ಅಪಘಾತದಲ್ಲಿ ಕರ್ನಾಟಕ ನಂ 2; ಅಪಾಯಕಾರಿಯಾಗಿವೆ ಇಲ್ಲಿನ ರಸ್ತೆಗಳು!

By Suvarna News  |  First Published Dec 25, 2019, 8:21 AM IST

ಅಪಘಾತದಿಂದ ಸಾವು: ದಕ್ಷಿಣದಲ್ಲಿ ಕರ್ನಾಟಕ ನಂ.2 | ತಮಿಳುನಾಡು ಪ್ರಥಮ ಸ್ಥಾನ | 1 ಲಕ್ಷ ಜನಕ್ಕೆ ಕರುನಾಡಿನಲ್ಲಿ ಸರಾಸರಿ 16.9 ಮಂದಿ ರಸ್ತೆ ಅಪಘಾತದಲ್ಲಿ ಬಲಿ: ಅಧ್ಯಯನ


ನವದೆಹಲಿ (ಡಿ. 25): ರಸ್ತೆ ಅಪಘಾತಗಳಲ್ಲಿ ಕರ್ನಾಟಕವು ದಕ್ಷಿಣ ಭಾರತದ ರಾಜ್ಯಗಳಲ್ಲಿ ಎರಡನೇ ಸ್ಥಾನ ಪಡೆದಿದೆ. 1990 ರಲ್ಲಿ ನಡೆದ ಅಧ್ಯಯನದಲ್ಲಿ ಸುರಕ್ಷಿತವಾಗಿದ್ದ ಕರ್ನಾಟಕ ರಸ್ತೆಗಳು ಈಗ ‘ಡೆಡ್ಲಿ ನಂ.2’ ಎಂಬ ಕುಖ್ಯಾತಿ ಪಡೆದಿವೆ.

‘ಲ್ಯಾನ್ಸೆಟ್‌ ಗ್ಲೋಬಲ್‌ ಬರ್ಡನ್‌ ಆಫ್‌ ಡಿಸೀಸ್‌’ ಎಂಬ ಅಧ್ಯಯನದಲ್ಲಿ ಈ ಆತಂಕಕಾರಿ ಅಂಶಗಳು ವ್ಯಕ್ತವಾಗಿವೆ. ದಕ್ಷಿಣದ ರಾಜ್ಯಗಳಲ್ಲಿ ತಮಿಳುನಾಡಿನ ರಸ್ತೆಗಳು ಅತ್ಯಂತ ಅಸುರಕ್ಷಿತ ಎಂದು ಕಂಡುಬಂದಿದೆ.

Tap to resize

Latest Videos

2017ರ ಅಂಕಿ-ಅಂಶಗಳ ಪ್ರಕಾರ ಪ್ರತಿ 1 ಲಕ್ಷ ಜನಸಂಖ್ಯೆಯಲ್ಲಿ ಕರ್ನಾಟಕದಲ್ಲಿ ಸರಾಸರಿ 16.9 ಜನರು ರಸ್ತೆ ಅಪಘಾತಗಳಲ್ಲಿ ಸಾವನ್ನಪ್ಪುತ್ತಿದ್ದಾರೆ. ತಮಿಳುನಾಡಿನಲ್ಲಿ ಅತಿ ಗರಿಷ್ಠ 20 ಜನ, ಆಂಧ್ರಪ್ರದೇಶದಲ್ಲಿ 15.8, ತೆಲಂಗಾಣದಲ್ಲಿ 14.4, ಕೇರಳದಲ್ಲಿ 14 ಹಾಗೂ ಗೋವಾದಲ್ಲಿ ಅತಿ ಕನಿಷ್ಠ 11.1 ಜನರು ಸಾವನ್ನಪ್ಪುತ್ತಿದ್ದಾರೆ.

ಬೆಂಗಳೂರು: ಬಾತ್‌ರೂಂ ಗೋಡೆ ಕೊರೆದು ದೋಚಿದ್ದು 77 ಕೆಜಿ ಚಿನ್ನ!

