ಟಿಇಟಿ ಹಾಲ್‌ ಟಿಕೆಟಲ್ಲಿ ಸನ್ನಿ ಲಿಯೋನ್‍ ಅಶ್ಲೀಲ ಫೋಟೋ: ದೂರು ದಾಖಲು

By Govindaraj S  |  First Published Nov 9, 2022, 9:21 AM IST

ಭಾನುವಾರ ನಡೆದ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ)ಯಲ್ಲಿ ಚಿಕ್ಕಮಗಳೂರು ಜಿಲ್ಲೆಯ ಅಭ್ಯರ್ಥಿಯೊಬ್ಬರ ಪ್ರವೇಶ ಪತ್ರದಲ್ಲಿ ಸನ್ನಿ ಲಿಯೋನ್‍ ಅಶ್ಲೀಲ ಫೋಟೋ ಮುದ್ರಣವಾಗಿರುವ ಎಡವಟ್ಟು ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. 


ಬೆಂಗಳೂರು (ನ.09): ಭಾನುವಾರ ನಡೆದ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ)ಯಲ್ಲಿ ಚಿಕ್ಕಮಗಳೂರು ಜಿಲ್ಲೆಯ ಅಭ್ಯರ್ಥಿಯೊಬ್ಬರ ಪ್ರವೇಶ ಪತ್ರದಲ್ಲಿ ಸನ್ನಿ ಲಿಯೋನ್‍ ಅಶ್ಲೀಲ ಫೋಟೋ ಮುದ್ರಣವಾಗಿರುವ ಎಡವಟ್ಟು ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಇದು ಆನ್‌ಲೈನ್‌ ದೋಷವೆಂದು ಪರಿಗಣಿಸಿ ಅಭ್ಯರ್ಥಿಗೆ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿದೆ. 

ಈ ದೋಷ ಕಂಡು ಬಂದ ಬೆನ್ನಲ್ಲೇ ಈ ಲೋಪವು ಶಿಕ್ಷಣ ಇಲಾಖೆ ಅಥವಾ ಸರ್ಕಾರದಿಂದ ಆಗಿಲ್ಲವಾದರೂ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುವಂತೆ ಪೊಲೀಸ್‌ ಇಲಾಖೆಗೆ ಪರೀಕ್ಷೆ ನಡೆಸಿದ ಶಿಕ್ಷಣ ಇಲಾಖೆಯ ಕೇಂದ್ರೀಯ ದಾಖಲಾತಿ ಘಟಕ ಕೋರಿದೆ. ಪರೀಕ್ಷೆಗೆ ಅರ್ಜಿ ಸಲ್ಲಿಸಿದ್ದ ಚಿಕ್ಕಮಗಳೂರು ಜಿಲ್ಲೆಯ ಖಾಸಗಿ ಶಾಲಾ ಶಿಕ್ಷಕಿಯೊಬ್ಬರು ಪ್ರವೇಶ ಪತ್ರವನ್ನು ವೆಬ್‌ಸೈಟ್‌ನಿಂದ ಡೌನ್‌ಲೋಡ್‌ ಮಾಡಿಕೊಂಡಾಗ ಅಭ್ಯರ್ಥಿಯ ಫೋಟೋ ಜಾಗದಲ್ಲಿ ಅಶ್ಲೀಲ ಚಿತ್ರ ಮುದ್ರಣವಾಗಿರುವುದು ಕಂಡುಬಂದಿದೆ. ಇದು ಆನ್‌ಲೈನ್‌ ದೋಷವೆಂದು ಪರಿಗಣಿಸಿ ಪರೀಕ್ಷೆಗೆ ಅವಕಾಶ ನೀಡಲಾಗಿದೆ. ತಕ್ಷಣ ಕೇಂದ್ರೀಯ ದಾಖಲಾತಿ ಘಟಕದ ಸಹಾಯವಾಣಿಗೆ ಕರೆ ಮಾಡಿ ಲೋಪದ ಮಾಹಿತಿ ನೀಡಿದರೂ ಪ್ರಯೋಜನವಾಗಿಲ್ಲ. 

