ಬೆಂಗಳೂರು ಜನರಿಗೆ ಕುಡಿಯಲು ಕಾವೇರಿ ನೀರು ಉಳಿಸಿ: ನೀರಾವರಿ ನಿಗಮಕ್ಕೆ ಬಿಡಬ್ಲ್ಯೂಎಸ್‌ಎಸ್‌ಬಿ ಮನವಿ

By Sathish Kumar KH  |  First Published Sep 20, 2023, 1:18 PM IST

ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸುತ್ತಿರುವ ಬೆನ್ನಲ್ಲೇ ಬೆಂಗಳೂರಿನ ಜನರಿಗೆ ಕುಡಿಯಲು ಕಬಿನಿ ಮತ್ತು ಕೆಆರ್‌ಎಸ್‌ ಜಲಾಶಯದಲ್ಲಿ ನೀರನ್ನು ಸಂಗ್ರಹಿಸಿಸಬೇಕು ಎಂದು ಬೆಂಗಳೂರು ಜಲಮಂಡಳಿ ಮನವಿ ಮಾಡಿದೆ.


ಬೆಂಗಳೂರು (ಸೆ.20): ರಾಜ್ಯ ರಾಜಧಾನಿ ಬೆಂಗಳೂರಿನ ಜನರಿಗೆ ಕಾವೇರಿ ನದಿಯಿಂದ ಪ್ರತಿನಿತ್ಯ 1,450 ದಶಲಕ್ಷ ಲೀ.ನಂತೆ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ. ಅಂದರೆ, ಈಗ ಮಾಸಿಕ 1.2 ಟಿಎಂಸಿ ನೀರು ಅಗತ್ಯವಿದ್ದು, 2024ರ ಜನವರಿಯಿಂದ 110 ಹಳ್ಳಿಗಳಿಗೆ ಕಾವೇರಿ ನೀರು ಪೂರೈಕೆ ಮಾಡಬೇಕಿದೆ. ಆಗ ಮಾಸಿಕ 2.42 ಟಿಎಂಸಿ ನೀರು ಬೆಂಗಳೂರಿನ ಜನತೆಗೆ ಬೇಕಾಗುತ್ತದೆ. ಹೀಗಾಗಿ, ಬೆಂಗಳೂರು ಜನತೆಗೆ ಅಗತ್ಯವಿರುವ ನೀರನ್ನು ಸಂಗ್ರಹಿಸಬೇಕು ಎಂದು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ಕಾವೇರಿ ನೀರಾವರಿ ನಿಗಮ ನಿಯಮಿತಕ್ಕೆ ಪತ್ರವನ್ನು ಬರೆದಿದೆ.

ಬೆಂಗಳೂರು ಜಲಮಂಡಳಿಯಿಂದ ಬರೆಯಲಾದ ಪತ್ರದಲ್ಲಿ 'ಬೆಂಗಳೂರು ನಗರದ ಸುಮಾರು 12.9 ದಶಲಕ್ಷ ಜನಸಂಖ್ಯೆಗೆ ನೀರು ಸರಬರಾಜು ಮಾಡಲು ನಗರಕ್ಕೆ ದಿನವಹಿ 1,450 ದಶಲಕ್ಷ ಲೀಟರ್ ಪ್ರಮಾಣದ ಶುದ್ದೀಕರಿಸಿದ ಕುಡಿಯುವ ನೀರನ್ನು ಕಾವೇರಿ ನೀರು ಸರಬರಾಜು ಯೋಜನೆಯ ಎಲ್ಲಾ ಹಂತಗಳಿಂದ ನಿರಂತರವಾಗಿ ಪೂರೈಸಲಾಗುತ್ತಿದೆ. ಇಷ್ಟು ಪ್ರಮಾಣದ ನೀರನ್ನು ಶಿವ ಅಣೆಕಟ್ಟೆ, ಮಳವಳ್ಳಿಯಿಂದ ಪಡೆಯುತ್ತಿದ್ದು, ಶಿವ ಅಣೆಕಟ್ಟೆಯಲ್ಲಿ ಕನಿಷ್ಠ 700 ಕ್ಯೂಸೆಕ್ಸ್ ನೀರಿನ ಹರಿವು ಇದ್ದಲ್ಲಿ ಮಾತ್ರ ಪ್ರತಿ ನಿತ್ಯವು 1450 ದಶಲಕ್ಷ ಲೀಟರ್ ಶುದ್ದೀಕರಿಸಿದ ಕುಡಿಯುವ ನೀರನ್ನು ಬೆಂಗಳೂರು ನಗರಕ್ಕೆ ಪೂರ್ಣ ಪ್ರಮಾಣದಲ್ಲಿ ಸರಬರಾಜು ಮಾಡಬಹುದಾಗಿರುತ್ತದೆ.

Tap to resize

Latest Videos

undefined

ಕಾವೇರಿ ನೀರಿಗಾಗಿ ದೆಹಲಿಗ್ಹೋದ ಸಿಎಂ ಸಿದ್ದರಾಮಯ್ಯಗೆ ಸಿಕ್ಕಿದ್ದೇನು? ಇಲ್ಲಿದೆ ಸುದ್ದಿಗೋಷ್ಠಿ ವಿವರ

