ಟೆಲಿವಿಷನ್ ಕಲ್ಚರಲ್ ಅಂಡ್ ಸ್ಪೋರ್ಟ್ ಕ್ಲಬ್ ನಲ್ಲಿ ಅಕ್ರಮ; ಹಿರಿಯ ಕಿರುತರೆ ನಟ ರವಿಕಿರಣ್  ವಿರುದ್ಧ ಗಂಭೀರ ಆರೋಪ!

Published : Feb 12, 2024, 09:51 PM IST
ಟೆಲಿವಿಷನ್ ಕಲ್ಚರಲ್ ಅಂಡ್ ಸ್ಪೋರ್ಟ್ ಕ್ಲಬ್ ನಲ್ಲಿ ಅಕ್ರಮ; ಹಿರಿಯ ಕಿರುತರೆ ನಟ ರವಿಕಿರಣ್  ವಿರುದ್ಧ ಗಂಭೀರ ಆರೋಪ!

ಸಾರಾಂಶ

ಟೆಲಿವಿಷನ್ ಕಲ್ಚರಲ್ ಅಂಡ್ ಸ್ಫೋರ್ಟ್ ಕ್ಲಬ್‌ನಲ್ಲಿ ಅವ್ಯವಹಾರ, ಹಣ ದುರುಪಯೋಗ ಆರೋಪ ಕೇಳಿಬಂದಿರುವ ಹಿನ್ನೆಲೆ ಹಿರಿಯ ಕಿರುತೆರೆ ನಟ ರವಿಕಿರಣ್ ವಿರುದ್ಧ ಕ್ರಮಕ್ಕೆ ಕಿರುತೆರೆ ಕಲಾವಿದರು ಸುಬ್ರಮಣ್ಯಪುರ ಪೊಲೀಸ್ ಠಾಣೆ ಮೆಟ್ಟಿಲೇರಿದ ಘಟನೆ ನಡೆದಿದೆ.

ಬೆಂಗಳೂರು (ಫೆ.12): ಟೆಲಿವಿಷನ್ ಕಲ್ಚರಲ್ ಅಂಡ್ ಸ್ಫೋರ್ಟ್ ಕ್ಲಬ್‌ನಲ್ಲಿ ಅವ್ಯವಹಾರ, ಹಣ ದುರುಪಯೋಗ ಆರೋಪ ಕೇಳಿಬಂದಿರುವ ಹಿನ್ನೆಲೆ ಹಿರಿಯ ಕಿರುತೆರೆ ನಟ ರವಿಕಿರಣ್ ವಿರುದ್ಧ ಕ್ರಮಕ್ಕೆ ಕಿರುತೆರೆ ಕಲಾವಿದರು ಸುಬ್ರಮಣ್ಯಪುರ ಪೊಲೀಸ್ ಠಾಣೆ ಮೆಟ್ಟಿಲೇರಿದ ಘಟನೆ ನಡೆದಿದೆ.

ಕಾರ್ಯದರ್ಶಿ ರವಿಕಿರಣ್ ಹಾಗೂ ಜಂಟಿ ಕಾರ್ಯದರ್ಶಿ ಉಮಾಶಂಕರ್ ರಿಂದ ಅಕ್ರಮವಾಗಿದೆ ಎಂದು ಆರೋಪಿಸಿರುವ ಕಿರುತೆರೆ ಕಲಾವಿದರು. ಕಳೆದ ೨೦ ವರ್ಷದಿಂದ ಕಿರುತೆರೆ ಕಲಾವಿದರಿಗಾಗಿ ಇರುವ ಕ್ಲಬ್ (Television Cultural and Sport Club). ಕ್ಲಬ್‌ನಲ್ಲಿ ಸಾವಿರಾರು ಕಿರುತೆರೆ ಕಲಾವಿದರಿದ್ದಾರೆ. ಆದರೆ ಕ್ಲಬ್ ಆರಂಭದಿಂದಲೇ ಈವರೆಗೂ ರವಿಕಿರಣ್ ಕಾರ್ಯದರ್ಶಿಯಾಗಿದ್ದರು. ಈ ಹಿಂದೆ ಕಿರುತೆರೆ ನಟ ನಟಿಯರಿಗಾಗಿ ಸರ್ಕಾರದಿಂದ ಅನುದಾನ ನೀಡಲಾಗಿತ್ತು. ಸರ್ಕಾರದಿಂದ ಕ್ಲಬ್ ಅಭಿವೃದ್ದಿಗೆ 3 ಕೋಟಿಗೂ ಅಧಿಕ ಹಣ ಹಾಗೂ ಒಂದು ಎಕರೆ ಜಮೀನು ನೀಡಲಾಗಿತ್ತು. ಸರ್ಕಾರ ನೀಡಿದ್ದ ಜಾಗದಲ್ಲಿ ರವಿಕಿರಣ್ ಸ್ವಯಂ ನಿರ್ಣಯದಿಂದ ಕಟ್ಟಡ ಕಟ್ಟಿಸಿದ್ದಾರೆ. ಕ್ಲಬ್ ನಿರ್ಮಾಣವನ್ನು ಯಾವುದೇ ಕಾಂಟ್ರಾಕ್ಟ್ ನೀಡದೆ ಸಹೋದರನಿಗೆ ನೀಡಿ ಅವ್ಯವಹಾರ ನಡೆಸಿದ್ದಾರೆಂದು ಆರೋಪಿಸಿರುವ ಕಿರುತೆರೆ ಕಲಾವಿದರು.

