ಪ್ಲಾಟ್‌ಫಾರ್ಮ್ ಗೆ ಸಂಬಂಧಿಸಿದ ಕೆಲಸಗಳ ದೃಷ್ಟಿಯಿಂದ ವಿಜಯನಗರ ಸೇರಿ ರಾಜ್ಯದ ಹಲವು ನಿಲ್ದಾಣಗಳಲ್ಲಿ ನಿಲುಗಡೆ ಯಾಗುವ ಕೆಲ ರೈಲುಗಳ ಸಂಚಾರ ಸಮಯದಲ್ಲಿ ಜೂನ್ 20 ರವರೆಗೆ ಬದಲಾವಣೆ ಮಾಡಲಾಗಿದೆ.
ಬೆಂಗಳೂರು (ಜೂ.12): ಪ್ಲಾಟ್‌ಫಾರ್ಮ್ ಗೆ ಸಂಬಂಧಿಸಿದ ಮಹತ್ವದ ಕೆಲಸಗಳ ದೃಷ್ಟಿಯಿಂದ, ಉಗಾರಖುರ್ದ್, ಶೆಡ್ಬಾಲ್ ಮತ್ತು ವಿಜಯನಗರದಲ್ಲಿ ನಿಲುಗಡೆ ಯಾಗುವ ಈ ಕೆಳಗಿನ ರೈಲು ಸಂಖ್ಯೆ 17331/17332 ಮೀರಜ್-ಎಸ್‌ಎಸ್‌ಎಸ್ ಹುಬ್ಬಳ್ಳಿ-ಮಿರಜ್ ಎಕ್ಸ್‌ಪ್ರೆಸ್, ರೈಲು ಸಂಖ್ಯೆ 07352/07351 ಲೋಂಡಾ-ಮಿರಜ್-ಲೋಂಡಾ ಎಕ್ಸ್‌ಪ್ರೆಸ್ ವಿಶೇಷ ಮತ್ತು ರೈಲು ನಂ. 17333/17334 ಮೀರಜ್-ಕ್ಯಾಸಲ್ರಾಕ್-ಮಿರಾಜ್ ಎಕ್ಸ್‌ಪ್ರೆಸ್ ಜೂನ್ 20 ರವರೆಗೆ ತನ್ನ ಸಂಚಾರ ಸಮಯದಲ್ಲಿ ಬದಲಾವಣೆ ಮಾಡಿದೆ. ಮತ್ತು ಕೆಲ ಸ್ಟೇಷನ್‌ನಲ್ಲಿ ನಿಲುಗಡೆಯನ್ನು ರದ್ದು ಮಾಡಲಾಗಿದೆ.
ಅಂತೆಯೇ, ಜೂನ್ 20 ರವರೆಗೆ ರೈಲು ಸಂಖ್ಯೆ 16589/16590 KSR ಬೆಂಗಳೂರು-ಮಿರಜ್-KSR ಬೆಂಗಳೂರು ರಾಣಿ ಚನ್ನಮ್ಮ ಎಕ್ಸ್‌ಪ್ರೆಸ್ ಮತ್ತು ರೈಲು ಸಂಖ್ಯೆ 17415/17416 ತಿರುಪತಿ-ಕೊಲ್ಹಾಪುರ-ತಿರುಪತಿ ಹರಿಪ್ರಿಯಾ ಎಕ್ಸ್‌ಪ್ರೆಸ್‌ಗೆ ಉಗಾರಖುರ್ದ್‌ನಲ್ಲಿ ನಿಲುಗಡೆಯನ್ನು ರದ್ದು ಮಾಡಲಾಗಿದೆ.
