Bengaluru Development: ಸರ್ಕಾರ ಬೆಂಗಳೂರಿನ ಸಮಗ್ರ ಅಭಿವೃದ್ಧಿಗೆ ಬದ್ಧ: ಬೊಮ್ಮಾಯಿ!

By Kannadaprabha News  |  First Published Dec 28, 2021, 5:54 AM IST

*ಬೆಂಗಳೂರಿನ ಅಮೂಲಾಗ್ರ ಬದಲಾವಣೆಗೆ ಜಾರಿ: ಬೊಮ್ಮಾಯಿ
*ಕೊರೋನಾದಿಂದ ಮೃತಪಟ್ಟಬಿಪಿಎಲ್‌ ಕುಟುಂಬಗಳಿಗೆ ಪರಿಹಾರ
*ಪ್ರತಿ ವಾರ್ಡ್‌ ಅಭಿವೃದ್ಧಿಗೂ ಯೋಜನೆ: ಸಿಎಂ


ಬೆಂಗಳೂರು: ಸರ್ಕಾರವು ಬೆಂಗಳೂರಿನ ಸಮಗ್ರ ಅಭಿವೃದ್ಧಿಗೆ (Bengaluru) ಬದ್ಧವಾಗಿದ್ದು, ಪ್ರತಿ ವಾರ್ಡಿನ ಅಭಿವೃದ್ಧಿಗೂ ಯೋಜನೆಯನ್ನು ರೂಪಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಸೋಮವಾರ ನ್ಯಾಷನಲ್‌ ಕಾಲೇಜು ಆವರಣದಲ್ಲಿ ಬಿಬಿಎಂಪಿ (BBMP) ಮತ್ತು ಬೆಂಗಳೂರು ನಗರ ಜಿಲ್ಲೆಯ ಕೊರೋನಾದಿಂದ ಮೃತಪಟ್ಟವರ (Covid 19) ಬಿಪಿಎಲ್‌ ಕುಟುಂಬಗಳಿಗೆ ಪರಿಹಾರ ಚೆಕ್‌ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಬೆಂಗಳೂರು ಅಭಿವೃದ್ಧಿ ಎಂದರೆ ರಸ್ತೆಗಳ ಅಭಿವೃದ್ಧಿ ಮಾತ್ರವಲ್ಲ. ನಗರದ ಅಮೂಲಾಗ್ರ ಬದಲಾವಣೆಗೆ ಯೋಜನೆ ರೂಪಿಸಲಾಗುವುದು. ಶೀಘ್ರದಲ್ಲಿಯೆ ಯೋಜನೆ ಜಾರಿಯಾಗಲಿದ್ದು, ನಿಗದಿತ ಸಮಯದಲ್ಲಿ ಪೂರ್ಣಗೊಳಿಸಲಾಗುವುದು. ರಾಜಾಕಾಲುವೆಗಳ ನಿರ್ಮಾಣಕ್ಕೆ ಡಿಪಿಆರ್‌ ಸಿದ್ಧಪಡಿಸಲಾಗುತ್ತಿದ್ದು, ಶಾಶ್ವತ ಪರಿಹಾರ ಒದಗಿಸಲಾಗುವುದು. ಅಕ್ರಮ ಕಟ್ಟಡ ನಿರ್ಮಾಣಕ್ಕೆ ತೆರವುಗೊಳಿಸಲು ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.

Latest Videos

ಎಲ್ಲರಿಗೂ ಲಸಿಕೆ ತಲುಪಿಸಲು ಶಾಸಕರು ಕ್ರಮವಹಿಸಿ:

ರಾಜ್ಯದಲ್ಲಿ ಶೇ.97ರಷ್ಟುಮೊದಲನೇ ಡೋಸ್‌ (vaccine) ಹಾಗೂ ಶೇ.75ರಷ್ಟು2ನೇ ಡೋಸ್‌ ನೀಡಲಾಗಿದೆ. ಆದರೆ, ಬೆಂಗಳೂರಿನಲ್ಲಿ ಶೇ.90ರಷ್ಟುಲಸಿಕೆ ನೀಡಲಾಗಿದ್ದು. ಇನ್ನುಳಿದ ಶೇ.10ರಷ್ಟುಜನತೆಗೆ ಮನೆಮನೆಗೆ ತೆರಳಿ ಲಸಿಕೆ ಅಭಿಯಾನ ನಡೆಸಬೇಕಿದೆ. ಈ ನಿಟ್ಟಿನಲ್ಲಿ ಆಯಾ ಕ್ಷೇತ್ರದ ಶಾಸಕರು, ಅಧಿಕಾರಿಗಳು ಗಮನ ಹರಿಸಬೇಕು ಎಂದು ಸೂಚಿಸಿದರು.

