
ಬೆಂಗಳೂರು(ಆ.31) ಐಟಿ ಸಿಟಿ, ಸಿಲಿಕಾನ್ ಸಿಟಿ ಎಂದೇ ಖ್ಯಾತಿಯಾಗಿರುವ ಬೆಂಗಳೂರು ನಗರ ಎಲ್ಲರಿಗೂ ಉದ್ಯೋಗ ನೀಡಿ ಕೈತುಂಬ ಸಂಬಳ ನೀಡುವ ವಿಶೇಷಯನ್ನೂ ಹೊಂದಿದೆ. ಟೆಕ್ ದೈತ್ಯ ಕಂಪನಿಗಳು, ಕೈಗಾರಿಕೆ, ಸ್ಟಾರ್ಟ್ ಅಪ್ ಹೀಗೆ ಸಾವಿರಾರು ಉದ್ಯಮ, ಲಕ್ಷಾಂತರ ಕೆಲಸ. ಭಾರತದ ಅತೀ ಹೆಚ್ಚು ವೇತನ ನೀಡುವ ನಗರಗಳ ಪೈಕಿ ಬೆಂಗಳೂರು ಕೂಡ ಒಂದು. ಆದರೆ ಹಲವು ಬಾರಿ ಸೋಶಿಯಲ್ ಮೀಡಿಯಾ ಸೇರಿದಂತ ಇತರ ವೇದಿಕೆಗಳಲ್ಲಿ ಇಲ್ಲಿಗೆ ಕೆಲಸ ಅರಸಿಕೊಂಡು ಬಂದು ನೆಲಕಂಡುಕೊಂಡ ಇತರ ರಾಜ್ಯಗಳ ಹಲವರು ನಮ್ಮಿಂದಲೇ ಬೆಂಗಳೂರು ಉದ್ಧಾರವಾಗಿದೆ. ನಾವಿಲ್ಲದಿದ್ದರೆ ಬೆಂಗಳೂರು ಶೂನ್ಯ ಎಂದು ಮಾತನಾಡುವ ಮಂದಿಗೆ ನಟ ಪ್ರಕಾಶ್ ಬೆಳವಾಡಿ ಕೌಂಟರ್ ನೀಡಿದ್ದಾರೆ. ನೀವು ಬರುವ ಮೊದಲೇ ಬೆಂಗಳೂರು ಗ್ರೇಟ್ ಆಗಿತ್ತು. ಈಗಲೂ ಹಾಗೇ ಇದೆ ಎಂದು ಪ್ರಕಾಶ್ ಬೆಳವಾಡಿ ಆಡಿರುವ ಮಾತುಗಳು ಭಾರಿ ವೈರಲ್ ಆಗಿದೆ.
ಸ್ಕ್ಯಾಂಡಿಮ್ಯಾನ್ ಯೂಟ್ಯೂಬರ್ ಜೊತೆಗಿನ ಸಂದರ್ಶನದಲ್ಲಿ ಪ್ರಕಾಶ್ ಬೆಳವಾಡಿ ಆಡಿದ ಮಾತು ಬೆಂಕಿಯಾಗಿ ಎಲ್ಲೆಡೆ ಪಸರಿಸುತ್ತಿದೆ. ಕನ್ನಡ ಭಾಷೆ, ಕನ್ನಡಿಗರು, ಬೆಳೆಯುತ್ತಿರುವ ಬೆಂಗಳೂರು ಸೇರಿದಂತೆ ಹಲವು ವಿಚಾರಗಳ ಕುರಿತು ಪ್ರಕಾಶ್ ಬೆಳವಾಡಿ ಮಾತನಾಡಿದ್ದಾರೆ. ಈ ಪೈಕಿ ಬೆಂಗಳೂರಿಗೆ ಇತರ ರಾಜ್ಯಗಳಿಂದ ಆಗಮಿಸಿ ನಮ್ಮಿಂದಲೇ ಬೆಂಗಳೂರು ಉದ್ಧಾರವಾಗಿದೆ. ನಮ್ಮಿಂದಲೇ ಬೆಂಗಳೂರು ಗ್ರೇಟ್ ಆಗಿದೆ ಎಂದು ಹೇಳುವ ಮಂದಿಗೆ ತಿರುಗೇಟು ನೀಡಿದ್ದಾರೆ.
