ಒಂದೆಡೆ ರಾಜ್ಯದಲ್ಲಿ ರೈತರು ಬರದಿಂದ ಕಂಗಾಲಾಗಿ ತಲೆ ಮೇಲೆ ಕೈಹೊತ್ತು ಕುಳಿತಿದ್ದರೆ, ಇನ್ನೊಂದೆಡೆ ರಾಜ್ಯ ಸರ್ಕಾರ ವಕ್ಫ್ ಆಸ್ತಿಗೆ ಗೋಡೆ ಕಟ್ಟು ತರಾತುರಿಯಲ್ಲಿ ಬಿದ್ದಿದೆ.
ಬೆಂಗಳೂರು (ಫೆ.12): ಕಬ್ಬನ್ ಪಾರ್ಕ್‌ನಲ್ಲಿ ಬಿಲ್ಡಿಂಗ್, ಬಂಡೀಪುರದಲ್ಲಿ ರೈಲ್ವೆ ಲೈನ್... ದಿನದಿಂದ ದಿನಕ್ಕೆ ಒಂದಲ್ಲ ಒಂದು ವಿವಾದಿತ ವಿಚಾರಗಳನ್ನು ಮೈಮೇಲೆ ಎಳೆದುಕೊಳ್ಳುತ್ತಿರುವ ರಾಜ್ಯ ಸರ್ಕಾರವೀಗ ಮತ್ತೊಂದು ಅಂಥದ್ದೇ ಅವಾಂತರ ಮಾಡಿಕೊಂಡಿದೆ. ಒಂದೆಡೆ ಇಡೀ ರಾಜ್ಯದಲ್ಲಿ ಬರವಿದೆ ಎಂದು ಸರ್ಕಾರ ಘೋಷಣೆ ಮಾಡಿ, ಕೇಂದ್ರ ಸರ್ಕಾರದ ಬರ ಪರಿಹಾರ ನೀಡುವಂತೆ ಮನವಿಯ ಮೇಲೆ ಮನವಿ ಮಾಡುತ್ತಿದೆ. ರಾಜ್ಯದಲ್ಲಿ ಬರವಿದ್ದಾಗ ಸರ್ಕಾರ ಹಣವನ್ನು ಸಮಯೋಚಿತವಾಗಿ ಖರ್ಚು ಮಾಡುವ ಪ್ಲ್ಯಾನಿಂಗ್ ಇಲ್ಲದಂತೆ ಕಾಣುತ್ತಿದೆ. ಒಂದೆಡೆ ರಾಜ್ಯದಲ್ಲಿ ರೈತರು ಬರದಿಂದ ಕಂಗಾಲಾಗಿ ಮುಂದೇನು ಎನ್ನುತ್ತಾ ತಲೆಮೇಲೆ ಕೈಹೊತ್ತು ಕುಳಿತಿದ್ದರೆ, ಇನ್ನೊಂದೆಡೆ ರಾಜ್ಯ ಸರ್ಕಾರ ತನಗೆ ವಕ್ಫ್ ಆಸ್ತಿಗೆ ಗೋಡೆ ಕಟ್ಟೋದೇ ಮುಖ್ಯ ಎನ್ನುವ ಅರ್ಥದಲ್ಲಿ ವರ್ತನೆ ಮಾಡುತ್ತಿದೆ. ರಾಜ್ಯದಲ್ಲಿರುವ ವಕ್ಫ್ ಆಸ್ತಿಗಳಿಗೆ ಗೋಡೆ ಕಟ್ಟುವ ಸಲುವಾಗಿ 31.84 ಕೋಟಿ ರೂಪಾಯಿಗಳನ್ನು ಮಂಜೂರು ಮಾಡಲಾಗಿದೆ. ಈ ಬಗ್ಗೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸರ್ಕಾರವನ್ನು ಟೀಕೆ ಮಾಡಿದ್ದಾರೆ.
'ಬರದಿಂದ ಕಷ್ಟದಲ್ಲಿರುವ ರೈತರಿಗೆ ನೆರವಾಗುವ ಬದಲಿಗೆ ರಾಜ್ಯ ಸರ್ಕಾರ, ವಕ್ಫ್ ಆಸ್ತಿಗಳನ್ನು ರಕ್ಷಿಸಲು ಕಾಂಪೌಂಡ್ ಕಟ್ಟಲು ತುದಿಗಾಲಲ್ಲಿದೆ. ಸರ್ಕಾರದ ಆದ್ಯತೆಗಳೇನು ಎಂದು ಇದರಿಂದ ತಿಳಿಯುತ್ತದೆ. ರಾಜ್ಯ ಸಂಕಷ್ಟವನ್ನು ಎದುರಿಸುತ್ತಿರುವಾಗ ವಕ್ಫ್ ಆಸ್ತಿ ಸಂರಕ್ಷಣೆ ಮಾಡಲು ಏನು ಆತುರ ? ಇದು ತುಷ್ಟೀಕರಣ ರಾಜಕಾರಣವಲ್ಲದೆ ಮತ್ತಿನ್ನೇನು? ಡಾ.ಸುಬ್ರಮಣಿಯನ್ ಸ್ವಾಮಿ ಅವರು ಹೇಳಿದಂತೆ The amount of illiteracy in Congress is unbelievable' ಎಂದು ಅವರು ಟ್ವೀಟ್‌ನಲ್ಲಿ ಬರೆದಿದ್ದಲ್ಲದೆ, ಫೆ.7 ರಂದು ಸರ್ಕಾರ ಹೊರಡಿಸಿರುವ ಪ್ರಕಟಣೆಯನ್ನು ಕೂಡ ಪೋಸ್ಟ್ ಮಾಡಿದ್ದಾರೆ.