Tap to resize

Latest Videos

ಬಸನಗೌಡ ಪಾಟೀಲ ಯತ್ನಾಳ್‌-ಅರುಣ್‌ ಸಿಂಗ್‌ ರಹಸ್ಯ ಮಾತುಕತೆ

ಬಳಿಕ ಅವರು ಮತ್ತೆ ಆನ್‌ಲೈನ್‌ನಲ್ಲಿ ಫೋಟೋ ಅಪ್‌ಡೇಟ್‌ ಮಾಡಲು ಪ್ರಯತ್ನಿಸಿದರೂ ಸಮಸ್ಯೆ ಸರಿಹೋಗಿಲ್ಲ. ಕೊನೆಗೆ ಅಧಿಕಾರಿಗಳು ಇದು ಆನ್‌ಲೈನ್‌ ದೋಷವಿರಬಹುದೆಂದು ಪರಿಗಣಿಸಿ ಹಾಲ್‌ ಟಿಕೆಟ್‌ ಜತೆಗೆ ಅಭ್ಯರ್ಥಿಯ ಫೋಟೋ ಸಹಿತವಾದ ಬೇರೆ ಗುರುತಿನ ಚೀಟಿಯೊಂದಿಗೆ ಶಿವಮೊಗ್ಗದ ನಿಗದಿತ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆಯಲು ಅಭ್ಯರ್ಥಿಗೆ ಅವಕಾಶ ನೀಡಿದ್ದಾರೆ. ತಮ್ಮ ಲಾಗಿನ್‌ ಅನ್ನು ದುರ್ಬಳಕೆ ಮಾಡಿಕೊಂಡಿರುವ ಅನುಮಾನವಿದೆ. ಇದು ಹೇಗಾಯಿತೆಂದು ಇಲಾಖೆಯೇ ತಿಳಿಸಬೇಕೆಂದು ಅಭ್ಯರ್ಥಿ ಹೇಳಿದ್ದಾರೆ.

ಕಾಂಗ್ರೆಸ್‌ ಟ್ವೀಟರ್‌ ಖಾತೆ ನಿಷೇಧ ರದ್ದು: ಕೆಜಿಎಫ್‌ ಹಾಡು ತೆಗೆಯಲು ಕಾಂಗ್ರೆಸ್‌ಗೆ ಹೈಕೋರ್ಟ್‌ ಸೂಚನೆ

ಇಲಾಖೆ ಸ್ಪಷ್ಟನೆ ಏನು?: ಟಿಇಟಿಗೆ ಆನ್‌ಲೈನ್‌ ಅರ್ಜಿ ಸಲ್ಲಿಕೆ, ಹಾಲ್‌ ಟಿಕೆಟ್‌ ಡೌನ್‌ಲೋಡ್‌ಗೆ ಇರುವ ತಂತ್ರಾಂಶವು ಕೆಸ್ವಾನ್‌ ಅಂತರ್ಜಾಲ ಸೌಲಭ್ಯವನ್ನು ಹೊಂದಿದ್ದು, ಸಂಪೂರ್ಣ ಸರ್ಕಾರದ ಇ-ಆಡಳಿತ ಇಲಾಖೆಯ ಸ್ಟೇಟ್‌ ಡೇಟಾ ಸೆಂಟರ್‌ ನಿಯಂತ್ರಣದ ಸರ್ವರ್‌ನಲ್ಲಿ ಅಳವಡಿಸಲಾಗಿರುತ್ತದೆ. ಈ ಹಿನ್ನೆಲೆಯಲ್ಲಿ ನಮ್ಮ ಕಚೇರಿಯ ತಂತ್ರಾಂಶ ಸುರಕ್ಷಿತವಾಗಿದೆ. ಅಭ್ಯರ್ಥಿ ಹೊರತುಪಡಿಸಿ ಬೇರೆಯವರು ಆನ್‌ಲೈನ್‌ ಅರ್ಜಿ ಬದಲಾವಣೆ ಮಾಡಲು ಅವಕಾಶವಿರುವುದಿಲ್ಲ. ಆದರೂ, ಈ ಪ್ರಕರಣ ಸಂಬಂಧ ತನಿಖೆ ಮಾಡಿ ಕಾರಣರಾದವರ ವಿರುದ್ಧ ಕ್ರಮ ಜರುಗಿಸಲು ಪೊಲೀಸ್‌ ಇಲಾಖೆಗೆ ಕೋರಲಾಗಿದೆ ಎಂದು ಇಲಾಖೆ ಹೇಳಿದೆ.
 

ಶಿಕ್ಷಕರ ನೇಮಕಾತಿಯ ಪ್ರವೇಶಾತಿ ಪತ್ರದಲ್ಲಿ ಅಭ್ಯರ್ಥಿಯ ಬದಲು ನೀಲಿಚಿತ್ರ ತಾರೆಯ ಫೋಟೋ ಪ್ರಕಟಿಸಲಾಗಿದೆ.

ಸದನದಲ್ಲಿ ನೀಲಿಚಿತ್ರ ವೀಕ್ಷಿಸುವ ಪಕ್ಷದವರಿಂದ ಇನ್ನೇನು ತಾನೇ ನಿರೀಕ್ಷಿಸಲು ಸಾಧ್ಯ? ಅವರೇ, ನೀಲಿಚಿತ್ರ ತಾರೆ ನೋಡುವ ಹಂಬಲವಿದ್ದರೆ ಒಂದು ಫೋಟೋ ನೇತಾಕಿಕೊಳ್ಳಿ, ಅದಕ್ಕೆ ಶಿಕ್ಷಣ ಇಲಾಖೆಯನ್ನು ಉಪಯೋಗಿಸಬೇಡಿ! pic.twitter.com/Czb7W0d1xJ

— B.R.Naidu ಬಿ.ಆರ್.ನಾಯ್ಡು Vasanthnagar (@brnaidu1978)
click me!