
ರಾಮನಗರ [ಡಿ.24]: ಮಂಗಳೂರಿನಲ್ಲಿ ಪ್ರತಿಭಟನೆ ವೇಳೆ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಪೊಲೀಸರು ವಿಡಿಯೋ ಬಿಡುಗಡೆ ಮಾಡಿದ್ದಾರೆ. ಕಲ್ಲು ತಂದು ಎಸೆಯುವ ವಿಡಿಯೋ ಬಿಡುಗಡೆಯಾಗಿದ್ದು ಈ ಬಗ್ಗೆ ತನಿಖೆ ನಡೆಯಲಿ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ರಾಮನಗರದ ಜನ್ನಪಟ್ಟಣದಲ್ಲಿ ಮಾತನಾಡಿದ ಎಚ್.ಡಿ.ಕುಮಾರಸ್ವಾಮಿ, ಕಲ್ಲುಗಳನ್ನು ತಂದು ಎಸೆದಿರುವ ಈ ದೃಶ್ಯ ಸತ್ಯವೋ ಅಸತ್ಯವೋ ಎನ್ನುವ ಬಗ್ಗೆ ನಡೆಯಲಿ. ಯಾರಾದರೂ ಕಾನೂನು ಬಾಹಿರವಾಗಿ ಗಲಭೆಗೆ ಕಾರಣವಾಗಿದ್ದಲ್ಲಿ ಅವರ ವಿರುದ್ಧ ಕ್ರಮ ಕೈಗೊಳ್ಳಲಿ ಇದು ಸರ್ಕಾರ ಕರ್ತವ್ಯ ಎಂದರು.
ಈ ಬಗ್ಗೆ ಕ್ರಮ ಕೈಗೊಳ್ಳಲಿ ಎಂದು ನಾನು ಕೂಡ ಒತ್ತಾಯ ಮಾಡುತ್ತೇಮೆ. ಗಲಭೆ ನಡೆಸುವವರಿಗೆ ನನ್ನ ಬೆಂಬಲ ಇಲ್ಲ. ಈ ಬಗ್ಗೆ ಸತ್ಯಾಂಶಗಳು ಹೊರಕ್ಕೆ ಬರಲಿ ಎಂದು ಕುಮಾರಸ್ವಾಮಿ ಹೇಳಿದರು.
ಮಂಗಳೂರಿನಲ್ಲಿ ನಡೆದ ಹಿಂಸಾಚಾರದ ಬಗೆಗಿನ ಸಮಗ್ರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ಕಿಸಿ
ಇಂದು ಮಂಗಳೂರು ಹಿಂಸಾಚಾರದ ಬಗ್ಗೆ ವಿಡಿಯೋ ವೈರಲ್ ಮಾಡಿರುವುದು ಏಕೆ. ಅಂದೇ ಯಾಕೆ ವಿಡಿಯೋ ವೈರಲ್ ಮಾಡಲಿಲ್ಲವೇಕೆ. ಈ ಬಗ್ಗೆ ಸಂಶಯವಿದೆ ಎಂದೂ ಕುಮಾರಸ್ವಾಮಿ ಅನುಮಾನ ವ್ಯಕ್ತಪಡಿಸಿದರು.
ಪ್ರತಿಭಟನಾಕಾರರು ಪೊಲೀಸ್ ಶಸ್ತ್ರಾಸ್ತ್ರ ತುಂಬಿದ್ದ ಕೊಠಡಿಗಳಿಗೆ ನುಗ್ಗಲು ಯತ್ನ ಮಾಡಿದ್ದರು ಎಂದು ಹೇಳಿಕೆ ನೀಡಿದ್ದಾರೆ. ಇನ್ನು ಕಮಿಷನರ್ ಶಸ್ತ್ರಾಸ್ತ್ರ ಮಾರಾಟ ಮಾಡುವ ಅಂಗಡಿ ಪಕ್ಕದಲ್ಲೇ ಒತ್ತು ಎಂದು ಹೇಳಿದ್ದಾರೆ. ಗೊಂದಲದ ವೇಳೆಇಕೆ ನೀಡುತ್ತಿದ್ದಾರೆ. ಇದರ ವಾಸ್ತವತೆಯನ್ನು ಜನರ ಮುಂದೆ ಇಡಬೇಕು ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದರು.
ಇವರ ತಪ್ಪುಗಳನ್ನು ಮುಚ್ಚಿ ಹಾಕಲು ಈ ಸರ್ಕಾರ ಏನಾದರೂ ಹುನ್ನಾರ ನಡೆಸಿದರೆ ಅದನ್ನ ಕೆಳಿಕೊಂಡು ಸುಮ್ಮನೆ ಇರಲು ನಾನು ಕಿವಿಗೆ ಹೂ ಮುಡಿದುಕೊಂಡಿಲ್ಲ. ಪೌರತ್ವ ವಿಚಾರ ಒಂದು ಕಡೆ ಇರಲಿ. ಈ ವಿಚಾರದಲ್ಲಿ ರಾಜ್ಯದ ಹಲವು ಕಡೆ ಪ್ರತಿಭಟನೆ ನಡೆದಿವೆ. ಎಲ್ಲಿಯೂ ಗಲಾಟೆ ನಡೆದಿಲ್ಲ. ಆದರೆ ಮಂಗಳೂರಿನಲ್ಲೆ ಇಷ್ಟು ದೊಡ್ಡ ಮಟ್ಟದ ಗಲಾಟೆ ಏಕೆ ನಡೆಯಿತು ಎಂದು ಮಾಜಿ ಸಿಎಂ ಕುಮಾರಸ್ವಾಮಿ ಪ್ರಶ್ನೆ ಮಾಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