ಯಾವ ಡಿಕ್ಷನರಿ ನೋಡಿದ್ರೂ 'ರಾಮನಗರ'ಕ್ಕಿಂತ ಒಳ್ಳೆ ಪದ ಸಿಗೋದಿಲ್ಲ: ಸಂಸದ ಸಿ ಎನ್‌ ಮಂಜುನಾಥ್

By Ravi Janekal  |  First Published Jul 13, 2024, 4:26 PM IST

ಯಾವುದೇ ಡಿಕ್ಷನರಿ ನೋಡಿದ್ರೂ ರಾಮನಗರ ಅಂತ ಒಳ್ಳೆ ಪದ ಬೇರೊಂದು ಸಿಗೋದಿಲ್ಲ. ಆ ಹೆಸರಿಗೆ ಭಾವನಾತ್ಮಕ, ಧಾರ್ಮಿಕ ಪೌರಾಣಿಕ ಸಂಬಂಧ ಇದೆ ಎಂದು ಸಂಸದ ಸಿಎನ್‌ ಮಂಜುನಾಥ್ ರಾಮನಗರ ಜಿಲ್ಲೆ ಹೆಸರು ಮರುನಾಮಕರಣ ಮಾಡುವುದನ್ನು ಖಂಡಾತುಂಡವಾಗಿ ವಿರೋಧಿಸಿದರು.


ರಾಮನಗರ (ಜು.13): ಯಾವುದೇ ಡಿಕ್ಷನರಿ ನೋಡಿದ್ರೂ ರಾಮನಗರ ಅಂತ ಒಳ್ಳೆ ಪದ ಬೇರೊಂದು ಸಿಗೋದಿಲ್ಲ. ಆ ಹೆಸರಿಗೆ ಭಾವನಾತ್ಮಕ, ಧಾರ್ಮಿಕ ಪೌರಾಣಿಕ ಸಂಬಂಧ ಇದೆ ಎಂದು ಸಂಸದ ಸಿ.ಎನ್‌. ಮಂಜುನಾಥ್ ರಾಮನಗರ ಜಿಲ್ಲೆ ಹೆಸರು ಮರುನಾಮಕರಣ ಮಾಡುವುದನ್ನು ಖಂಡಾತುಂಡವಾಗಿ ವಿರೋಧಿಸಿದರು.

ಇಂದು ಮಾಗಡಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಂಸದರು, ಕೇವಲ ರಾಮನಗರ ಹೆಸರು ಬದಲಾಯಿಸಿದ ಮಾತ್ರಕ್ಕೆ ಅಭಿವೃದ್ಧಿ ಆಗೊಲ್ಲ. ಬೆಂಗಳೂರುನಗರ ಒಳಗೆ ದಕ್ಷಿಣ ತಾಲೂಕು ಇದೆ. ಇನ್ನೊಂದು ಇನ್ನೊಂದು ದಕ್ಷಿಣ ಜಿಲ್ಲೆ ಅಂದ್ರೆ ಜನರಿಗೆ ಗೊಂದಲ ಆಗುತ್ತೆ. ನೀವು ಅಭಿವೃದ್ಧಿ ಮಾಡೋದಾದ್ರೆ ಬ್ರಾಂಡ್ ರಾಮನಗರ ಅಂತ ಡೆವಲಪ್ ಮಾಡಿ, ಮುಂದೆ ಕೋಲಾರನ ಬೆಂಗಳೂರು ಪೂರ್ವ ಜಿಲ್ಲೆ ಅಂತಾ ಮಾಡ್ತೀರಾ? ಚಿಕ್ಕಬಳ್ಳಾಪುರವನ್ನ ಬೆಂಗಳೂರು ಉತ್ತರ ಜಿಲ್ಲೆ ಅಂತಾ ಮಾಡ್ತೀರಾ? ಬೆಂಗಳೂರು ಇಂದು ಬೃಹತ್ ಆಗಿ ಬೆಳೆದಿದೆ. ಅಲ್ಲೇ ಸಾಕಷ್ಟು ಮೂಲಭೂತ ಸಮಸ್ಯೆಗಳಳಿವೆ. ಭೂಮಿಗೆ ಬೆಲೆ ಜಾಸ್ತಿ ಆದ್ರೆ ಪ್ರಯೋಜನವಿಲ್ಲ. ಭೂಮಿಯಲ್ಲಿ ಬೆಳೆಯುವ ಬೆಳೆಗೆ ಬೆಲೆ ಜಾಸ್ತಿ ಆಗಬೇಕು. ಯಾವ ಉದ್ದೇಶಕ್ಕೆ ಈ ರೀತಿ ಮಾಡಲು ಹೊರಟಿದ್ದಾರೋ ಗೊತ್ತಿಲ್ಲ. ಬದಲಾವಣೆ ಮಾಡಬಾರದು ಅಂತ ಮುಖ್ಯಮಂತ್ರಿಗಳನ್ನ ಮನವಿ ಮಾಡಿದ್ದೇನೆ. ಇದು ರೇಷ್ಮೆ ನಾಡಾಗೆ ಉಳಿಯಬೇಕು. ರೈತರ ಜಿಲ್ಲೆಯಾಗಿಯೇ ಉಳಿಯಬೇಕು. ಇದು ವೈಜ್ಞಾನಿಕವಾಗಿ ಸಮಂಜಸ ಅಲ್ಲ ಎಂದರು.

