Mangaluru: ವೈದ್ಯಕೀಯ ವಿದ್ಯಾರ್ಥಿ ಸಾವು: 8 ವರ್ಷಗಳ ಬಳಿಕ ಸಿಬಿಐಗೆ ವಹಿಸಿದ ಸುಪ್ರೀಂಕೋರ್ಟ್!

By Govindaraj S  |  First Published Nov 9, 2022, 10:11 AM IST

ಎಂಟು ವರ್ಷಗಳ ಹಿಂದಿನ ವೈದ್ಯಕೀಯ ವಿದ್ಯಾರ್ಥಿ ನಿಗೂಢ ಸಾವಿನ ಪ್ರಕರಣವನ್ನು ಸಿಬಿಐ ತನಿಖೆಗೆ ನೀಡಿ ಸುಪ್ರೀಂಕೋರ್ಟ್ ಆದೇಶ ಹೊರಡಿಸಿದೆ. 2014ರ ಮಾ.23ರಂದು ಮಂಗಳೂರಿನಲ್ಲಿ ನಡೆದಿದ್ದ ವಿದ್ಯಾರ್ಥಿ ನಿಗೂಢ ಸಾವು ಪ್ರಕರಣ ಇದಾಗಿದ್ದು, ತಣ್ಣೀರುಬಾವಿ ಬಳಿ ತಲೆ ಬೇರ್ಪಟ್ಟ ಸ್ಥಿತಿಯಲ್ಲಿ ವಿದ್ಯಾರ್ಥಿ ಮೃತದೇಹ ಪತ್ತೆಯಾಗಿತ್ತು. 


ಭರತ್ ರಾಜ್, ಏಷ್ಯಾನೆಟ್ ಸುವರ್ಣ ನ್ಯೂಸ್, ಮಂಗಳೂರು

ಮಂಗಳೂರು (ನ.09): ಎಂಟು ವರ್ಷಗಳ ಹಿಂದಿನ ವೈದ್ಯಕೀಯ ವಿದ್ಯಾರ್ಥಿ ನಿಗೂಢ ಸಾವಿನ ಪ್ರಕರಣವನ್ನು ಸಿಬಿಐ ತನಿಖೆಗೆ ನೀಡಿ ಸುಪ್ರೀಂಕೋರ್ಟ್ ಆದೇಶ ಹೊರಡಿಸಿದೆ. 2014ರ ಮಾ.23ರಂದು ಮಂಗಳೂರಿನಲ್ಲಿ ನಡೆದಿದ್ದ ವಿದ್ಯಾರ್ಥಿ ನಿಗೂಢ ಸಾವು ಪ್ರಕರಣ ಇದಾಗಿದ್ದು, ತಣ್ಣೀರುಬಾವಿ ಬಳಿ ತಲೆ ಬೇರ್ಪಟ್ಟ ಸ್ಥಿತಿಯಲ್ಲಿ ವಿದ್ಯಾರ್ಥಿ ಮೃತದೇಹ ಪತ್ತೆಯಾಗಿತ್ತು. ಮಂಗಳೂರಿನಲ್ಲಿ ನಾಲ್ಕನೇ ವರ್ಷದ ಎಂಬಿಬಿಎಸ್ ಓದುತ್ತಿದ್ದ ಕೇರಳದ ಪಟ್ಟನಂತಿಟ್ಟ ನಿವಾಸಿ ರೋಹಿತ್ ರಾಧಕೃಷ್ಣನ್ (21) ನಿಗೂಢವಾಗಿ ಸಾವನ್ನಪ್ಪಿದ್ದ. 

Tap to resize

Latest Videos

ಅಪಘಾತ ಎಂದು ಪ್ರಕರಣ ದಾಖಲಿಸಿ ಪಣಂಬೂರು ಪೊಲೀಸರು ತನಿಖೆ ನಡೆಸಿದ್ದರು. ಆದರೆ ಇದು ಅಪಘಾತವಲ್ಲ, ವ್ಯವಸ್ಥಿತ ಕೊಲೆ ಎಂದು ರೋಹಿತ್ ತಂದೆ ವಕೀಲರಾಗಿದ್ದ ರಾಧಕೃಷ್ಣನ್ ಉನ್ನತ ತನಿಖೆಗೆ ಆಗ್ರಹಿಸಿದ್ದರು. ಆ ಬಳಿಕ ಕರ್ನಾಟಕ ಸರ್ಕಾರ ಸಿಐಡಿ ತನಿಖೆಗೆ ವಹಿಸಿತ್ತು. ಸಿಐಡಿ ಕೂಡ ಅಪಘಾತ ಅಂತ ವರದಿ ನೀಡಿದ್ದ ಹಿನ್ನೆಲೆ  ರಾಧಕೃಷ್ಣನ್ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು.‌ ಇದೀಗ ಎಂಟು ವರ್ಷಗಳ ಬಳಿಕ ಸಿಬಿಐ ತನಿಖೆಗೆ ವಹಿಸಿದ ಸುಪ್ರೀಂ ಕೋರ್ಟ್, ಎಲ್ಲಾ ದಾಖಲೆ ಸಿಬಿಐಗೆ ಹಸ್ತಾಂತರ ಮಾಡಲು ಸಿಐಡಿಗೆ ಸೂಚನೆ ನೀಡಿದೆ.

