ಬೆಂಗಳೂರು (ಡಿ.08): ರಾಜ್ಯದಲ್ಲಿ (karnataka) ಕೊರೋನಾ (Corona) ಕೊಂಚ ಏರುಗತಿಯಲ್ಲಿ ಸಾಗುತ್ತಿದ್ದು ಇಂದಿನ ಸ್ಥಿತಿಗತಿಗಳ ಬಗ್ಗೆ ನೋಡಿ ಕೊಂಡು ನಾಳೆ (ಡಿ.09) ನಡೆಯುವ ಸಚಿವ ಸಂಪುಟ ಸಭೆಯಲ್ಲಿ (Cabinet Meet) ಚರ್ಚೆ ಮಾಡಿ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ (CM Basavaraja Bommai) ಹೇಳಿದರು. ಬೆಂಗಳೂರಿನ (Bengaluru) ಗೃಹ ಕಚೇರಿ ಕೃಷ್ಣದಲ್ಲಿ ನಡೆದ ಒಮಿಕ್ರಾನ್(Omicron) ಹಾಗೂ ಕೊವೀಡ್ (Covid) ನಿಯಂತ್ರಣ ಮಾಡುವ ವಿಚಾರದ ಬಗ್ಗೆ ನಡೆದ ಅನೌಪಚಾರಿಕ ಸಭೆಯಲ್ಲಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ ಕೆಲವು ಜಿಲ್ಲೆಗಳಲ್ಲಿ ಮಾತ್ರ ಒಮಿಕ್ರಾನ್ ಇದೆ. ಇನ್ನೂ ಕೆಲ ಜಿಲ್ಲೆಗಳಲ್ಲಿ ನಿಯಂತ್ರಣ ದಲ್ಲಿದೆ ಎಂದರು.
ರಾಜ್ಯದಲ್ಲಿ(Karnataka) ಕೆಲ ಜಿಲ್ಲೆಗಳಲ್ಲಿ ಸೋಂಕು ನಿಯಂತ್ರಣದಲ್ಲಿ ಇರುವುದರಿಂದ ಯೋಚಿಸಿ, ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ಇನ್ನು ಹೊಸ ಮಾರ್ಗ ಸೂಚಿಗಳನ್ನು ಜಾರಿಗೆ ತಂದರೆ ಇಡೀ ರಾಜ್ಯಕ್ಕೆ ತರಬೇಕಾಗುತ್ತದೆ. ಕೇಂದ್ರ ಸರ್ಕಾರದಿಂದ(Govt Of India) ಕೂಡ ಕೆಲ ಮಾರ್ಗಸೂಚಿ ಹೊರಡಿಸಿದ್ದಾರೆ. ಹೀಗಾಗಿ ಇವೆಲ್ಲವನ್ನು ಪರಮಾರ್ಶಿಸಿ, ಈ ಡಿಸೆಂಬರ್ ಹಾಗೂ ಜನವರಿ ವರೆಗೆ ನಿಯಂತ್ರಣ ಮಾಡಲು ಮಾರ್ಗಸೂಚಿ ಹೊರಡಿಸುತ್ತೇವೆ ಎಂದರು.
