Panchamasali: ಮೀಸಲಾತಿ ಹೋರಾಟ ಮುಗಿದು ಹೋದ ಕಥೆ: ಕೆ.ಎಸ್. ಈಶ್ವರಪ್ಪ

By Sathish Kumar KH  |  First Published Jan 14, 2023, 1:12 PM IST

ರಾಜ್ಯದಲ್ಲಿ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಹೋರಾಟ  ಮುಗಿದು ಹೋದ ಕಥೆಯಾಗಿದೆ. ಪ್ರೀಡಂ ಪಾರ್ಕ್ ನಲ್ಲಿ ಹೋರಾಟ  ಮಾಡುವ ಆಸೆ ಇದೆ. ಆದ್ದರಿಂದ ಅವರು ಹೋರಾಟ ಮಾಡಿಕೊಳ್ಳಲಿ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.


ಶಿವಮೊಗ್ಗ (ಜ.14): ರಾಜ್ಯದಲ್ಲಿ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಹೋರಾಟ  ಮುಗಿದು ಹೋದ ಕಥೆಯಾಗಿದೆ. ಪ್ರೀಡಂ ಪಾರ್ಕ್ ನಲ್ಲಿ ಹೋರಾಟ  ಮಾಡುವ ಆಸೆ ಇದೆ. ಆದ್ದರಿಂದ ಅವರು ಹೋರಾಟ ಮಾಡಿಕೊಳ್ಳಲಿ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಅವರು ಪಂಚಮಸಾಲಿ ಸಮುದಾಯದ ಮೀಸಲಾತಿ ಹೋರಾಟದ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈಗಾಗಲೇ ಹೈಕೋರ್ಟ್ ಸ್ಪಷ್ಟವಾಗಿ  ಹೇಳಿದೆ. ಈ ಹಿಂದೆ ಮೀಸಲಾತಿ ಹೇಗಿತ್ತು, ಹಾಗೇ ಮುಂದುವರೆಸಿ  ಅಂತಾ ಹೇಳಿದೆ. ನಮ್ಮ ದೇಶದಲ್ಲಿ ಪ್ರಜಾಪ್ರಭುತ್ವ  ವ್ಯವಸ್ಥೆ ಇದೆ. ಅವರು ಏನಬೇಕಾದರೂ ಮಾಡಲಿ. ಇದರ ಬಗ್ಗೆ ನಾನು ಟೀಕೆ ಮಾಡುವುದಿಲ್ಲ. ಅವರು ಕಾನೂನು ತಜ್ಞರ ಜೊತೆ ಕುಳಿತು ಚರ್ಚೆ ಮಾಡಲಿ. ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ  ಕುಳಿತು ಹೋರಾಟ ಮಾಡುವುದರಿಂದ ಮೀಸಲಾತಿ ಸಿಗುವಂತಿದ್ದರೆ, ಬಹಳ ಜನ ಬಂದು ಅಲ್ಲಿ ಹೋರಾಟ ಮಾಡುತ್ತಿದ್ದರು ಎಂದು ಜರಿದಿದ್ದಾರೆ.

Tap to resize

Latest Videos

Panchamasali: ಅವನು ಅಪ್ಪನಿಗೆ ಹುಟ್ಟಿಲ್ಲ- ಅವನೊಬ್ಬ ಪಿಂಪ್‌: ಹೆಸರೇಳದೇ ಯತ್ನಾಳ್‌ ವಿರುದ್ಧ ಸಚಿವ ನಿರಾಣಿ ಆರೋಪ

ಕುರುಬ ಸಮುದಾಯಕ್ಕೆ ಎಸ್ಟಿ ಮೀಸಲಾತಿ ಬೇಕು: ರಾಜ್ಯದಲ್ಲಿ ಎಲ್ಲ ಸಮಾಜದವರು  ಮೀಸಲಾತಿ ಬೇಕು ಎಂದು ಹೇಳುತ್ತಾರೆ. ಕುರುಬ ಸಮುದಾಯಕ್ಕೆ ಎಸ್ಟಿ ಮೀಸಲಾತಿ ಬೇಕು ಅಂತಾ ನಾನು ಹೇಳಿರುವೆ.? ಆದರೆ, ನನಗೆ ಏನು ಕಮ್ಮಿ ಆಗಿದೆ. ಮೀಸಲಾತಿ ಮೂಲಕ ಖರ್ಗೆ ಸಂಸದರು ಆಗುತ್ತಾರೆ. ಅದು ಅವಶ್ಯಕತೆ ಇದೆಯಾ.? ಅವರ ಮಗ ಪ್ರಿಯಾಂಕ ಖರ್ಗೆ ಅದರ ಮೂಲಕ  ಶಾಸಕ ಆಗುತ್ತಿರುವುದು. ಅದನ್ನು ಅವರು ಬಿಟ್ಟು ಕೊಡಲಿ ಬೇರೆಯವರಿಗೆ. ಅಂಬೇಡ್ಕರ್ ಕೊಟ್ಟಿರುವ ಮೀಸಲಾತಿ ನಿಮ್ಮ ಕುಟುಂಬವೇ ಬಳಸಿಕೊಳ್ಳಲಿ ಅಂತೆ ಹೇಳಿಲ್ಲ. ನೀವು ಒಂದು ರೂಪಕ್ಕೆ ಬಂದ ಬಳಿಕ ಮೀಸಲಾತಿ ಬೀಡಬೇಕು. ಆದರೆ, ಇವರು ಬಿಡಲು ತಯಾರು ಇಲ್ಲ. ಕೋರ್ಟ್ ಪಂಚಮಸಾಲಿ  ಕುರಿತು ಏನು ತೀರ್ಪು ಕೊಟ್ಟಿದೆ. ಅದನ್ನು ನಾವು ಗೌರವಿಸಬೇಕು ಎನ್ನುವುದು ನನ್ನ ವೈಯಕ್ತಿಕ  ಅಭಿಪ್ರಾಯ ಆಗಿದೆ ಎಂದು ಹೇಳಿದರು.

