ಕೆಎಎಸ್ ಪರೀಕ್ಷೆ ಕಟ್ ಆಫ್ ಅಂಕ 150-160ಕ್ಕೆ ಇಳಿಕೆ?: ಕಾರಣವೇನು?

By Kannadaprabha NewsFirst Published Aug 31, 2024, 12:56 PM IST
Highlights

ಗೆಜೆಟೆಡ್ ಪ್ರೊಬೇಷನರ್‌ ನೇಮಕಾತಿ ಪೂರ್ವಭಾವಿ ಪರೀಕ್ಷೆ ಅನೇಕ ದೋಷಗಳಿಂದ ಕೂಡಿದ್ದರಿಂದ ಮುಖ್ಯ ಪರೀಕ್ಷೆಗೆ ಅರ್ಹತೆ ಪಡೆಯಲು ಬೇಕಾದ 'ಕಟ್‌ ಆಫ್' ಅಂಕ ಕಡಿಮೆಯಾಗುವ ಸಾಧ್ಯತೆಯಿದೆ. 

ಬೆಂಗಳೂರು (ಆ.31): ಗೆಜೆಟೆಡ್ ಪ್ರೊಬೇಷನರ್‌ ನೇಮಕಾತಿ ಪೂರ್ವಭಾವಿ ಪರೀಕ್ಷೆ ಅನೇಕ ದೋಷಗಳಿಂದ ಕೂಡಿದ್ದರಿಂದ ಮುಖ್ಯ ಪರೀಕ್ಷೆಗೆ ಅರ್ಹತೆ ಪಡೆಯಲು ಬೇಕಾದ 'ಕಟ್‌ ಆಫ್' ಅಂಕ ಕಡಿಮೆಯಾಗುವ ಸಾಧ್ಯತೆಯಿದೆ. ಬಿಡುಗಡೆ ಆಗಿರುವ ಕೀ ಉತ್ತರಗಳ ಆಧಾರದ ಮೇಲೆ ಅಭ್ಯರ್ಥಿಗಳು ಪಡೆದಿರುವ ಅಂಕಗಳನ್ನು ಅನೇಕ ತರಬೇತಿ ಕೇಂದ್ರಗಳು, ಬೋಧಕರು, ಉಪನ್ಯಾಸಕರು, ತಜ್ಞರು ವಿಶ್ಲೇಷಣೆ ನಡೆಸಿದಾಗ ಕಟ್ ಆಫ್ ಅಂಕಗಳು 150-160ಕ್ಕೆ ಇಳಿಕೆಯಾಗಬಹುದು ಎನ್ನಲಾಗಿದೆ.  ಹೀಗಾಗಿ, 150-160ರ ಅಸು ಪಾಸು ಅಂಕಗಳಿಸುವ ಸಾಮಾನ್ಯ ವರ್ಗದ ಅಭ್ಯರ್ಥಿಗಳು ಮುಖ್ಯ ಪರೀಕ್ಷೆಗೆ ಅವಕಾಶ ಗಿಟ್ಟಿಸಿಕೊಳ್ಳುವ ನಿರೀಕ್ಷೆಯಲ್ಲಿದ್ದಾರೆ. 

ಉಳಿದಂತೆ ಬೇರೆ ವರ್ಗಗಳಿಗೆ ಕಟ್ ಆಫ್ ಅಂಕ ಗಳು ಮತ್ತಷ್ಟು ಕಡಿಮೆ ಆಗುತ್ತವೆ ಎಂದು ವಿಶ್ಲೇಷಿಸಲಾಗಿದೆ. ತಲಾ 200 ಅಂಕಗಳ 2 ಪತ್ರಿಕೆಗಳಿಗೆ ಒಟ್ಟು 400 ಅಂಕಗಳ ಪೂರ್ವ ಭಾವಿ ಪರೀಕ್ಷೆ ನಡೆದಿದೆ. 2017-18ರಲ್ಲಿ ಪೂರ್ವಭಾವಿ ಪರೀ ಕೈಯಲ್ಲಿ ಸಾಮಾನ್ಯ ಅಭ್ಯರ್ಥಿ ಗಳ ಕಟ್ ಆಫ್ ಅಂಕ200 ಇದ್ದ ರೆ, 2015ರಲ್ಲಿ 184 ಇತ್ತು. ಪ್ರತಿ ಬಾರಿ ಅರ್ಜಿ ಸಲ್ಲಿಸು ವವರ ಸಂಖ್ಯೆ ಹೆಚ್ಚಳ ಹಾಗೂ ಸ್ಪರ್ಧೆ ಹೆಚ್ಚಾಗುವ ಕಾರಣ ಕಟ್ ಆಫ್ ಹೆಚ್ಚಳವಾಗುವುದು ಸಹಜ. ಆದರೆ, ಈ ಬಾರಿ ಕೆಪಿಎಸ್‌ಸಿ ಪ್ರಶ್ನೆ ಪತ್ರಿಕೆ ಗಳು ಲೋಪ ದೋಷಗಳಿಂದ ಕೂಡಿದ ಕಾರಣ ಇಳಿಮುಖವಾಗಿದೆ. ಅನೇಕರು ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