undefined
ಯಾವುದೇ ನಿರ್ಧಾರ ಕೈಗೊಳ್ಳುವ ಮೊದಲು ಸಚಿವ ಸಂಪುಟ ಸಭೆಯಲ್ಲಿ ವಿಸ್ತೃತವಾಗಿ ಚರ್ಚಿಸಿ, ನಿರ್ಧಾರ ಮಾಡ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಸಂಪುಟ ಸಭೆಯಲ್ಲಿ ಶಾಲೆ (School), ಹಾಸ್ಟೆಲ್ (Hostel) ಎಲ್ಲವನ್ನೂ ಒಳಗೊಂಡಂತೆ ಮಾರ್ಗಸೂಚಿ ಹೊರಡಿಸಲಾಗುವುದು. ಯಾರು ಆತಂಕ ಪಡುವ ಸ್ಥಿತಿ ಏನಿಲ್ಲ, ಅಗತ್ಯವೂ ಇಲ್ಲ. ಪೋಷಕರು (Parents) ಕೂಡ ಆತಂಕ ಪಡಬಾರದು. ಮಕ್ಕಳನ್ನು (Children) ಜಾಗೃತರಾಗಿ ನೋಡಿಕೊಳ್ಳಬೇಕು. ಶಾಲೆಯಲ್ಲಿ ಸ್ವಚ್ಚತೆ ಹಾಗೂ ಶಾಲೆಯಲ್ಲಿ ಕೊವೀಡ್ (Covid) ಮಾರ್ಗ ಸೂಚಿ ಯನ್ನು ಕಡ್ಡಾಯವಾಗಿ ಪಾಲಿಸಬೇಕು. ವಸತಿ ಶಾಲೆಯಲ್ಲಿ ಕೊವೀಡ್ ಪರಿಸ್ಥಿತಿ ಬಗ್ಗೆ ಎಲ್ಲಾ ರೀತಿಯ ವಿವರ ಪಡೆಯುತ್ತೇವೆ ಎಂದು ಈ ವೇಳೆ ಸಿಎಂ ಬೊಮ್ಮಾಯಿ ತಿಳಿಸಿದರು.
ಬೂಸ್ಟರ್ ಡೋಸ್ ನೀಡುವ ವಿಚಾರ : ಇನ್ನು ಈಗಾಗಲೇ ಹಲವರು ಕೊರೋನಾ ವಿರುದ್ಧ ಎರಡೂ ಡೋಸ್ ಲಸಿಕೆ ಹಾಕಿಸಿಕೊಮಡಿದ್ದಾರೆ. ಇನ್ನೊಂದು ಬೂಸ್ಟರ್ ಡೋಸ್ (Booster Dose) ನೀಡುವ ಬಗ್ಗೆ ಕೇಂದ್ರ ಸರ್ಕಾರವು ಪರಿಶೀಲನೆ ಮಾಡುತ್ತಿದೆ. ತಜ್ಞರ ಜೊತೆ ಚರ್ಚೆ ಮಾಡಿ, ತಿಳಿಸುವುದಾಗಿ ಕೇಂದ್ರ ಆರೋಗ್ಯ ಸಚಿವರು ಹೇಳಿದ್ದಾರೆ. ಅದಕ್ಕಾಗಿ ನಾವು ಕೂಡ ಕಾಯುತ್ತಿದ್ದೇವೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.
ಹೊಸ ವರ್ಷಚಾರಣೆ : ಹೊಸ ವರ್ಷಚಾರಣೆ (New Year) ಬಗ್ಗೆ ನಮಗೆ ಗೊತ್ತಿದೆ. ಆದರೆ ಆ ಬಗ್ಗೆ ಇನ್ನೂ ಯಾವುದೇ ತೀರ್ಮಾನ ಮಾಡಿಲ್ಲ. ಮುಂದೆ ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರ ಮಾಡ್ತೇವೆ ಎಂದು ಸಿಎಂ ತಿಳಿಸಿದರು.
ಸಭೆಯಲ್ಲಿ ಸಿಎಂ ಪ್ರಧಾನಕಾರ್ಯದರ್ಶಿ ಮಂಜುನಾಥ್ ಪ್ರಸಾದ್, ಸಿಎಸ್ ರವಿಕುಮಾರ್, ಬಿಬಿಎಂಪಿ (BBMP) ಆಯುಕ್ತ ಗೌರವ್ ಗುಪ್ತಾ, ಹಣಕಾಸು ಇಲಾಖೆ ಎಸಿಎಸ್ ಐಎಸ್ ಎನ್ ಪ್ರಸಾದ್, ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಅನಿಲ್ ಕುಮಾರ್, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ತುಷಾರ ಗಿರಿನಾಥ ಮತ್ತು ಇತರೆ ಅಧಿಕಾರಿಗಳು ಭಾಗಿಯಾಗಿದ್ದರು.