undefined
ಅ.31ರವರೆಗೆ ಕೊಂಕಣ ರೈಲು ಮಾರ್ಗದಲ್ಲಿನ ಎಲ್ಲಾ ರೈಲಿನ ವೇಳಾಪಟ್ಟಿ ಬದಲಾವಣೆ,
ರೈಲು ಸಂಖ್ಯೆ 12510 ಗುವಾಹಟಿ-ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ಟ್ರೈ-ವೀಕ್ಲಿ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ಜೂನ್ 12 ಮತ್ತು 13 ರಂದು ಗುವಾಹಟಿಯಿಂದ ಹೊರಡುತ್ತದೆ. ಈ ರೈಲನ್ನು ನ್ಯೂ ಬೊಂಗೈಗಾಂವ್ ಜಂಕ್ಷನ್, ಗೋಲ್‌ಪಾರಾ ಟೌನ್ ಮತ್ತು ಕಾಮಾಕ್ಯ ಜಂಕ್ಷನ್ ಮೂಲಕ ಮಾರ್ಗ ಬದಲಿಸಲಾಗುತ್ತದೆ. ಹೀಗಾಗಿ ರಾಂಗ್ಯಾ ಜಂಕ್ಷನ್ ಮತ್ತು ಬಾರ್ಪೇಟಾ ರಸ್ತೆಯಲ್ಲಿ ನಿಲುಗಡೆ ಇಲ್ಲ ಎಂದು ರೈಲ್ವೇ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ಬೆಂಗಳೂರು, ಮೈಸೂರಿನಿಂದ ಹೊರಡುವ ಟ್ರೈನ್ ಸೇರಿದಂತೆ ಈ 15 ರೈಲುಗಳ ಸೇವೆ ತಾತ್ಕಾಲಿಕ ಸ್ಥಗಿತ
ಈ ರೈಲ್ವೆ ವಲಯವು ಜೂನ್ 19 ರಿಂದ ಇಬ್ರಾಹಿಂಪುರ ಹಾಲ್ಟ್ ಸ್ಟೇಷನ್‌ನಲ್ಲಿ ಮೈಸೂರು-ಬಾಗಲಕೋಟೆ ಬಸವ ಎಕ್ಸ್‌ಪ್ರೆಸ್ (17307) ಸಂಚಾರ ಸಮಯದಲ್ಲಿ ಬದಲಾವಣೆ ಮಾಡಿದೆ. ಅದರಂತೆ, ಈ ರೈಲು 9.01/9.02 a.m ಬದಲಿಗೆ 8.53/8.54 a.m ಗೆ ಇಬ್ರಾಹಿಂಪುರ ನಿಲುಗಡೆ ನಿಲ್ದಾಣವನ್ನು ತಲುಪುತ್ತದೆ ಮತ್ತು ಹೊರಡುತ್ತದೆ ಎಂದು ರೈಲ್ವೇ ಇಲಾಖೆ ತಿಳಿಸಿದೆ.
ಮಳೆಗಾಲಕ್ಕೆ ಅಗತ್ಯ ಸಿದ್ಧತೆ: ನೈರುತ್ಯ ರೈಲ್ವೆ
ಬೆಂಗಳೂರು: ಮಳೆಗಾಲದಲ್ಲಿ ರೈಲು ಸಂಚಾರದ ವೇಳೆ ಎದುರಾಗುವ ಅಡೆ-ತಡೆ ಪರಿಹರಿಸಲು ನೈರುತ್ಯ ರೈಲ್ವೆ ವಲಯ ಅಗತ್ಯ ಸಿದ್ಧತೆ ಮಾಡಿಕೊಂಡಿದೆ. ವಿಶೇಷವಾಗಿ ಗಂಭೀರ ಸ್ವರೂಪದ ಸಕಲೇಶಪುರ-ಸುಬ್ರಹ್ಮಣ್ಯ, ಕ್ಯಾಸೆಲ್‌ರಾಕ್-ಕುಲೆಮ್‌ನಂತಹ ಘಟ್ಟಪ್ರದೇಶದಲ್ಲಿ ಮುನ್ನೆಚ್ಚರಿಕೆ ಕ್ರಮ ಕೈಗೊಂಡು ಸುಗಮ ಸಂಚಾರಕ್ಕೆ ಕ್ರಮವಹಿಸಲಾಗಿದೆ.