ಸಿದ್ದರಾಮ್ಯ 25 ಕ್ಷೇತ್ರದಲ್ಲಿ ಸ್ಪರ್ಧಿಸಿದರೂ ಸೋಲು: ರಾಜ್ಯದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಎರಡು ಕ್ಷೇತ್ರ ಅಲ್ಲ, 25 ಕ್ಷೇತ್ರದಲ್ಲೂ ಸ್ಪರ್ಧೆ ಮಾಡಿದರೂ ಅವರಿಗೆ ಸೋಲು ಗ್ಯಾರಂಟಿ ಆಗಿದೆ. ಕೋಲಾರದಲ್ಲಿ ಅವರ ಗೆಲ್ಲುವ  ಚಾನ್ಸ್ ಇಲ್ಲವೇ ಇಲ್ಲ. ಕಾಂಗ್ರೆಸ್ ನಾಯಕರು ಮತ್ತು ದೇವೇಗೌಡರು ಸೇರಿ ಸಿದ್ದುಗೆ ಸೋಲಿಸುವುದು ಗ್ಯಾರಂಟಿ ಆಗಿದೆ. ಈಗಾಗಲೇ  ಸಿದ್ದರಾಮಯ್ಯ ಕಾಂಗ್ರೆಸ್ ನಾಯಕರಾದ  ಮುನಿಯಪ್ಪ, ಮಲ್ಲಿಕಾರ್ಜುನ ಖರ್ಗೆ ಹಾಗೂ ಡಾ.ಜಿ. ಪರಮೇಶ್ವರ ಇವರನ್ನೂ  ಸೋಲಿಸಿದ್ದಾರೆ. ಈಗ ಅದೇ ಕಾಂಗ್ರೆಸ್ ನಾಯಕರು ಇವರನ್ನು ಸೋಲಿಸುತ್ತಾರೆ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ತಿಳಿಸಿದ್ದಾರೆ.

ಶ್ರೀಮಂತರಿಗೆ ಮೀಸಲಾತಿ ನೀಡುವುದನ್ನು ನಾನು ಒಪ್ಪಲ್ಲ: ಕೆ.ಎಸ್‌.ಈಶ್ವರಪ್ಪ

ಮೀಸಲಾತಿ ಹೋರಾಟದ ಮೂಲಕ ರಾಜಕೀಯ : ರಾಜ್ಯದಲ್ಲಿ 2016 ರಲ್ಲಿ ಕಾಂತರಾಜ್ ವರದಿ ಪಂಚಮಸಾಲಿಗೆ 2ಎ ನೀಡಲು ಬರಲ್ಲ ಎಂದು ವರದಿ ನೀಡಿದ್ದರು. ಆಗ, ಇಂದು ಹೋರಾಟ ಮಾಡುವ ಯಾರೊಬ್ಬರೂ ಮೀಸಲಾತಿಯ ಬಗ್ಗೆ ಮಾತನಾಡಲಿಲ್ಲ. ಆಗ ಎಲ್ಲಿ ಮಲಗಿದ್ರಿ ನೀವು?. ಈಗ ರಾಜ್ಯ ವಿಧಾನಸಭೆಯ ಹೊತ್ತಿನಲ್ಲಿ ಮೀಸಲಾತಿಗೆ ಆಗ್ರಹಿಸಿ ಹೋರಾಟ ಮಾಡ್ತಾ ಇರೋರು ಪಕ್ಕಾ ರಾಜಕೀಯ ಮಾಡ್ತಾ ಇದ್ದಾರೆ. ಅಂದು ಏನು ಮಾತಾಡದವರು ಇಂದು ಹೋರಾಟ ಯಾಕೆ ಮಾಡುತ್ತಿದ್ದಾರೆ ಎಂದು ಜಯ ಮೃತ್ಯುಂಜಯ ಸ್ವಾಮೀಜಿ ಮತ್ತು ಬಸವನಗೌಡ ಪಾಟೀಲ್‌ ಯತ್ನಾಳ್‌ ವಿರುದ್ಧ ಸಚಿವ ಮುರುಗೇಶ್‌ ನಿರಾಣಿ ಹರಿಹಾಯ್ದಿದ್ದಾರೆ. 

click me!