ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನವಾಗಿರುವ ನಟ ದರ್ಶನ್ ಅವರು ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಪಶ್ಚಾತ್ತಾಪದಲ್ಲಿ ಕಾಲ ಕಳೆಯುತ್ತಿರುವ ದರ್ಶನ್ ಅವರನ್ನು ಅವರ ಕುಟುಂಬ ಸದಸ್ಯರು, ಸ್ನೇಹಿತರು ಭೇಟಿಯಾಗುತ್ತಿದ್ದಾರೆ. ಜೈಲೂಟದ ಜಂಜಾಟ, ಸೆರೆವಾಸದ ಸಂಕಟದಲ್ಲಿರುವ ದರ್ಶನ್ ಅವರನ್ನು ನೋಡಲು ಜೈಲು ಬಳಿ ಟಿ.ನರಸಿಪುರ ಮಹಿಳೆ ಬಂದಿದ್ದಾರೆ.
ಬೆಂಗಳೂರು (ಜು.13): ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನವಾಗಿರುವ ನಟ ದರ್ಶನ್ ಅವರು ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಪಶ್ಚಾತ್ತಾಪದಲ್ಲಿ ಕಾಲ ಕಳೆಯುತ್ತಿರುವ ದರ್ಶನ್ ಅವರನ್ನು ಅವರ ಕುಟುಂಬ ಸದಸ್ಯರು, ಸ್ನೇಹಿತರು ಭೇಟಿಯಾಗುತ್ತಿದ್ದಾರೆ. ಜೈಲೂಟದ ಜಂಜಾಟ, ಸೆರೆವಾಸದ ಸಂಕಟದಲ್ಲಿರುವ ದರ್ಶನ್ ಅವರನ್ನು ನೋಡಲು ಜೈಲು ಬಳಿ ಟಿ.ನರಸಿಪುರ ಮಹಿಳೆ ಬಂದಿದ್ದಾರೆ.
ದರ್ಶನ್ ಫಾರ್ಮ್ ಹೌಸ್‌ನಲ್ಲಿ ಒಂದು ವರ್ಷ ಕೆಲಸ ಮಾಡಿದ್ದ ತುಳಸಿ ದರ್ಶನ್ ಭೇಟಿಗೆ ಬಂದಿದ್ದು, ಇಂದು ಎರಡನೇ ಶನಿವಾರ ಆಗಿರುವುದರಿಂದ ಭೇಟಿಗೆ ಅವಕಾಶ ಇಲ್ಲ ಎಂದು ಜೈಲಿನ ಚೆಕ್ ಪೋಸ್ಟ್ ಬಳಿ ಬಂದು ವಾಪಸ್ ಹೋಗಿದ್ದಾರೆ. ತುಳಸಿ ಅವರು ದರ್ಶನ್ ಕೈಯಿಂದಲೇ ಟ್ಯಾಟೂ ಸೈನ್ ಹಾಕಿಸಿಕೊಂಡಿದ್ದು, ಭೇಟಿಗೆ ಅವಕಾಶ ಇಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ನಂತರ ಮಾತನಾಡಿದ ತುಳಸಿ, ದರ್ಶನ್ ಅಂತಹ ವ್ಯಕ್ತಿ ಅಲ್ಲವೇ ಅಲ್ಲ.
undefined
ದೇವರು ಒಂದೇ ಅವರು ಒಂದೇ. ದರ್ಶನ್ ಅವರು ಆದಷ್ಟು ಬೇಗ ಜೈಲಿನಿಂದ ಹೊರಬರಬೇಕು. ಚಾಮುಂಡೇಶ್ವರಿ ತಾಯಿ ಅವರಿಗೆ ಒಳ್ಳೆಯದನ್ನು ಮಾಡುತ್ತಾಳೆ. ನಾನು ಅವರನ್ನು ಎಂದೂ ಕೂಡ ದರ್ಶನ ಅಣ್ಣ ಅಂತ ಕರೆದಿಲ್ಲ. ಅವರು ನಮ್ಮ ಬಾಸ್ ಹಾಗೂ ಯಜಮಾನರು ಎಂದು ಕರೆಯುತ್ತಿದ್ದೇವೆ. ಇಂತಹ ಒಳ್ಳೆ ವ್ಯಕ್ತಿ ಹೀಗಾಗಿದ್ದಾರೆ ಎಂದರೆ ನೋವಾಗುತ್ತದೆ ಎಂದು ಕಣ್ಣೀರು ಹಾಕುತ್ತಲೇ ಮಾಧ್ಯಮಗಳ ಎದುರು ತುಳಸಿ ತಿಳಿಸಿದರು.
ಕೆಆರ್‌ಎಸ್ ಬಳಿ ಟ್ರಯಲ್ ಬ್ಲಾಸ್ಟ್‌ಗೆ ಅನುಮತಿ ನೀಡದಿರಿ: ಪ್ರಮೋದಾದೇವಿ ಒಡೆಯರ್
ಏನಿದು ಪ್ರಕರಣ?: ಚಿತ್ರದುರ್ಗದ ಯುವಕ ರೇಣುಕಾಸ್ವಾಮಿ ಪವಿತ್ರಾ ಗೌಡಗೆ ಕೆಟ್ಟದಾಗಿ ಮೆಸೇಜ್ ಮಾಡಿದ್ದ. ಇದೇ ಕಾರಣಕ್ಕೆ ಕೋಪಗೊಂಡ ದರ್ಶನ್ ಅಂಡ್ ಗ್ಯಾಂಗ್ ಪ್ಲಾನ್ ಮಾಡಿ ರೇಣುಕಾಸ್ವಾಮಿಯನ್ನು ಚಿತ್ರದುರ್ಗದಿಂದ ಬೆಂಗಳೂರಿಗೆ ಕರೆಸಿ ಬಹಳ ಕ್ರೂರವಾಗಿ ಕೊಲೆ ಮಾಡಿದ್ದರು, ಇದಾದ ಬಳಿಕ ಪೊಲೀಸ್ ಅಧಿಕಾರಿಗಳು ಈ ಕೊಲೆ ಹಿಂದಿನ ನಿಜವಾದ ಆರೋಪಿಗಳನ್ನು ಪತ್ತೆ ಹಚ್ಚಿ ಜೈಲಿಗೆ ಕಳುಹಿಸಿದ್ದಾರೆ.