ಭಾರತೀಯ ಹವಾಮಾನ ಇಲಾಖೆಯಿಂದ ರೈಲ್ವೇ ವಿಭಾಗೀಯ ಕಚೇರಿಯ ನಿಯಂತ್ರಣ ಕೇಂದ್ರಗಳಿಗೆ ಮಳೆಯ ಹವಾಮಾನ ಎಚ್ಚರಿಕೆ ವರದಿಯನ್ನು ನಿರಂತರವಾಗಿ ಪಡೆದು ಎಲ್ಲ ನಿಲ್ದಾಣಗಳಿಗೆ ತಲುಪಿಸಲು ಕ್ರಮ ವಹಿಸಲಾಗಿದೆ. ಮುಂಗಾರು ಪೂರ್ವ ಗಸ್ತು ಕೈಗೊಂಡು ಸುರಂಗ ಮಾರ್ಗ ಹಾಗೂ ನಿಲ್ದಾಣಗಳ ಒಳಚರಂಡಿ ವ್ಯವಸ್ಥೆ ಪರಿಶೀಲಿಸಲಾಗಿದೆ. ಬೀಳುವ ಸ್ಥಿತಿಯಲ್ಲಿರುವ ಮರ ಹಾಗೂ ರೆಂಬೆಕೊಂಬೆಗಳನ್ನು ಗುರುತಿಸಿ ಅವನ್ನು ತೆರವು ಮಾಡಿಕೊಳ್ಳಲಾಗುತ್ತಿದ್ದು, ಆ ಮೂಲಕ ಓವರ್‌ಹೆಡ್ ವಿದ್ಯುತ್ ಪೂರೈಕೆಗೆ ಸಮಸ್ಯೆ ಆಗದಂತೆ ನೋಡಿಕೊಳ್ಳಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಭೂಕುಸಿತದ ಪ್ರದೇಶ ಸೇರಿದಂತೆ ಅಗತ್ಯ ಬೀಳುವಲ್ಲಿ ಮರಳಿನ ಚೀಲ, ಕಲ್ಲುಗಳ ಸಂಗ್ರಹವನ್ನು ಮಾಡಿಕೊಳ್ಳಲಾಗಿದೆ. ಸಾಮಾನ್ಯವಾಗಿ ಸಮಸ್ಯೆ ಉಂಟಾಗುವ ಕ್ಯಾಸಲ್‌ರಾಕ್, ಕುಲೆಮ್, ತಿನೈಘಾಟ್, ಸಕಲೇಶಪುರ, ಸುಬ್ರಹ್ಮಣ್ಯ ಹಾಗೂ ಚಿತ್ರದುರ್ಗದ ಕೆಲ ಪ್ರದೇಶಗಳಲ್ಲಿ ಈ ಕ್ರಮ ವಹಿಸಲಾಗಿದೆ. ಸುಮಾರು 90 ಲೋಡ್‌ನಷ್ಟುಕಲ್ಲುಗಳ ಸಂಗ್ರಹ ಮಾಡಿಟ್ಟುಕೊಳ್ಳಲಾಗಿದೆ. ಜೆಸಿಬಿ, ಹಿಟಾಚಿ, ಮೋಟರ್ ಟ್ರಾಲಿ, ಮೊಪೆಡ್ ಟ್ರಾಲಿಯಂತ ಅಗತ್ಯ ವಾಹನಗಳು ತುರ್ತು ಪರಿಸ್ಥಿತಿಯಲ್ಲಿ ಲಭ್ಯವಿರುವಂತೆ ಇಟ್ಟುಕೊಳ್ಳಲಾಗಿದೆ.
ಅಪಾಯಕಾರಿ ಸ್ಥಳದಲ್ಲಿ ಕಾರ್ಯನಿರ್ವಹಿಸುವ ಟ್ರ್ಯಾಕ್‌ಮನ್‌ಗಳಿಗೆ ವಿಶೇಷವಾಗಿ ಮಳೆಗಾಲದಲ್ಲಿ ವಹಿಸಬೇಕಾದ ಎಚ್ಚರಿಕೆಗಳ ಕುರಿತು ತರಬೇತಿ ಕಾರ್ಯಾಗಾರದ ಮೂಲಕ ತಿಳಿವಳಿಕೆ ನೀಡಲಾಗಿದೆ. ನೀರಿನ ಮಟ್ಟಹೆಚ್ಚಾದಲ್ಲಿ, ಭೂಕುಸಿತ ಸಂಭವಿಸಬಹುದಾದ ಸ್ಥಳ ಹಾಗೂ ಟ್ರ್ಯಾಕ್‌ಗಳ ಕುರಿತು ಹೆಚ್ಚಿನ ಲಕ್ಷ್ಯ ಇಡುವಂತೆ ತಿಳಿಸಲಾಗಿದೆ ಎಂದು ನೈರುತ್ಯ ರೈಲ್ವೆ ತಿಳಿಸಿದೆ.