Latest Videos

ಗಣೇಶ ಚಂದಾಗೆ ಪೀಡಿಸಿದರೆ 112ಕ್ಕೆ ಕರೆ ಮಾಡಿ: ಇಲ್ಲಿದೆ ಪ್ರಮುಖ ಸೂಚನೆಗಳು

ಗ್ರೇಸ್ ಅಂಕ ಸಾಧ್ಯತೆ: ಭಾಷಾಂತರ, ವಾಸ್ತವಾಂಶಗಳಲ್ಲಿ ತಪ್ಪುಗಳು ಆಗಿರುವ ಕಾರಣ ಅನೇಕರು ಕೀ ಉತ್ತರಗಳಿಗೆ ಆಕ್ಷೇಪಣೆ ಸಲ್ಲಿಸುತ್ತಿದ್ದಾರೆ. ಆಕ್ಷೇಪಣೆಗಳನ್ನು ಪರಿಗಣಿಸಿದರೆ ಕೃಪಾಂಕ ಸಾಧ್ಯತೆಯಿದೆ.

ಏನೇನು ದೋಷ?
- ‘ಲೋಕ್ ಅದಾಲತ್ ಅಧಿನಿಯಮ -2002 (ತಿದ್ದುಪಡಿ)’ ಎಂಬುದರ ಇಂಗ್ಲಿಷ್‌ ಪ್ರಶ್ನೆ ಸರಿಯಿದ್ದು, ಕನ್ನಡದಲ್ಲಿ ‘2022’ ಎಂದು ಮುದ್ರಿಸಲಾಗಿದೆ.

- ದೊಡ್ಡ ಗಾತ್ರದ ಕೊಕ್ಕರೆಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆಗಳು ಸರಿಯಾಗಿವೆ? ಎಂದು ಪ್ರಶ್ನೆ ಕೇಳಿ, ಅದಕ್ಕೆ ಮೊದಲನೇ ಹೇಳಿಕೆ, ‘ಇದು ಅತ್ಯಂತ ವೇಗವಾಗಿ ಹಾರಾಡುವ ಪಕ್ಷಿಗಳಲ್ಲಿ ಒಂದಾಗಿದೆ’ ಎಂದು ಕನ್ನಡದಲ್ಲಿ ಕೇಳಿದ್ದರೆ, ಇಂಗ್ಲಿಷ್‌ನಲ್ಲಿ Heaviest (ಭಾರದ) ಎಂದು ಕೇಳಿ ಗೊಂದಲ ಮೂಡಿಸಲಾಗಿದೆ.

ಚನ್ನಪಟ್ಟಣ ಉಪ ಚುನಾವಣೆ ಚರ್ಚೆಯಿಂದ ಬಿ.ವೈ.ವಿಜಯೇಂದ್ರ ದೂರ: ಕುತೂಹಲ

- ವಿವರಣಾತ್ಮಕವಾಗಿರುವ ವಾಕ್ಯದ ಪ್ರಶ್ನೆಯೊಂದಕ್ಕೆ, ಕನ್ನಡದಲ್ಲಿ ‘ರಾಜ್ಯಸಭೆಯ ಸಾರ್ವತ್ರಿಕ ಚುನಾವಣೆ’ ಎಂದು ಮುದ್ರಿಸಲಾಗಿದ್ದು, ಇಂಗ್ಲಿಷ್‌ನಲ್ಲಿ State Assembly (ರಾಜ್ಯದ ವಿಧಾನಸಭೆ) ಎಂದು ಮುದ್ರಿಸಲಾಗಿದೆ.

click me!