ಮೋದಿ ಪ್ರಧಾನಿಯಾದ ನಂತರ ಕಾಶ್ಮೀರದಲ್ಲಿ ಉಗ್ರರ ಉಪಟಳ ನಿಂತಿದೆ: ಹೆಚ್‌ಡಿ ದೇವೇಗೌಡ

By Ravi Janekal  |  First Published Aug 31, 2024, 3:10 PM IST

ಕಾಶ್ಮೀರದಲ್ಲಿರುವ ಶಿವನ ದೇವಾಲಯಕ್ಕೆ 230 ಮೆಟ್ಟಿಲು ಇವೆ ಹತ್ತುವುದು ಕಷ್ಟ. ಆದರೆ ನಾನು 30 ಮೆಟ್ಟಿಲು ಮಾತ್ರ ಹತ್ತಿದೆ, ಆಮೇಲೆ ಆಗಲಿಲ್ಲ ಎಂದು ಮಾಜಿ ಪ್ರಧಾನಿ ಹೆಚ್‌ಡಿ ದೇವೇಗೌಡ ತಿಳಿಸಿದರು.


ಹಾಸನ (ಆ.31) :  ಕಾಶ್ಮೀರದಲ್ಲಿರುವ ಶಿವನ ದೇವಾಲಯಕ್ಕೆ 230 ಮೆಟ್ಟಿಲು ಇವೆ ಹತ್ತುವುದು ಕಷ್ಟ. ಆದರೆ ನಾನು 30 ಮೆಟ್ಟಿಲು ಮಾತ್ರ ಹತ್ತಿದೆ, ಆಮೇಲೆ ಆಗಲಿಲ್ಲ ಎಂದು ಮಾಜಿ ಪ್ರಧಾನಿ ಹೆಚ್‌ಡಿ ದೇವೇಗೌಡ ತಿಳಿಸಿದರು.

ಕಾಶ್ಮೀರಕ್ಕೆ ಭೇಟಿ ನೀಡಿದ್ದ ವಿಚಾರವಾಗಿ ಇಂದು ಹಾಸನ ಜಿಲ್ಲೆಯ ಹೊಳೆನರಸಿಪುರ ತಾಲೂಕಿನ ಮಾವಿನಕೆರೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ದೇವೇಗೌಡರು,  ಆಗ ಸಿಆರ್‌ಪಿಎಫ್ ಯೋಧರು ದೇವಾಲಯಕ್ಕೆ ಕರೆದುಕೊಂಡು ಹೋದರು ಪೂಜೆ ಸಲ್ಲಿಸಿದೆ. ನಾಥದ್ವಾರದಲ್ಲಿ ಕೃಷ್ಣನ ದೇವಾಲಯವಿದೆ. ಬಹಳ ಪ್ರಸಿದ್ದವಾದ ದೇವಾಲಯ ಅದು, ಅಲ್ಲಿಗೂ ಹೋಗಿದ್ದೆ ಎಂದರು.