Tap to resize

Latest Videos

undefined

ಜೈಲಿನಲ್ಲಿ ಸಮಯ ಕಳೆಯಲು ಭಜನೆ ಮೊರೆ ಹೋದ ನಟ ದರ್ಶನ್!

ಮರು ನಾಮಕರಣಕ್ಕೆ ಹಾಸನದವರು ಮಾತ್ರ ವಿರೋಧ ಮಾಡುತ್ತಿದ್ದಾರೆ ಎಂಬ ಶಾಸಕ ಬಾಲಕೃಷ್ಣ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಂಸದರು, ನಾವು ಬೆಂಗಳೂರಿನಲ್ಲೆ ಇದ್ದೇವೆ. 40 ವರ್ಷದಿಂದ ಬೆಂಗಳೂರಲ್ಲೇ ಬದುಕುತ್ತಿದ್ದೇವೆ. ಆಗ ಅವರೇ ಬೆಂಗಳೂರಿನಲ್ಲಿರಲಿಲ್ಲ. ಹಿಂದೆ ರಾಮನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆಯೆ ಆಗಿತ್ತು ಅಲ್ವಾ? ಒಂದು ಸರಿಯಾದ ಮೆಡಿಕಲ್ ಕಾಲೇಜು ಮಾಡಲು ಆಗಿಲ್ಲ. ವೈದ್ಯರ ನೇಮಕ ಮಾಡಲು ಆಗಿಲ್ಲ. ಮೊದಲು ಅದನ್ನ ಮಾಡಿ ಎಂದು ಶಾಸಕ ಬಾಲಕೃಷ್ಣಗೆ ಟಾಂಗ್ ನೀಡಿದರು. 

'ರಾಮನಗರ' ಹೆಸರು ಬದಲಾವಣೆ ಸಾಹಸಕ್ಕೆ ಕೈಹಾಕಿದ್ರೆ  ಸರಿಯಿರಲ್ಲ: ಕಾಂಗ್ರೆಸ್ ನಾಯಕರಿಗೆ ನಿಖಿಲ್ ಕುಮಾರಸ್ವಾಮಿ ಎಚ್ಚರಿಕೆ!

ರಾಮನಗರ ಹಾಗು ಕನಕಪುರ ಮೆಡಿಕಲ್ ಕಾಲೇಜಿಗೆ ಕೇಂದ್ರದಿಂದ ಅನುಮತಿ ನಿರಾಕರಣೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಂಸದರು, ಅವರು ಅಪ್ಲಿಕೇಶನ್ ಹಾಕಿರೋದೇ ತಪ್ಪು. ಅದಕ್ಕೆ 600 ಬೆಡ್ ಆಸ್ಪತ್ರೆ ಬೇಕಿತ್ತು. ಅದನ್ನ ಕಟ್ಟೇ ಇಲ್ಲ. ಬೋಧಕರನ್ನ ನೇಮಕ ಮಾಡಬೇಕು ಅದನ್ನೇ ಮಾಡಿಲ್ಲ. ಅಪ್ಲಿಕೇಶನ್ ಹಾಕಿರೋದೆ ತಪ್ಪು. ಮೂಲಸೌಕರ್ಯ ಯಾವುದೂ ಇಲ್ಲ. ಸರಿಯಾಗಿ ಅಪ್ಲಿಕೇಶನ್ ಹಾಕದೇ ನಾವು ಲೋಕಸಭೆಯಲ್ಲಿ ಮಾತಾಡಿದ್ರೆ ಆಗೊಲ್ಲ. ಇವರು ವೈದ್ಯರಾಗಿ ಫೂಲಿಶ್ ಆಗಿ ಮಾತಾಡ್ತಾರೆ ಅಂತಾರೆ. ಇದು ರಾಜ್ಯ ಸರ್ಕಾರ ಪ್ರಮಾದ ಎಂದ ಸಂಸದರು.

click me!