ಕನ್ನಡ ಭಾಷೆ ಬಗ್ಗೆ ಗುರುಪ್ರಸಾದ್ ಹೇಳಿದ್ದೇನು; ಅಪಭ್ರಂಶವಿಲ್ಲದೇ ಮಾತನಾಡುವ ಬಗ್ಗೆ ಏನಂದ್ರು?
ನಾವು ನೋಡಿದ್ದೇವೆ, ತುಂಬಾ ಜನ ಉತ್ತರ ಭಾರತದಿಂದ ಬೆಂಗಳೂರಿಗೆ ಬಂದಿರುತ್ತಾರೆ. ಅವರು ಹೇಳುತ್ತಾರೆ, ನಾವು ಬೆಂಗಳೂರನ್ನು ಉದ್ಧಾರ ಮಾಡಿದ್ದೇವೆ(ವಿ ಮೇಡ್ ಬೆಂಗಳೂರು ಗ್ರೇಟ್) ಎಂದು. ಆದರೆ ಇಲ್ಲಾ, ಬೆಂಗಳೂರು ಮೊದಲೇ ಗ್ರೇಟ್ ಇತ್ತು. ನೀವೇನು ಮಾಡಿದ್ದಲ್ಲ. ನಿಮಗೆ ಈ ಅಭಿಪ್ರಾಯ ಯಾಕೆ ಬಂತು ಎಂದು ನಾನು ಕೆಲವರನ್ನು ಕೇಳಿದ್ದೇನೆ. ಒರ್ವನ ಬಳಿ ಯಾವ ಊರಿಂದ ಇಲ್ಲಿಗೆ ಬಂದೆ ಎಂದು ಕೇಳಿದ್ದೆ. ಆದಕ್ಕೆ ಆತ ಉತ್ತರ ಪ್ರದೇಶದ ಒಂದು ಊರು ಹೇಳಿದ್ದ. ಯಾಕೆ ನಿನ್ನ ಊರನ್ನು ಬಿಟ್ಟು ಬಂದೆ ಅನ್ನೋ ಪ್ರಶ್ನೆಗೆ, ಉತ್ತಮ ಅವಕಾಶಕ್ಕಾಗಿ ಬೆಂಗಳೂರಿಗೆ ಬಂದೆ ಎಂದ. ಹಾಗಾದರೆ ಉತ್ತಮ ಅವಕಾಶ ಬೆಂಗಳೂರಲ್ಲಿ ನಿಮ್ಮ ಅಪ್ಪ ಮಾಡಿಕೊಟ್ನಾ? ನೀವು ಬರುವ ಮುಂಚೆ ಅವಕಾಶ ಇತ್ತು. ನೀವು ಬಂದಿದ್ದೀರಿ ಎಂದು ಪ್ರಕಾಶ್ ಬಳವಾಡಿ ಹೇಳಿದ್ದಾರೆ.
ಇದೇ ವೇಳೆ ಕೇರಳದಿಂದ ಬೆಂಗಳೂರಿಗೆ ಆಗಮಿಸಿ ನಮ್ಮಿಂದಲೆ ಬೆಂಗಳೂರು ಎನ್ನೋ ಮಂದಿಗೂ ಕೆಲ ಪ್ರಶ್ನೆಗಳನ್ನು ಕೇಳಿದ್ದಾರೆ. ನೀವು ದೇವರ ಸ್ವಂತ ನಾಡನ್ನು ಯಾಕೆ ಬಿಟ್ಟು ಬಂದಿದ್ದೀರಿ. ನಿಮ್ಮಿಂದಲೆ ಉದ್ಧಾರವಾಗಿದ್ದಾರೆ, ನಿಮ್ಮ ಊರನ್ನೇ ಉದ್ಧಾರ ಮಾಡಬಹುದುಲ್ಲವೇ ಎಂದು ಬೆಳವಾಡಿ ಕೌಂಟರ್ ಮಾಡಿದ್ದಾರೆ.
The Kashmir Files ವಿಡಿಯೋ ಮೂಲಕ ಕ್ಷಮೆ ಕೋರಿದ ನಟ ಪ್ರಕಾಶ್ ಬೆಳವಾಡಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