Latest Videos

undefined

'ಪತ್ರಕರ್ತರು ಸರ್ಕಾರದ ಕಣ್ತೆರೆಸಬೇಕು, ಬದಲಾವಣೆಗೆ ಕಾರಣರಾಗಬೇಕು': ಡಿಕೆ ಶಿವಕುಮಾರ್

ಪ್ರಧಾನಿ ನರೇಂದ್ರ ಮೋದಿಯವರು 370 ಆರ್ಟಿಕಲ್ ರದ್ದು ಮಾಡಿದ್ದಾರೆ. ಮೋದಿಯವರು ಪ್ರಧಾನಿಯಾದ ಮೇಲೆ ಟೆರರಿಸ್ಟ್‌ಗಳನ್ನ ಕಂಟ್ರೋಲ್ ಮಾಡಿದ್ದಾರೆ. ಕಾಶ್ಮೀರ ಮೊದಲಿದ್ದಂತೆ ಆತಂಕದ ವಾತಾವರಣ ಇಲ್ಲ. ಹೀಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರನ್ನು ನೋಡಬಹುದಾಗಿದೆ. ಕಾಶ್ಮೀರ ವಿಚಾರದಲ್ಲಿ ಪ್ರಧಾನಿ ಮೋದಿ ಕಠಿಣ ನಿರ್ಧಾರ ತೆಗೆದುಕೊಂಡಿದ್ದಾರೆ. ಹಿಂದೆ ನಡೆಯುತ್ತಿದ್ದ ಅಕ್ರಮವನ್ನು ಸ್ವಲ್ಪಮಟ್ಟಿಗೆ ಸುಧಾರಣೆ ಮಾಡಿದ್ದಾರೆ. ಅದರ ಪರಿಣಾಮ ಇಂದು ಸಾಮಾನ್ಯ ಜನ ಬೀದಿಯಲ್ಲಿ ನೆಮ್ಮದಿಯಿಂದ ಓಡಾಡುತ್ತಿದ್ದಾರೆ. ಇದೀಗ ಅಲ್ಲಿ ಚುನಾವಣೆ ನಡೆಯುತ್ತಿದೆ. ಓಟು ಯಾರಿಗೆ ಹಾಕ್ತಾರೋ ಬಿಡ್ತರೋ ಕೇಳಬಾರದು ಆದರೆ ಮೋದಿಯವರು ಒಳ್ಳೆಯ ಕೆಲಸ ಮಾಡಿದ್ದಾರೆ. ಅಲ್ಲಿನ ಜನರು ಮೋದಿ ಪ್ರಧಾನಿಯಾದ ಬಳಿಕ ನೆಮ್ಮದಿಯಿಂದ ಇದ್ದಾರೆ ಹೀಗಾಗಿ ಮೋದಿಯವರನ್ನ ಬೆಂಬಲಿಸುತ್ತಾರೆ ಎಂದರು.

6 ತಿಂಗ್ಳಲ್ಲಿ ಸರ್ಕಾರ ಬೀಳಿಸ್ತೇವೆಂದು ಅಮಿತ್‌ ಶಾಗೆ ದೇವೇಗೌಡ,ಎಚ್‌ಡಿಕೆ ವಚನ, ಸಿಎಂ ಸಿದ್ದರಾಮಯ್ಯ

ಇನ್ನು ಕರ್ನಾಟಕದಲ್ಲಿ ನಡೆಯುತ್ತಿರುವ ವಿದ್ಯಮಾನಗಳ ವಿಚಾರವಾಗಿ ಮಾತನಾಡಿದ ಅವರ, ನಾನು ಕರ್ನಾಟಕದ ಯಾವುದೇ ವಿಷಯದ ಬಗ್ಗೆ ಮಾತನಾಡಲ್ಲ. ಟೈಂ ಬಂದಾಗ ಮಾತನಾಡುತ್ತೇನೆ. ಹಾಸನಕ್ಕೆ ಬರ್ತಿನಿ, ರಾಜ್ಯಾದ್ಯಂತ ಪ್ರವಾಸ ಮಾಡ್ತಿನಿ. ಮಂಡಿ ನೋವು ಬಿಟ್ಟರೆ ಆರೋಗ್ಯ ಸರಿಯಿದೆ, ತೊಂದರೆಯಿಲ್ಲ. ರಂಗನಾಥನ ಆಶೀರ್ವಾದದಿಂದ ಇನ್ನೂ ನಾಲ್ಕಾರು ವರ್ಷ ರಾಜಕೀಯ ಮಾಡ್ತಿನಿ. ಹಾಸನ ನನ್ನ ಜಿಲ್ಲೆ, ನನ್ನ ಹುಟ್ಟೂರು, ಸ್ವಂತ ಕ್ಷೇತ್ರ ಇದನ್ನು ಹೇಗೆ ಮರೆಯಲಿ. ಸದ್ಯಕ್ಕೆ ತಾತ್ಕಾಲಿಕವಾಗಿ ನಾನು ಜಿಲ್ಲಾ ಪ್ರವಾಸ ಮಾಡಲ್ಲ. ಕೆಲವು ದಿನಗಳ ನಂತರ ನಿಮಗೆ ತಿಳಿಸಿ ಪ್ರವಾಸ ಮಾಡ್ತೇನೆ ಎಂದರು.

click me!