ಗಮನಿಸಿ, ಜೂ. 1ರಂದು ಕನ್ಯಾಕುಮಾರಿ ಎಕ್ಸ್‌ಪ್ರೆಸ್‌ ಹಾಗೂ ತಿರುಪತಿ ಡೈಲಿ ಎಕ್ಸ್‌ಪ್ರೆಸ್‌ ಸಂಚಾರ ವಿಳಂಬ

By Gowthami K  |  First Published May 31, 2023, 4:33 PM IST

ರೈಲ್ವೆಗೆ ಸಂಬಂಧಿಸಿದ ಕಾಮಗಾರಿ ಹಿನ್ನೆಲೆಯಲ್ಲಿ ಜೂ.1ರಂದು ಎರಡು ರೈಲುಗಳ ಸಂಚಾರ ವಿಳಂಬವಾಗಲಿದೆ. ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.


ಬೆಂಗಳೂರು (ಮೇ.31): ಮಲ್ಲನೂರ್‌ ನಿಲ್ದಾಣದ ಯಾರ್ಡ್‌ನಲ್ಲಿ ರೈಲ್ವೆಗೆ ಸಂಬಂಧಿಸಿದ ಕಾಮಗಾರಿ ಹಿನ್ನೆಲೆಯಲ್ಲಿ ಜೂ.1ರಂದು ಎರಡು ರೈಲುಗಳ ಸಂಚಾರ ವಿಳಂಬವಾಗಲಿದೆ. ಜೂ. 1ರಂದು ಕೆಎಸ್‌ಆರ್‌ ಬೆಂಗಳೂರು ನಿಲ್ದಾಣದಿಂದ ಹೊರಡುವ ಕೆಎಸ್‌ಆರ್‌ ಬೆಂಗಳೂರು - ಕನ್ಯಾಕುಮಾರಿ ಡೈಲಿ ಎಕ್ಸ್‌ಪ್ರೆಸ್‌ (KSR Bangalore - Kanyakumari Express) ರೈಲನ್ನು ಮಾರ್ಗ ಮಧ್ಯ 60 ನಿಮಿಷ ಕಾಲ ನಿಯಂತ್ರಿಸಲಾಗುತ್ತಿದೆ. ಜೊತೆಗೆ ಚಾಮರಾಜನಗರ ನಿಲ್ದಾಣದಿಂದ ಹೊರಡುವ ರೈಲು ಚಾಮರಾಜನಗರ - ತಿರುಪತಿ ಡೈಲಿ ಎಕ್ಸ್‌ಪ್ರೆಸ್‌ (Chamarajanagar - Tirupati Express) ರೈಲನ್ನು ಮಾರ್ಗ ಮಧ್ಯ 40 ನಿಮಿಷ ಕಾಲ ನಿಯಂತ್ರಿಸಲಾಗುವುದು ಎಂದು ತಿಳಿಸಲಾಗಿದೆ. 

ಕೆಎಸ್‌ಆರ್‌ ಬೆಂಗಳೂರು- ಜೋಲಾರ್‌ಪೇಟೆ ವೇಗ ಪರೀಕ್ಷೆ ಹಿನ್ನೆಲೆ ಸಾರ್ವಜನಿಕರ ಓಡಾಟ ಬಂದ್ 
ಬೆಂಗಳೂರು: ಕೆಎಸ್‌ಆರ್‌ ಬೆಂಗಳೂರು- ಜೋಲಾರ್‌ಪೇಟೆ ವಿಭಾಗದ (ಜೋಲಾರ್‌ಪೇಟೆ ಹೊರತುಪಡಿಸಿ) ವಿದ್ಯುದ್ದೀಕರಿಸಿದ ಬ್ರಾಡ್‌ಗೇಜ್ ಜೋಡಿ ಮಾರ್ಗದಲ್ಲಿ ಜೂ. 1ರಂದು ಆಸಿಲೇಟಿಂಗ್‌ ಮಾನಿಟರಿ ಸಿಸ್ಟಮ್ (ಓಎಂಎಸ್‌) ವೇಗ ಪರೀಕ್ಷೆ ನಡೆಯಲಿದ್ದು, ಸಾರ್ವಜನಿಕರು ಈ ಮಾರ್ಗದಲ್ಲಿ ಓಡಾಡಬಾರದು ಎಂದು ಎಚ್ಚರಿಸಲಾಗಿದೆ.

Tap to resize

Latest Videos

ಕೊಟ್ಟೂರು ಮೂಲಕ ವಿಶೇಷ ರೈಲು ಓಡಾಟ ಆರಂಭ, ರಾಜ್ಯದ ಯಾವೆಲ್ಲ ಜಿಲ್ಲೆಯಲ್ಲಿ ಹಾದು ಹೋಗಲಿದೆ ಈ ಟ್ರೈನ್

ಈ ಮಾರ್ಗದಲ್ಲಿ ಗಂಟೆಗೆ 110 ಕಿ.ಮೀ.ನಿಂದ 130 ಕಿ.ಮೀ.ವರೆಗೆ ರೈಲುಗಳ ವೇಗವನ್ನು ಹೆಚ್ಚಿಸಲು ನೈರುತ್ಯ ರೈಲ್ವೆ (South Western Railway) ಮುಂದಾಗಿದೆ. ವೇಗ ಪರೀಕ್ಷೆ ಸಮಯದಲ್ಲಿ ತಪಾಸಣೆ ರೈಲು ವಿದ್ಯುದೀಕೃತ ಜೋಡಿ ಮಾರ್ಗದಲ್ಲಿ ಗಂಟೆಗೆ 143 ಕಿ.ಮೀ. ವೇಗದಲ್ಲಿ ಚಲಿಸಲಿದೆ. ಸಾರ್ವಜನಿಕರು ಈ ಜೋಡಿ ಮಾರ್ಗದಲ್ಲಿ ಅತಿಕ್ರಮಿಸಿ ಓಡಾಡಬಾರದು. ಇದು ಪ್ರಾಣಾಪಾಯಕ್ಕೆ ಎಡೆ ಮಾಡಿಕೊಡುವ ಸಾಧ್ಯತೆಯಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

click me!