 

ಮುದ್ದಿನ ತಂಗಿ ಜೊತೆ ಬಿಗ್ ಬಾಸ್ ವಿನ್ನರ್ ಕಾರ್ತಿಕ್, ಹಳೆ ಫೋಟೋ ವೈರಲ್!

ಜೊತೆಗೆ ಕ್ಲಬ್ ಗೆ ಸಂಬಂಧಿಸಿದ ಜಿಎಸ್ ಟಿ,ಬಿಬಿಎಂಪಿ ಟ್ಯಾಕ್ಸ್ ಸೇರಿದಂತೆ ಹಲವು ತೆರಿಗೆಗಳ ಪಾವತಿ ಮಾಡಿಲ್ಲ. ಹಣವನ್ನು ಪಾವತಿ ಮಾಡದೇ ಅದರ ಸದಸ್ಯರಿಂದ ಹಣ ವಸೂಲಿ ಮಾಡಿದ್ದಾರೆ. ಈ ಅಕ್ರಮದ ಬಗ್ಗೆ ಚರ್ಚೆ ನಡೆಸಿ ಕ್ಲಬ್‌ಗೆ ಬರದಂತೆ ರವಿಕಿರಣ್ ರನ್ನ ಸಸ್ಪೆಂಡ್ ಮಾಡಲಾಗಿತ್ತು. ಸಸ್ಪೆಂಡ್ ಮಾಡಿದ್ರೂ ಸಹ ಕ್ಲಬ್‌ಗೆ ಬಂದು ಕ್ಲಬ್ ನಲ್ಲಿದ್ದ 6 ಲಕ್ಷ ರೂಪಾಯಿ ಹಣ ತೆಗೆದುಕೊಂಡು ಹೋಗಿದ್ದಾರೆ ಇದನ್ನು ಪ್ರಶ್ನೆ ಮಾಡಿದಾಗ ಕಲಾವಿದರು ಹಾಗೂ ರವಿ ಕಿರಣ್ ನಡುವೆ ಗಲಾಟೆಯಾಗಿದೆ. ಹೀಗಾಗಿ ರವಿಕಿರಣ್ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಠಾಣೆ ಮೆಟ್ಟಿಲೇರಿದ್ದಾರೆ. ಜೊತೆಗೆ ರವಿಕಿರಣ್ ವಿರುದ್ಧ ಮುಂದೆ ತೀವ್ರವಾದ ಹೋರಾಟ ಮಾಡೊದಾಗಿ ಕಲಾವಿದರ ಎಚ್ಚರಿಕೆ ನೀಡಿದ್ದಾರೆ. ಸದ್ಯ ಘಟನೆ ಸಂಬಂಧ ಸುಬ್ರಮಣ್ಯಪುರ ಪೊಲೀಸ್ ಠಾಣೆಗೆ ದೂರು ನೀಡಿರುವ ಕ್ಲಬ್ ಸದಸ್ಯರು.

ಕೋರ್ಟ್‌ನಲ್ಲಿ ಸರ್ಕಾರಿ ನೌಕರಿ ಕೊಡಿಸೋದಾಗಿ ರೈತನ ಮಗನಿಗೆ ₹1.80 ಲಕ್ಷ ವಂಚನೆ; ಹಣ ಕೇಳಿದ್ರೆ ಗತಿ ಕಾಣಿಸುವೆ ಎಂದ ದುರುಳ!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕೇಂದ್ರದ ಒಪ್ಪಿಗೆ ಸಿಕ್ರೆ ಕೃಷ್ಣ ಮೇಲ್ದಂಡೆ 3ನೇ ಹಂತದ ಪೂರ್ಣಕ್ಕೆ ಬದ್ಧ: ಡಿ.ಕೆ.ಶಿವಕುಮಾರ್‌
ಗ್ರೇಟರ್‌ ಬೆಂಗಳೂರು.. ವೈಜ್ಞಾನಿಕವಾಗಿ ಕಸ ಸಂಸ್ಕರಣೆ, ಆತಂಕ ಬೇಡ: ಡಿ.ಕೆ.ಶಿವಕುಮಾರ್‌