ಬಂಧಿತ ಐವರು ಶಂಕಿತ ಎಲ್‌ಐಟಿ ಉಗ್ರರು ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್‌ಗಳು, ಮೆಜೆಸ್ಟಿಕ್ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣ ಸೇರಿದಂತೆ ಜನಸಂದಣಿ ಪ್ರದೇಶಗಳನ್ನೇ ಗುರಿಯಾಗಿಸಿ ವಿಧ್ವಂಸಕ ಕೃತ್ಯಕ್ಕೆ ಸಿದ್ಧತೆ ನಡೆಸಿದ್ದರು ಎಂಬ ಸಂಗತಿ ಸಿಸಿಬಿ ತನಿಖೆಯಲ್ಲಿ ಬಯಲಾಗಿದೆ.
ಬೆಂಗಳೂರು (ಜು.20) : ಬಂಧಿತ ಐವರು ಶಂಕಿತ ಎಲ್‌ಐಟಿ ಉಗ್ರರು ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್‌ಗಳು, ಮೆಜೆಸ್ಟಿಕ್ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣ ಸೇರಿದಂತೆ ಜನಸಂದಣಿ ಪ್ರದೇಶಗಳನ್ನೇ ಗುರಿಯಾಗಿಸಿ ವಿಧ್ವಂಸಕ ಕೃತ್ಯಕ್ಕೆ ಸಿದ್ಧತೆ ನಡೆಸಿದ್ದರು ಎಂಬ ಸಂಗತಿ ಸಿಸಿಬಿ ತನಿಖೆಯಲ್ಲಿ ಬಯಲಾಗಿದೆ.
ನಗರದಲ್ಲಿ ವಿಧ್ವಂಸಕ ಕೃತ್ಯಗಳಿಗೆ ಆರೋಪಿಗಳು ಗುರುತಿಸಿದ್ದ ಸ್ಥಳಗಳ ಬಗ್ಗೆ ನಿಖರ ಮಾಹಿತಿ ಗೊತ್ತಾಗಿಲ್ಲ. ಈ ನಿಟ್ಟಿನಲ್ಲಿ ತನಿಖೆ ನಡೆದಿದ್ದು, ಬಂಧಿತರ ವಿಚಾರಣೆ ಬಳಿಕ ಸ್ಪಷ್ಟವಾದ ಚಿತ್ರಣ ಸಿಗಲಿದೆ ಎಂದು ನಗರ ಪೊಲೀಸ್ ಆಯುಕ್ತ ದಯಾನಂದ್ ತಿಳಿಸಿದ್ದಾರೆ.
ಬೆಂಗಳೂರಲ್ಲಿ ವಿಧ್ವಂಸಕ ಕೃತ್ಯಕ್ಕೆ ಸಜ್ಜು: ಶಂಕಿತ ಉಗ್ರರಿಗೆ ಆನ್‌ಲೈನಲ್ಲಿ ಹಣ, ಹೊರ ರಾಜ್ಯದಿಂದ ಶಸ್ತ್ರಾಸ್ತ್ರ
ಬಿಎಂಟಿಸಿ ಬಸ್‌ಗಳು, ಮೆಜೆಸ್ಟಿಕ್, ಪ್ರಮುಖ ಮಾಲ್‌ಗಳು, ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣ, ಮೆಟ್ರೋ ನಿಲ್ದಾಣಗಳು ಹಾಗೂ ಎಂ.ಜಿ. ರಸ್ತೆ ಸೇರಿದಂತೆ ನಗರದ ಹೆಚ್ಚು ಜನ ಸೇರುವ ಸ್ಥಳಗಳ ಬಗ್ಗೆ ಆರೋಪಿಗಳು ಮಾಹಿತಿ ಕಲೆ ಹಾಕಿ ಭಯೋತ್ಪಾದಕ ಕೃತ್ಯಕ್ಕೆ ರೂಪರೇಷೆ ರೂಪಿಸಿದ್ದರು. ಇದಕ್ಕಾಗಿ ಸುಲ್ತಾನ್ ಪಾಳ್ಯದಲ್ಲಿರುವ ಶಂಕಿತ ಉಗ್ರ ಸುಹೇಲ್ ಮನೆಯಲ್ಲೇ ಪಿಸ್ತೂಲ್‌ಗಳು ಹಾಗೂ ಗುಂಡುಗಳನ್ನು ಶಂಕಿತ ಉಗ್ರರು ಸಂಗ್ರಹಿಸಿಟ್ಟಿದ್ದರು. ಹಾಗೆಯೇ ಆತನ ಮನೆಯಲ್ಲೇ ರಾತ್ರಿ ವೇಳೆ ಸಭೆ ನಡೆಸಿ ಜುನೈದ್ ಸೂಚನೆ ಮೇರೆಗೆ ದಾಳಿ ನಡೆಸಲು ಶಂಕಿತರು ತಯಾರಿ ನಡೆಸಿದ್ದರು ಎಂದು ತಿಳಿದು ಬಂದಿದೆ.
ಕುರಿ ವ್ಯಾಪಾರಿಯೀಗ ಮೋಸ್ಟ್ ವಾಂಟೆಡ್ ಉಗ್ರ: ಬೆಂಗ್ಳೂರಲ್ಲಿ ಬಂಧಿತ ಉಗ್ರರಿಗೆ ಇವನೇ ಗುರು..!