ಅತಿ ಹೆಚ್ಚು ಜನ ಸಂಖ್ಯೆ ಹೊಂದಿರುವ ಭಾರತದಲ್ಲಿ ಕೊರೋನಾವನ್ನು ಅತ್ಯಂತ ಯಶಸ್ವಿಯಾಗಿ ನಿರ್ವಹಿಸಿ ವಿಶ್ವದಾಖಲೆ ಮಾಡಿದೆ. ಇದಕ್ಕೆ ಹಲವಾರು ಮಂದಿ ಆರೋಗ್ಯ ಮತ್ತು ಮುಂಚೂಣಿ ಕಾರ್ಯರ್ತರು ನೆರವಾಗಿದ್ದಾರೆ. ಪ್ರಧಾನಿ ಮೋದಿ ನೇತೃತ್ವದಲ್ಲಿ ಅತ್ಯಂತ ಯಶಸ್ವಿಯಾಗಿ ಎದುರಿಸಿದ್ದೇವೆ. ಜತೆಗೆ ದೇಶದ 104 ಕೋಟಿ ಜನರಿಗೆ ಲಸಿಕೆ ನೀಡಿ ಭಾರತ ಹೊಸ ಮೈಲಿಗಲ್ಲು ಸೃಷ್ಟಿಸಿದೆ ಎಂದು ತಿಳಿಸಿದರು.

ಶಾಸಕರಿಂದ ಚೆಕ್‌ ವಿತರಣೆ

ಕಾರ್ಯಕ್ರಮದಲ್ಲಿ ಬೆಂಗಳೂರಿನ ಎಲ್ಲಾ 28 ವಿಧಾನಸಭಾ ಕ್ಷೇತ್ರಗಳ ಒಟ್ಟು 1,500 ಫಲಾನುಭವಿಗಳು ಆಗಮಿಸಿದ್ದರು. ಮುಖ್ಯಮಂತ್ರಿಗಳು 50 ಮಂದಿಗೆ ಸಾಂಕೇತಿಕವಾಗಿ ವಿತರಿಸಿದ ನಂತರ ಆಯಾ ಕ್ಷೇತ್ರದ ಫಲಾನುಭವಿಗಳ ಬಳಿ ಸಂಬಂಧಪಟ್ಟಶಾಸಕರು ತೆರಳಿ ಪರಿಹಾರ ಚೆಕ್‌ ನೀಡಿದರು.

