ಫ್ಲೆಕ್ಸ್‌ ಹಾಕಿಸಿದ್ದು ಯಾರು? ನಾನಲ್ಲ ಎಂದ ನಲಪಾಡ್‌ ವಿರುದ್ಧ ಡಿಕೆಶಿ ಗರಂ

By Gowthami K  |  First Published Jul 13, 2024, 5:14 PM IST

ಫ್ಲೆಕ್ಸ್‌ ಹಾವಳಿ ತಲೆಯೆತ್ತಿರುವ ಬಗ್ಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಗುರುವಾರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೇಸು ರಿಜಿಸ್ಟರ್‌ ಮಾಡಿಸಿಬಿಡ್ತೀನಿ’ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.


ಬೆಂಗಳೂರು (ಜು13): ಮತ್ತೆ ಫ್ಲೆಕ್ಸ್‌ ಹಾವಳಿ ತಲೆಯೆತ್ತಿರುವ ಬಗ್ಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಗುರುವಾರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನೂತನ ವಿಧಾನಪರಿಷತ್‌ ಸದಸ್ಯ ಬಸನಗೌಡ ಬಾದರ್ಲಿ ಅವರ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ಹಿನ್ನಲೆಯಲ್ಲಿ ವಿಧಾನಸೌಧದ ಬಳಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರ ಫೋಟೋ ಒಳಗೊಂಡ ಫ್ಲೆಕ್ಸ್‌ ಹಾಕಲಾಗಿತ್ತು.

ಈ ಹಿನ್ನೆಲೆಯಲ್ಲಿ ಗರಂ ಆದ ಶಿವಕುಮಾರ್‌, ‘ಫ್ಲೆಕ್ಸ್ ಹಾಕು ಎಂದು ಹೇಳಿದ್ದು ಯಾರು? ಕೇಸು ರಿಜಿಸ್ಟರ್‌ ಮಾಡಿಸಿಬಿಡ್ತೀನಿ’ ಎಂದು ತರಾಟೆಗೆ ತೆಗೆದುಕೊಂಡರು. ಈ ವೇಳೆ ಕಾಂಗ್ರೆಸ್‌ ಯುವ ಘಟಕದ ಅಧ್ಯಕ್ಷ ಮೊಹಮ್ಮದ್ ನಲಪಾಡ್‌ ‘ನಾನು ಹಾಕಿಸಿಲ್ಲ’ ಎಂದು ಸ್ಪಷ್ಟನೆ ನೀಡಲು ಮುಂದಾದರು. ಇದಕ್ಕೆ ಮತ್ತೆ ಗದರಿದ ಶಿವಕುಮಾರ್‌, ‘ನೀನು ಮತ್ತು ಕೋಲಾರದವನು ಹಾಕಿಸಿದ್ದೀರಿ. ಈಗ ಕೇಸು ರಿಜಿಸ್ಟರ್‌ ಮಾಡಲು ಹೇಳುತ್ತೇನೆ’ ಎಂದು ಸಿಡಿಮಿಡಿಗೊಂಡರು.

Tap to resize

Latest Videos

ಮುಸ್ಲಿಂ ಮಹಿಳೆಯರ ಬಗ್ಗೆ ಅವಹೇಳನಕಾರಿ ಹೇಳಿಕೆ ಆರೋಪ, ಕಲ್ಲಡ್ಕ ಭಟ್‌ ವಿರುದ್ಧದ ವಿಚಾರಣೆಗೆ ಹೈಕೋರ್ಟ್ ತಡೆ

ಪರಿಷತ್‌ ಸದಸ್ಯರಾಗಿ ಬಸನಗೌಡ ಬಾದರ್ಲಿ ಪ್ರಮಾಣ ಸ್ವೀಕಾರ:
ವಿಧಾನಪರಿಷತ್‌ ಸದಸ್ಯ ಸ್ಥಾನಕ್ಕೆ ನಡೆದ ಉಪ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾದ ಬಸನಗೌಡ ಬಾದರ್ಲಿ ಅವರು ಬುಧವಾರ ವಿಧಾನಸೌಧದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ಗೌಪ್ಯತೆ ಪ್ರಮಾಣ ಭೋದಿಸಿದರು.

ಅಂಬಾನಿ ಮದುವೆಯಲ್ಲಿ ರಾಮೇಶ್ವರಂ ಕೆಫೆಯ ವಿವಿಧ ಖಾದ್ಯ ರೆಡಿ, ಬೆಂಗಳೂರಿನ ಮತ್ತೊಂದು ಕೆಫೆಯಿಂದಲೂ ಕ್ಯಾಟರಿಂಗ್!

ಜಗದೀಶ್‌ ಶೆಟ್ಟರ್‌ ಅವರು ಪರಿಷತ್‌ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿ ಲೋಕಸಭೆ ಸದಸ್ಯರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ವಿಧಾನಸಭೆಯಿಂದ ವಿಧಾನಪರಿಷತ್‌ಗೆ ಚುನಾಯಿತರಾಗುವ ಒಂದು ಸ್ಥಾನ ಖಾಲಿಯಾಗಿತ್ತು. ಈ ಸ್ಥಾನಕ್ಕೆ ನಡೆದ ಉಪ ಚುನಾವಣೆಯಲ್ಲಿ ಪ್ರತಿಪಕ್ಷಗಳಿಂದ ಯಾರೂ ನಾಮಪತ್ರ ಸಲ್ಲಿಕೆ ಮಾಡದ ಹಿನ್ನೆಲೆಯಲ್ಲಿ ಬಸನಗೌಡ ಬಾದರ್ಲಿ ಅವಿರೋಧ ಆಯ್ಕೆಯಾಗಿದ್ದರು. ಬುಧವಾರ ವಿಧಾನಸೌಧದಲ್ಲಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ಬಾದರ್ಲಿ ಅವರು ಸಂಜೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಕೃತಜ್ಞತೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಆಹಾರ ಸಚಿವ ಕೆ.ಎಚ್.ಮುನಿಯಪ್ಪ, ಸಣ್ಣ ನೀರಾವರಿ ಸಚಿವ ಬೋಸರಾಜು, ಪರಿಷತ್ ಮುಖ್ಯ ಸಚೇತಕ ಸಲೀಂ ಅಹ್ಮದ್ ಹಾಜರಿದ್ದರು.

click me!