1990ರ ಅಧ್ಯಯನದಲ್ಲಿ ಗೋವಾ ರಸ್ತೆಗಳು ಈಗಿನಂತೆಯೇ ದಕ್ಷಿಣ ಭಾರತದಲ್ಲೇ ಅತಿ ಸುರಕ್ಷಿತ ಎಂದು ವ್ಯಕ್ತವಾಗಿತ್ತು. ಆಗ ಗೋವಾ ನಂತರದ ಸ್ಥಾನ ಕರ್ನಾಟಕಕ್ಕೆ ಪ್ರಾಪ್ತಿಯಾಗಿತ್ತು. ಆದರೆ 27 ವರ್ಷದಲ್ಲಿ ಕರ್ನಾಟಕದ ರಸ್ತೆಗಳು ಅತ್ಯಂತ ಅಪಾಯಕಾರಿ ಮಟ್ಟಕ್ಕೆ ತಿರುಗಿವೆ. ಆಗಲೂ ತಮಿಳುನಾಡು ಅಪಘಾತಗಳಲ್ಲಿ ನಂ.1 ಸ್ಥಾನ ಪಡೆದಿತ್ತು.

ದೇಶದಲ್ಲಿ ಉತ್ತರಾಖಂಡ ನಂ.1:

ಉತ್ತರಾಖಂಡವು ರಸ್ತೆ ಅಪಘಾತಗಳಲ್ಲಿ ದೇಶದಲ್ಲೇ ಮೊದಲ ಸ್ಥಾನ ಪಡೆದಿದೆ. ಇಲ್ಲಿ ಪ್ರತಿ 1 ಲಕ್ಷ ಜನಸಂಖ್ಯೆಗೆ 26.3 ಸಾವುಗಳು ಸಂಭವಿಸುತ್ತವೆ. ನಂತರದ ಸ್ಥಾನಲ್ಲಿ ಪಂಜಾಬ್‌ (22.9) ಇದೆ. ಆದರೆ ಉತ್ತರಾಖಂಡದ ಸ್ಥಿತಿ 1990ಕ್ಕಿಂತ ಈಗ ಸುಧಾರಿಸಿದೆ. ಆಗ ಸಾವಿನ ಪ್ರಮಾಣ 1 ಲಕ್ಷ ಜಸಂಖ್ಯೆಗೆ 35.7 ಇತ್ತು.

ಬೆಂಗ್ಳೂರಿಗೆ ಲೇಡಿ ಸಿಂಗಂ ಇಶಾ ಪಂತ್ ಬಂದಿದ್ದಾರೆ, ಡ್ರಗ್ಸ್ ಮಾಫಿಯಾ ಉಸಿರೆತ್ತಂಗಿಲ್ಲ

ಇನ್ನು ಇಡೀ ದೇಶದಲ್ಲಿ 2017ರಲ್ಲಿ ರಸ್ತೆ ಅವಘಡಗಳಲ್ಲಿ 2.2 ಲಕ್ಷ ಜನರು ಗಾಯಗೊಂಡು ಬಳಿಕ ಸಾವನ್ನಪ್ಪಿದ್ದಾರೆ.

ಕರ್ನಾಟಕದಲ್ಲಿ ಮಾನಸಿಕ ಆರೋಗ್ಯ ಸಮಸ್ಯೆ

ಕರ್ನಾಟಕವು ಮಾನಸಿಕ ರೋಗಗಳ 10 ವಿಭಾಗಗಳ ಪೈಕಿ 6ರಲ್ಲಿ ರಾಷ್ಟ್ರೀಯ ಸರಾಸರಿಯನ್ನೂ ಮೀರಿಸಿದೆ. ಇದರಿಂದಾಗಿ ಕರ್ನಾಟಕದಲ್ಲಿ ಮಾನಸಿಕ ಆರೋಗ್ಯ ಸಮಸ್ಯೆ ಸಾಕಷ್ಟಿದೆ ಎಂದು ‘ಲ್ಯಾನ್ಸೆಟ್‌ ಗ್ಲೋಬಲ್‌ ಬರ್ಡನ್‌ ಆಫ್‌ ಡಿಸೀಸ್‌’ ಅಧ್ಯಯನ ಹೇಳಿದೆ.

click me!