ಸರ್ಕಾರಿ ಭೂಮಿಯನ್ನು ಅಕ್ರಮವಾಗಿ ಖಾತೆ ಮಾಡಿರುವ ಗಂಭೀರವಾದಂತಹ ಆರೋಪ ಚಿಕ್ಕಮಗಳೂರು ಜಿಲ್ಲೆಯಲ್ಲಿ ಕೇಳಿಬಂದಿದೆ. ಜಿಲ್ಲೆಯ ಕಡೂರು ಮತ್ತು ಮೂಡಿಗೆರೆ ತಾಲೂಕಿನಲ್ಲಿ ಸರ್ಕಾರಿ ಭೂಮಿಯನ್ನು ಅಕ್ರಮವಾಗಿ ಖಾತೆ ಮಾಡಲಾಗಿದೆ.
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು (ಆ.10): ಸರ್ಕಾರಿ ಭೂಮಿಯನ್ನು ಅಕ್ರಮವಾಗಿ ಖಾತೆ ಮಾಡಿರುವ ಗಂಭೀರವಾದಂತಹ ಆರೋಪ ಚಿಕ್ಕಮಗಳೂರು ಜಿಲ್ಲೆಯಲ್ಲಿ ಕೇಳಿಬಂದಿದೆ. ಜಿಲ್ಲೆಯ ಕಡೂರು ಮತ್ತು ಮೂಡಿಗೆರೆ ತಾಲೂಕಿನಲ್ಲಿ ಸರ್ಕಾರಿ ಭೂಮಿಯನ್ನು ಅಕ್ರಮವಾಗಿ ಖಾತೆ ಮಾಡಲಾಗಿದೆ. ಈ ಕುರಿತು ತನಿಖೆ ನಡೆಸಲು ಸರ್ಕಾರ 15 ಅಧಿಕಾರಿಗಳ ನೇತೃತ್ವದಲ್ಲಿ ತಂಡ ನಿಯೋಜನೆ ಮಾಡಿ ತನಿಖೆ ನಡೆಸುತ್ತಿದೆ.
undefined
ಕಡೂರು, ಮೂಡಿಗೆರೆಯಲ್ಲಿ ಅಕ್ರಮ ಭೂ ಮಂಜೂರಾತಿ ಪ್ರಕರಣ: ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಮತ್ತು ಕಡೂರಿನಲ್ಲಿ ಸರ್ಕಾರಿ ಭೂಮಿಯನ್ನು ಅಧಿಕಾರಿಗಳು ಜನರಿಗೆ ಅಕ್ರಮವಾಗಿ ಖಾತೆ ಮಾಡಿಕೊಟ್ಟಿರುವ ಆರೋಪ ಕೇಳಿಬಂದಿದೆ. ಮೂಡಿಗೆರೆಯಲ್ಲಿ 1400. ಕಡೂರಲ್ಲಿ 3500. ಈ ಎರಡು ತಾಲೂಕಿನಲ್ಲೇ ಸುಮಾರು 5 ಸಾವಿರ ಎಕರೆಗೂ ಅಧಿಕ ಸರ್ಕಾರಿ ಭೂಮಿಯನ್ನ ಅಕ್ರಮವಾಗಿ ಮಂಜೂರು ಮಾಡಿರುವ ಆರೋಪವಿದೆ. ಗೋಮಾಳ ಸೇರಿದಂತೆ ಸರ್ಕಾರಿ ಭೂಮಿಯ ನಕಲಿ ದಾಖಲೆ ಸೃಷ್ಟಿಸಿ ಫಾರಂ 50, 53 ಹಾಗೂ 57ರಲ್ಲಿ ಅಕ್ರಮವಾಗಿ ಮಂಜೂರು ಮಾಡಿಸಿಕೊಂಡಿದ್ದಾರೆ. ನಕಲಿ ದಾಖಲೆ ಸೃಷ್ಠಿಸಿದವರು, ಕಡಗಳಿಗೆ ಸಹಿ ಹಾಕಿದವರಿಗೆ ಈಗ ಬಂಧನದ ಭೀತಿ ಎದುರಾಗಿದೆ. ತಾಲೂಕು ಮಟ್ಟದ ಅಧಿಕಾರಿಗಳ ಸಹಯೋಗದಲ್ಲಿ ಸರ್ಕಾರಿ ಭೂಮಿಗೆ ನಕಲಿ ಅಪ್ಪ-ಅಮ್ಮನನ್ನ ಸೃಷ್ಠಿಸಿ ಭೂಮಿಯನ್ನ ಕಬಳಿಸಿರುವ ಅಂಶ ಬೆಳಕಿಗೆ ಬಂದಿದೆ.
