ್ರಮ ಕೈಗೊಳ್ಳಲಾಗುವುದು. ಈ ಬಗ್ಗೆ ಉತ್ತಮವಾದ ೩-೪ ಪರಿಕಲ್ಪನೆಗಳನ್ನು ರೂಪಿಸಿ ಅದಕ್ಕೆ ಪರಿಣಿತ ಆರ್ಕಿಟೆಕ್‌ರಿಂದ ನೀಲನಕ್ಷೆ ಶೀಘ್ರವೇ ರೂಪಿಸಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. ರೋಣ ಶಾಸಕ ಜಿ.ಎಸ್. ಪಾಟೀಲ ಮಾತನಾಡಿದರು.

ಕರ್ನಾಟಕದ ಏಕೀಕರಣದ ರೂವಾರಿ ದಿ. ಅಂದಾನೆಪ್ಪ ದೊಡ್ಡಮೇಟಿ ಅವರ ಸ್ಮಾರಕ ಭವನ ನಿರ್ಮಾಣ ಕಾರ್ಯಕ್ಕೆ ಪ್ರೋತ್ಸಾಹಿಸಿ ಅಗತ್ಯ ಸಹಕಾರ ನೀಡಿದ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವ ಎಚ್.ಕೆ. ಪಾಟೀಲರಿಗೆ ಅಭಿನಂದನೆ. ಸರ್ಕಾರದ ಈ ನಿರ್ಧಾರ ಈ ಭಾಗದ ಅಂದಾನೆಪ್ಪ ದೊಡ್ಡಮೇಟಿ ಅವರ ಅಭಿಮಾನಿಗಳಲ್ಲಿ ಹೊಸ ಹುಮ್ಮಸ್ಸು ತಂದಿದೆ. ಇದರಿಂದ ಮುಂದಿನ ಪೀಳಿಗೆಗೆ ಅಂದಾನೆಪ್ಪ ದೊಡ್ಡಮೇಟಿ ಅವರ ಹೋರಾಟ, ಜೀವನ ಪರಿಚಯಿಸಲು ಸಾಧ್ಯ ಎಂದು ತಿಳಿಸಿದರು. ಸಭೆಯಲ್ಲಿ ಪಾಲ್ಗೊಂಡು ಗಣ್ಯರು ತಮ್ಮ ಅಭಿಪ್ರಾಯಗಳನ್ನು ಸಭೆಯ ಗಮನಕ್ಕೆ ತರುವ ಮೂಲಕ ಉತ್ತಮ ಸ್ಮಾರಕ ಭವನ ಇದಾಗಲಿ ಎಂದರು.

ಸತ್ಯದ ತಳಹದಿ ಸರ್ವರ ಒಳಿತು ಇರುವುದೇ ಧರ್ಮ: ಮಾಜಿ ಶಾಸಕ ಸಿ.ಟಿ.ರವಿ

ಜಿಲ್ಲಾಧಿಕಾರಿ ವೈಶಾಲಿ.ಎಂ.ಎಲ್, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ, ಉಪವಿಭಾಗಾಧಿಕಾರಿ ಡಾ. ವೆಂಕಟೇಶ ನಾಯ್ಕ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ಬಸವರಾಜ ಹೂಗಾರ, ಸಹಾಯಕ ನಿರ್ದೇಶಕ ವೀರಯ್ಯಸ್ವಾಮಿ ಹಿರೇಮಠ, ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಶರಣು ಗೋಗೇರಿ, ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಕೋಟ್ರೆಶ ವಿಭೂತಿ, ವಾರ್ತಾಧಿಕಾರಿ ವಸಂತ ಮಡ್ಲೂರ, ಗಣ್ಯರಾದ ವಿವೇಕಾನಂದಗೌಡ ಪಾಟೀಲ, ಪ್ರೊ. ಎಚ್.ಎಸ್‌. ಹುಡೇದ, ರವೀಂದ್ರನಾಥ ದೊಡ್ಡಮೇಟಿ, ಚನ್ನಬಸವ ದೊಡ್ಡಮೇಟಿ, ಸಂದೇಶ ದೊಡ್ಡಮೇಟಿ, ಎಂ.ಎಸ್. ದಡೇಸೂರಮಠ, ಅ.ದ. ಕಟ್ಟಿಮನಿ, ಗಂಗವ್ವ ಜಂಗನ್ನವರ, ಮಲ್ಲಿಕಾರ್ಜುನ ಮೇಟಿ, ಕೆ.ಸಿ.ಕೇಸರಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

click me!