ಕೊರೋನಾ ಮೃತರ ಕುಟುಂಬಕ್ಕೆ ಪರಿಹಾರ

ಬೆಂಗಳೂರು ಫಲಾನುಭವಿಗಳ ಅಂಕಿ-ಅಂಶ

*8,291: ಬಿಬಿಎಂಪಿ ಮತ್ತು ಬೆಂಗಳೂರು ನಗರ ಜಿಲ್ಲೆಗೆ ಬಂದ ಅರ್ಜಿಗಳು

*2,601: ಬಿಪಿಎಲ್‌ ಕುಟುಂಬಗಳು ಸಲ್ಲಿಸಿದ್ದ ಅರ್ಜಿ ಸಂಖ್ಯೆ

*,601: ಇಷ್ಟುಅರ್ಜಿ ಪ್ರಗತಿಯಲ್ಲಿದೆ

*7,262: ಕೇಂದ್ರ ಸರ್ಕಾರದ ಪರಿಹಾರ ಯೋಜನೆಯಡಿ ಬಂದಿರುವ ಅರ್ಜಿ ಫಲಾನುಭವಿಗಳು

*7,262: ಕೇಂದ್ರ ಸರ್ಕಾರದ ಪರಿಹಾರ ಯೋಜನೆಯಡಿ ಈವರೆಗಿನ ಫಲಾನುಭವಿಗಳು

ರಾಜ್ಯದಲ್ಲಿ ಸಿಎಂ ಬದಲಾವಣೆ ಇಲ್ಲ

ಸಂಕ್ರಾಂತಿ(Sankranti) ಬಳಿಕ ರಾಜ್ಯದಲ್ಲಿ ಬಸವರಾಜ ಬೊಮ್ಮಾಯಿ (Basavaraj Bommai) ನಾಯಕತ್ವ ಬದಲಾವಣೆ ಆಗುತ್ತೆ ಎನ್ನುವ ಸುದ್ದಿ ಹಬ್ಬಿದೆ. ಇದೀಗ ಇದಕ್ಕೆ ಕರ್ನಾಟಕ ಬಿಜೆಪಿ ಉಸ್ತುವಾರಿ(Karnataka BJP Incharge) ಸ್ಪಷ್ಟನೆ ಕೊಟ್ಟಿದ್ದು, ಎಲ್ಲಾ ಗೊಂದಲಗಳಿಗೆ ತೆರೆ ಎಳೆದಿದ್ದಾರೆ.ಕರ್ನಾಟಕ ರಾಜ್ಯದಲ್ಲಿ ನಾಯಕತ್ವ ಬದಲಾವಣೆಯಿಲ್ಲ. ಬಸವರಾಜ ಬೊಮ್ಮಾಯಿ ನೇತೃತ್ವದಲ್ಲೇ ಮುಂದಿನ ಚುನಾವಣೆ ಎದುರಿಸ್ತೇವೆ ಎಂದು ಕರ್ನಾಟಕ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ (Arun Singh) ಸ್ಪಷ್ಟಪಡಿಸಿದ್ದಾರೆ.

ಡಿಸೆಂಬರ್ 28 ಮತ್ತು 29ರಂದು ಬಿಜೆಪಿ ರಾಜ್ಯ ಕಾರ್ಯಕಾರಣಿ ಸಭೆ (BJP Karyakarini Meaning) ನಿಮಿತ್ತ ಹುಬ್ಬಳ್ಳಿಗೆ(Hubballi) ಆಗಮಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅರುಣ್ ಸಿಂಗ್, ರಾಜ್ಯದಲ್ಲಿ ನಾಯಕತ್ವ ಬದಲಾವಣೆಯಿಲ್ಲ, ಅದೆಲ್ಲ ಸುಳ್ಳು ಸುದ್ದಿ.  ಬೊಮ್ಮಾಯಿ ಅತ್ಯಂತ ಪ್ರಾಮಾಣಿಕತೆಯಿಂದ ಕೆಲಸ ಮಾಡ್ತಿದ್ದಾರೆ. ಅವರ ಮೇಲೆ ಒಂದೇ ಒಂದು ರೂಪಾಯಿ ಭ್ರಷ್ಟಾಚಾರ ಆರೋಪವಿಲ್ಲ. 150ಕ್ಕೂ ಹೆಚ್ಚು ಸ್ಥಾನಗಳನ್ನ ಗೆದ್ದು ಮತ್ತೆ ನಾವು ಅಧಿಕಾರಕ್ಕೆ ಬರುತ್ತೇವೆ. ವಿಶ್ವಾಸ ವ್ಯಕ್ತಪಡಿಸಿದರು. 

ಇದನ್ನೂ ಓದಿ:

1) Assembly Elections 2021: ಒಮಿಕ್ರೋನ್‌ ಭೀತಿ: ಪಂಚರಾಜ್ಯ ಚುನಾವಣೆ ಮುಂದೂಡಿಕೆ?

2) Night Curfew: ರಾಜ್ಯ ಸರ್ಕಾರದ ಕ್ರಮಕ್ಕೆ ಸಿಟಿ ರವಿ ಅಸಮಾಧಾನ

3) Karnataka Politics:ಮಹತ್ವದ ಬೆಳವಣಿಗೆ, ಕರ್ನಾಟಕದತ್ತ ಬಿಜೆಪಿ ಹೈಕಮಾಂಡ್

click me!