ಮಳೆ ಕೊರತೆಯಾದಾಗಲೇ110 ಹಳ್ಳಿಗಳಿಗೆ ನೀರು ಪೂರೈಕೆ ಸವಾಲು: ಆದರೆ, ಪ್ರಸಕ್ತ ವರ್ಷದಲ್ಲಿ ರಾಜ್ಯಕ್ಕೆ ಮುಂಗಾರು ಮಳೆಯು ವಾಡಿಕೆಗಿಂತ ಕಡಿಮೆಯಾಗಿರುವುದರಿಂದ ಕುಡಿಯುವ ನೀರಿಗೆ ಕೊರತೆ ಉಂಟಾಗುವ ಸಾಧ್ಯತೆ ಇರುತ್ತದೆ. ಮುಂದುವರೆದು, ಬೆಂಗಳೂರು ನಗರಕ್ಕೆ ಯಾವುದೇ ಅಡಚಣೆಯಿಲ್ಲದೇ, ಸಮರ್ಪಕವಾಗಿ ಕುಡಿಯುವ ನೀರನ್ನು ಸರಬರಾಜು ಮಾಡಲು ಬೆಂಗಳೂರು ಜಲಮಂಡಳಿಗೆ ಡಿಸೆಂಬರ್ 2023 'ಅಂತ್ಯದವರೆಗೆ ಪ್ರತಿ ತಿಂಗಳು ಒಟ್ಟಾರೆಯಾಗಿ 1.6 ಟಿ.ಎಂ.ಸಿ. ನೀರಿನ ಅವಶ್ಯಕತೆ ಇರುತ್ತದೆ. ನಂತರ ಬೃಹತ್ ಬೆಂಗಳೂರು ಮಹಾನಗರ ವ್ಯಾಪ್ತಿಯ 110 ಹಳ್ಳಿಗಳ ಪ್ರದೇಶಗಳಿಗೆ ಕಾವೇರಿ 5ನೇ ಹಂತದ ನೀರು ಸರಬರಾಜು ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತದೆ.

ಕಬಿನಿ, ಕೆಆರ್‌ಎಸ್‌ನಲ್ಲಿ ನೀರು ಸಂಗ್ರಹಿಸಿಡಿ: ಇನ್ನು ಬೆಂಗಳೂರಿನ 110 ಹಳ್ಳಿಗಳ ಪ್ರದೇಶಗಳಿಗೆ ನೀರು ಹರಿಸಲು ಹೆಚ್ಚುವರಿ 10 ಟಿ.ಎಂ.ಸಿ. ಹಂಚಿಕೆ ಮಾಡಲಾಗಿದೆ. ಜನವರಿ-2024 ರಿಂದ ಪ್ರತಿ ತಿಂಗಳು ಒಟ್ಟಾರೆಯಾಗಿ 2.42 ಟಿ.ಎಂ.ಸಿ ನೀರಿನ ಅವಶ್ಯಕತೆ ಇರುತ್ತದೆ. ಕಾವೇರಿ ಜಲಾನಯನ ಪ್ರದೇಶದಲ್ಲಿ ಸಮರ್ಪಕವಾಗಿ ಮಳೆಯಾಗುವವರೆಗೆ, ಬೃಹತ್ ಬೆಂಗಳೂರು ವ್ಯಾಪ್ತಿಯ ಜನತೆಗೆ ಕುಡಿಯುವ ನೀರನ್ನು ಒದಗಿಸುವ ಉದ್ದೇಶಕ್ಕಾಗಿ ಬೆಂಗಳೂರು ಜಲಮಂಡಳಿಗೆ ಅವಶ್ಯವಿರುವ ನೀರನ್ನು ಕಬಿನಿ ಮತ್ತು ಕೆ.ಆರ್.ಎಸ್. ಜಲಾಶಯಗಳಲ್ಲಿ ಆದ್ಯತೆಯ ಮೇರೆಗೆ ಶೇಖರಿಸಿ, ಕಾಯ್ದಿರಿಸಬೇಕಾಗಿ  ಕೋರಲಾಗಿದೆ.

ಸ್ಯಾಂಡಲ್‌ವುಡ್‌ ನಟರು ಕಾವೇರಿ ಹೋರಾಟಕ್ಕೆ ಬನ್ನಿ: ಯಶ್‌, ಸುದೀಪ್‌, ಶಿವರಾಜ್‌ಕುಮಾರ್‌ ವಿರುದ್ಧ ಆಕ್ರೋಶ

ನಾಲ್ಕನೇ ಬಾರಿ ಕಾವೇರಿ ನಿಗಮಕ್ಕೆ ಪತ್ರ ಬರೆದ ಜಲಮಂಡಳಿ: ಬೆಂಗಳೂರು ಜಲಮಂಡಳಿ ಅಧ್ಯಕ್ಷರಿಂದ ಕಾವೇರಿ ನೀರಾರವರಿ ನಿಗಮ ನಿಯಮಿತಕ್ಕೆ ನಾಲ್ಕನೇ ಬಾರಿ ಪತ್ರವನ್ನು ಬರೆಯಲಾಗಿದೆ. ಆದರೂ ಸಿಡಬ್ಲ್ಯೂಎಂಎ ಹಾಗೂ ಸಿಡಬ್ಲ್ಯೂಆರ್‌ಸಿ ಸೂಚನೆ ಮೇರೆಗೆ ಸರ್ಕಾರದಿಂದ ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸಲಾಗುತ್ತಿದೆ. ಆದ್ದರಿಂದ, ಪುನಃ ಪತ್ರವನ್ನು ಬರೆದಿರುವ ಜಲಮಂಡಳಿಯು ಕಬಿನಿ ಹಾಗೂ ಕೆಆರ್‌ಎಸ್‌ ಜಲಾಶಯದಲ್ಲಿ ನೀರನ್ನು ಹೆಚ್ಚುವರಿಯಾಗಿ ಸಂಗ್ರಹಿಸಬೇಕು ಎಂದು ಮನವಿ ಮಾಡಿದ್ದಾರೆ.

click me!