ಟಿಇಟಿ ಹಾಲ್‌ ಟಿಕೆಟಲ್ಲಿ ಸನ್ನಿ ಲಿಯೋನ್‍ ಅಶ್ಲೀಲ ಫೋಟೋ: ದೂರು ದಾಖಲು

ರೋಹಿತ್ ಲ್ಯಾಂಡ್‌ ಲಿಂಕ್ಸ್ ಬಳಿಯ ಫ್ಲ್ಯಾಟ್ ಒಂದರಲ್ಲಿ ವಾಸಿಸುತ್ತಿದ್ದ. ಆ ದಿನ ತಡರಾತ್ರಿ ತನ್ನ ಗೆಳೆಯರೊಂದಿಗೆ ತಣ್ಣೀರು ಬಾವಿ ಬೀಚ್‌ಗೆ ಹೊರಟ್ಟಿದ್ದು, ಮಂಗಳೂರಿನ ಹೋಟೆಲ್ ಒಂದರಲ್ಲಿ ಬಿರಿಯಾನಿ ಇತ್ಯಾದಿ ಖರೀದಿಸಿದ್ದರು. ಗೆಳೆಯರಿಬ್ಬರು ಬೇರೆ ಬೈಕ್‌ನಲ್ಲಿ ಹಿಂದಿನಿಂದ ಬರುತ್ತಿದ್ದರೆ ರೋಹಿತ್ ಮುಂದಿನಿಂದ ಹೋಗಿದ್ದ. ಅದರೆ ತಣ್ಣೀರು ಬಾವಿ ತಲುಪಿದ ಬಳಿಕ ಈತನನ್ನು ಕಾಣದ ಗೆಳೆಯರು ಮೊಬೈಲ್‌ಗೆ ಕರೆಮಾಡಿದ್ದರು. ರೋಹಿತ್ ಮೊಬೈಲ್ ಬಿಟ್ಟು ಬಂದಿದ್ದ ಕಾರಣ ಸಂಪರ್ಕ ಸಾಧ್ಯವಾಗಿರಲಿಲ್ಲ. ಗೆಳೆಯರು ಸಾಕಷ್ಟು ಹುಡುಕಿ ಬಳಿಕ ಸುಮ್ಮನಾದರು. ಭಾನುವಾರ ಬೆಳಗ್ಗೆ ದುರ್ಘಟನೆ ಬೆಳಕಿಗೆ ಬಂತು. 

ಬಾಯನ್ನೇ ಬಂಡವಾಳವಾಗಿಸಿ ಸಿದ್ದರಾಮಯ್ಯ ಸಿಎಂ ಆಗಿದ್ದು: ಸಿ.ಎಂ.ಇಬ್ರಾಹಿಂ

ರೋಹಿತ್‌ನ ತಂದೆ ನ್ಯಾಯವಾದಿಯಾಗಿದ್ದು ತಾಯಿ ಬಹರೈನ್‌ನಲ್ಲಿ ಡಾಕ್ಟರ್ ಆಗಿದ್ದಾರೆ. ಅಪಘಾತ ನಡೆದ ಸ್ಥಳ ತಣ್ಣೀರು ಬಾವಿ ರಸ್ತೆಯಲ್ಲಿ ಇಂಡಿಯನ್ ಆಯಿಲ್‌ನಿಂದ ಸುಮಾರು 300 ಮೀ. ದೂರದಲ್ಲಿದೆ. ಬೈಕ್ ರಸ್ತೆಯ ದಂಡೆಗೆ ಹೊಡೆದು ಬಳಿಕ ಬಲಭಾಗದಲ್ಲಿ ಕೆಳಕ್ಕೆ ಬಿದ್ದಿದೆ. ರಸ್ತೆಯಿಂದ 80 ಅಡಿ ದೂರದಲ್ಲಿರುವ ಎರಡು ಮರಗಳಲ್ಲಿ ರಕ್ತದ ಗುರುತು ಪತ್ತೆಯಾಗಿತ್ತು. ದೇಹ ಮರದ ಮೇಲೆ ಎಸೆಯಲ್ಪಟ್ಟ ಸಂದರ್ಭ ಶಿರ ಬೇರ್ಪಟ್ಟಿದೆ ಎಂದು ಶಂಕಿಸಲಾಗಿತ್ತು. ಮುಂಡವೂ ಜರ್ಝರಿತವಾದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಅತಿವೇಗದಿಂದ ರೋಹಿತ್ ಬೈಕ್ ಚಲಾಯಿಸಿಕೊಂಡು ಬಂದ ಕಾರಣ ಅಪಘಾತಕ್ಕೆ ಈಡಾಗಿರಬೇಕು ಎಂದು ಶಂಕಿಸಲಾಗಿತ್ತು.

click me!