ಬರದಿಂದ ಕಷ್ಟದಲ್ಲಿರುವ ರೈತರಿಗೆ ನೆರವಾಗುವ ಬದಲಿಗೆ ರಾಜ್ಯ ಸರ್ಕಾರ, ವಕ್ಫ್ ಆಸ್ತಿಗಳನ್ನು ರಕ್ಷಿಸಲು ಕಾಂಪೌಂಡ್ ಕಟ್ಟಲು ತುದಿಗಾಲಲ್ಲಿದೆ. ಸರ್ಕಾರದ ಆದ್ಯತೆಗಳೇನು ಎಂದು ಇದರಿಂದ ತಿಳಿಯುತ್ತದೆ. ರಾಜ್ಯ ಸಂಕಷ್ಟವನ್ನು ಎದುರಿಸುತ್ತಿರುವಾಗ ವಕ್ಫ್ ಆಸ್ತಿ ಸಂರಕ್ಷಣೆ ಮಾಡಲು ಏನು ಆತುರ ? ಇದು ತುಷ್ಟೀಕರಣ ರಾಜಕಾರಣವಲ್ಲದೆ ಮತ್ತಿನ್ನೇನು?… pic.twitter.com/9pgurnAArZ
— Basanagouda R Patil (Yatnal) (@BasanagoudaBJP)undefined
ಅದರೊಂದಿಗೆ 'ವಕ್ಫ್ ಆಸ್ತಿ ಸಂರಕ್ಷಿಸಲು ನೀಡಿರುವ ಅನುದಾನವನ್ನು ಕೂಡಲೇ ಹಿಂಪಡೆಯಬೇಕು. ಈ ಹಣವನ್ನು ರೈತರಿಗೆ ನೀಡಲಿ ಹಾಗೂ ರೈತರು ಬೆಳೆದಿರುವ ಬೆಳೆಗೆ ಕನಿಷ್ಠ ಬೆಂಬಲ ನಿಗದಿ ಮಾಡಲು ವಿನಿಯೋಗಿಸಲಿ. ಕುಸಿಯುವ ಹಂತದಲ್ಲಿರುವ ಶಾಲಾ ಕಟ್ಟಡಗಳ ದುರಸ್ತಿಗೆ ಈ ಹಣವನ್ನು ಉಪಯೋಗಿಸಲಿ..' ಎಂದು ಅವರು ಸರ್ಕಾರವನ್ನು ಆಗ್ರಹಿಸಿದ್ದಾರೆ.
ಹಿಂದೂಗಳ ಭಾವನೆಗೆ ಅಪಮಾನ ಮಾಡುವುದೇ ಕಾಂಗ್ರೆಸ್ ಸರ್ಕಾರದ ಸಂಸ್ಕೃತಿ: ಶಾಸಕ ಯತ್ನಾಳ್
ರಾಜ್ಯದ ಒಟ್ಟು 416 ವಕ್ಫ್ ಆಸ್ತಿಗಳ ಸಂರಕ್ಷಣೆಗಾಗಿ ಕಂಪೌಂಡ್ ಗೋಡೆ ನಿರ್ಮಾಣ ಮಾಡಲು ಒಟ್ಟು 31.84 ಲಕ್ಷ ರೂಪಾಯಿಗಳ ಅನುದಾನವನ್ನು ಬಿಡುಗಡೆ ಮಾಡಲಾಗಿದೆ ಎಂದು ಸರ್ಕಾರ ತಿಳಿಸಿದೆ. ಈ ಉಣವನ್ನು ಯಾವ ಉದ್ದೇಶಕ್ಕಾಗಿ ಬಿಡುಗಡೆ ಮಾಡಲಾಗಿದೆಯೋ ಅದೇ ಉದ್ದೇಶಕ್ಕೆ ಬಳಕೆ ಮಾಡಬೇಕು ಎಂದು ಷರತ್ತಿನಲ್ಲಿ ತಿಳಿಸಲಾಗಿದೆ. ಮೊದಲನೆಯ ಕಂತಿನಲ್ಲಿ ಶೇ. 50ರಷ್ಟು ಅನುದಾನ ಮಾತ್ರವೇ ಬಿಡುಗಡೆ ಆಗಲಿದೆ. ತದನಂತರ ಕಡ್ಡಾಯವಾಗಿ ಕಾಮಗಾರಿಯನ್ನು ಪರಿಶೀಲನೆ ಮಾಡಿ, ಮೊದಲನೇ ಕಂತಿನಲ್ಲಿ ಬಿಡುಗಡೆಯಾದ ಅನುದಾನಕ್ಕೆ ಹಣ ಬಳಕೆ ಪ್ರಮಾಣ ಪತ್ರವನ್ನು ಪಡೆದ ನಂತರ ಮುಂದಿನ ಆರ್ಥಿಕ ವರ್ಷದಲ್ಲಿ ಎರಡನೇ ಕಂತಿನ ಅನುದಾನ ಬಿಡುಗಡೆ ಮಾಡಬೇಕು ಎಂದು ಸರ್ಕಾರ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
'ಅಕ್ಕ ಸತ್ರೆ ಅಮಾವಾಸ್ಯೆ ನಿಲ್ಲೋದಿಲ್ಲ' ಪರೋಕ್ಷವಾಗಿ ಯತ್ನಾಳ್‌ಗೆ ನಿರಾಣಿ ಟಾಂಗ್!