
ಕಲಬುರಗಿ (ನ.18): ಜಿಲ್ಲೆಯ ಕಬ್ಬು ರೈತರಿಗೆ ಸರ್ಕಾರ ನಿಗದಿ ಮಾಡಿದ ಕಬ್ಬಿನ ದರ ಕೈಗೆಟುಕದೆ ಜಿಲ್ಲೆಯ ರೈತರು ಕಂಗಾಲಾಗಿದ್ದಾರೆ.
ಪ್ರತಿ ಟನ್ ಕಬ್ಬಿಗೆ ₹3300 ದರದಂತೆ ಕಬ್ಬು ಖರೀದಿಸಿರೆಂದು ಕಾರ್ಖಾನೆಗಳಿಗೆ ಸರ್ಕಾರವೇ ಸೂಚಿಸಿದ್ದರೂ ಪ್ರಭಾವಿ ಸಚಿವ ಪ್ರಿಯಾಂಕ್ ಖರ್ಗೆ ಉಸ್ತುವಾರಿಯ ಕಲಬುರಗಿಯಲ್ಲೇ ಜಿಲ್ಲಾಡಳಿತ, ಜನನಾಯಕರು ಸಭೆ ನಡೆಸಿ ಟನ್ ಕಬ್ಬಿಗೆ ಸರ್ಕಾರದ ದರ ₹3300 ನೀಡಲು ಇಲ್ಲಿರುವ ಕಲಬುರಗಿ ಹಾಗೂ ಯಾದಗಿರಿಯ 6 ಸಕ್ಕರೆ ಕಾರ್ಖಾನೆಗಳವರು ಒಪ್ಪುತ್ತಿಲ್ಲ.
ಕಬ್ಬಿಗೆ ದರ ನಿಗದಿಪಡಿಸೋ ವಿಚಾರದಲ್ಲಿ ರೈತರಿಗೆ ಟನ್ ಕಬ್ಬಿಗೆ ₹3160 ನೀಡುವುದಾಗಿ ಮುಂಚೆ ಹೇಳಿದ್ದ ಅಫಜಲ್ಪುರ ತಾಲೂಕಿನ ಚಿಣಮಗೇರಿ ಬಳಿಯ ಕೆಪಿಆರ್ ಕಾರ್ಖಾನೆ ಇದೀಗ ತಾನೂ ಈ ದರ ನೀಡಲಾಗದು. ಟನ್‌ಗೆ ₹3000 ನೀಡುವುದಾಗಿ ಹೇಳಿದೆ. ರೈತರು ಅಫಜಲ್ಪುರದಲ್ಲಿ 7 ದಿನ ನಡೆಸಿದ ಹೋರಾಟದ ಫಲವಾಗಿ ₹3160 ನಿಗದಿಪಡಿಸಿದ್ದ ಕಾರ್ಖಾನೆ ಇದೀಗ ತನ್ನ ನಿಲುವಿಗೆ ಉಲ್ಟಾ ಹೊಡೆದಿರೋದು ಇಲ್ಲಿನ ರೈತರನ್ನು ಕೆರಳಿಸಿದೆ.'
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