ಸಚಿವ ಚಲುವರಾಯಸ್ವಾಮಿ ವಿರುದ್ಧ ‘ಪೇ-ಸಿಎಸ್’ ಅಭಿಯಾನ: ಬಿಜೆಪಿಗರ ಬಂಧನ
ರಾಜ್ಯದಲ್ಲೇ ಅತೀ ದೊಡ್ಡ ಭೂ ಹಗರಣ?: ಇದು ರಾಜ್ಯದಲ್ಲೇ ಅತಿ ದೊಡ್ಡ ಲ್ಯಾಂಡ್ ಸ್ಕ್ಯಾಂ ಆಗಿದೆ. ಇದೀಗ ಈ ನಕಲಿ ಬಗ್ಗೆ ಅಸಲಿ ತನಿಖೆ ಆರಂಭವಾಗಿದ್ದು, ಫಸ್ಟ್ ಸ್ಟೇಜ್ನಲ್ಲಿ ಕಡೂರು ಹಾಗೂ ಮೂಡಿಗೆರೆ ತಾಲೂಕಿನಲ್ಲಿ ತನಿಖೆ ಆರಂಭವಾಗಿದೆ. ಪ್ರಾಥಮಿಕ ತನಿಖೆಯಲ್ಲಿ ಸಾವಿರಾರು ಎಕರೆ ಸರ್ಕಾರಿ ಭೂಮಿಯನ್ನ ಖಾತೆ ಮಾಡಿರುವ ಅಂಶವೂ ಬೆಳಕಿಗೆ ಬಂದಿದ್ದು ತನಿಖೆ ಆರಂಭವಾಗಿದೆ. ಎಂದು ಜಿಲ್ಲಾಧಿಕಾರಿ ಮೀನಾನಾಗರಾಜ್ ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ತಿಳಿಸಿದ್ದಾರೆ.
ಅರ್ಜಿಯನ್ನೇ ಹಾಕಿದೇ ಇರುವ ವ್ಯಕ್ತಿಗೂ ಭೂಮಿ ಮಂಜೂರು: ಅಕ್ರಮವಾಗಿ ಭೂಮಿ ಮಂಜೂರು ಮಾಡಿಸಿಕೊಂಡವರ ಪೈಕಿ ನೂರಾರು ಸಂಖ್ಯೆಯಲ್ಲಿ ರಾಜಕೀಯ ಪಕ್ಷಗಳ ಸೆಕೆಂಡ್ ಸ್ಟೇಜ್ ನಾಯಕರು ಇದ್ದಾರಂತೆ. ಸತ್ತವರ ಹೆಸರಲ್ಲಿ. ಆ ಊರಲ್ಲಿ ವಾಸವೇ ಇಲ್ಲದವರ ಹೆಸರಲ್ಲೂ ಜಾಗ ಮಂಜೂರಾಗಿದೆಯಂತೆ. ಹಾಗಾಗಿ, ನಿರಂತರ ದೂರುಗಳು ಬಂದ ಹಿನ್ನೆಲೆ, ಅದರಲ್ಲೂ ಪ್ರಮುಖವಾಗಿ ಕಡೂರಿನಲ್ಲಿ ಸರ್ಕಾರಿ ಜಾಗವನ್ನ ಬೇಕಾಬಿಟ್ಟಿಯಾಗಿ ಅಕ್ರಮವಾಗಿ ಖಾತೆ ಮಾಡಿಕೊಡಿಲಾಗಿದೆ. ಈ ಹಿನ್ನೆಲೆ ಎಚ್ಚೆತ್ತುಕೊಂಡ ಜಿಲ್ಲಾಡಳಿತ ಸರ್ಕಾರಕ್ಕೂ ವರದಿ ನೀಡಿದೆ. ತನಿಖೆಯನ್ನೂ ಕೈಗೊಂಡಿದೆ. ಸರ್ಕಾರಿ ಭೂಮಿ, ಗೋಮಾಳವನ್ನ ಅಕ್ರಮವಾಗಿ ನಕಲಿ ದಾಖಲೆ ಸೃಷ್ಟಿಸಿ ಹಗರಣ ಎಸಗಿರುವ ಬಗ್ಗೆ ಸರ್ಕಾರಕ್ಕೆ ವರದಿ ಕೂಡ ನೀಡಲಾಗಿದೆ.
150 ರು. ತಲುಪಿದ್ದ ಟೊಮೆಟೋ ಬೆಲೆ 70 ರು.ಗೆ ಇಳಿಕೆ: ಗ್ರಾಹಕರು ಫುಲ್ ಖುಷ್
ಹಾಗಾಗಿ, ಸರ್ಕಾರ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ನೇತೃತ್ವದಲ್ಲಿ ತನಿಖೆಗೆ ಆದೇಶ ನೀಡಿದ್ದು, ತನಿಖೆಗಾಗಿ 15 ತಹಶೀಲ್ದಾರರನ್ನ ನೇಮಕ ಮಾಡಿ ತನಿಖೆಗೆ ಸೂಚನೆ ನೀಡಲಾಗಿದೆ. ಸಂಪೂರ್ಣ ವರದಿ ಬಂದ ಬಳಿಕ ಯಾರ್ಯಾರ ನೆತ್ತಿ ಮೇಲೆ ಯಾವ್ಯಾವ ಕತ್ತೆ ನೇತಾಡುತ್ತೋ ಗೊತ್ತಿಲ್ಲ. ಒಟ್ಟಾರೆ, ಮಂಜೂರಾಗಿರೋ ಭೂಮಿಯಲ್ಲಾ ಅಕ್ರಮ ಅಂತಲ್ಲ. ಸಕ್ರಮವೂ ಇರಬಹುದು. ಆದ್ರೆ, ಅಕ್ರಮದ ಪ್ರಮಾಣವೇ ಹೆಚ್ಚು. ಹಗರಣದ ಸಮಗ್ರ ತನಿಖೆ ಸರಿಯಾದ ಮಾರ್ಗದಲ್ಲಿ ತನಿಖೆಯಾಗಿದ್ದೇ ಆದಲ್ಲಿ ಭೂನುಂಗಣ್ಣರ ಕಂಬಿ ಏಣಿಸೋದು ಗ್ಯಾರಂಟಿ ಅನ್ಸತ್ತೆ.